ಪ್ರತಿಯೊಂದು ಸತ್ಕಾರ್ಯಕ್ಕೆ ಇಷ್ಟಪೂರ್ವಕವಾಗಿ ನಮ್ಮನ್ನು ನೀಡಿಕೊಳ್ಳುವುದು
1 ಒಂದು ಲೌಕಿಕ ಪ್ರಕಾಶನವು ಹೀಗೆ ಹೇಳಿದಾಗ ಯೆಹೋವನ ಸಾಕ್ಷಿಗಳಿಗೆ ನಿರ್ದೇಶಿಸಿತು: “ತಮ್ಮ ಧರ್ಮಕ್ಕಾಗಿ ಸಾಕ್ಷಿಗಳಷ್ಟು ಕಠಿನವಾಗಿ ಕೆಲಸ ಮಾಡುವ ಬೇರೆ ಯಾವುದೇ ಗುಂಪಿನ ಸದಸ್ಯರನ್ನು ಕಂಡುಕೊಳ್ಳುವುದು ಕಷ್ಟಕರವಾಗಿರಬಹುದು.” ಯೆಹೋವನ ಸಾಕ್ಷಿಗಳು ಇಷ್ಟು ಕಠಿನವಾಗಿ ಮತ್ತು ಅಂತಹ ಒಂದು ಇಷ್ಟಪೂರ್ವಕ ಆತ್ಮದೊಂದಿಗೆ ಕೆಲಸಮಾಡುವುದೇಕೆ?
2 ಒಂದು ತುರ್ತಿನ ಭಾವದೊಂದಿಗೆ ಅವರು ಪ್ರೇರಿಸಲ್ಪಟ್ಟಿರುವುದು ಇದಕ್ಕೆ ಒಂದು ಕಾರಣ. ಭೂಮಿಯ ಮೇಲೆ ತನ್ನ ಕೆಲಸವನ್ನು ಪೂರೈಸಲು ತನಗೆ ಒಂದು ಸೀಮಿತ ಸಮಯವಿತ್ತೆಂದು ಯೇಸು ಅಂಗೀಕರಿಸಿದನು. (ಯೋಹಾನ 9:4) ದೇವರ ಮಹಿಮೆಗೇರಿಸಲ್ಪಟ್ಟ ಮಗನು ಇಂದು ತನ್ನ ಶತ್ರುಗಳ ಮಧ್ಯೆ ಜಯಿಸಿಕೊಂಡು ಹೋಗುತ್ತಿರುವಾಗ, ತಮ್ಮ ಕೆಲಸವನ್ನು ಮಾಡಲು ಒಂದು ಸೀಮಿತ ಸಮಯವಿದೆಯೆಂದು ಯೆಹೋವನ ಜನರು ಗ್ರಹಿಸುತ್ತಾರೆ. ಆದುದರಿಂದ, ಅವರು ಪವಿತ್ರ ಸೇವೆಗಾಗಿ ತಮ್ಮನ್ನೇ ಇಷ್ಟಪೂರ್ವಕವಾಗಿ ನೀಡಿಕೊಳ್ಳುತ್ತಿರುತ್ತಾರೆ. (ಕೀರ್ತ. 110:1-3) ಕೊಯ್ಲನ್ನು ಒಳತರಲು ಹೆಚ್ಚು ಕೆಲಸಗಾರರ ಅಗತ್ಯವಿರುವದರಿಂದ, ಅವರ ಪ್ರಯತ್ನಗಳಲ್ಲಿ ಯಾವುದೇ ಕಡಮೆಯಾಗುವಿಕೆ ಇರಸಾಧ್ಯವಿಲ್ಲ. (ಮತ್ತಾ. 9:37, 38) ಹೀಗಿರುವದರಿಂದ, ತನ್ನ ಕೆಲಸದಲ್ಲಿ ಇಷ್ಟಪೂರ್ವಕ ಪ್ರವೃತ್ತಿ ಮತ್ತು ಶ್ರದ್ಧೆಯ ಒಂದು ಪರಿಪೂರ್ಣ ಮಾದರಿಯನ್ನಿಟ್ಟ ಯೇಸುವನ್ನು ಅನುಕರಿಸಲು ಅವರು ಯತ್ನಿಸುತ್ತಾರೆ.—ಯೋಹಾನ 5:17.
3 ಯೆಹೋವನ ಸಾಕ್ಷಿಗಳು ಯೆಹೋವನಿಗಾಗಿ ಪೂರ್ಣ ಪ್ರಾಣದಿಂದ ಕೆಲಸ ಮಾಡುವ ಇನ್ನೊಂದು ಕಾರಣವು, ಅವರ ಲೋಕವ್ಯಾಪಕ ಸಂಸ್ಥೆಯು ಇತರ ಎಲ್ಲಾ ಗುಂಪುಗಳಿಂದ ಭಿನ್ನವಾಗಿದೆ. ಲೌಕಿಕ ಧಾರ್ಮಿಕ ಸಂಸ್ಥೆಗಳು ತಮ್ಮ ಅನುಯಾಯಿಗಳಿಂದ ಲಾಕ್ಷಣಿಕವಾಗಿ ಕೇವಲ ಕನಿಷ್ಠ ಪ್ರಮಾಣದ ಸಮಯ ಮತ್ತು ಪ್ರಯತ್ನವನ್ನು ಅಪೇಕ್ಷಿಸುತ್ತವೆ. ಅವರೇನನ್ನು ನಂಬುತ್ತಾರೋ ಅದು ಅವರ ಜೀವಿತಗಳ ಮೇಲೆ, ಇತರರೊಂದಿಗಿನ ಅವರ ವ್ಯವಹಾರಗಳಲ್ಲಿ, ಅಥವಾ ಜೀವಿತದಲ್ಲಿನ ಅವರ ಬೆನ್ನಟ್ಟುವಿಕೆಗಳ ಮೇಲೆ ಸ್ವಲ್ಪವೇ ಅಥವಾ ಯಾವುದೇ ಪ್ರಭಾವವನ್ನು ಬೀರುವುದಿಲ್ಲ. ನಿಜ ನಂಬಿಕೆಯ ಪ್ರಚೋದನಾ ಶಕ್ತಿಯ ಕೊರತೆಯನ್ನನುಭವಿಸುತ್ತಾ, ತಮ್ಮ ಕುರುಬರು, ತಮ್ಮ ನಾಮಮಾತ್ರದ ಪ್ರಯತ್ನವು ಸಾಕೆಂದು ಆಶ್ವಾಸನೆ ನೀಡುತ್ತಾ ‘ನಯವಾದವುಗಳನ್ನು ತಮಗೆ ನುಡಿಯುವಂತೆ’ ಅವರು ಒತ್ತಯಾಪಡಿಸಿದ್ದಾರೆ. (ಯೆಶಾ. 30:10) ಅವರ ವೈದಿಕರು, ಔದಾಸೀನ್ಯ ಮತ್ತು ಆಲಸ್ಯತನದ ಒಂದು ಆತ್ಮವನ್ನು ತುಂಬಿಸುತ್ತಾ ‘ಅವರ ಕಿವಿಗಳನ್ನು ತೀಟೆಗೊಳಿಸುವ’ ಮೂಲಕ ಉಪಕಾರಮಾಡಿದ್ದಾರೆ.—2 ತಿಮೊ. 4:3, NW.
4 ಯೆಹೋವನ ಜನರೊಳಗೆ ಎಂತಹ ಒಂದು ವ್ಯತಿರಿಕತ್ತೆ! ನಮ್ಮ ಆರಾಧನೆಯಲ್ಲಿರುವ ಪ್ರತಿಯೊಂದು ವಿಷಯವು ಪ್ರಯತ್ನ, ಶ್ರಮ, ಮತ್ತು ಕೆಲಸವನ್ನು ಒಳಗೊಳ್ಳುತ್ತದೆ. ಪ್ರತಿದಿನ ಮತ್ತು ನಾವು ಮಾಡುವ ಪ್ರತಿಯೊಂದು ವಿಷಯದಲ್ಲಿ, ನಾವು ಏನನ್ನು ನಂಬುತ್ತೇವೊ ಅದನ್ನು ಆಚರಣೆಗೆ ತರುತ್ತೇವೆ. ಸತ್ಯವು ನಮಗೆ ಹೆಚ್ಚಿನ ಆನಂದವನ್ನು ತರುವಾಗ, ಅದೇನನ್ನು ಅವಶ್ಯಪಡಿಸುತ್ತದೋ ಅದನ್ನು ಪೂರೈಸಲು, ಅದು ನಮಗೆ “[“ಮಹತ್ತಾದ,” NW] ಪ್ರಯಾಸವನ್ನೂ” ಒಳಗೂಡಿಸುತ್ತದೆ. (1 ಥೆಸಲೊನೀಕ 2:2ನ್ನು ಹೋಲಿಸಿರಿ.) ದಿನನಿತ್ಯದ ಜೀವಿಸುವ ಜವಾಬ್ದಾರಿಗಳನ್ನು ಪರಾಮರಿಸುವುದಷ್ಟೇ ಹೆಚ್ಚಿನ ಜನರನ್ನು ಕಾರ್ಯಮಗ್ನರಾಗಿರಿಸಲು ಸಾಕು. ಆದಾಗಲೂ, ಈ ಚಿಂತೆಗಳು ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುವುದರಲ್ಲಿ ನಮ್ಮನ್ನು ತಡೆಗಟ್ಟಲು ನಾವು ಅನುಮತಿಸುವುದಿಲ್ಲ.—ಮತ್ತಾ. 6:33.
5 ಯೆಹೋವನ ಸೇವೆಯಲ್ಲಿ ನಮಗೆ ಮಾಡಲು ಏನು ಕೊಡಲಾಗಿದೆಯೋ ಅದು ಎಷ್ಟು ಪ್ರಯೋಜನಕಾರಿ ಮತ್ತು ತುರ್ತಿನದ್ದಾಗಿದೆಯೆಂದರೆ, ಇತರ ಬೆನ್ನಟ್ಟುವಿಕೆಗಳಿಂದ ಸಮಯವನ್ನು ‘ಕ್ರಯಕ್ಕೆ ಕೊಳ್ಳಲು’ ಮತ್ತು ಅದನ್ನು ಆತ್ಮಿಕ ವಿಷಯಗಳ ಮೇಲೆ ಹೆಚ್ಚು ಲಾಭಕರವಾಗಿ ಉಪಯೋಗಿಸಲು ನಾವು ಪ್ರಚೋದಿಸಲ್ಪಡುತ್ತೇವೆ. (ಎಫೆ. 5:16, NW) ನಮ್ಮ ದೇವಭಕ್ತಿ ಮತ್ತು ಇಷ್ಟಪೂರ್ವಕ ಆತ್ಮವು ಯೆಹೋವನನ್ನು ಮೆಚ್ಚಿಸುತ್ತದೆಂದು ತಿಳಿದವರಾಗಿ, ನಮ್ಮ ಕಠಿನ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ನಮಗೆ ಅತಿ ಮಹತ್ತಾದ ಪ್ರೇರಕವಿದೆ. ನಾವು ಈಗ ಪಡೆಯುತ್ತಿರುವ ಸಮೃದ್ಧ ಆಶೀರ್ವಾದಗಳು ಮತ್ತು ಭವಿಷ್ಯತ್ತಿನಲ್ಲಿ ಜೀವಿತದ ಪ್ರತೀಕ್ಷೆಗಳೊಂದಿಗೆ, ರಾಜ್ಯಾಭಿರುಚಿಗಳ ಪರವಾಗಿ ‘ಕಷ್ಟಪಡುತ್ತಾ, ಹೋರಾಡುತ್ತಾ’ ಮುಂದುವರಿಯುವುದು ನಮ್ಮ ನಿರ್ಧಾರವಾಗಿರುತ್ತದೆ.—1 ತಿಮೊ. 4:10.
6 ಭಕ್ತಿ ಮತ್ತು ಸ್ವತ್ಯಾಗದ ಆತ್ಮ: ಇಂದು ಹೆಚ್ಚಿನ ಜನರು ಬೇರೆಲ್ಲದಕ್ಕಿಂತಲೂ ಪ್ರಾಪಂಚಿಕ ಅಗತ್ಯಗಳಿಗೆ ಮತ್ತು ಅಭಿರುಚಿಗಳಿಗೆ ಆದ್ಯತೆಯನ್ನು ಕೊಡುತ್ತಾರೆ. ಅವರೇನನ್ನು ತಿನ್ನುವರೋ, ಕುಡಿಯುವರೋ, ಅಥವಾ ಉಡುವರೋ ಅದರ ಮೇಲೆ ಗಮನವನ್ನು ಕೇಂದ್ರೀಕರಿಸುವದರ ವಿಷಯದಲ್ಲಿ ಅವರಿಗೆ ಪೂರ್ಣವಾದ ಸಮರ್ಥನೆಯ ಅನಿಸಿಕೆಯಿದೆ. (ಮತ್ತಾ. 6:31) ಆವಶ್ಯಕತೆಗಳೊಂದಿಗೆ ತೃಪ್ತರಾಗಿರದೆ, ಈಗ ಒಳ್ಳೇ ಜೀವನವನ್ನು ಪೂರ್ಣ ಮಟ್ಟದಲ್ಲಿ ಆನಂದಿಸುವ ಮತ್ತು ‘ತಾವು ವಿಶ್ರಮಿಸಿ, ಊಟಮಾಡಿ, ಕುಡಿದು, ಸುಖಪಡುವಂತೆ, ಅನೇಕ ವರುಷಗಳಿಗೆ ಬೇಕಾದಷ್ಟು ಸರಕುಗಳನ್ನು ತುಂಬಿಸಿಡುವ’ ಗುರಿಯಿಂದ ಅವರು ಪ್ರಚೋದಿಸಲ್ಪಡುತ್ತಿದ್ದಾರೆ. (ಲೂಕ 12:19) ತನ್ನ ಧರ್ಮದಿಂದ ಅವಶ್ಯಪಡಿಸಲಾಗುವ ಯಾವುದೇ ವೈಯಕ್ತಿಕ ಪ್ರಯತ್ನವು ತನ್ನ ಹಕ್ಕುಗಳ ಮೇಲೆ ಒಂದು ಆಕ್ರಮಣವಾಗಿದೆಯೆಂದು ಲಾಕ್ಷಣಿಕ ಚರ್ಚುಹೋಕನಿಗೆ ಅನಿಸುತ್ತದೆ. ಯಾವುದೇ ಪ್ರಾಪಂಚಿಕ ಬೆನ್ನಟ್ಟುವಿಕೆಯ ತೊರೆಯುವಿಕೆ ಅಥವಾ ಕಡಿಮೆಮಾಡುವಿಕೆ ಸಹ ಅಥವಾ ಯಾವುದೇ ಸುಖಕರ ಅಭಿರುಚಿಯ ಬಿಟ್ಟುಬಿಡುವಿಕೆಯ ವಿಚಾರವೇ ಅಸಹ್ಯಕರ. ಕೇವಲ ತನ್ನಲ್ಲಿ ಆತನ ಆಲೋಚನೆಯು ಕೇಂದ್ರೀಕರಿಸಿರುವದರೊಂದಿಗೆ, ಸ್ವತ್ಯಾಗದ ಒಂದು ಆತ್ಮವನ್ನು ಬೆಳೆಸುವುದು ನೈಜವಲ್ಲದ್ದೂ, ಕಾರ್ಯಸಾಧಕವಲ್ಲದ್ದೂ ಆಗಿರುತ್ತದೆ.
7 ಈ ವಿಷಯವನ್ನು ನಾವು ಭಿನ್ನವಾಗಿ ದೃಷ್ಟಿಸುತ್ತೇವೆ. ನಾವು ಮನುಷ್ಯರ ಯೋಚನೆಗಳ ಬದಲಿಗೆ ದೇವರ ಯೋಚನೆಗಳನ್ನು ಆಲೋಚಿಸುವಂತೆ ದೇವರ ವಾಕ್ಯವು ನಮ್ಮ ಆಲೋಚಿಸುವಿಕೆಯನ್ನು ಉನ್ನತಕ್ಕೇರಿಸಿದೆ. (ಯೆಶಾ. 55:8, 9) ಶಾರೀರಿಕ ಬೆನ್ನಟ್ಟುವಿಕೆಗಳನ್ನು ಮೀರಿಸುವ ಜೀವಿತದಲ್ಲಿನ ಗುರಿಗಳು ನಮಗಿವೆ. ಯೆಹೋವನ ಸಾರ್ವಭೌಮತೆಯ ಸಮರ್ಥನೆ ಮತ್ತು ಆತನ ನಾಮದ ಪವಿತ್ರೀಕರಣ, ಇಡೀ ವಿಶ್ವದಲ್ಲಿ ಅತಿ ಪ್ರಮುಖ ವಿವಾದಾಂಶಗಳಾಗಿವೆ. ಈ ವಿವಾದಾಂಶಗಳ ಪರಿಮಾಣವು ಎಷ್ಟು ಮಹತ್ತಾದದ್ದಾಗಿದೆಯೆಂದರೆ, ಹೋಲಿಕೆಯಲ್ಲಿ ಎಲ್ಲಾ ರಾಷ್ಟ್ರಗಳು “ಆತನ ದೃಷ್ಟಿಯಲ್ಲಿ ಏನೂ ಇಲ್ಲದಂತಿವೆ.” (ಯೆಶಾ. 40:17) ದೇವರ ಚಿತ್ತವನ್ನು ಅಲಕ್ಷಿಸುವಂತಹ ರೀತಿಯಲ್ಲಿ ನಮ್ಮ ಜೀವಿತಗಳನ್ನು ನಡಿಸುವ ಯಾವುದೇ ಪ್ರಯತ್ನವು ಮೂರ್ಖತನವಾಗಿ ದೃಷ್ಟಿಸಲ್ಪಡಬೇಕು.—1 ಕೊರಿಂ. 3:19.
8 ಹೀಗೆ ಕೆಲವು ಪ್ರಾಪಂಚಿಕ ವಸ್ತುಗಳ ಅಗತ್ಯವಾಗಿರುವಾಗ ಮತ್ತು ಇತರ ವಿಷಯಗಳು ನಮ್ಮ ರಾಜ್ಯ ಚಟುವಟಿಕೆಗಳನ್ನು ಮುಂದುವರಿಸಲು ಉಪಯೋಗಕಾರಿಯಾಗಿರುವಾಗ, ಇವು ನಿಜವಾಗಿಯೂ “ಹೆಚ್ಚು ಪ್ರಾಮುಖ್ಯವಾದ ಸಂಗತಿಗಳು” ಅಲ್ಲವೆಂದು ನಾವು ಗ್ರಹಿಸುತ್ತೇವೆ. (ಫಿಲಿ. 1:10, NW) ಪ್ರಾಪಂಚಿಕ ಅಭಿರುಚಿಗಳ ನಮ್ಮ ಬೆನ್ನಟ್ಟುವಿಕೆಯನ್ನು ಸೀಮಿತಗೊಳಿಸುವುದರಲ್ಲಿ ಮತ್ತು ನಮ್ಮ ಹೃದಯಗಳನ್ನು ‘ನಿತ್ಯವಾಗಿರುವ ಕಾಣದಿರುವಂಥ ವಿಷಯ’ ಗಳ ಮೇಲೆ ಕೇಂದ್ರೀಕರಿಸಲು ವಿವೇಕತನದಿಂದ ಪ್ರಯತ್ನಿಸುವುದರಲ್ಲಿ, ನಾವು 1 ತಿಮೊಥೆಯ 6:8 ರಲ್ಲಿರುವ ಆತ್ಮವನ್ನು ಅವಲಂಬಿಸುತ್ತೇವೆ.—2 ಕೊರಿಂ. 4:18.
9 ನಾವು ದೇವರ ಯೋಚನೆಗಳನ್ನು ಹೆಚ್ಚು ಆಲೋಚಿಸಿದ್ದಷ್ಟಕ್ಕೇ, ಪ್ರಾಪಂಚಿಕ ವಸ್ತುಗಳ ಕುರಿತಾಗಿ ಅಷ್ಟೇ ಕಡಿಮೆ ವ್ಯಾಕುಲತೆ ನಮಗಿರುವುದು. ಈಗಾಗಲೇ ಯೆಹೋವನು ನಮಗಾಗಿ ಮಾಡಿರುವ ವಿಷಯಗಳ ಮತ್ತು ಭವಿಷ್ಯತ್ತಿಗಾಗಿ ಆತನು ವಾಗ್ದಾನಿಸಿರುವ ಅದ್ಭುತಕರ ಆಶೀರ್ವಾದಗಳ ಕುರಿತಾಗಿ ನಾವು ಧ್ಯಾನಿಸುವಾಗ, ಅವನು ನಮ್ಮಿಂದ ಕೇಳಿಕೊಳ್ಳುವ ಯಾವುದೇ ತ್ಯಾಗವನ್ನು ಮಾಡಲು ನಾವು ಇಷ್ಟಪೂರ್ವಕರಾಗಿರುತ್ತೇವೆ. (ಮಾರ್ಕ 10:29, 30) ನಮ್ಮ ಅಸ್ತಿತ್ವಕ್ಕೆ ನಾವು ಆತನಿಗೆ ಹಂಗಿಗರು. ಆತನ ಕರುಣೆ ಮತ್ತು ಪ್ರೀತಿ ಇಲ್ಲದಿರುತ್ತಿದ್ದಲ್ಲಿ, ನಮಗೆ ಈಗ ಜೀವಿತದಲ್ಲಿ ಯಾವುದೇ ಆನಂದ ಇರುತ್ತಿರಲಿಲ್ಲ ಮತ್ತು ಯಾವುದೇ ಭವಿಷ್ಯವಿರುತ್ತಿರಲಿಲ್ಲ. ನಾವು ನಮ್ಮನ್ನೇ ನೀಡಿಕೊಳ್ಳಲು ಹಂಗಿನ ಅನಿಸಿಕೆಯುಳ್ಳವರಾಗಿರುತ್ತೇವೆ, ಯಾಕೆಂದರೆ ಆತನ ಸೇವೆಯಲ್ಲಿ ನಾವು ಮಾಡುತ್ತಿರುವಂಥದ್ದೆಲ್ಲವು ‘ನಾವು ಮಾಡುತ್ತಿರಬೇಕಾದದ್ದೇ ಆಗಿದೆ.’ (ಲೂಕ 17:10, NW) ನಾವು “ಹೆಚ್ಚಾಗಿ ಕೊಯ್ಯು” ವೆವು ಎಂದು ತಿಳಿದವರಾಗಿ, ಯೆಹೋವನಿಗೆ ಹಿಂದಿರುಗಿಸಲು ನಮ್ಮಿಂದ ಕೇಳಿಕೊಳ್ಳಲ್ಪಡುವಂತಹ ಯಾವುದೇ ವಿಷಯವನ್ನು ನಾವು ಹರ್ಷಚಿತ್ತದಿಂದ ಕೊಟ್ಟುಬಿಡುತ್ತೇವೆ.—2 ಕೊರಿಂ. 9:6, 7.
10 ಈಗ ಇಷ್ಟಪೂರ್ವಕ ಕೆಲಸಗಾರರ ಅಗತ್ಯವಿದೆ: ಅದರ ಅತಿ ಆರಂಭದಿಂದಲೇ ಕ್ರೈಸ್ತ ಸಭೆಯು ತೀವ್ರ ಚಟುವಟಿಕೆಯ ಒಂದು ಅವಧಿಯೊಳಗೆ ಪ್ರವೇಶಿಸಿತು. ಸಾ.ಶ. 70 ರಲ್ಲಿ ಯೆರೂಸಲೇಮಿನ ಪತನದ ಮುಂಚೆ ಒಂದು ಸಂಪೂರ್ಣ ಸಾಕ್ಷಿಯು ಕೊಡಲ್ಪಡಬೇಕಾಗಿತ್ತು. ಆ ಸಮಯದಲ್ಲಿ ಯೇಸುವಿನ ಶಿಷ್ಯರು “ವಾಕ್ಯವನ್ನು ಬೋಧಿಸುವದರಲ್ಲಿ ಅತ್ಯಾಸಕ್ತಿಯುಳ್ಳ” ವರಾಗಿದ್ದರು. (ಅ. ಕೃ. 18:5) ಶೀಘ್ರ ವಿಸ್ತರಣೆಯು ಹೆಚ್ಚಿನ ಸೌವಾರ್ತಿಕರನ್ನು ಮತ್ತು ಕೌಶಲವುಳ್ಳ ಕುರುಬರನ್ನು ತರಬೇತಿಗೊಳಿಸುವುದನ್ನು ಹಾಗೂ ಅವರ ಸಹಾಯ ಪಡೆದುಕೊಳ್ಳುವುದನ್ನು ಅವಶ್ಯವನ್ನಾಗಿ ಮಾಡಿತು. ಲೌಕಿಕ ಅಧಿಕಾರಿಗಳೊಂದಿಗೆ ವ್ಯವಹರಿಸುವುದರಲ್ಲಿ ಅನುಭವವಿರುವ ಪುರುಷರು ಹಾಗೂ ಪ್ರಾಪಂಚಿಕ ವಸ್ತುಗಳ ಸಂಗ್ರಹ ಮತ್ತು ವಿತರಣೆಯ ಮೇಲ್ವಿಚಾರಣೆ ಮಾಡಲು ಸಮರ್ಥ ಪುರುಷರ ಅಗತ್ಯವಿತ್ತು. (ಅ. ಕೃ. 6:1-6; ಎಫೆ. 4:11) ಕೆಲವರು ಪ್ರಧಾನವಾಗಿ ಸೇವೆ ಸಲ್ಲಿಸಿದಾಗ, ಹೆಚ್ಚಿನವರು ಹಿನ್ನೆಲೆಯಲ್ಲಿ ಉಳಿದರು. ಆದರೆ ಅವರೆಲ್ಲರೂ ಕೆಲಸವನ್ನು ಮಾಡಿತೀರಿಸಲು ಪೂರ್ಣಹೃದಯದಿಂದ ಜೊತೆಯಾಗಿ ಕೆಲಸಮಾಡುತ್ತಾ ‘ಹೆಣಗಾಡಿದರು.’—ಲೂಕ 13:24.
11 ಹಿಂಬಾಲಿಸಿದ ಅನೇಕ ಶತಮಾನಗಳಲ್ಲಿ ಲೋಕವ್ಯಾಪಕವಾದ ಮಟ್ಟದಲ್ಲಿ ಹುರುಪಿನ ಚಟುವಟಿಕೆಯ ಅಗತ್ಯವು ಸಂಬಂಧಸೂಚಕವಾಗಿ ಸ್ವಲ್ಪವೇ ಇದ್ದರೂ, 1914 ರಲ್ಲಿ ಯೇಸು ತನ್ನ ರಾಜ್ಯಾಧಿಕಾರವನ್ನು ವಹಿಸಿಕೊಂಡಾಗ ರಾಜ್ಯ ಚಟುವಟಿಕೆಯ ಒಂದು ಮಹತ್ತಾದ ಪುನರುಜ್ಜೀವನ ಆರಂಭವಾಯಿತು. ಮೊದಲಲ್ಲಿ, ಭೂಗೋಲದಲ್ಲೆಲ್ಲಾ ಇರುವ ದೇಶಗಳಲ್ಲಿ ಲಕ್ಷಾಂತರ ಜನರ ಸಹಾಯವನ್ನು ಅವಶ್ಯಪಡಿಸುತ್ತಾ ರಾಜ್ಯಾಭಿರುಚಿಗಳ ಪರವಾಗಿ ಕೆಲಸಗಾರರ ಅಗತ್ಯ ಇಷ್ಟು ಮಹತ್ತಾಗುವುದೆಂದು ಕೆಲವರೇ ಗ್ರಹಿಸಿದರು.
12 ಇಂದು ಸಂಸ್ಥೆಯು ಕಾರ್ಯಯೋಜನೆಗಳ ಒಂದು ಮಹತ್ತಾದ ವೈವಿಧ್ಯದಲ್ಲಿ ಆಳವಾಗಿ ಒಳಗೂಡಿದೆ, ಇದು ನಮ್ಮ ಮೂಲಸಂಪತ್ತುಗಳನ್ನು ಅವುಗಳ ಮಿತಿಗಳ ವರೆಗೆ ಭಾರವನ್ನು ಹೊರಿಸಿದೆ. ರಾಜ್ಯ ಚಟುವಟಿಕೆಯು ಒಂದು ಭವ್ಯವಾದ ಪ್ರಮಾಣದಲ್ಲಿ ಮುಂದೆ ಸಾಗುತ್ತಿದೆ. ನಮ್ಮ ಸಮಯಗಳ ಜರೂರಿಯು ನಾವು ಸ್ವತಃ ಶ್ರಮಿಸುವಂತೆ ಮತ್ತು ನಮಲ್ಲಿರುವ ಪ್ರತಿಯೊಂದು ಸೊತ್ತನ್ನು ಮಾಡಲ್ಪಡಬೇಕಾದ ಕೆಲಸವನ್ನು ಪೂರೈಸಲು ಉಪಯೋಗಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಇಡೀ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವು ಇಷ್ಟು ಸಮೀಪ ಬರುತ್ತಿರುವುದರಿಂದ, ನಾವು ಮುಂದಿನ ದಿವಸಗಳಲ್ಲಿ ಇನ್ನೂ ಹೆಚ್ಚು ತೀವ್ರ ಚಟುವಟಿಕೆಯನ್ನು ನಿರೀಕ್ಷಿಸುತ್ತೇವೆ. ತುರ್ತಿನ ಒಳಸೇರಿಸುವ ಕೆಲಸದಲ್ಲಿ ಸ್ವತಃ ಇಷ್ಟಪೂರ್ವಕವಾಗಿ ನೀಡಿಕೊಳ್ಳುವಂತೆ ಯೆಹೋವನ ಪ್ರತಿಯೊಬ್ಬ ಸಮರ್ಪಿತ ಸೇವಕನಿಗೆ ಕೋರಲಾಗುತ್ತಿದೆ.
13 ಏನನ್ನು ಮಾಡುವ ಅಗತ್ಯವಿದೆ? “ಕರ್ತನ ಕೆಲಸದಲ್ಲಿ ಮಾಡಲು ಬೇಕಾದಷ್ಟಿದೆ” ಯೆಂದು ನಾವು ಸತ್ಯವಾಗಿ ಹೇಳಬಲ್ಲೆವು. (1 ಕೊರಿಂ. 15:58, NW) ಹಲವಾರು ಟೆರಿಟೊರಿಗಳಲ್ಲಿ ಪೈರು ಪಕ್ವವಾಗಿದೆ, ಆದರೆ ಕೆಲಸಗಾರರು ಕಡಿಮೆಯಾಗಿದ್ದಾರೆ. ನಮ್ಮ ಸ್ವಂತ ಟೆರಿಟೊರಿಯಲ್ಲೆಲ್ಲಾ ಸಾಕ್ಷಿಕೊಡುವುದರಲ್ಲಿ ಹೆಚ್ಚು ಸಂಪೂರ್ಣರಾಗಿರಲು ಮಾತ್ರವಲ್ಲ, ಎಲ್ಲಿ ಹೆಚ್ಚು ಮಹತ್ತಾದ ಅಗತ್ಯವಿದೆಯೋ ಅಲ್ಲಿ, ಸೇವೆ ಸಲ್ಲಿಸುವ ಪಂಥಾಹ್ವಾನವನ್ನು ಎದುರಿಸುವದರಲ್ಲಿಯೂ ನಮ್ಮ ಪಾಲನ್ನು ಮಾಡಲು ನಾವು ಆಮಂತ್ರಿಸಲ್ಪಟ್ಟಿದ್ದೇವೆ.
14 ಲೋಕದ ಎಲ್ಲಾ ಭಾಗಗಳಲ್ಲಿ ಸಾಕ್ಷಿಗಳು ಇತರ ಚಟುವಟಿಕೆಗಳಿಗಾಗಿ ತಮ್ಮನ್ನು ಇಷ್ಟಪೂರ್ವಕವಾಗಿ ನೀಡಿಕೊಳ್ಳುವುದನ್ನು ನೋಡುವುದು ಶ್ಲಾಘನೀಯವಾಗಿದೆ. ಇದು ಆರಾಧನಾ ಸ್ಥಳಗಳ ನಿರ್ಮಾಣದಲ್ಲಿ, ಅಧಿವೇಶನಗಳಲ್ಲಿ ಸೇವೆಸಲ್ಲಿಸುವುದರಲ್ಲಿ ಮತ್ತು ವಿಪತ್ತಿನ ಸಮಯಗಳಲ್ಲಿ ಪರಿಹಾರ ಪ್ರಯತ್ನಗಳಲ್ಲಿ ನೆರವು ನೀಡುವದರಿಂದ ಹಿಡಿದು ಸ್ಥಳಿಕ ರಾಜ್ಯ ಸಭಾಗೃಹವನ್ನು ಕ್ರಮವಾಗಿ ಶುಚಿಗೊಳಿಸುವುದರಲ್ಲಿ ಸ್ವಯಂ ಆಗಿ ಕೆಲಸಮಾಡುವದರ ವರೆಗೆ ವ್ಯಾಪಿಸಬಹುದು. ಈ ಕೊನೆಯ ಚಟುವಟಿಕೆಯ ಸಂಬಂಧದಲ್ಲಿ, ರಾಜ್ಯ ಸಭಾಗೃಹವು ಪ್ರತಿಯೊಂದು ಕೂಟದ ನಂತರ ಒಂದು ನಿರ್ಮಲ ಮತ್ತು ವ್ಯವಸ್ಥಿತ ಸ್ಥಿತಿಯಲ್ಲಿ ಬಿಡಲ್ಪಟ್ಟಿದೆಯೆಂಬುದನ್ನು ಯಾವಾಗಲೂ ಖಚಿತಪಡಿಸಿಕೊಳ್ಳುವ ಸಂಗತಿ ಇರುತ್ತದೆ. ತುಚ್ಛವೆಂದು ಎಣಿಸಲ್ಪಡಬಹುದಾದ ಕೆಲಸಗಳನ್ನು ಪೂರ್ಣಗೊಳಿಸುವುದು, ಲೂಕ 16:10 ರಲ್ಲಿರುವ ಯೇಸುವಿನ ಮಾತುಗಳ ಒಂದು ಸರಿಯಾದ ತಿಳಿವಳಿಕೆಯನ್ನು ಪ್ರದರ್ಶಿಸುತ್ತದೆ: “ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದರ್ದಲಿಯ್ಲೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದರ್ದಲಿಯ್ಲೂ ಅನ್ಯಾಯಗಾರನಾಗುವನು.”
■ ಸಭೆಯ ಚಟುವಟಿಕೆಗಳಿಗೆ ಬೆಂಬಲವನ್ನು ಕೊಡುವುದು: ಪ್ರತಿಯೊಂದು ಸಭೆಯು ಇಡೀ ಸಂಸ್ಥೆಯ ಭಾಗವಾಗಿ ಕಾರ್ಯವೆಸಗಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ” ನಿಂದ ಮಾರ್ಗದರ್ಶನೆಯನ್ನು ಪಡೆಯುತ್ತಿರುವುದಾದರೂ, ಅದು ಒಬ್ಬೊಬ್ಬ ರಾಜ್ಯ ಪ್ರಚಾರಕರಿಂದ ರಚಿಸಲ್ಪಟ್ಟಿದೆ. (ಮತ್ತಾ. 24:45) ಪ್ರತಿಯೊಬ್ಬ ಸಾಕ್ಷಿಯು ಎಷ್ಟನ್ನು ಮಾಡಲು ಇಷ್ಟಪೂರ್ವಕನೂ ಶಕ್ತನೂ ಆಗಿದ್ದಾನೆಂಬುದರ ಮೇಲೆ ಅದರ ಸಾಧನೆಗಳು ಮಹತ್ತಾಗಿ ಅವಲಂಬಿಸಿವೆ. ಸಭೆಯು ಅದರ ಟೆರಿಟೊರಿಯಲ್ಲಿ ಸುವಾರ್ತೆಯು ಸಾರಲ್ಪಡುವುದು, ಹೊಸ ಶಿಷ್ಯರನ್ನು ಮಾಡುವುದು, ಮತ್ತು ಅನಂತರ ಅವರನ್ನು ಆತ್ಮಿಕವಾಗಿ ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರು ಈ ಕೆಲಸದಲ್ಲಿ ಒಂದು ಪಾಲನ್ನು ಹೊಂದಬಲ್ಲೆವು. ವೈಯಕ್ತಿಕ ಅಧ್ಯಯನ, ಕೂಟಗಳಲ್ಲಿ ಅರ್ಥಭರಿತ ಭಾಗವಹಿಸುವಿಕೆ, ಮತ್ತು ಸಭೆಯೊಳಗೆ ಅಗತ್ಯದಲ್ಲಿರುವ ಇತರರಿಗೆ ನೆರವು ಕೊಡುವುದರಲ್ಲಿ ನಾವು ನಮಗಾಗಿಯೇ ಗುರಿಗಳನ್ನು ಸಹ ಸ್ಥಾಪಿಸಿಕೊಳ್ಳಬಲ್ಲೆವು. ನಾವು ನಮ್ಮ ಇಷ್ಟಪೂರ್ವಕ ಪ್ರವೃತ್ತಿಯನ್ನು ಪ್ರದರ್ಶಿಸಲು ಅನೇಕ ಉತ್ತಮ ಅವಕಾಶಗಳನ್ನು ಈ ಚಟುವಟಿಕೆಗಳು ನೀಡುತ್ತವೆ.
■ ಮೇಲ್ವಿಚಾರಣೆಯ ಸ್ಥಾನಗಳಲ್ಲಿ ಮುಂದಾಳತ್ವವನ್ನು ತೆಗೆದುಕೊಳ್ಳುವುದು: ಯೆಹೋವನು ಪ್ರತಿಯೊಂದು ಸಭೆಯ ಮೇಲ್ವಿಚಾರಣೆಯನ್ನು ಅದರ ನೇಮಿತ ಹಿರಿಯರಿಗೆ ವಹಿಸಿಕೊಟ್ಟಿದ್ದಾನೆ. (ಅ. ಕೃ. 20:28) ಈ ಸುಯೋಗಕ್ಕಾಗಿ ಅರ್ಹರಾಗಲು ಎಟುಕಿಸಿಕೊಂಡಿರುವ ಪುರುಷರು ಇವರಾಗಿದ್ದಾರೆ. (1 ತಿಮೊ. 3:1) ಸಭೆಯಲ್ಲಿರುವ ಕಾರ್ಯತಃ ಪ್ರತಿಯೊಬ್ಬ ಸಹೋದರನು ಹೆಚ್ಚಿನ ಜವಾಬ್ದಾರಿಗಳಿಗಾಗಿ ಅರ್ಹನಾಗಲಿಕ್ಕಾಗಿ ಸ್ವಲ್ಪವಾದರೂ ಸಾಮರ್ಥ್ಯವನ್ನು ಹೊಂದಿದ್ದಾನೆ. ಅನೇಕ ಸಹೋದರರು ಆತ್ಮಿಕವಾಗಿ ಬೆಳೆಯುತ್ತಿದ್ದಾರೆ ಮತ್ತು ಸಭೆಯ ಹಿರಿಯರ ಮಾರ್ಗದರ್ಶನೆ ಹಾಗೂ ಪ್ರೀತಿಯ ನೆರವಿನ ಕೆಳಗೆ ಬೆಳೆಯುತ್ತಾ ಇರುವ ಅಗತ್ಯವಿದೆ. ಈ ಪುರುಷರು ಬೈಬಲಿನ ಮತ್ತು ನಮ್ಮ ಪ್ರಕಾಶನಗಳ ಶ್ರದ್ಧಾಪೂರ್ವಕ ವಿದ್ಯಾರ್ಥಿಗಳಾಗಿರತಕ್ಕದ್ದು. ಆತ್ಮನೇಮಿತ ಹಿರಿಯರಿಗೆ ಅಧೀನರಾಗಿದ್ದು, ಅವರ ನಂಬಿಕೆಯನ್ನು ಅನುಕರಿಸುತ್ತಾ, ಮೇಲ್ವಿಚಾರಕರಲ್ಲಿ ಇರಬೇಕಾದ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಅವರು ತಮ್ಮ ಇಷ್ಟಪೂರ್ವಕ ಪ್ರವೃತ್ತಿಯನ್ನು ಪ್ರದರ್ಶಿಸಬಲ್ಲರು.—ಇಬ್ರಿ. 13:7, 17.
■ ಪೂರ್ಣ ಸಮಯದ ಸೇವೆಯನ್ನು ಕೈಕೊಳ್ಳುವುದು: ಸಭೆಯು ಪ್ರಧಾನವಾಗಿ ಸುವಾರ್ತೆಯನ್ನು ಸಾರಲು ಕಾರ್ಯನಡೆಸುತ್ತದೆ. (ಮತ್ತಾ. 24:14) ಪಯನೀಯರರಾಗಿ ನಮೂದಿಸಿಕೊಳ್ಳುವ ಮೂಲಕ ಹುರುಪುಳ್ಳವರು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುವಾಗ ಅದೆಂತಹ ಒಂದು ಆಶೀರ್ವಾದ! ಇದು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವಿತದಲ್ಲಿ ಅಳವಡಿಸುವಿಕೆಗಳನ್ನು ಮಾಡುವುದನ್ನು ಒಳಗೂಡಿಸುತ್ತದೆ. ಸೇವೆಯ ಈ ವಿಶೇಷ ಕ್ಷೇತ್ರದಲ್ಲಿ ಮುಂದುವರಿಯಲು ಕೂಡಿಸಲ್ಪಟ್ಟ ಅಳವಡಿಸುವಿಕೆಗಳು ಅವರಿಗೆ ಆವಶ್ಯಕವಾಗಿರಬಹುದು. ಆದರೆ ಯಾವುದೊ ತಾತ್ಕಾಲಿಕ ನಿರುತ್ತೇಜನದಿಂದಾಗಿ ಒಂದು ವರುಷ ಅಥವಾ ಸ್ವಲ್ಪ ಹೆಚ್ಚು ಸಮಯದ ನಂತರ ಬಿಟ್ಟುಕೊಡದೇ ಈ ಸುಯೋಗವನ್ನು ಹಿಡಿದುಕೊಳ್ಳುತ್ತಾ ಇರುವವರು ಯೆಹೋವನ ಸಮೃದ್ಧ ಆಶೀರ್ವಾದವನ್ನು ಅನುಭವಿಸುವುದು ನಿಶ್ಚಯ. ಪ್ರೀತಿಯುಳ್ಳ ಹಿರಿಯರು ಮತ್ತು ಇತರ ಪ್ರೌಢ ವ್ಯಕ್ತಿಗಳು, ಪಯನೀಯರರನ್ನು ಮಾತು ಮತ್ತು ಕ್ರಿಯೆಯಿಂದ ಉತ್ತೇಜಿಸುತ್ತಾ, ಅವರ ಸಾಫಲ್ಯಕ್ಕೆ ನೆರವು ನೀಡಬಲ್ಲರು. ಶಾಲೆಯನ್ನು ಮುಗಿಸಿದಷ್ಟಕ್ಕೆ ಪಯನೀಯರ್ ಕೆಲಸದಲ್ಲಿ ನೇರವಾಗಿ ಸೇರುವ ಯುವ ಜನರಿಂದ ಎಂಥ ಒಂದು ಉತ್ತಮ ಆತ್ಮವು ಪ್ರದರ್ಶಿಸಲ್ಪಡುತ್ತದೆ! ತಮ್ಮ ಐಹಿಕ ಹಂಗುಗಳು ಕಡಿಮೆಗೊಂಡ ಕೂಡಲೇ ಕ್ರಮದ ಪಯನೀಯರರಾಗಿ ನಮೂದಿಸಿಕೊಳ್ಳುವ ವಯಸ್ಕರ ಕುರಿತಾಗಿಯೂ ಇದು ಸತ್ಯವಾಗಿದೆ. ಒಳಸೇರಿಸುವ ಕೆಲಸದ ಯೆಹೋವನ ಕ್ಷಿಪ್ರಗೊಳಿಸುವಿಕೆಯೊಂದಿಗೆ ಸಹಕರಿಸುವಾಗ ಇದು ಒಬ್ಬ ಸಮರ್ಪಿತ ಕ್ರೈಸ್ತನಿಗೆ ಎಂತಹ ತೃಪ್ತಿಯನ್ನು ತರುತ್ತದೆ!—ಯೆಶಾ. 60:22.
■ ಕೂಟಗಳ ಸ್ಥಳಗಳ ನಿರ್ಮಾಣ ಮತ್ತು ದುರಸ್ತಿಯಲ್ಲಿ ಪಾಲಿಗರಾಗುವುದು: ಅಕ್ಷರಶಃವಾಗಿ ನೂರಾರು ಆಧುನಿಕ ರಾಜ್ಯ ಸಭಾಗೃಹಗಳು ಹಾಗೂ ಎಸೆಂಬ್ಲಿ ಹಾಲ್ಗಳು ನಿರ್ಮಿಸಲ್ಪಟ್ಟಿವೆ. ಆಶ್ಚರ್ಯಜನಕವಾಗಿ, ತಮ್ಮ ಸಮಯ ಮತ್ತು ಕೌಶಲಗಳನ್ನು ಇಷ್ಟಪೂರ್ವಕವಾಗಿ ಸ್ವಯಂ ಆಗಿ ನೀಡಿಕೊಂಡಿರುವ ನಮ್ಮ ಸಹೋದರಸಹೋದರಿಯರಿಂದಲೇ ಕೆಲಸದ ಮಹತ್ತರವಾದ ಪ್ರಮಾಣವು ಮಾಡಲ್ಪಟ್ಟಿದೆ. (1 ಪೂರ್ವ. 28:21) ಅವಶ್ಯವಿರಬಹುದಾದ ಯಾವುದೇ ಕೆಲಸಗಳನ್ನು ನಡಿಸುವ ಮೂಲಕ ಸಾವಿರಾರು ಇಷ್ಟಪೂರ್ವಕ ಕೆಲಸಗಾರರು ಈ ಸೌಕರ್ಯಗಳನ್ನು ದುರಸ್ತಾಗಿರಿಸಿದ್ದಾರೆ. (2 ಪೂರ್ವ. 34:8) ಈ ಕೆಲಸವು ಪವಿತ್ರ ಸೇವೆಯ ಒಂದು ಅಂಶವಾಗಿರುವದರಿಂದ, ನೆರವು ನೀಡುವವರು, ಮನೆಯಿಂದ ಮನೆಗೆ ಸಾರಲಿಕ್ಕಾಗಿ, ಸಭೆಯಲ್ಲಿ ಬಹಿರಂಗ ಭಾಷಣಗಳನ್ನು ಕೊಡಲಿಕ್ಕಾಗಿ, ಅಥವಾ ಸಮ್ಮೇಳನ ಅಥವಾ ಅಧಿವೇಶನದ ಕೆಲಸದೊಂದಿಗೆ ಸಹಾಯ ಮಾಡಲು ತಮಗೆ ವೇತನ ಕೊಡಲ್ಪಡಲು ಕೇಳದೆ ಇರುವಂತೆಯೇ, ಈ ಸಂಬಂಧದಲ್ಲಿ ತಮ್ಮ ಸೇವೆಗಾಗಿ ವೆಚ್ಚ ತುಂಬಿಸಲ್ಪಡುವಂತೆ ಕೇಳದೇ, ತಮ್ಮನ್ನು ಇಷ್ಟಪೂರ್ವಕವಾಗಿ ನೀಡಿಕೊಳ್ಳುತ್ತಾರೆ. ಯೆಹೋವನ ಸುತ್ತಿಗಾಗಿ ಆರಾಧನಾ ಸ್ಥಳಗಳನ್ನು ಯೋಜಿಸುವುದರಲ್ಲಿ ಹಾಗೂ ನಿರ್ಮಾಣ ಮಾಡುವುದರಲ್ಲಿ ಈ ಸ್ವಯಂಸೇವಕರು ತಮ್ಮ ಸೇವೆಗಳನ್ನು ಉಚಿತವಾಗಿ ನೀಡುತ್ತಾರೆ. ಕಾನೂನುಸಂಬಂಧಿತ ದಸ್ತಾವೇಜುಗಳನ್ನು ಪೂರ್ಣಗೊಳಿಸುವುದು, ಲೆಕ್ಕಗಳ ದಾಖಲೆಯನ್ನಿಡುವುದು, ಖರೀದಿ ಸಂಪರ್ಕಗಳನ್ನು ಮಾಡುವುದು ಮತ್ತು ಅಗತ್ಯವಿರುವ ಸಾಮಾನುಗಳ ಪ್ರಮಾಣವನ್ನು ಲೆಕ್ಕಹಾಕುವಂತಹ ವಿಷಯಗಳೊಂದಿಗೆ ಅವರು ಆತುರದಿಂದ ನೆರವು ನೀಡುತ್ತಾರೆ. ಯೆಹೋವನ ಈ ನಿಷ್ಠಾವಂತ ಸೇವಕರು ಯಾವುದೇ ಒಂದು ರೀತಿಯ ಮೇಲಾಡಳಿತದ ವೆಚ್ಚವನ್ನು ಕೂಡಿಸುವುದಿಲ್ಲ ಅಥವಾ ಅವರು ಸಲ್ಲಿಸುವ ಸೇವೆಗಳಿಂದ ಯಾವುದೇ ರೀತಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ, ಆರ್ಥಿಕ ರೀತಿಯಲ್ಲಿ ಲಾಭಪಡೆಯಲು ಹುಡುಕುವುದಿಲ್ಲ, ಯಾಕಂದರೆ ಅವರ ಎಲ್ಲಾ ಹುಟ್ಟುಸಾಮರ್ಥ್ಯಗಳು ಮತ್ತು ಮೂಲಸಂಪತ್ತುಗಳು ಯೆಹೋವನಿಗೆ ಸಮರ್ಪಿಸಲ್ಪಟ್ಟಿವೆ. (ಮೇ 1992ರ ನಮ್ಮ ರಾಜ್ಯದ ಸೇವೆ, ಪುಟ 4, ಪ್ಯಾರಗ್ರಾಫ್ 10ನ್ನು ನೋಡಿರಿ.) ಈ ಚಟುವಟಿಕೆಯು, ತಮ್ಮ ಸೇವೆಗಳನ್ನು “ಯೆಹೋವನಿಗೋಸ್ಕರವೇ ಮನಃಪೂರ್ವಕವಾಗಿ ಮಾಡುವ” ಶ್ರದ್ಧೆಯ ಕೆಲಸಗಾರರನ್ನು ಅವಶ್ಯಪಡಿಸುತ್ತದೆ.—ಕೊಲೊ. 3:23, NW.
15 ಹಾಗಿರುವಲ್ಲಿ, ಯೆಹೋವನ ಜನರ ಇಷ್ಟಪೂರ್ವಕ ಪ್ರವೃತ್ತಿಯನ್ನು ಅಪೂರ್ವವಾಗಿ ಮಾಡುವಂತಹ ಸಂಗತಿಯೇನು? ಅದು ಕೊಡುವಂತಹ ಆತ್ಮವಾಗಿದೆ. ಅವರ ಉದಾರ ಕೊಡುವಿಕೆಯು, ಹಣ ಅಥವಾ ಪ್ರಾಪಂಚಿಕ ವಸ್ತುಗಳಿಗಿಂತ ಹೆಚ್ಚನ್ನು ಒಳಗೊಂಡಿರುತ್ತದೆ—ಅವರು “ಇಷ್ಟಪೂರ್ವಕವಾಗಿ ತಮ್ಮನ್ನೇ ನೀಡಿಕೊಳ್ಳುತ್ತಾರೆ.” (ಕೀರ್ತ. 110:3, NW) ಇದು ಯೆಹೋವನಿಗೆ ನಮ್ಮ ಸಮರ್ಪಣೆಯ ಸಾರವಾಗಿದೆ. ನಾವು ಒಂದು ವಿಶೇಷ ರೀತಿಯಲ್ಲಿ ಬಹುಮಾನಿಸಲ್ಪಟ್ಟಿದ್ದೇವೆ. ನಾವು “ಹೆಚ್ಚಿನ ಸಂತೋಷ” ವನ್ನು ಅನುಭವಿಸುತ್ತೇವೆ ಮತ್ತು ನಾವು “ಹೆಚ್ಚಾಗಿ ಕೊಯ್ಯು” ತ್ತೇವೆ, ಯಾಕಂದರೆ ನಾವೇನನ್ನು ಮಾಡುತ್ತೇವೊ ಅದು ಇತರರಿಂದ ಗಣ್ಯಮಾಡಲ್ಪಡುತ್ತದೆ, ಅವರು ನಮಗೆ ಪ್ರತಿಯಾಗಿ ಕೊಡುತ್ತಾರೆ. (ಅ. ಕೃ. 20:35, NW; 2 ಕೊರಿಂ. 9:6; ಲೂಕ 6:38) “ಸಂತೋಷವಾಗಿ ಕೊಡುವವ” ನನ್ನು ಪ್ರೀತಿಸುವ, ನಮ್ಮ ಅತಿ ಮಹಾನ್ ಉಪಕಾರಿಯು, ನಮ್ಮ ಸ್ವರ್ಗೀಯ ತಂದೆ ಯೆಹೋವನಾಗಿದ್ದಾನೆ. (2 ಕೊರಿಂ. 9:7) ಸದಾಕಾಲ ಬಾಳುವಂತಹ ಆಶೀರ್ವಾದಗಳೊಂದಿಗೆ, ಅವನು ನಮಗೆ ನೂರು ಪಟ್ಟು ತಿರುಗಿ ಕೊಡುವನು. (ಮಲಾ. 3:10; ರೋಮಾ. 6:23) ಆದುದರಿಂದ ಯೆಹೋವನ ಸೇವೆಯಲ್ಲಿ ನಿಮಗೆ ಸುಯೋಗಗಳು ಲಭ್ಯಗೊಳಿಸಲ್ಪಡುವಾಗ, ನೀವು ನಿಮ್ಮನ್ನೇ ಸ್ವಯಂ ಆಗಿ ನೀಡಿಕೊಂಡು ಯೆಶಾಯನು ಮಾಡಿದಂತೆ “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಉತ್ತರಿಸುವಿರೋ?—ಯೆಶಾ. 6:8.