ಸಿದ್ಧಮನಸ್ಸಿನಿಂದ ನಮ್ಮನ್ನು ನೀಡಿಕೊಳ್ಳುವುದು
1 ಯೆಹೋವನ ಜನರು “ತಮ್ಮನ್ನು ಸಿದ್ಧಮನಸ್ಸಿನಿಂದ,” ಅಂದರೆ “ಕಾರ್ಯಸಿದ್ಧ ಸ್ವಯಂಸೇವಕ”ರೋಪಾದಿ “ನೀಡಿಕೊಳ್ಳುವರೆಂದು” ಕೀರ್ತನೆಗಾರನಾದ ದಾವೀದನು ಪ್ರವಾದಿಸಿದನು. (ಕೀರ್ತ. 110:3, NW ಪಾದಟಿಪ್ಪಣಿ) ಇದು ನಿಶ್ಚಯವಾಗಿಯೂ ನಮ್ಮ ಲೋಕವ್ಯಾಪಕ ಸಹೋದರರ ಸಹವಾಸದಲ್ಲಿ ನೆರವೇರುತ್ತಿದೆ. ಕಳೆದ ನಾಲ್ಕು ಸೇವಾ ವರ್ಷಗಳಲ್ಲಿ ಪ್ರತಿಯೊಂದರಲ್ಲಿ ಯೆಹೋವನ ಜನರು, ರಾಜ್ಯದ ಸುವಾರ್ತೆಯನ್ನು ಹರಡಿಸಲಿಕ್ಕಾಗಿ ನೂರು ಕೋಟಿಗಿಂತಲೂ ಹೆಚ್ಚಿನ ತಾಸುಗಳನ್ನು ವಿನಿಯೋಗಿಸಿದ್ದಾರೆ. ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಕೂಡಿಸಿ, ಇತರರಿಗೆ ಸಹಾಯ ಮಾಡಲು ಸಿದ್ಧಮನಸ್ಸಿನಿಂದ ನಮ್ಮನ್ನು ನೀಡಿಕೊಳ್ಳಸಾಧ್ಯವಿರುವ ಇನ್ನೂ ಅನೇಕ ವಿಧಗಳಿವೆ.
2 ನಮ್ಮ ಸಿದ್ಧಮನಸ್ಸನ್ನು ನಾವು ತೋರಿಸಬಲ್ಲ ವಿಧಗಳು: ಸಭೆಯಲ್ಲಿರುವ ಕೆಲವರಿಗೆ ಕೂಟಗಳಿಗೆ ಬರಲಿಕ್ಕಾಗಿ ಸಹಾಯದ ಅಗತ್ಯವಿರಬಹುದು. ಅವರನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಲು ನೀವೇಕೆ ಮುಂದೆಬರಬಾರದು? ಇತರರು ಅಸ್ವಸ್ಥರಾಗಿರಬಹುದು, ನಿರ್ಬಲರಾಗಿರಬಹುದು, ಅಥವಾ ಆಸ್ಪತ್ರೆಯಲ್ಲಿರಬಹುದು. ಅವರಿಗೆ ಭೇಟಿಯನ್ನೀಯಲು ಅಥವಾ ಯಾವುದಾದರೊಂದು ವಿಧದಲ್ಲಿ ನೆರವನ್ನು ನೀಡಲು ನೀವು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಬಲ್ಲಿರೊ? ಉತ್ತೇಜನದ ಅಗತ್ಯವಿರುವ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬವಿರಬಹುದು. ಅಂತಹವರು ನಿಮ್ಮ ಕುಟುಂಬ ಅಭ್ಯಾಸದಲ್ಲಿ ಆಗಿಂದಾಗ್ಗೆ ಜೊತೆಗೂಡಲು ಒಂದು ಆಮಂತ್ರಣವನ್ನು ಕೊಡುವ ಕುರಿತಾಗಿ ನೀವು ಯೋಚಿಸಿದ್ದೀರೊ? ಒಬ್ಬ ಪಯನೀಯರನಿಗೆ ಅಥವಾ ಪ್ರಚಾರಕನಿಗೆ ಶುಶ್ರೂಷೆಯಲ್ಲಿ ಒಬ್ಬ ಸಂಗಡಿಗನ ಅಗತ್ಯವಿರಬಹುದು. ಸೇವೆಯಲ್ಲಿ ಜೊತೆಯಾಗಿ ಕೆಲಸಮಾಡಲು ನೀವು ಏಕೆ ನೀಡಿಕೊಳ್ಳಬಾರದು? ನಂಬಿಕೆಯಲ್ಲಿ ನಮಗೆ ಸಂಬಂಧಿಸಿರುವವರೊಂದಿಗೆ ನಾವು ಸ್ವಯಂಪ್ರೇರಿತರಾಗಿ ಒಳ್ಳೇದನ್ನು ಮಾಡುವ ಕೆಲವು ವಿಧಗಳು ಇವಾಗಿವೆ.—ಗಲಾ. 6:10.
3 ಹಿರಿಯರು ಮತ್ತು ಶುಶ್ರೂಷಾ ಸೇವಕರಿಗಾಗಿರುವ ಯೋಗ್ಯತೆಗಳನ್ನು ತಲಪಲು ಪರಿಶ್ರಮಿಸುವ ಮೂಲಕ, ಯೆಹೋವನ ಸಂಸ್ಥೆಯಲ್ಲಿ ಉಪಯೋಗಿಸಲ್ಪಡಲಿಕ್ಕಾಗಿರುವ ತಮ್ಮ ಸಿದ್ಧಮನಸ್ಸನ್ನು ಸಹೋದರರು ತೋರಿಸಬಲ್ಲರು. (1 ತಿಮೊ. 3:2-10, 12, 13; ತೀತ 1:5-9) ನಾವು ಸಂಖ್ಯೆಯಲ್ಲಿ ವೃದ್ಧಿಯಾಗುತ್ತಾ ಹೋದಂತೆ, ಸಾರುವುದರಲ್ಲಿ ಮತ್ತು ಕಲಿಸುವುದರಲ್ಲಿ ಮತ್ತು ಸಭೆಗಳಲ್ಲಿ ಕುರಿಪಾಲನಾ ಕೆಲಸದಲ್ಲಿ ಮುಂದಾಳುತ್ವವನ್ನು ವಹಿಸಲು ಸಿದ್ಧಮನಸ್ಸಿನವರಾಗಿರುವ ಅರ್ಹ ಸಹೋದರರ ಒಂದು ಅಗತ್ಯವಿದೆ.—1 ತಿಮೊ. 3:1.
4 ಆಗಿಂದಾಗ್ಗೆ ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಳ್ಳುವ ಮೂಲಕ, ನಮ್ಮಲ್ಲಿ ಕೆಲವರು ಪ್ರಾಯಶಃ ಯೆಹೋವನ ಸೇವೆಗಾಗಿ ನಮ್ಮನ್ನು ಒಂದು ಹೆಚ್ಚು ಮಹತ್ತಾದ ಮಟ್ಟಕ್ಕೆ ದೊರಕಿಸಿಕೊಳ್ಳಬಹುದು. ಅಲ್ಲದೆ, ನಮ್ಮ ಕಾರ್ಯತಖ್ತೆಯಲ್ಲಿ ಕೆಲವೊಂದು ಸಮಂಜಸವಾದ ಅಳವಡಿಸುವಿಕೆಗಳನ್ನು ಮಾಡುವಲ್ಲಿ, ನಾವು ಅದನ್ನು ನಿರಂತರವಾಗಿ ಮಾಡಲು ಅಥವಾ ಕ್ರಮದ ಪಯನೀಯರ್ ಸೇವೆಯನ್ನೂ ಆರಂಭಿಸಲು ಶಕ್ತರಾಗಬಹುದು. ಸಹಾಯದ ಹೆಚ್ಚಿನ ಅಗತ್ಯವಿರುವ ಕ್ಷೇತ್ರವೊಂದಕ್ಕೆ ನಾವು ಸ್ಥಳಾಂತರಿಸಬಹುದಾದ ಪರಿಸ್ಥಿತಿಗಳು ನಮಗಿವೆಯೊ? ಬೆತೆಲ್ನಲ್ಲಿ ಸೇವೆಮಾಡಲು ಮತ್ತು ಹೀಗೆ ನೇರವಾಗಿ ಲೋಕವ್ಯಾಪಕ ಕೆಲಸದ ಪ್ರಗತಿಯ ಕಡೆಗೆ ನೆರವನ್ನು ನೀಡಲು ನಾವು ನಮ್ಮನ್ನು ದೊರಕಿಸಿಕೊಳ್ಳಬಹುದೋ? ಲೋಕದ ಸುತ್ತಲೂ, ರಾಜ್ಯ ಸಭಾಗೃಹಗಳು, ಎಸೆಂಬ್ಲಿ ಹಾಲ್ಗಳು, ಮತ್ತು ಬ್ರಾಂಚ್ ಸೌಕರ್ಯಗಳ ನಿರ್ಮಾಣ ಕಾರ್ಯದಲ್ಲಿಯೂ ತುಂಬ ಕೆಲಸವು ಮಾಡಲ್ಪಡುತ್ತಿದೆ. ಅಲ್ಲೆಲ್ಲಾ ಕೆಲಸ ಮಾಡಲು ಸಿದ್ಧಮನಸ್ಸಿನ ನಿಜವಾದ ಆವಶ್ಯಕತೆಯಿದೆ. ಈ ಉತ್ತಮ ಕಾರ್ಯಗಳಿಗಾಗಿ ತಮ್ಮನ್ನು ನೀಡಿಕೊಂಡಿರುವವರು, ಮಹತ್ತಾಗಿ ಗಣ್ಯಮಾಡಲ್ಪಟ್ಟಿದ್ದು, ಸಮೃದ್ಧವಾಗಿ ಆಶೀರ್ವದಿಸಲ್ಪಟ್ಟಿದ್ದಾರೆ!—ಲೂಕ 6:38.
5 ಇವು ರೋಮಾಂಚಕ ಸಮಯಗಳು. ಯೆಹೋವನು, ತನ್ನ ಆತ್ಮದ ಮೂಲಕ, ತನ್ನ ಸಿದ್ಧಮನಸ್ಸಿನ ಜನರೊಂದಿಗೆ ಭೂಮಿಯ ಮೇಲೆ ಒಂದು ಅದ್ಭುತಕರವಾದ ಕೆಲಸವನ್ನು ಪೂರೈಸುತ್ತಿದ್ದಾನೆ! ಯೆಹೋವನು ತನ್ನ ಸಂಸ್ಥೆಯ ಮೂಲಕ, ಅಭಿವೃದ್ಧಿಗೊಂಡಿರುವ ರಾಜ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಆಮಂತ್ರಣವನ್ನು ನೀಡುವಾಗಲೆಲ್ಲಾ, ‘ನಾನು ಈಗಲೂ ನನ್ನನ್ನು ಸಿದ್ಧಮನಸ್ಸಿನಿಂದ ನೀಡಿಕೊಳ್ಳುತ್ತಿದ್ದೇನೊ?’ ಎಂದು ನಮ್ಮನ್ನೇ ಕೇಳಿಕೊಳ್ಳುವುದು ಒಳ್ಳೆಯದು. ಅನಂತರ ನಾವು ನಮ್ಮ ಹೃದಯವನ್ನೂ ಪರಿಸ್ಥಿತಿಗಳನ್ನೂ ಪ್ರಾರ್ಥನಾಪೂರ್ವಕವಾಗಿ ಪರೀಕ್ಷಿಸಬೇಕು. ನಮ್ಮ ದೈವಿಕ ಭಕ್ತಿಯು, ನಾವು ಪವಿತ್ರ ಸೇವೆಯಲ್ಲಿ ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡುವಂತೆ ಪ್ರಚೋದಿಸುವುದು. ಹೀಗೆ ನಾವು ಯೆಹೋವನನ್ನು ತುಂಬ ಸಂತೋಷಪಡಿಸುವೆವು!—ಚೆಫ. 3:17.