ಜಿಲ್ಲಾ ಅಧಿವೇಶನದಲ್ಲಿನ ಹೊಸ ಪುಸ್ತಕದ ಬಿಡುಗಡೆಯಿಂದ ಎಲ್ಲರೂ ರೋಮಾಂಚಗೊಂಡರು
ಹೊಸ ಪುಸ್ತಕವು ದೇವರ ಜ್ಞಾನವನ್ನು ಎತ್ತಿತೋರಿಸುತ್ತದೆ
1 ನಮ್ಮ “ಹರ್ಷಭರಿತ ಸ್ತುತಿಗಾರರು” ಜಿಲ್ಲಾ ಅಧಿವೇಶನದಲ್ಲಿ ಸಾದರಪಡಿಸಲ್ಪಟ್ಟ ಇಡೀ ಕಾರ್ಯಕ್ರಮದಿಂದ ನಾವು ಎಷ್ಟು ಆನಂದಗೊಂಡಿದ್ದೆವು! ಶನಿವಾರ ಮಧ್ಯಾಹ್ನದಂದು, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಹೊಸ ಪುಸ್ತಕವನ್ನು ಹಾಗೂ ಅದನ್ನು ಅನುಸರಿಸಿ ಕೊಡಲ್ಪಟ್ಟ ಸಂಬಂಧಿತ ಸಮಾಚಾರದ ಕುರಿತಾದ ಪ್ರಕಟನೆಯನ್ನು ನಾವು ಕೇಳಿದಾಗ, ಹರ್ಷವು ಉಕ್ಕಿಹರಿಯಿತು. ಭೂಮಿಯ ಕೋಟ್ಯಂತರ ಜನರಿಗೆ, ದೇವರು ಮಾತ್ರವೇ ಕೊಡಸಾಧ್ಯವಿರುವ ಜ್ಞಾನದ, ದೇವರ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಕುರಿತಾದ ಜ್ಞಾನದ ಅಗತ್ಯವಿದೆ.—ಜ್ಞಾನೋ. 2:1-6; ಯೋಹಾ. 17:3.
2 ಭಾಷಣಗಾರನು ಆ ಪುಸ್ತಕದ ಭಾಗಗಳನ್ನು ಎಷ್ಟೊಂದು ವೈವಿಧ್ಯಮಯವಾಗಿ ವರ್ಣಿಸಿದನು! ಮನಸೆಳೆಯುವಂತಹ ಅಧ್ಯಾಯ ಶಿರೋನಾಮಗಳು, ಪ್ರಾಯೋಗಿಕ ದೃಷ್ಟಾಂತಗಳು, ಸತ್ಯದ ಸಕಾರಾತ್ಮಕ ನಿರೂಪಣೆ, ಜಟಿಲವಲ್ಲದ ಪ್ರಶ್ನೆಗಳು, ಮತ್ತು ಪ್ರತಿ ಅಧ್ಯಾಯದ ಕೊನೆಯಲ್ಲಿರುವ “ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ” ಎಂಬ ಶೀರ್ಷಿಕೆಯುಳ್ಳ ಒಂದು ರೇಖಾಚೌಕ—ಇವೆಲ್ಲವೂ ಅದನ್ನು ಓದುವವರೆಲ್ಲರನ್ನು ರಂಜಿಸಲಿರುವ ವೈಶಿಷ್ಟ್ಯಗಳಲ್ಲಿ ಸೇರಿವೆ. ಆದರೆ ನಮ್ಮ ಬೈಬಲ್ ವಿದ್ಯಾರ್ಥಿಗಳು, ಬೈಬಲಿನ ಬೋಧನೆಗಳ ಮೂಲಭೂತ ವಿಷಯಗಳನ್ನು ತೀವ್ರಗತಿಯಲ್ಲಿ ಕಲಿತುಕೊಳ್ಳುವಂತೆ, ವಿಶೇಷವಾಗಿ ಪ್ರಯೋಜನವನ್ನು ಪಡೆದುಕೊಳ್ಳುವರು.
3 ಶನಿವಾರ ಮತ್ತು ಆದಿತ್ಯವಾರದ ಮುಕ್ತಾಯದ ಭಾಷಣಗಳ ಸಮಯದಲ್ಲಿ, ಈ ಹೊಸ ಪುಸ್ತಕವನ್ನು ಉಪಯೋಗಿಸುವ ಮೂಲಕ ಒಂದು ಕುಟುಂಬ ಅಭ್ಯಾಸವನ್ನು ಮಾಡುವಂತೆ ನಾವು ಉತ್ತೇಜಿಸಲ್ಪಟ್ಟೆವು. ಇಷ್ಟರೊಳಗೆ ನಾವು ಅದರ ಒಳಗಿರುವಂತಹ ವಿಷಯದೊಂದಿಗೆ ಪರಿಚಿತರಾಗಿರುವುದು ಸಂಭವನೀಯ. ಈ ಹೊಸ ಪುಸ್ತಕವನ್ನು ಕ್ಷೇತ್ರದಲ್ಲಿ ನೀಡುತ್ತಿರುವಾಗ, ಮನಸ್ಸಿನಲ್ಲಿಡಲಿಕ್ಕಾಗಿ ಕೆಲವು ಅಂಶಗಳನ್ನೂ ನೀವು ಚರ್ಚಿಸಿದ್ದೀರಿ ಎಂಬುದರಲ್ಲಿ ಸಂದೇಹವಿಲ್ಲ.
4 ಪುನರ್ವಿಮರ್ಶಿಸಲಿಕ್ಕಾಗಿ ಅಂಶಗಳು: “ಮಾನವ ಕುಲಕ್ಕೆ ದೇವರ ಜ್ಞಾನದ ಅಗತ್ಯವಿರುವ ಕಾರಣ” ಎಂಬ ವಿಷಯವನ್ನು ನಿರೂಪಿಸುತ್ತಿರುವಾಗ, ಈ ಕೆಳಗಿನ ಅಂಶಗಳನ್ನೊಳಗೊಂಡು, ಇನ್ನೂ ಅನೇಕ ಅಂಶಗಳನ್ನು ಭಾಷಣಗಾರನು ಒತ್ತಿಹೇಳಿದನೆಂಬುದನ್ನು ನೀವು ಜ್ಞಾಪಿಸಿಕೊಳ್ಳಬಹುದು: (1) ಈ ಪುಸ್ತಕವನ್ನು ನೀವು ಅಭ್ಯಾಸಗಳನ್ನು ನಡೆಸಲಿಕ್ಕಾಗಿ ಉಪಯೋಗಿಸುವಾಗ, ಮುಖ್ಯಾಂಶಗಳನ್ನು ಮರೆಮಾಡಸಾಧ್ಯವಿರುವಂತಹ ಹೊರಗಿನ ವಿಷಯವನ್ನು ಒಳತರುವುದು ವಿವೇಕಯುತವಾಗಿರುವುದಿಲ್ಲ; ಪ್ರತಿಯೊಂದು ಅಧ್ಯಾಯದಲ್ಲಿ ಪುಸ್ತಕವು ಏನನ್ನು ರುಜುಪಡಿಸುತ್ತಿದೆ ಎಂಬ ವಿಷಯದ ಮೇಲೆ ಮಾತ್ರವೇ ಕೇಂದ್ರೀಕರಿಸಿರಿ. (2) ಸಾಮಾನ್ಯವಾಗಿ ಪ್ರತಿ ಸಲ ನೀವು ಅಭ್ಯಾಸ ಮಾಡುವಾಗ ಒಂದೊಂದು ಅಧ್ಯಾಯವನ್ನು ಆವರಿಸಲು ಶಕ್ತರಾಗುವಂತೆ ಅಧ್ಯಾಯಗಳು ಮಿತವಾದ ಉದ್ದವುಳ್ಳವುಗಳಾಗಿವೆ. (3) ಪ್ರತಿ ಅಧ್ಯಾಯದ ಕೊನೆಯಲ್ಲಿರುವ “ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ” ಎಂಬ ಶೀರ್ಷಿಕೆಯುಳ್ಳ ಒಂದು ರೇಖಾಚೌಕದಲ್ಲಿರುವ ಪ್ರಶ್ನೆಗಳು, ಸಂಕ್ಷೇಪವಾದ ಪುನರ್ವಿಮರ್ಶೆಯನ್ನು ಒದಗಿಸುವವು.
5 ಬೈಬಲ್ ಅಭ್ಯಾಸಗಳಲ್ಲಿ ಅದರ ಉಪಯೋಗ: ಈ ಹೊಸ ಪುಸ್ತಕಕ್ಕೆ ತಮ್ಮ ಬೈಬಲ್ ಅಭ್ಯಾಸಗಳನ್ನು ಬದಲಾಯಿಸುವುದು ಸೂಕ್ತವಾಗಿದೆಯೋ ಎಂಬುದಾಗಿ ಕೆಲವೊಂದು ಪ್ರಚಾರಕರು ವಿಚಾರಿಸಿದ್ದಾರೆ. ಪ್ರಸ್ತುತದಲ್ಲಿ ಅಭ್ಯಾಸಿಸಲ್ಪಡುತ್ತಿರುವ ಪುಸ್ತಕದಲ್ಲಿ ನೀವು ಸಮರ್ಪಕವಾಗಿ ಮುಂದುವರಿದಿರುವುದಾದರೆ, ಆ ಪ್ರಕಾಶನದ ಅಭ್ಯಾಸವನ್ನು ಪೂರ್ಣಗೊಳಿಸುವುದು ಪ್ರಾಯೋಗಿಕವಾದದ್ದಾಗಿರುವುದು. ಹಾಗಿರದಿರುವಲ್ಲಿ, ನೀವು ಜ್ಞಾನ ಪುಸ್ತಕಕ್ಕೆ ಬದಲಾಯಿಸುವಂತೆ ಶಿಫಾರಸ್ಸು ಮಾಡಲಾಗುತ್ತದೆ. ಬೈಬಲ್ ಅಭ್ಯಾಸವನ್ನು ಆರಂಭಿಸಲಿಕ್ಕಾಗಿ ನೀವು ಒಂದು ಬ್ರೋಷರ್ ಅಥವಾ ಕಿರುಹೊತ್ತಗೆಯೊಂದನ್ನು ಉಪಯೋಗಿಸಿರುವಲ್ಲಿ, ಈ ಪುಸ್ತಕವನ್ನು ಸೂಕ್ತವಾದ ಸಮಯದಲ್ಲಿ ಪರಿಚಯಿಸಿರಿ ಮತ್ತು ಅಭ್ಯಾಸಕ್ಕಾಗಿ ಅದನ್ನು ಉಪಯೋಗಿಸಿರಿ. ಬರುವ ತಿಂಗಳುಗಳಲ್ಲಿನ ನಮ್ಮ ರಾಜ್ಯದ ಸೇವೆಯಲ್ಲಿ, ಜ್ಞಾನ ಪುಸ್ತಕದ ಉಪಯೋಗದ ಕುರಿತಾದ ಹೆಚ್ಚಿನ ಮಾಹಿತಿಯು ಕಂಡುಬರುವುದು.
6 ನಿತ್ಯಜೀವಕ್ಕೆ ನಡೆಸುವ ಜ್ಞಾನದ ಕುರಿತಾಗಿ ನಾವು ಇತರರಿಗೆ ಕಲಿಸುವಂತೆ ನಮಗೆ ಸಹಾಯ ಮಾಡಲಿಕ್ಕಾಗಿ ಯೆಹೋವನು ಈ ಹೊಸ ಪುಸ್ತಕವನ್ನು ಒದಗಿಸಿದ್ದಾನೆ. ಈಗ ನಾವು ಚೆನ್ನಾಗಿ ತಯಾರಿಮಾಡಿ, ಇನ್ನೂ ಮಾಡಲ್ಪಡಲಿಕ್ಕಿರುವ ಕೆಲಸದಲ್ಲಿ ಸಂಪೂರ್ಣವಾಗಿ ಭಾಗವಹಿಸುವ ಅಗತ್ಯವಿದೆ.