ಜೀವಕ್ಕೆ ನಡೆಸುವ ಜ್ಞಾನವನ್ನು ಪಡೆದುಕೊಳ್ಳುವಂತೆ ಇತರರಿಗೆ ಸಹಾಯ ಮಾಡಿರಿ
1 ‘ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ [“ನಿಷ್ಕೃಷ್ಟ,” NW] ಜ್ಞಾನಕ್ಕೆ ಸೇರಬೇಕೆಂಬದು ದೇವರ ಚಿತ್ತ’ವಾಗಿದೆ ಎಂಬುದಾಗಿ ಅಪೊಸ್ತಲ ಪೌಲನು ವಿವರಿಸಿದನು. (1 ತಿಮೊ. 2:4) ಆ ಜ್ಞಾನವನ್ನು ಸ್ವೀಕರಿಸುವಂತೆ ನಾವು ಇತರರಿಗೆ ಹೇಗೆ ಸಹಾಯ ಮಾಡಬಲ್ಲೆವು? ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ ಮೂಲಕ ಯಾರ ಆಸಕ್ತಿಯು ಕೆರಳಿಸಲ್ಪಟ್ಟಿದೆಯೊ ಅಂತಹ ವ್ಯಕ್ತಿಗಳ ಬಳಿ ಪುನರ್ಭೇಟಿಗಳನ್ನು ಮಾಡುವದು, ಒಂದು ವಿಧಾನವಾಗಿದೆ. ಈ ಪ್ರಕಾಶನವು ಬೈಬಲ್ ಸತ್ಯತೆಯನ್ನು ಸ್ಪಷ್ಟ, ಸರಳ, ಚೆನ್ನಾಗಿ ಆರಿಸಲ್ಪಟ್ಟ ಮಾತುಗಳಲ್ಲಿ ಪ್ರಸ್ತುತಪಡಿಸುತ್ತದೆ. ಅದನ್ನು ಅಭ್ಯಾಸಿಸುವ ಮೂಲಕ, ಎಲ್ಲಾ ರೀತಿಯ ಜನರು ಜೀವಕ್ಕೆ ನಡೆಸಲ್ಪಡಸಾಧ್ಯವಿದೆ. ಇತರರು ಅದನ್ನು ನಮ್ಮೊಂದಿಗೆ ಅಭ್ಯಾಸಿಸುವಂತೆ ಅವರನ್ನು ಉತ್ತೇಜಿಸುವ ಯಾವ ವಿಷಯವನ್ನು ನಾವು ಹೇಳಬಲ್ಲೆವು?
2 ನೀವು ಬೈಬಲನ್ನು ಒಂದು ಪ್ರಾಯೋಗಿಕ ಮಾರ್ಗದರ್ಶಕದೋಪಾದಿ ಪರಿಚಯಿಸಿರುವ ಜನರಿಗೆ, ಬಹುಶಃ ಹೀಗೆ ಹೇಳುವ ಮೂಲಕ ಒಂದು ಅಭ್ಯಾಸವನ್ನು ನೀಡಲು ನೀವು ಹಿಂದಿರುಗಸಾಧ್ಯವಿದೆ:
◼ “ಈ ಮುಂಚೆ ನಾನು ಇಲ್ಲಿಗೆ ಬಂದಿದ್ದಾಗ, ಮಾರ್ಗದರ್ಶನದ ಒಂದು ಪ್ರಾಯೋಗಿಕ ಮೂಲದೋಪಾದಿ ನಾವು ಬೈಬಲಿನ ಮೇಲೆ ಏಕೆ ಭರವಸೆಯಿಡಸಾಧ್ಯವಿದೆ ಎಂಬ ವಿಷಯವನ್ನು ನಾವು ಚರ್ಚಿಸಿದೆವು. ಬೈಬಲು ದೇವರಿಂದ ಪ್ರೇರಿತವಾಗಿರುವುದಾಗಿ ಹೇಳಿಕೊಳ್ಳುತ್ತದೆ, ಮತ್ತು ಹಾಗಿರುವುದರಿಂದ ಅದರ ಬರಹಗಾರರಲ್ಲಿ ಒಬ್ಬನು ಹೇಳಿದಂತೆಯೇ, ಅದು ಸಾಂತ್ವನ ಮತ್ತು ನಿರೀಕ್ಷೆಯ ಒಂದು ನಿಶ್ಚಿತ ಮೂಲವಾಗಿದೆ. [ರೋಮಾಪುರ 15:4ನ್ನು ಓದಿರಿ.] ನಮ್ಮ ಹಿಂದಿನ ಸಂಭಾಷಣೆಯ ಅಂತ್ಯದಲ್ಲಿ, ಬೈಬಲಿನಲ್ಲಿ ಒಳಗೂಡಿರುವ ಜ್ಞಾನದಿಂದ ನಾವು ವೈಯಕ್ತಿಕವಾಗಿ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ? ಎಂಬ ಪ್ರಶ್ನೆಯನ್ನು ನಾನು ಎಬ್ಬಿಸಿದೆ.” ಜ್ಞಾನ ಪುಸ್ತಕದಲ್ಲಿ 11ನೆಯ ಪುಟದಲ್ಲಿರುವ 18ನೆಯ ಪ್ಯಾರಗ್ರಾಫನ್ನು ಓದಿರಿ. ಜೀವಕ್ಕೆ ನಡೆಸುವ ಜ್ಞಾನವನ್ನು ಸ್ವೀಕರಿಸುವಂತೆ ಎಲ್ಲೆಡೆಯೂ ಇರುವ ಜನರಿಗೆ ಸಹಾಯ ಮಾಡುತ್ತಾ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ಸುಮಾರು ಐವತ್ತು ಲಕ್ಷ ಬೈಬಲ್ ಅಭ್ಯಾಸಗಳನ್ನು ನಡೆಸುತ್ತಿದ್ದಾರೆಂಬುದನ್ನು ತಿಳಿಯಪಡಿಸಿರಿ. 1ನೆಯ ಅಧ್ಯಾಯದಲ್ಲಿರುವ ಮೊದಲ ಐದು ಪ್ಯಾರಗ್ರಾಫ್ಗಳನ್ನು ಉಪಯೋಗಿಸುವ ಮೂಲಕ, ಒಂದು ಅಭ್ಯಾಸವು ಹೇಗೆ ನಡೆಸಲ್ಪಡುತ್ತದೆ ಎಂಬುದರ ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಮಾಡಿರಿ.
3 ಯಾರೊಂದಿಗಾದರೂ ನೀವು ಆರಂಭದಲ್ಲಿ ಚರ್ಚಿಸಿದ ವಿಷಯವು ಪ್ರಾರ್ಥನೆಯಾಗಿರುವುದಾದರೆ, ಅಭ್ಯಾಸವೊಂದನ್ನು ಆರಂಭಿಸುವ ಪ್ರಯತ್ನದಲ್ಲಿ ನೀವು ಈ ಪ್ರಸ್ತಾಪವನ್ನು ಉಪಯೋಗಿಸಬಹುದು:
◼ “ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಿಂದ ಪ್ರಾರ್ಥನೆಯ ಕುರಿತಾಗಿ ನಾವು ಚರ್ಚಿಸಿದ ಮಾಹಿತಿಯಲ್ಲಿ ನೀವು ಆನಂದಿಸಿದಿರೆಂಬುದಾಗಿ ನಾನು ಭಾವಿಸುತ್ತೇನೆ. ನಾನು ಹಿಂದಿರುಗಿ ಬಂದು, ದೇವರಿಗೆ ಪ್ರಾರ್ಥನೆ ಮಾಡುವವರು, ಪ್ರತಿಯಾಗಿ ಆತನಿಗೆ ಹೇಗೆ ಕಿವಿಗೊಡಸಾಧ್ಯವಿದೆ ಎಂಬುದನ್ನು ನಿಮ್ಮೊಂದಿಗೆ ಪರಿಗಣಿಸುವ ವಚನವನ್ನಿತ್ತಿದ್ದೆ. 158ನೆಯ ಪುಟದಲ್ಲಿ ಏನು ಹೇಳಲ್ಪಟ್ಟಿದೆ ಎಂಬುದನ್ನು ಗಮನಿಸಿ. [18ನೆಯ ಪ್ಯಾರಗ್ರಾಫನ್ನು ಓದಿರಿ.] ಹೀಗೆ, ಬೈಬಲನ್ನು ವೈಯಕ್ತಿಕವಾಗಿ ಅಭ್ಯಾಸಿಸುವ ಮೂಲಕ, ದೇವರು ನಮಗೆ ಹೇಳಲಿಕ್ಕಿರುವ ವಿಷಯವನ್ನು ನಾವು ಕಿವಿಗೊಡುತ್ತಿದ್ದೇವೆ. ಹಾಗೆ ಮಾಡುವುದು ನಮ್ಮನ್ನು ಆತನ ಬಳಿಗೆ ಹೆಚ್ಚು ನಿಕಟವಾಗಿ ಸೆಳೆಯುತ್ತದೆ ಮತ್ತು ನಾವು ಯಾವುದರ ಕುರಿತಾಗಿ ಪ್ರಾರ್ಥಿಸುತ್ತೇವೊ ಆ ದೈನಂದಿನ ಸಮಸ್ಯೆಗಳೊಂದಿಗೆ ವ್ಯವಹರಿಸಲು ನಮಗೆ ಸಹಾಯ ಮಾಡುತ್ತದೆ. ನಾನು ನಿಮ್ಮೊಂದಿಗೆ ಬೈಬಲನ್ನು ಅಭ್ಯಾಸಿಸಲಿಕ್ಕಾಗಿ ನಾನು ಸಂತೋಷಿಸುತ್ತೇನೆ.” ಆ ವ್ಯಕ್ತಿಯು ಅಭ್ಯಾಸಿಸಲು ಇಷ್ಟಪಡುವುದಾದರೆ, ಜ್ಞಾನ ಪುಸ್ತಕದ ಮೊದಲ ಅಧ್ಯಾಯದೊಂದಿಗೆ ಆರಂಭಿಸಿರಿ.
4 ಅಭ್ಯಾಸವೊಂದನ್ನು ಆರಂಭಿಸಲು ನೀವು ನೇರವಾದ ಪ್ರಸ್ತಾಪವನ್ನು ಉಪಯೋಗಿಸಿರುವಲ್ಲಿ, ಆರಂಭದ ಚರ್ಚೆಯನ್ನು ಅನುಸರಿಸಲಿಕ್ಕಾಗಿ ನೀವು ಇದನ್ನು ಹೇಳಬಹುದು:
◼ “ನಮ್ಮ ಉಚಿತ ಬೈಬಲ್ ಅಭ್ಯಾಸ ಕಾರ್ಯಕ್ರಮದ ಕುರಿತಾಗಿ ನಿಮಗೆ ಹೆಚ್ಚಿನ ವಿಷಯಗಳನ್ನು ಹೇಳಲು ನಾನು ಅಪೇಕ್ಷಿಸಿದ್ದರಿಂದ, ನಿಮ್ಮನ್ನು ಪುನಃ ಭೇಟಿ ಮಾಡಲಿಕ್ಕಾಗಿ ನಾನು ವಿಶೇಷ ಪ್ರಯತ್ನವನ್ನು ಮಾಡಿದೆ. ನಾವು ಉಪಯೋಗಿಸುವಂತಹ ಅಭ್ಯಾಸ ಸಹಾಯಕವಾದ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಈ ಪುಸ್ತಕದ ಒಂದು ಪ್ರತಿಯನ್ನು ನಾನು ನಿಮ್ಮೊಂದಿಗೆ ಬಿಟ್ಟುಹೋಗಿದ್ದೆ. ನಾವು ದೇವರ ವಾಕ್ಯವನ್ನು ಪರಿಗಣಿಸುವಂತೆ ಅದು ಹೇಗೆ ಉತ್ತೇಜಿಸುತ್ತದೆಂಬುದನ್ನು ಗಮನಿಸಿರಿ. [ಪುಟ 22ರಲ್ಲಿರುವ 23ನೆಯ ಪ್ಯಾರಗ್ರಾಫನ್ನು ಓದಿರಿ.] ದಯಮಾಡಿ ನೀವು ನಿಮ್ಮ ಪುಸ್ತಕದ ಪ್ರತಿಯನ್ನು ತರುವುದಾದರೆ, ನಾವು ಕಳೆದ ಬಾರಿ ನಿಲ್ಲಿಸಿದಂದಿನಿಂದ ಅಭ್ಯಾಸಿಸುವುದನ್ನು ಬಹುಶಃ ಮುಂದುವರಿಸಸಾಧ್ಯವಿದೆ.” ಆರಂಭದ ಭೇಟಿಯಲ್ಲಿ ಒಂದು ಅಭ್ಯಾಸವು ಪ್ರಾರಂಭಿಸಲ್ಪಟ್ಟಿರದಿದ್ದಲ್ಲಿ, ನೀವು ಹೀಗೆ ಹೇಳಬಹುದು: “ನಾವು ಬೈಬಲನ್ನು ಹೇಗೆ ಅಭ್ಯಾಸಿಸುತ್ತೇವೆ ಎಂಬುದನ್ನು ಪ್ರದರ್ಶಿಸಲು ಬಹುಶಃ ಇದು ನನಗೆ ಒಳ್ಳೆಯ ಸಮಯವಾಗಿರುವುದು.” ಕೆಲವು ಪ್ಯಾರಗ್ರಾಫ್ಗಳನ್ನು ಪರಿಗಣಿಸಿದ ನಂತರ ಮುಂದಿನ ಅಭ್ಯಾಸಕ್ಕಾಗಿ ಹಿಂದಿರುಗಲಿಕ್ಕೆ ನಿರ್ದಿಷ್ಟವಾದೊಂದು ಸಮಯವನ್ನು ಏರ್ಪಡಿಸಿರಿ.
5 ಜ್ಞಾನ ಪುಸ್ತಕವನ್ನು ಪರಿಣಾಮಕರವಾಗಿ ಉಪಯೋಗಿಸುವುದು, ಇತರರ ಆಶೀರ್ವಾದಕ್ಕಾಗಿ ನಿಷ್ಕೃಷ್ಟವಾದ ಜ್ಞಾನವನ್ನು ಹಬ್ಬಿಸಲು ನಮ್ಮನ್ನು ಶಕ್ತರನ್ನಾಗಿ ಮಾಡುವುದು. (ಜ್ಞಾನೋ. 15:7) ಯಾರ ಹೃದಯಗಳು ಯಥಾರ್ಥವಾಗಿವೆಯೊ ಅವರಿಗೆ ಅಂತಹ ಜ್ಞಾನವು ಸಂತೋಷವನ್ನು ತರುವುದು ಮತ್ತು ಕ್ರಮೇಣವಾಗಿ ನಿತ್ಯಜೀವಕ್ಕೆ ನಡೆಸುವ ಯೆಹೋವನ ನೀತಿಯೊಂದಿಗೆ ಹೊಂದಿಕೆಯಲ್ಲಿ ಜೀವಿಸಲು ಅವರಿಗೆ ಇದು ಪ್ರಬಲವಾದ ಒಂದು ಪ್ರೇರಕವಾಗಿರುವುದು.