ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/96 ಪು. 8
  • “ಇದೇ ನಿತ್ಯಜೀವವು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಇದೇ ನಿತ್ಯಜೀವವು”
  • 1996 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ದೇವರಿಂದ ಬರುವ ಜ್ಞಾನವು ಅನೇಕ ಪ್ರಶ್ನೆಗಳನ್ನು ಉತ್ತರಿಸುತ್ತದೆ
    1997 ನಮ್ಮ ರಾಜ್ಯದ ಸೇವೆ
  • ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಹಬ್ಬಿಸುವುದು
    1996 ನಮ್ಮ ರಾಜ್ಯದ ಸೇವೆ
  • ಸತ್ಯ ದೇವರ ಜ್ಞಾನವು ಜೀವಕ್ಕೆ ನಡೆಸುತ್ತದೆ
    1996 ನಮ್ಮ ರಾಜ್ಯದ ಸೇವೆ
  • ಜೀವಕ್ಕೆ ನಡೆಸುವ ಜ್ಞಾನವನ್ನು ಪಡೆದುಕೊಳ್ಳುವಂತೆ ಇತರರಿಗೆ ಸಹಾಯ ಮಾಡಿರಿ
    1996 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1996 ನಮ್ಮ ರಾಜ್ಯದ ಸೇವೆ
km 11/96 ಪು. 8

“ಇದೇ ನಿತ್ಯಜೀವವು”

1 ಯೋಹಾನ 17:3ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳು ಗಂಭೀರವಾಗಿ ಗ್ರಹಿಸಲ್ಪಡಬೇಕು. ಅವನು ಏನನ್ನು ಹೇಳಿದನೊ ಅದನ್ನು ಅರ್ಥೈಸಿದನು—ದೇವರ ಮತ್ತು ಕ್ರಿಸ್ತನ ಜ್ಞಾನವನ್ನು ತೆಗೆದುಕೊಳ್ಳುವುದು ನಿತ್ಯ ಜೀವವನ್ನು ಅರ್ಥೈಸುತ್ತದೆ! ಆದರೆ ಯೆಹೋವ ಮತ್ತು ಯೇಸುವಿನ ಜ್ಞಾನವನ್ನು ಕೇವಲ ಪಡೆದಿರುವುದರಿಂದ ನಾವು ನಿತ್ಯವಾದ ಜೀವದೊಂದಿಗೆ ಬಹುಮಾನಿಸಲ್ಪಡುವೆವೊ? ಇಲ್ಲ. ಯೆಹೋವನು ತಮ್ಮ ದೇವರಾಗಿದ್ದಾನೆಂದು ಇಸ್ರಾಯೇಲ್ಯರಿಗೆ ತಿಳಿದಿತ್ತು, ಆದರೆ ಅವರ ಜೀವನ ಕ್ರಮವು ಆ ವಿಶ್ವಾಸವನ್ನು ಪ್ರತಿಬಿಂಬಿಸಲಿಲ್ಲ. ಫಲಿತಾಂಶವಾಗಿ, ಅವರು ಆತನ ಅನುಗ್ರಹವನ್ನು ಕಳೆದುಕೊಂಡರು. (ಹೋಶೇ. 4:1, 2, 6) ಇಂದು ಲಕ್ಷಾಂತರ ಜನರಿಗೆ “ದೇವರಿಗಾಗಿ ಹುರುಪು” ಇರಬಹುದು; “ಆದರೆ ನಿಷ್ಕೃಷ್ಟವಾದ ಜ್ಞಾನಕ್ಕನುಸಾರವಲ್ಲ.” (ರೋಮಾ. 10:2, NW) ಅವರು “ಒಬ್ಬನೇ ಸತ್ಯದೇವರಾಗಿರುವ” ಯೆಹೋವನನ್ನು ತಿಳಿದು, ಆತನಿಗೆ ಯೋಗ್ಯವಾಗಿ ಸೇವೆಸಲ್ಲಿಸುವ ವಿಧವನ್ನು ಕಲಿಯುವ ಅಗತ್ಯವಿದೆ. ಆ ಉದ್ದೇಶಕ್ಕೋಸ್ಕರ, ನವೆಂಬರ್‌ ತಿಂಗಳಿನಲ್ಲಿ ನಾವು ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ನೀಡಲಿರುವೆವು. ಜ್ಞಾನ ಪುಸ್ತಕವನ್ನು ಸಾದರಪಡಿಸುವುದರಲ್ಲಿ ನೀವು ಯಾವ ಪ್ರಸ್ತಾವವನ್ನು ಉಪಯೋಗಿಸುವಿರಿ? ನಿಮಗೆ ಸಹಾಯ ಮಾಡಬಹುದಾದ ಕೆಲವು ಸಲಹೆಗಳು ಇಲ್ಲಿವೆ.

2 ನಿಮ್ಮ ಕ್ಷೇತ್ರದಲ್ಲಿರುವ ಅನೇಕ ಜನರೊಂದಿಗೆ ಮಾತಾಡುವಾಗ ನೀವು ಉಪಯೋಗಿಸಲು ಬಯಸಬಹುದಾದ ಒಂದು ನಿರೂಪಣೆಯು ಇಲ್ಲಿದೆ:

◼ “ಲೋಕದಲ್ಲಿ ಇಷ್ಟೊಂದು ವಿಭಿನ್ನ ಧರ್ಮಗಳು ಏಕೆ ಇವೆಯೆಂಬುದರ ಕುರಿತಾಗಿ ನಾವು ನಮ್ಮ ನೆರೆಹೊರೆಯವರೊಂದಿಗೆ ಮಾತಾಡುತ್ತಿದ್ದೇವೆ. ಈ ದೇಶವೊಂದರಲ್ಲೇ ಇಷ್ಟೊಂದು ವಿಭಿನ್ನ ಧಾರ್ಮಿಕ ಪಥಗಳಿವೆ, ಮತ್ತು ಲೋಕವ್ಯಾಪಕವಾಗಿ 10,000ಕ್ಕಿಂತಲೂ ಹೆಚ್ಚು ಧಾರ್ಮಿಕ ಪಂಗಡಗಳಿವೆ. ನಿಮ್ಮ ಅಭಿಪ್ರಾಯದಲ್ಲಿ, ಧರ್ಮಗಳ ಈ ವೈವಿಧ್ಯವು ಏಕೆ ಅಸ್ತಿತ್ವದಲ್ಲಿದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಜ್ಞಾನ ಪುಸ್ತಕವನ್ನು ಅಧ್ಯಾಯ 5ಕ್ಕೆ ತಿರುಗಿಸಿ, ಪ್ಯಾರಗ್ರಾಫ್‌ 1ನ್ನು ಓದಿರಿ.] ಈ ಅಧ್ಯಾಯವನ್ನು ಓದುವ ಮೂಲಕ, ನೀವು ಆ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಪಡೆಯುವಿರಿ. ನಿಮಗೆ ಅದನ್ನು ಪರೀಕ್ಷಿಸಲು ಮನಸ್ಸಿರುವಲ್ಲಿ ಈ ಪುಸ್ತಕವನ್ನು ನಿಮ್ಮೊಂದಿಗೆ ಬಿಟ್ಟುಹೋಗಲು ನಾನು ಸಂತೋಷಿಸುವೆ.” ಅದು ಸ್ವೀಕರಿಸಲ್ಪಡುವಲ್ಲಿ, ಹಿಂದಿರುಗಿ ಹೋಗಲು ನಿಶ್ಚಿತವಾದ ಏರ್ಪಾಡುಗಳನ್ನು ಮಾಡಿ, ಹೀಗೆ ಹೇಳಿರಿ: “ನಾನು ಹಿಂದೆ ಬರುವಾಗ, ಎಲ್ಲಾ ಧರ್ಮಗಳು ಒಂದೇ ಸ್ಥಳಕ್ಕೆ ನಡೆಸುವ ಕೇವಲ ಭಿನ್ನ ಮಾರ್ಗಗಳೊ ಎಂಬುದನ್ನು ನಾವು ಪ್ರಾಯಶಃ ಚರ್ಚಿಸಸಾಧ್ಯವಿದೆ.”

3 ಇಷ್ಟೊಂದು ಧರ್ಮಗಳು ಏಕೆ ಇವೆಯೆಂಬುದರ ಕುರಿತಾದ ಚರ್ಚೆಯನ್ನು ಮುಂದುವರಿಸಲು ನೀವು ಹಿಂದಿರುಗುವಾಗ, ನೀವು ಇದನ್ನು ಹೇಳಸಾಧ್ಯವಿದೆ:

◼ “ಹೋದ ಸಲ ನಾನು ನಿಮ್ಮೊಂದಿಗೆ ಮಾತಾಡಿದಾಗ, ಎಲ್ಲ ಧರ್ಮಗಳು ಒಂದೇ ಸ್ಥಳಕ್ಕೆ ನಡೆಸುವಂತಹ ಭಿನ್ನ ಮಾರ್ಗಗಳು ಮಾತ್ರ ಆಗಿವೆಯೊ ಎಂಬ ಪ್ರಶ್ನೆಯನ್ನು ನಾನು ಎಬ್ಬಿಸಿದೆ. ಅದರ ಕುರಿತಾಗಿ ನೀವು ಏನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಯೇಸು ಆ ವಿಷಯದ ಕುರಿತಾಗಿ ಏನನ್ನು ಹೇಳಿದನೆಂಬುದನ್ನು ನಾನು ನಿಮ್ಮೊಂದಿಗೆ ಬಿಟ್ಟುಹೋದ ಪುಸ್ತಕದಲ್ಲಿ ತೋರಿಸಲು ಇಷ್ಟಪಡುವೆ. [ಜ್ಞಾನ ಪುಸ್ತಕದಲ್ಲಿ 5ನೆಯ ಅಧ್ಯಾಯಕ್ಕೆ ತಿರುಗಿಸಿ, ಮತ್ತಾಯ 7:21-23ನ್ನು ಒಳಗೂಡಿಸಿ, 6-7ನೆಯ ಪ್ಯಾರಗ್ರಾಫ್‌ಗಳನ್ನು ಓದಿರಿ.] ದೇವರ ಚಿತ್ತವು ಏನಾಗಿದೆಯೆಂಬುದನ್ನು ನಿಖರವಾಗಿ ತಿಳಿಯುವುದು ಯಾಕೆ ಅಷ್ಟೊಂದು ಪ್ರಾಮುಖ್ಯವಾಗಿದೆಯೆಂದು ನೀವು ಕುತೂಹಲಪಡಬಹುದು. ಮುಂದಿನ ಪ್ಯಾರಗ್ರಾಫ್‌ಗಳು ತುಂಬ ಬೋಧಪ್ರದವಾಗಿವೆಯೆಂಬುದನ್ನು ನೀವು ಕಂಡುಕೊಳ್ಳುವಿರಿ. ಈ ಅಧ್ಯಾಯದ ಉಳಿದ ಭಾಗವನ್ನು ದಯವಿಟ್ಟು ಓದಿರಿ. ನಾನು ಮುಂದಿನ ಸಲ ಬರುವಾಗ, ಆರಾಧನೆಯ ವಿಷಯದಲ್ಲಿ ನಿಷ್ಕೃಷ್ಟ ಜ್ಞಾನವನ್ನು ಪಡೆದಿರುವುದರ ಮೌಲ್ಯವನ್ನು ನಿಮಗೆ ತೋರಿಸಲು ನಾನು ಸಂತೋಷಪಡುವೆ.”

4 ಕ್ರೈಸ್ತರೆಂದು ಹೇಳಿಕೊಳ್ಳುವ ಜನರಿಗೂ, ಭೂಮಿಯ ಮೇಲೆ ಸದಾಕಾಲ ಜೀವಿಸುವ ವಿಚಾರವು ಹೊಸತಾಗಿರುವುದರಿಂದ, ಈ ಪೀಠಿಕೆಯು ಅವರ ಆಸಕ್ತಿಯನ್ನು ಸೆರೆಹಿಡಿಯಬಹುದು:

◼ “ನಾವು ನಮ್ಮ ನೆರೆಯವರಿಗೆ ಒಂದು ಪ್ರಶ್ನೆಯನ್ನು ಕೇಳುತ್ತಿದ್ದೇವೆ. ಇಂತಹ ಒಂದು ಲೋಕದಲ್ಲಿ ಸದಾಕಾಲ ಜೀವಿಸುವಂತೆ ನೀವು ಆಮಂತ್ರಿಸಲ್ಪಟ್ಟಿದ್ದಲ್ಲಿ, ನೀವು ಆ ಆಮಂತ್ರಣವನ್ನು ಸ್ವೀಕರಿಸುತ್ತಿದ್ದೀರೊ? [ಜ್ಞಾನ ಪುಸ್ತಕದ 4-5ನೆಯ ಪುಟಗಳಲ್ಲಿನ ಚಿತ್ರವನ್ನು ತೋರಿಸಿರಿ. ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇದು ನಿಜವಾಗಿಯೂ ನಿಮ್ಮ ಜೀವನದಲ್ಲಿನ ಸಂತೋಷದ ಅನುಭವವಾಗಬಲ್ಲದು. ಆದರೆ ಅದು ನಿಮಗಾಗಿ ಒಂದು ವಾಸ್ತವಿಕತೆಯಾಗುವುದನ್ನು ಕಾಣಲು ಏನು ಮಾಡಬೇಕೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಯೋಹಾನ 17:3ಕ್ಕನುಸಾರ ಯಾವ ಕ್ರಿಯೆಯು ಅವಶ್ಯವೆಂಬುದನ್ನು ಗಮನಿಸಿರಿ. [ಓದಿರಿ.] ಈ ವಿಶೇಷ ರೀತಿಯ ಜ್ಞಾನವನ್ನು ಗಳಿಸುವಂತೆ ಈ ಪುಸ್ತಕವು ಅನೇಕರಿಗೆ ಸಹಾಯ ಮಾಡುತ್ತಿದೆ. ಓದಲಿಕ್ಕಾಗಿ ನೀವು ಒಂದು ವೈಯಕ್ತಿಕ ಪ್ರತಿಯನ್ನು ಇಷ್ಟಪಡುವಿರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನನ್ನ ಮುಂದಿನ ಭೇಟಿಯಲ್ಲಿ, ಇಲ್ಲಿಯೇ ಭೂಮಿಯ ಮೇಲೆ ನಿತ್ಯ ಜೀವವನ್ನು ನಾವು ಗಳಿಸಸಾಧ್ಯವಿದೆಯೆಂಬ ವಿಷಯವನ್ನು ನಂಬುವುದು ಏಕೆ ತರ್ಕಸಂಗತವಾಗಿದೆಯೆಂಬುದನ್ನು ನಾವು ಚರ್ಚಿಸಸಾಧ್ಯವಿದೆ.”

5 ನೀವು ಯಾರೊಂದಿಗೆ ಯೋಹಾನ 17:3ನ್ನು ಚರ್ಚಿಸಿದ್ದೀರೊ ಅವರನ್ನು ಭೇಟಿಯಾಗಲು ಹಿಂದಿರುಗುವಾಗ, ನೀವು ಈ ರೀತಿಯಲ್ಲಿ ಮುಂದುವರಿಸಬಹುದು:

◼ “ನನ್ನ ಹಿಂದಿನ ಭೇಟಿಯಲ್ಲಿ, ಯೋಹಾನ 17:3ರಲ್ಲಿ ಕಂಡುಬರುವ ಯೇಸುವಿನ ಆಕರ್ಷಕ ಮಾತುಗಳನ್ನು ನಾನು ನಿಮಗೆ ಓದಿಹೇಳಿದ್ದೆ. ದೇವರ ಮತ್ತು ತನ್ನ ಕುರಿತಾದ ಜ್ಞಾನವನ್ನು ತೆಗೆದುಕೊಳ್ಳುವುದು ನಿತ್ಯ ಜೀವವನ್ನು ಅರ್ಥೈಸುತ್ತದೆಂದು ಅಲ್ಲಿ ಅವನು ನಮಗೆ ಆಶ್ವಾಸನೆಯನ್ನಿತ್ತನು. ಆದರೆ ಒಂದು ಉತ್ತಮವಾದ ಜೀವನವನ್ನು ಕೇವಲ ಸ್ವರ್ಗದಲ್ಲಿ ಪಡೆಯಸಾಧ್ಯವಿದೆಯೆಂದು ಅನೇಕ ಜನರು ನಂಬುತ್ತಾರೆ. ಅದರ ಕುರಿತಾಗಿ ನಿಮಗೆ ಹೇಗನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಾನು ನಿಮ್ಮೊಂದಿಗೆ ಬಿಟ್ಟುಹೋದಂತಹ ಪುಸ್ತಕವನ್ನು ತರುವುದು ಅನುಕೂಲವಾಗಿರುವಲ್ಲಿ, ಪ್ರಮೋದವನವು ಭೂಮಿಯ ಮೇಲೆ ಪುನಸ್ಥಾಪಿಸಲ್ಪಡುವುದೆಂಬುದನ್ನು ರುಜುಪಡಿಸುವ ಕೆಲವು ಬೈಬಲ್‌ ವಚನಗಳನ್ನು ನಿಮಗೆ ತೋರಿಸಲು ಇಷ್ಟಪಡುವೆ. [ಜ್ಞಾನ ಪುಸ್ತಕದಲ್ಲಿನ 9-10ನೆಯ ಪುಟಗಳಲ್ಲಿರುವ 11-16ನೆಯ ಪ್ಯಾರಗ್ರಾಫ್‌ಗಳನ್ನು ಚರ್ಚಿಸಿರಿ.] ನನ್ನ ಮುಂದಿನ ಭೇಟಿಯಲ್ಲಿ, ಬೈಬಲಿನಲ್ಲಿ ಕಂಡುಬರುವ ಈ ವಾಗ್ದಾನಗಳಲ್ಲಿ ನೀವು ಏಕೆ ಭರವೆಸೆಯಿಡಬಲ್ಲಿರೆಂಬುದನ್ನು ನಾನು ನಿಮಗೆ ತೋರಿಸಲು ಇಷ್ಟಪಡುವೆ. ಅಷ್ಟರ ತನಕ, ಆ ಪುಸ್ತಕದ ನಿಮ್ಮ ಪ್ರತಿಯಲ್ಲಿ ನೀವು 2ನೆಯ ಅಧ್ಯಾಯವನ್ನು ಪ್ರಾಯಶಃ ಓದಬಲ್ಲಿರಿ.”

6 ಬೈಬಲಿನಲ್ಲಿ ಅಲ್ಪಸ್ವಲ್ಪ ನಂಬಿಕೆಯಿರುವ ವ್ಯಕ್ತಿಗಳೊಂದಿಗೆ ಬೈಬಲ್‌ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಒಂದು ನೇರವಾದ ಪ್ರಸ್ತಾವವು ಅನೇಕವೇಳೆ ಯಶಸ್ವಿಕರವಾಗಿದೆ. “ರೀಸನಿಂಗ್‌” ಪುಸ್ತಕದ ಪುಟ 12ರಲ್ಲಿ ತೋರಿಬರುವ ಸೂಚಿಸಲ್ಪಟ್ಟ ಪೀಠಿಕೆಯೊಂದು ಇಲ್ಲಿದೆ:

◼ “ಒಂದು ಉಚಿತ ಮನೆ ಬೈಬಲ್‌ ಕೋರ್ಸನ್ನು ನಿಮಗೆ ನೀಡಲು ನಾನು ಸಂದರ್ಶಿಸುತ್ತಿದ್ದೇನೆ. ಸುಮಾರು 200 ದೇಶಗಳಲ್ಲಿನ ಜನರು, ಬೈಬಲನ್ನು ಮನೆಯಲ್ಲಿ ಕುಟುಂಬ ಗುಂಪುಗಳೋಪಾದಿ ಹೇಗೆ ಚರ್ಚಿಸುತ್ತಾರೆಂಬುದನ್ನು ಪ್ರದರ್ಶಿಸಲು, ಅನುಮತಿಯಿರುವಲ್ಲಿ ನಾನು ಕೇವಲ ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ಈ ವಿಷಯಗಳಲ್ಲಿ ಯಾವುದೇ ವಿಷಯವನ್ನೂ ನಾವು ಚರ್ಚೆಗಾಗಿ ಆಧಾರವಾಗಿ ಉಪಯೋಗಿಸಬಲ್ಲೆವು. [ಜ್ಞಾನ ಪುಸ್ತಕದಲ್ಲಿರುವ ಪರಿವಿಡಿಯನ್ನು ತೋರಿಸಿರಿ.] ನಿಮಗೆ ಯಾವುದು ವಿಶೇಷವಾಗಿ ಆಸಕ್ತಿಯುಳ್ಳದ್ದಾಗಿದೆ?” ವ್ಯಕ್ತಿಯು ಒಂದು ಆಯ್ಕೆಯನ್ನು ಮಾಡುವಂತೆ ಕಾಯಿರಿ. ಆರಿಸಲ್ಪಟ್ಟ ಅಧ್ಯಾಯಕ್ಕೆ ತಿರುಗಿಸಿರಿ, ಮತ್ತು ಪ್ರಥಮ ಪ್ಯಾರಗ್ರಾಫ್‌ನಲ್ಲಿ ಅಭ್ಯಾಸವನ್ನು ಆರಂಭಿಸಿರಿ.

7 ಬೈಬಲ್‌ನೊಂದಿಗೆ ಪರಿಚಿತರಲ್ಲದ ಜನರೊಂದಿಗೆ ಅಭ್ಯಾಸಗಳನ್ನು ಆರಂಭಿಸಲು ನೀವು ಪ್ರಯತ್ನಿಸಬಲ್ಲ ಒಂದು ನೇರವಾದ ಯಶಸ್ವೀ ಪ್ರಸ್ತಾವವು ಇಲ್ಲಿದೆ:

◼ “ಬೈಬಲ್‌, ತುಂಬ ವಿವೇಕವು ಅಡಕವಾಗಿರುವ ಒಂದು ಪವಿತ್ರ ಗ್ರಂಥವಾಗಿದೆಯೆಂದು ಅನೇಕ ಜನರು ನಂಬುತ್ತಾರಾದರೂ, ಅದರಿಂದ ಯಾವುದೇ ವಿಷಯವನ್ನು ಕಲಿಯಲು ಅವರಿಗೆ ಇನ್ನೂ ಒಂದು ಅವಕಾಶ ಸಿಕ್ಕಿರುವುದಿಲ್ಲ. ನಾನು ಉಚಿತವಾಗಿ ಬೈಬಲ್‌ ಪಾಠಗಳನ್ನು ಕಲಿಸುತ್ತೇನೆ ಮತ್ತು ಹೆಚ್ಚಿನ ವಿದ್ಯಾರ್ಥಿಗಳಿಗಾಗಿ ನನ್ನ ಕಾರ್ಯತಖ್ತೆಯಲ್ಲಿ ಸಮಯವಿದೆ. ನಾವು ಉಪಯೋಗಿಸುವಂತಹ ಬೈಬಲ್‌ ಅಭ್ಯಾಸದ ನೆರವು ಇದಾಗಿದೆ. [ಜ್ಞಾನ ಪುಸ್ತಕವನ್ನು ತೋರಿಸಿರಿ.] ಈ ಕೋರ್ಸ್‌ ಕೇವಲ ಕೆಲವೇ ತಿಂಗಳದ್ದಾಗಿರುತ್ತದೆ ಮತ್ತು ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ? ನಾವು ವೃದ್ಧರಾಗುವುದೂ ಸಾಯುವುದೂ ಏಕೆ? ಮತ್ತು ಮೃತರಾದ ನಮ್ಮ ಪ್ರಿಯರಿಗೆ ಏನು ಸಂಭವಿಸುತ್ತದೆ? ಎಂಬಂತಹ ಪ್ರಶ್ನೆಗಳನ್ನು ಬೈಬಲ್‌ ಹೇಗೆ ಉತ್ತರಿಸುತ್ತದೆಂಬುದನ್ನು ತೋರಿಸುತ್ತದೆ. ನಾನು ಅಭ್ಯಾಸವನ್ನು ಮಾಡಿತೋರಿಸಬಹುದೊ?” ಒಂದು ಅಭ್ಯಾಸದ ನೀಡಿಕೆಯು ನಿರಾಕರಿಸಲ್ಪಟ್ಟಲ್ಲಿ, ಜ್ಞಾನ ಪುಸ್ತಕವನ್ನು ನೀಡಿ, ಅದನ್ನು ತನ್ನಷ್ಟಕ್ಕೆ ಓದುವಂತೆ ಆ ವ್ಯಕ್ತಿಯನ್ನು ಪ್ರೋತ್ಸಾಹಿಸಿರಿ.

8 ದೇವರ ಮತ್ತು ಕ್ರಿಸ್ತನ ನಿಷ್ಕೃಷ್ಟ ಜ್ಞಾನವನ್ನು ಪಡೆದಿರುವವರೆಲ್ಲರಿಗೆ ಅದು ಎಂಥ ಒಂದು ನಿಧಿಯಾಗಿದೆ! ಅದನ್ನು ತೆಗೆದುಕೊಳ್ಳುವುದು ನಿಜವಾಗಿಯೂ, ಪರಿಪೂರ್ಣ ಪರಿಸ್ಥಿತಿಗಳಲ್ಲಿ ನಿತ್ಯಜೀವವನ್ನು ಅರ್ಥೈಸುತ್ತದೆ. ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲಿಕ್ಕಾಗಿ ನವೆಂಬರ್‌ ತಿಂಗಳಲ್ಲಿ ನಾವು ಪ್ರತಿಯೊಂದು ಸಂದರ್ಭವನ್ನು ಉಪಯೋಗಿಸಿಕೊಳ್ಳೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ