ಯುಕ್ತವಾದ ಮನಃಪ್ರವೃತ್ತಿ ಹೊಂದಿರುವವರ ಅನ್ವೇಷಣೆ ಮಾಡಿರಿ
1 ಸಾರುವ ಕೆಲಸದ ಒಂದು ಉದ್ದೇಶವು, “ನಿತ್ಯಜೀವಕ್ಕಾಗಿ ಯುಕ್ತವಾದ ಮನಃಪ್ರವೃತ್ತಿ”ಯಿರುವವರನ್ನು ಕಂಡುಹಿಡಿಯುವುದೇ ಆಗಿದೆ. (ಅ. ಕೃ. 13:48, NW) ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿತರಣೆಯು, ಇದನ್ನು ಪೂರೈಸುವ ಒಂದು ಅತ್ಯುತ್ತಮವಾದ ವಿಧವಾಗಿ ರುಜುವಾಗಿದೆ ಏಕೆಂದರೆ, ನಮ್ಮ ನಿಯತಕಾಲಿಕ ಪತ್ರಿಕೆಗಳು ಜನರನ್ನು ರಾಜ್ಯ ನಿರೀಕ್ಷೆಯ ಕುರಿತು ಅರಿವುಳ್ಳವರನ್ನಾಗಿ ಮಾಡುತ್ತವೆ. ಎಪ್ರಿಲ್ ತಿಂಗಳಿನಲ್ಲಿ ನಾವು ಈ ಪತ್ರಿಕೆಗಳಿಗೆ ಚಂದಾಗಳನ್ನು ನೀಡಲಿರುವೆವು. ಆಶಾಪೂರ್ವಕವಾಗಿ, ಎಲ್ಲಿ ಆಸಕ್ತಿಯು ಕಂಡುಕೊಳ್ಳಲ್ಪಡುತ್ತದೋ ಅಲ್ಲಿ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಲ್ಲಿ ಹೊಸ ಬೈಬಲ್ ಅಭ್ಯಾಸಗಳನ್ನು ನಾವು ಪ್ರಾರಂಭಿಸಬಲ್ಲೆವು. ನಿಮಗಾಗಿ ಕಾರ್ಯಸಾಧಕವಾಗಿರಬಹುದಾದ ಕೆಲವು ಸೂಚನೆಗಳು ಇಲ್ಲಿವೆ:
2 ಎಪ್ರಿಲ್ 1ರ “ಕಾವಲಿನಬುರುಜು” ಪತ್ರಿಕೆಯನ್ನು ಉಪಯೋಗಿಸುತ್ತಿರುವಾಗ, ನೀವು ಕಳೆದ ವರ್ಷದ ಜಿಲ್ಲಾ ಅಧಿವೇಶನದ ಬಹಿರಂಗ ಭಾಷಣದ ಮೇಲೆ ಕೇಂದ್ರೀಕರಿಸುವ “ನಿತ್ಯತೆಯ ಅರಸನನ್ನು ಸ್ತುತಿಸಿರಿ!” ಎಂಬ ವಿಷಯವನ್ನು ಪ್ರದರ್ಶಿಸಿ ಹೀಗೆ ಹೇಳಬಹುದು:
◼ “ನಾವು ಮಾತಾಡುವ ಹೆಚ್ಚಿನ ಜನರಿಗೆ ದೇವರಲ್ಲಿ ನಂಬಿಕೆಯಿದೆ. ಆತನಲ್ಲಿ ನಂಬಿಕೆಯನ್ನಿಡುವುದನ್ನು ಕೆಲವರು ಕಷ್ಟಕರವನ್ನಾಗಿ ಕಂಡುಕೊಳ್ಳುತ್ತಾರೆ. ನಿಮಗೆ ಹೇಗೆ ಅನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರೊಬ್ಬನು ಇರಲೇಬೇಕು ಎಂಬುದನ್ನು ರುಜುಪಡಿಸುವ ನಿಜ ಸಾಕ್ಷ್ಯದಿಂದ ನಾವು ಸುತ್ತುವರಿಯಲ್ಪಟ್ಟಿದ್ದೇವೆ. [ಕೀರ್ತನೆ 104:24ನ್ನು ಓದಿರಿ.] ನಾವು ಒಂದು ಕ್ಯಾಮರಾವನ್ನು ಅಥವಾ ಒಂದು ಕಂಪ್ಯೂಟರನ್ನು ನೋಡುವಾಗ, ಅದು ಒಬ್ಬ ಬುದ್ಧಿಶಕ್ತಿಯುಳ್ಳ ವಿನ್ಯಾಸಕನಿಂದ ಉತ್ಪಾದಿಸಲ್ಪಟ್ಟಿರಲೇಬೇಕು ಎಂಬುದನ್ನು ನಾವು ಮನಃಪೂರ್ವಕವಾಗಿ ಅಂಗೀಕರಿಸುತ್ತೇವೆ. ಭೂಮಿ ಮತ್ತು ಮಾನವರಾದ ನಮ್ಮಂಥ ಎಷ್ಟೋ ಹೆಚ್ಚು ಜಟಿಲವಾದ ವಸ್ತುಗಳು ಆಕಸ್ಮಿಕವಾಗಿ ಉತ್ಪತ್ತಿಯಾದವು ಎಂದು ಹೇಳುವುದು ಸಮಂಜಸವಾಗಿರುವುದೋ?” ದೇವರಲ್ಲಿ ನಂಬಿಕೆಯನ್ನಿಡುವುದಕ್ಕಾಗಿರುವ ಒಂದು ತರ್ಕಬದ್ಧವಾದ ಕಾರಣವನ್ನು ತೋರಿಸಲು, ಆ ಲೇಖನದಿಂದ ಒಂದು ಪ್ಯಾರಗ್ರಾಫನ್ನು ಉಪಯೋಗಿಸಿರಿ. ಪತ್ರಿಕೆಯ ಮೌಲ್ಯವನ್ನು ವಿವರಿಸಿರಿ ಮತ್ತು ಒಂದು ಚಂದಾವನ್ನು ನೀಡಿರಿ.
3 ಎಪ್ರಿಲ್ 15ರ “ಕಾವಲಿನಬುರುಜು” ಪತ್ರಿಕೆಯು “ಸತ್ಯಾರಾಧನೆಯು ದೇವರ ಆಶೀರ್ವಾದವನ್ನು ಪಡೆಯುವುದಕ್ಕೆ ಕಾರಣ” ಎಂಬ ಲೇಖನವನ್ನು ಪ್ರದರ್ಶಿಸುತ್ತದೆ. ಸೂಕ್ತವಾದಲ್ಲಿ, ಅದನ್ನು ನೀಡುವ ಮುನ್ನ ನೀವು ಹೀಗೆ ಕೇಳಸಾಧ್ಯವಿದೆ:
◼ “ಲೋಕದಲ್ಲಿ ನೂರಾರು ಧರ್ಮಗಳು ಅಸ್ತಿತ್ವದಲ್ಲಿರುವುದರೊಂದಿಗೆ ಅವೆಲ್ಲವೂ ದೇವರಿಗೆ ಸ್ವೀಕಾರಾರ್ಹವಾಗಿರಸಾಧ್ಯವೆಂದು ನೀವು ನೆನಸುತ್ತೀರೋ? [ಹೇಳಿಕೆಗಾಗಿ ಅನುಮತಿಸಿರಿ.] ಅನೇಕ ಧಾರ್ಮಿಕ ವ್ಯಕ್ತಿಗಳ ಪ್ರತಿಪಾದನೆಗಳ ಹೊರತೂ, ದೇವರ ಚಿತ್ತವನ್ನು ಮಾಡದೇ ಇರುವವರು ತಿರಸ್ಕರಿಸಲ್ಪಡುವರೆಂದು ಯೇಸು ಮುಂತಿಳಿಸಿದನು. [ಮತ್ತಾಯ 7:21-23ನ್ನು ಓದಿರಿ.] ಯೇಸುವಿನಿಂದ ಕಲಿಸಲ್ಪಟ್ಟ ಸತ್ಯ ಧರ್ಮವನ್ನು ನಾವು ಗುರುತಿಸುವುದು ಪ್ರಾಮುಖ್ಯವಾಗಿದೆ.” ಪುಟ 16ರ ಆರಂಭದಲ್ಲಿರುವ “ಸತ್ಯ ಧರ್ಮವು ಯಾವ ಫಲವನ್ನು ಉತ್ಪಾದಿಸಬೇಕು?” ಎಂಬ ಶೀರ್ಷಿಕೆಗೆ ತಿರುಗಿಸಿರಿ, ಮತ್ತು ವಿಷಯವನ್ನು ದೃಷ್ಟಾಂತಿಸಲು ಒಂದು ಉದಾಹರಣೆಯನ್ನು ಚರ್ಚಿಸಿರಿ.
4 ಮೇ 8ರ “ಎಚ್ಚರ!” ಪತ್ರಿಕೆಯಲ್ಲಿನ “ಯುದ್ಧಗಳು ಇನ್ನಿಲ್ಲದಿರುವಾಗ” ಎಂಬ ಮುಖ್ಯ ವಿಷಯವನ್ನು ಪ್ರದರ್ಶಿಸುವಾಗ, ಹೀಗೆ ಹೇಳುವುದನ್ನು ನೀವು ಪರಿಗಣಿಸಬಹುದು:
◼ “ಈ ಶತಮಾನದಲ್ಲಿ ಎರಡು ವಿಶ್ವ ಯುದ್ಧಗಳನ್ನು ಒಳಗೊಂಡು, ನೂರಾರು ಯುದ್ಧಗಳು ನಡೆದಿವೆ. ಆದರೂ ಕಾರ್ಯತಃ ಲೋಕ ಮುಖಂಡರೆಲ್ಲರೂ ತಾವು ಶಾಂತಿಯನ್ನು ಬಯಸುತ್ತೇವೆಂದು ಹೇಳುತ್ತಾರೆ. ನನಗೆ ಪರಿಚಯವಿರುವ ಪ್ರತಿಯೊಬ್ಬರೂ ಇದೇ ವಿಷಯವನ್ನು ಹೇಳುತ್ತಾರೆ. ಪ್ರತಿಯೊಬ್ಬರೂ ಶಾಂತಿಯನ್ನು ಬಯಸುವಲ್ಲಿ, ಅವರು ಅದನ್ನು ಏಕೆ ಸಾಧಿಸಸಾಧ್ಯವಿಲ್ಲ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಭೂಮಿಯ ಮೇಲೆ ನಿಜ ಶಾಂತಿಯನ್ನು ನಾವು ನೋಡುವುದಕ್ಕಾಗಿ ಏನು ಅಗತ್ಯವಿದೆ ಎಂದು ನೀವು ಭಾವಿಸುತ್ತೀರಿ?” ಮನೆಯವನ ಪ್ರತಿಕ್ರಿಯೆಯ ನಂತರ, 8 ಮತ್ತು 9ನೇ ಪುಟಗಳಿಗೆ ತಿರುಗಿಸಿರಿ ಮತ್ತು ಕೀರ್ತನೆ 46:8, 9ರಂಥ ವಚನಗಳನ್ನು ಓದಿರಿ. ಚಿತ್ರಗಳನ್ನು ಮತ್ತು ಉದ್ಧರಿಸಲ್ಪಟ್ಟ ಶಾಸ್ತ್ರವಚನಗಳನ್ನು ಉಪಯೋಗಿಸುತ್ತಾ, ದೇವರ ರಾಜ್ಯವು ಸರ್ವದಾ ಬಾಳಲಿರುವ ಲೋಕವ್ಯಾಪಕ ಶಾಂತಿಯನ್ನು ಹೇಗೆ ತರುವುದು ಎಂಬುದನ್ನು ತೋರಿಸಿರಿ. ನಂತರ ಚಂದಾವನ್ನು ನೀಡಿರಿ ಮತ್ತು ಹಿಂದಿರುಗಿ ಹೋಗಲು ಏರ್ಪಡಿಸಿರಿ.
5 ತಾವು ಕಾರ್ಯಮಗ್ನರಾಗಿದ್ದೇವೆ ಎಂದು ಹೇಳುವ ಅನೇಕ ಜನರನ್ನು ನೀವು ಕಂಡುಕೊಳ್ಳುವಲ್ಲಿ, ಇದನ್ನು ನೀವು ಪ್ರಯತ್ನಿಸಬಹುದು:
◼ “ಕಾರ್ಯಮಗ್ನ ಜೀವಿತಗಳನ್ನು ಜೀವಿಸುವ ಮತ್ತು ಜೀವನದ ಆತ್ಮಿಕ ಸ್ಥಿತಿಯ ಕುರಿತಾಗಿ ಚಿಂತನೆ ಮಾಡಲು ಸ್ವಲ್ಪವೇ ಸಮಯವನ್ನು ಕಂಡುಕೊಳ್ಳುವ ಜನರಿಗೆ ಸಹಾಯಮಾಡುವುದರಲ್ಲಿ ನಾವು ಆಸಕ್ತಿಯುಳ್ಳವರಾಗಿದ್ದೇವೆ. ನಮ್ಮ ನಿಯತಕಾಲಿಕ ಪತ್ರಿಕೆಗಳಾದ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು, ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಬಾಧಿಸುವ ಪ್ರಾಮುಖ್ಯವಾದ ವಿಷಯಗಳ ಕುರಿತಾದ ಸಂಕ್ಷಿಪ್ತ ಮಾಹಿತಿಯನ್ನು ಒದಗಿಸಲು ವಿನ್ಯಾಸಿಸಲ್ಪಟ್ಟಿವೆ. ಈ ಪ್ರತಿಗಳನ್ನು ನೀವು ಸ್ವೀಕರಿಸುವಂತೆ ನಾನು ಇಚ್ಛಿಸುತ್ತೇನೆ.”
6 ಯಾರು ಒಂದು ಚಂದಾವನ್ನು ನಿರಾಕರಿಸುತ್ತಾರೋ ಅವರಿಗೆ, ಪತ್ರಿಕೆಗಳ ಹಲವಾರು ಪ್ರತಿಗಳನ್ನು—ಬಿಡಿಪತ್ರಿಕೆಯೊಂದನ್ನು ರೂ. 4.00ರ ಕಾಣಿಕೆಗೆ ನೀಡಲು ನಿಶ್ಚಯಿಸಿಕೊಳ್ಳಿರಿ. ಆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದುವುದರಿಂದ ಅವರು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುವರು—ಇವು “ಯಾವುದೋ ಉತ್ತಮ ವಿಷಯದ ಶುಭಸಮಾಚಾರವನ್ನು” ತರುತ್ತವೆ.—ಯೆಶಾ. 52:7, NW.