ನಿಮ್ಮ ನೆರೆಯವನೊಂದಿಗೆ ಸತ್ಯವನ್ನು ಮಾತಾಡಿರಿ
1 ಎರಡು ಅತ್ಯಂತ ಮಹಾನ್ ಆಜ್ಞೆಗಳಲ್ಲಿ ಒಂದು ಆಜ್ಞೆಯು, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬುದಾಗಿದೆ. (ಮತ್ತಾ. 22:39) ಅಂಥ ಪ್ರೀತಿಯು ನಮ್ಮಲ್ಲಿರುವ ಅತ್ಯುತ್ತಮ ವಿಷಯ—ದೇವರ ವಾಕ್ಯದಲ್ಲಿ ನಾವು ಕಂಡುಕೊಂಡಿರುವ ಸತ್ಯ—ವನ್ನು ನಮ್ಮ ನೆರೆಯವನೊಂದಿಗೆ ಹಂಚಿಕೊಳ್ಳುವಂತೆ ನಮ್ಮನ್ನು ಪ್ರಚೋದಿಸುವುದು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು, ಬೈಬಲಿನ ಸತ್ಯದ ಸಂದೇಶವನ್ನು ವರ್ಧಿಸುವ ಕಾರಣ, ಮೇ ತಿಂಗಳಿನ ಅವಧಿಯಲ್ಲಿ ಈ ನಿಯತಕಾಲಿಕ ಪತ್ರಿಕೆಗಳಿಗೆ ಚಂದಾವನ್ನು ನೀಡುವುದು ‘ನಮ್ಮ ನೆರೆಯವರ ಸಂಗಡ ಸತ್ಯವನ್ನು ಮಾತಾಡಲು’ ನಮಗಿರುವ ಒಂದು ವಿಧವಾಗಿದೆ.—ಎಫೆ. 4:25.
2 ನಿಮ್ಮ ಸರಬರಾಯಿಯು ಮುಗಿದುಹೋಗುವ ತನಕ, ಮೇ 8ರ “ಎಚ್ಚರ!” ಪತ್ರಿಕೆಯನ್ನು ಪ್ರಧಾನವಾಗಿ ಎತ್ತಿತೋರಿಸಬೇಕು. ಹೀಗೆ ಕೇಳುವ ಮೂಲಕ ನೀವು ನಿಮ್ಮ ನಿರೂಪಣೆಯನ್ನು ಆರಂಭಿಸಬಹುದು:
◼ “ಯುದ್ಧರಹಿತವಾದ ಒಂದು ಲೋಕದ ಕುರಿತಾಗಿ ನಿಮ್ಮ ಪ್ರತಿವರ್ತನೆಯು ಏನಾಗಿದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಲೋಕದ ಧರ್ಮಗಳು ವಾಸ್ತವವಾಗಿ ಯುದ್ಧಗಳನ್ನು ಮತ್ತು ಹತಿಸುವಿಕೆಗಳನ್ನು ಪ್ರವರ್ಧಿಸುತ್ತವೆಂಬುದು ನಿಮಗೆ ತಿಳಿದಿತ್ತೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ತೀರ ವ್ಯತಿರಿಕ್ತವಾಗಿ, ದೇವರ ಸತ್ಯ ಆರಾಧಕರು ಮಾಡುವ ವಿಷಯದ ಕುರಿತು ಬೈಬಲು ಏನು ಹೇಳುತ್ತದೆಂಬುದನ್ನು ಗಮನಿಸಿರಿ.” ಪತ್ರಿಕೆಯ 4ನೇ ಪುಟದ ಮೇಲ್ಭಾಗದಿಂದ ಯೆಶಾಯ 2:2-4ನ್ನು ಓದಿರಿ, ಮತ್ತು ಅನಂತರ 10ನೇ ಪುಟದಲ್ಲಿನ “ಶಾಂತಿಪ್ರಿಯರಿಗೆ ಕರೆ” ಎಂಬ ಉಪಶೀರ್ಷಿಕೆಯ ಕೆಳಗಿರುವ ಪ್ರಥಮ ಪ್ಯಾರಗ್ರಾಫ್ ಅನ್ನು ಓದಿರಿ. ಅನಂತರ ಹೀಗೆ ಕೇಳಿರಿ: “ಅದನ್ನು ದೇವರು ಹೇಗೆ ಮಾಡುವನೆಂದು ನಿಮಗೆ ತಿಳಿದಿದೆಯೋ? ಉತ್ತರವು ಈ ಪತ್ರಿಕೆಯಲ್ಲಿ ಕಂಡುಬರುತ್ತದೆ.” ಚಂದಾವನ್ನು ನೀಡಿರಿ; ಅದು ನಿರಾಕರಿಸಲ್ಪಡುವಲ್ಲಿ ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ.
3 ಮೇ 15ರ “ಕಾವಲಿನಬುರುಜು” ಪತ್ರಿಕೆಯನ್ನು ಪ್ರದರ್ಶಿಸುತ್ತಿರುವಾಗ, ಅಸುರಕ್ಷಿತ ಭಾವನೆಯನ್ನು ಜನರಿಗೆ ಉಂಟುಮಾಡಿರುವ ಒಂದು ಇತ್ತೀಚಿನ ವಾರ್ತಾ ಘಟನೆಯನ್ನು ಉಲ್ಲೇಖಿಸಲು ಪ್ರಯತ್ನಿಸಿರಿ, ಮತ್ತು ಅನಂತರ ಹೀಗೆ ಕೇಳಿರಿ:
◼ “ಈ ಜೀವನದಲ್ಲಿ ನಾವು ನಿಜವಾಗಿಯೂ ಸುರಕ್ಷಿತವಾಗಿದ್ದೇವೆಂದು ಭಾವಿಸುವಂತೆ ಮಾಡಲು ಯಾವುದು ಅವಶ್ಯವಾಗಿದೆ ಎಂದು ನೀವು ನೆನಸುತ್ತೀರಿ? [ಪ್ರತಿಕ್ರೆಯೆಗಾಗಿ ಅನುಮತಿಸಿರಿ.] ಯಥಾರ್ಥವಾಗಿ, ಮಾನವಕುಲವನ್ನು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನುಷ್ಯರಲ್ಲಿ ಭರವಸೆಯನ್ನಿಡುವುದು ವಾಸ್ತವಿಕವಾಗಿದೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ; ಅನಂತರ ಕೀರ್ತನೆ 146:3ನ್ನು ಓದಿರಿ.] ಅನಂತರ ಕೀರ್ತನೆಗಾರನು ಭವಿಷ್ಯತ್ತಿನ ಕುರಿತಾಗಿ ಆಶಾವಾದಿಗಳಾಗಿರಲಿಕ್ಕಾಗಿ ನಮಗೆ ಕಾರಣವನ್ನು ನೀಡುತ್ತಾನೆ. [ಕೀರ್ತನೆ 146:5, 6ನ್ನು ಓದಿರಿ.] ‘ನಿಜ ಭದ್ರತೆ ಈಗ ಮತ್ತು ಸದಾಕಾಲ’ ಎಂಬ ಈ ಲೇಖನವು, ಭೂಮಿಗೆ ಹೆಚ್ಚು ಉತ್ತಮ ಪರಿಸ್ಥಿತಿಗಳನ್ನು ತರುವಂತೆ ಯೆಹೋವ ದೇವರಲ್ಲಿ ನಾವು ಏಕೆ ಭರವಸೆಯನ್ನಿಡಬಲ್ಲೆವು ಎಂಬುದನ್ನು ವಿವರಿಸುತ್ತದೆ.” ಒಂದು ಚಂದಾವನ್ನು ನೀಡಿರಿ ಮತ್ತು ಈಗಲೇ ಹೇಗೆ ಒಂದು ಸುರಕ್ಷಿತ ಜೀವನವನ್ನು ಅನುಭವಿಸಲು ಸಾಧ್ಯವಿದೆ ಎಂಬುದನ್ನು ಚರ್ಚಿಸಲಿಕ್ಕಾಗಿ ಹಿಂದಿರುಗಲು ನೀವು ಸಿದ್ಧರೆಂದು ಹೇಳಿರಿ.
4 ಜೂನ್ 8ರ “ಎಚ್ಚರ!” ಪತ್ರಿಕೆಯನ್ನು ನೀವು ಕೊಟ್ಟಿರುವವರೊಂದಿಗೆ ನಿಮ್ಮ ಪತ್ರಿಕಾ ಮಾರ್ಗಕ್ಕೆ ಹೆಚ್ಚನ್ನು ಕೂಡಿಸಲು, ನೀವು ಈ ಸಮೀಪಿಸುವಿಕೆಯನ್ನು ಪ್ರಯತ್ನಿಸಸಾಧ್ಯವಿದೆ:
◼ “ಕೆಲಸದ ಸ್ಥಳದಲ್ಲಿನ ಲೈಂಗಿಕ ಕಿರುಕುಳದ ವಿಷಯದ ಕುರಿತಾಗಿ, ನಾನು ನಿಮ್ಮೊಂದಿಗೆ ಬಿಟ್ಟುಹೋದ ಎಚ್ಚರ! ಪತ್ರಿಕೆಯನ್ನು ಓದಲು ನೀವು ಅತ್ಯಾಸಕ್ತಿಯುಳ್ಳವರಾಗಿದ್ದಂತೆ ತೋರಿತು. ವಿಷಯವನ್ನು ನೀವು ಆಸಕ್ತಿಕರವಾದದ್ದಾಗಿ ಕಂಡುಕೊಂಡಿರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಎಚ್ಚರ! ಪತ್ರಿಕೆಯ ಕ್ರಮವಾದ ಓದುಗರು ಅನೇಕ ವೇಳೆ, ಇಂಥ ಪ್ರಮುಖವಾದ ವಿಷಯಗಳ ಅದರ ನ್ಯಾಯಸಮ್ಮತವೂ ಪರಿಷ್ಕಾರವೂ ಆದ ನಿರ್ವಹಣೆಯನ್ನು ತಾವು ಗಣ್ಯಮಾಡಿದ್ದೇವೆಂದು ಹೇಳುತ್ತಾರೆ. ಈ ಇತ್ತೀಚಿನ ಸಂಚಿಕೆಯ ವಿಷಯದಲ್ಲಿಯೂ ಅದು ನಿಜವಾಗಿದೆಯೆಂದು ನೀವು ಕಂಡುಕೊಳ್ಳುವಿರೆಂದು ನಾನು ನೆನಸುತ್ತೇನೆ. [ಮುಖಪುಟದ ಕಥಾವಿಷಯವನ್ನು ಸಂಕ್ಷಿಪ್ತವಾಗಿ ತೋರಿಸಿರಿ.] ನೀವು ಇದನ್ನು ಓದಲು ಇಚ್ಛಿಸುವಿರೋ?”
5 ಒಂದು ಸಂಕ್ಷಿಪ್ತ ನಿರೂಪಣೆಯನ್ನು ನೀವು ಇಷ್ಟಪಡುವುದಾದರೆ, ನೀವು ಇದನ್ನು ಪ್ರಯತ್ನಿಸಬಹುದು:
◼ “ಇಂದಿನ ಜನಪ್ರಿಯ ಪತ್ರಿಕೆಗಳಲ್ಲಿ ಹೆಚ್ಚಿನ ಪತ್ರಿಕೆಗಳು, ಅತ್ಯಧಿಕ ವಾಣಿಜ್ಯ ತತ್ತ್ವ, ಕಾಮ ಅಥವಾ ಹಿಂಸಾಚಾರವನ್ನು ಪ್ರದರ್ಶಿಸುತ್ತವೆಂದು ಅನೇಕರು ಭಾವಿಸುತ್ತಾರೆ. [ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ತೋರಿಸಿರಿ] ಬೈಬಲಿನ ಮೇಲೆ ಆಧರಿತವಾಗಿರುವ ಈ ಹಿತಕರವಾದ ನಿಯತಕಾಲಿಕ ಪತ್ರಿಕೆಗಳನ್ನು ನಾವು ವಿತರಿಸುತ್ತಿದ್ದೇವೆ. ಅವು ಅತಿ ಶೈಕ್ಷಣಿಕವಾಗಿವೆ ಮತ್ತು ನಮಗೆ ದೇವರನ್ನು ಆರಾಧಿಸಲು, ನಮ್ಮ ನೆರೆಯವನನ್ನು ಪ್ರೀತಿಸಲು, ಮತ್ತು ಪ್ರಾಮಾಣಿಕ ನಡತೆಯನ್ನು ಕಾಪಾಡಿಕೊಳ್ಳಲು ಕಲಿಸುತ್ತವೆ. ಈ ರೀತಿಯ ವಾಚನಾ ವಿಷಯವನ್ನು ನೀವು ಇಷ್ಟಪಡುವಲ್ಲಿ, ಈ ಸಂಚಿಕೆಗಳಲ್ಲಿ ನೀವು ಕಂಡುಕೊಳ್ಳುವ ವಿಷಯವನ್ನು ಆನಂದಿಸುವಿರೆಂದು ನನಗೆ ತಿಳಿದಿದೆ.”
6 ನಮ್ಮ ನೆರೆಯವರೊಂದಿಗೆ ಸತ್ಯವನ್ನು ಮಾತಾಡುವುದರಲ್ಲಿ ನಾವು ಹುರುಪುಳ್ಳವರಾಗಿರುವುದಾದರೆ, ಅನೇಕರಿಗೆ ಅತ್ಯಧಿಕ ಪ್ರಮಾಣದ ಹರ್ಷವನ್ನು ತರಲು ನಾವು ಶಕ್ತರಾಗಬಹುದು.—ಅ. ಕೃ. 8:4, 8.