ಎಪ್ರಿಲ್ನಲ್ಲಿ ಪತ್ರಿಕಾ ಚಟುವಟಿಕೆಗಾಗಿ ತಯಾರಿಮಾಡಿರಿ
ನಮ್ಮ 1996 ಕ್ಯಾಲೆಂಡರ್ನ ಮೇಲೆ ಗಮನಿಸಲ್ಪಟ್ಟಿರುವಂತೆ, ಕರ್ತನ ಸಂಧ್ಯಾ ಭೋಜನವು ಈ ವರ್ಷದ ಎಪ್ರಿಲ್ 2ರಂದು ಆಚರಿಸಲ್ಪಡುವುದು. ಈ ಶೋಭಾಯಮಾನವಾದ ಸಂದರ್ಭದಿಂದ ಪ್ರೋತ್ಸಾಹಿಸಲ್ಪಟ್ಟವರಾಗಿ, ನಾವೆಲ್ಲರೂ ಎಪ್ರಿಲ್ ತಿಂಗಳಿನ ಆದ್ಯಂತವಾಗಿ ಹುರುಪಿನಿಂದ ಪತ್ರಿಕಾ ವಿತರಣೆಯಲ್ಲಿ ಪಾಲಿಗರಾಗೋಣ. ನಾವು ಎಂಥ ಸಮಯೋಚಿತವಾದ ಪತ್ರಿಕೆಗಳನ್ನು ಉಪಯೋಗಿಸಲಿರುವೆವು! ಎಪ್ರಿಲ್ 1ಕ್ಕಾಗಿರುವ ಕಾವಲಿನಬುರುಜು ಪತ್ರಿಕೆಯು, ಕಳೆದ ವರ್ಷದ ಜಿಲ್ಲಾ ಅಧಿವೇಶನದ “ನಿತ್ಯತೆಯ ಅರಸನನ್ನು ಸ್ತುತಿಸಿರಿ!” ಎಂಬ ಸಾರ್ವಜನಿಕ ಭಾಷಣದ ಮೇಲೆ ಕೇಂದ್ರೀಕರಿಸುವುದು. ಎಪ್ರಿಲ್ 15ರ ಕಾವಲಿನಬುರುಜು ಪತ್ರಿಕೆಯು “ಸುಳ್ಳು ಧರ್ಮದ ಅಂತ್ಯ ಸಮೀಪಿಸುತ್ತಿದೆ” ಎಂಬ ಕಳೆದ ಎಪ್ರಿಲ್ನ ವಿಶೇಷ ಸಾರ್ವಜನಿಕ ಭಾಷಣದ ವಿಷಯವನ್ನು ಅನುಸರಿಸುವುದು. ಎಪ್ರಿಲ್ 21ರಂದು ನೀಡಲ್ಪಡುವ, “ವಕ್ರ ಸಂತತಿಯ ನಡುವೆ ನಿರ್ದೋಷಿಗಳಾಗಿ ಉಳಿಯುವುದು” ಎಂಬ ಈ ವರ್ಷದ ವಿಶೇಷ ಭಾಷಣವು, ರಾಜ್ಯ ಚಟುವಟಿಕೆಗೆ ಹೆಚ್ಚಿನ ಪ್ರಚೋದನೆಯನ್ನು ನೀಡಬೇಕು. ನಾವು “ಇನ್ನು ಮುಂದೆ ಯುದ್ಧಗಳು ಇಲ್ಲದಿರುವಾಗ” ಎಂಬ ಎಪ್ರಿಲ್ 22ರ ಅವೇಕ್! ಅನ್ನು ಪ್ರದರ್ಶಿಸುವೆವು.
ಕಳೆದ ಎಪ್ರಿಲ್ ತಿಂಗಳ ರಾಜ್ಯ ವಾರ್ತೆ ಕಾರ್ಯಚಟುವಟಿಕೆಯ ಒಂದು ಮುಂಬರಿವಾಗಿ, ಈ ಎಪ್ರಿಲ್ ತಿಂಗಳು ಪತ್ರಿಕಾ ವಿತರಣೆಗಾಗಿ ಒಂದು ಪ್ರಮುಖವಾದ ತಿಂಗಳಾಗಿರಬೇಕು. ಯೋಜನೆಗಳನ್ನು ಮಾಡಲು ಸಮಯವು ಇದೇ ಆಗಿದೆ. ಅನೇಕರು ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಳ್ಳಲು ಬಯಸುವರು. ಅಗತ್ಯಕ್ಕನುಸಾರವಾಗಿ, ಎಪ್ರಿಲ್ ತಿಂಗಳಿನ ಪತ್ರಿಕೆಗಳ ಹೆಚ್ಚಿನ ಪ್ರತಿಗಳಿಗೆ ಆರ್ಡರ್ ಮಾಡತಕ್ಕದ್ದು. ಸಾಧ್ಯವಾದಾಗಲೆಲ್ಲಾ ಪ್ರತಿಯೊಬ್ಬರು ಬೆಳಗ್ಗೆ, ಮಧ್ಯಾಹ್ನ, ಮತ್ತು ಸಂಜೆ ಭಾಗವಹಿಸುತ್ತಿರುವುದರೊಂದಿಗೆ, ಪತ್ರಿಕಾ ದಿನಗಳಿಗಾಗಿ ಯೋಜನೆಗಳನ್ನು ಮಾಡಸಾಧ್ಯವಿದೆ. ನಾವೆಲ್ಲರೂ “ವಾಕ್ಯದ ಪ್ರಕಾರ ನಡೆಯುವವ”ರಾಗಿರೋಣ. ಕೀರ್ತನೆ 69:9ರಲ್ಲಿ ಮೆಸ್ಸೀಯನ ಕುರಿತಾಗಿ ಮುಂತಿಳಿಸಲ್ಪಟ್ಟಂತೆ, ನಾವು ಸಹ ಹೀಗೆ ಹೇಳಶಕ್ತರಾಗೋಣ: “ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ.”—ಯಾಕೋ. 1:22; ಯೋಹಾ. 2:17.