ಬೇಸಿಗೆಗಾಗಿ ನಿಮ್ಮ ಯೋಜನೆಗಳೇನಾಗಿವೆ?
ಬೇಸಿಗೆಯ ಕುರಿತಾಗಿ ನಾವು ಯೋಚಿಸುವಾಗ, ನಾವು ಬಿಸಿಯಾದ ಹವಾಮಾನದ ಕುರಿತು ಮತ್ತು, ಪ್ರಾಯಶಃ ಒಂದು ವಿಶ್ರಾಂತ ರಜೆ ಅಥವಾ ಸಂಬಂಧಿಕರು ಮತ್ತು ಸ್ನೇಹಿತರೊಂದಿಗಿನ ಒಂದು ಆಹ್ಲಾದಕರ ಭೇಟಿಗಾಗಿರುವ ಯೋಜನೆಗಳ ಕುರಿತು ಯೋಚಿಸುತ್ತೇವೆ. ನಿಮ್ಮ ಬೇಸಿಗೆಯ ಯೋಜನೆಗಳನ್ನು ಮಾಡುವಾಗ, ರಾಜ್ಯ ಅಭಿರುಚಿಗಳನ್ನು ಪ್ರಥಮ ಸ್ಥಾನದಲ್ಲಿಡಲು ನಿಮಗೆ ಸಹಾಯಮಾಡಬಹುದಾದ ಕೆಲವೊಂದು ಮರುಜ್ಞಾಪನಗಳು ಇಲ್ಲಿವೆ:
◼ ರಜಾದಿನಗಳಿಗಾಗಿ ನೀವು ಹೊರಹೋಗುವುದಾದರೆ, ಸ್ಥಳಿಕ ಸಭೆಯ ಕೂಟಗಳಿಗೆ ಹಾಜರಾಗಲು ಮತ್ತು ಶುಶ್ರೂಷೆಯಲ್ಲಿ ಪಾಲನ್ನು ತೆಗೆದುಕೊಳ್ಳಲು ಯೋಜಿಸಿರಿ. ನಿಮ್ಮ ಕ್ಷೇತ್ರ ಸೇವಾ ವರದಿಗಳನ್ನು ಹಾಕಲು ಖಚಿತಪಡಿಸಿಕೊಳ್ಳಿರಿ; ಅವಶ್ಯವಿದ್ದಲ್ಲಿ, ನಿಮ್ಮ ಸಭಾ ಸೆಕ್ರಿಟರಿಗೆ ಅವುಗಳನ್ನು ಅಂಚೆಯ ಮೂಲಕ ರವಾನಿಸಿರಿ.
◼ ಸತ್ಯದಲ್ಲಿರದ ಸಂಬಂಧಿಕರೊಂದಿಗಿನ ಒಂದು ಭೇಟಿಯು, ಕೆಲವು ಉತ್ಪನ್ನಕರವಾದ ಅನೌಪಚಾರಿಕ ಸಾಕ್ಷಿ ಕಾರ್ಯವನ್ನು ಮಾಡಲು ನಿಮಗೆ ಒಂದು ಅವಕಾಶವನ್ನು ಕೊಡಬಹುದು. ನಿಮ್ಮ ಬೈಬಲ್ ಮತ್ತು ಸಾಹಿತ್ಯದ ಒಂದು ಸರಬರಾಜನ್ನು ತರಲು ಖಾತ್ರಿಯಿಂದಿರಿ.
◼ ತನ್ನ ಟೆರಿಟೊರಿಯ ಆವರಿಸುವಿಕೆಯಲ್ಲಿ ನೆರವಿನ ಅಗತ್ಯವಿರುವ, ಹತ್ತಿರದ ಒಂದು ಸಭೆಗೆ ಸಹಾಯಮಾಡುವುದರ ಕುರಿತಾಗಿ ನೀವು ಯೋಚಿಸಿದ್ದೀರೋ? ನಿಮ್ಮ ಕ್ಷೇತ್ರದಲ್ಲಿನ ಅಗತ್ಯಗಳ ಕುರಿತಾದ ಮಾಹಿತಿಯನ್ನು ಪಡೆದುಕೊಳ್ಳಲು ಹಿರಿಯರೊಂದಿಗೆ ಅಥವಾ ಸರ್ಕಿಟ್ ಮೇಲ್ವಿಚಾರಕರೊಂದಿಗೆ ಮಾತಾಡಿರಿ.
◼ ಯುವ ಜನರು ತಮ್ಮ ಸೇವಾ ಚಟುವಟಿಕೆಯನ್ನು ವಿಸ್ತರಿಸಲಿಕ್ಕಾಗಿ, ಶಾಲಾ ರಜೆಗಳು ಒಂದು ಉತ್ಕೃಷ್ಟವಾದ ಸಂದರ್ಭವನ್ನು ಒದಗಿಸುತ್ತವೆ. ಯೌವನಸ್ಥರೇ, ನೀವು ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಳ್ಳಬಲ್ಲಿರೋ?
◼ ಒಣ ಹವಾಮಾನ ಮತ್ತು ದೀರ್ಘವಾದ ಹಗಲು ಹೊತ್ತಿನ ತಾಸುಗಳ ಕಾರಣ, ಅನೇಕ ಜನರು ಮನೆಯಲ್ಲಿರುವಾಗ ಹೆಚ್ಚು ಸಂಧ್ಯಾ ಸಾಕ್ಷಿ ಕಾರ್ಯವನ್ನು ಮಾಡುವ ಮೂಲಕ ಸೇವೆಯಲ್ಲಿ ಅತ್ಯುತ್ಕೃಷ್ಟವಾದ ಫಲಿತಾಂಶಗಳನ್ನು ಪಡೆಯಬಲ್ಲಿರೆಂಬುದನ್ನು ನೀವು ಕಂಡುಕೊಳ್ಳಬಹುದು.
◼ ಹೊರಹೋಗುವವರಿಗೆ ನೇಮಿಸಲ್ಪಟ್ಟ ಜವಾಬ್ದಾರಿಗಳನ್ನು ನೋಡಿಕೊಳ್ಳಲು ಯಾರಾದರೊಬ್ಬರನ್ನು ಏರ್ಪಡಿಸುತ್ತಾ, ಹಿರಿಯರು ಸಭಾ ಚಟುವಟಿಕೆಗಳನ್ನು ಸುಸಂಘಟಿತವಾಗಿಡಲು ಎಚ್ಚರಿಕೆಯಿಂದಿರಬೇಕು.
“ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ” ಎಂಬುದನ್ನು ಜ್ಞಾಪಕದಲ್ಲಿಡಿರಿ. (ಜ್ಞಾನೋ. 21:5) ನಿಮ್ಮ ಬೇಸಿಗೆಕಾಲದ ದೇವಪ್ರಭುತ್ವ ಅವಕಾಶಗಳಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವಂತೆ ಯೋಜನೆಮಾಡಿರಿ.