ಬೇಸಗೆಕಾಲಕ್ಕೆ ನಿಮ್ಮ ಯೋಜನೆಗಳು ಏನಾಗಿವೆ?
1 ನಮಗೆ ಲಭ್ಯವಿರುವ ಸಮಯವನ್ನು ನಾವು ಎಷ್ಟು ಅತ್ಯುತ್ತಮವಾಗಿ ಬಳಸುವೆವೆಂದು ಯೋಜಿಸುವಾಗ, ಸಾರ್ಥಕವಾದ ನಮ್ಮ ಗುರಿಗಳನ್ನು ಮುಟ್ಟುವ ಸಾಧ್ಯತೆಯು ಹೆಚ್ಚಾಗಿರುತ್ತದೆಂಬುದು ನಿಜವಾಗಿರುವುದಿಲ್ಲವೊ? ಬೇಸಗೆಕಾಲವು ದೇವಪ್ರಭುತ್ವ ಅಭಿರುಚಿಗಳನ್ನು ಹೆಚ್ಚಿಸುವ ವಿವಿಧ ಅವಕಾಶಗಳನ್ನು ನಮಗೆ ನೀಡುತ್ತದೆ. (ಜ್ಞಾನೋ. 21:5) ಇವುಗಳಲ್ಲಿ ಕೆಲವು ಯಾವುವು?
2 ಬೇಸಗೆಕಾಲದಲ್ಲಿ ನಿಮ್ಮ ಕ್ಷೇತ್ರ ಸೇವಾ ಚಟುವಟಿಕೆಯನ್ನು ಹೆಚ್ಚಿಸಲು ನೀವು ಯೋಜಿಸಬಾರದೇಕೆ? ದೀರ್ಘವಾದ ಹಗಲಿನ ತಾಸುಗಳು ಮತ್ತು ಬೆಚ್ಚನೆಯ ಹವಾಮಾನವು, ಸಾರುವ ಕೆಲಸದಲ್ಲಿ ಹೆಚ್ಚು ಸಮಯವನ್ನು ನೀವು ಕಳೆಯುವಂತೆ ಅನುಮತಿಸಬಹುದು. ಯುವ ಜನರು, ಬೇಸಗೆಯ ಒಂದು ಅಥವಾ ಹೆಚ್ಚಿನ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡುವಂತೆ, ಶಾಲೆಯ ರಜಾಕಾಲವು ಅವಕಾಶವನ್ನು ನೀಡುತ್ತದೆ. ಐದು ಪೂರ್ಣ ವಾರಾಂತ್ಯಗಳಿರುವ ಆಗಸ್ಟ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡುವಂತೆ ಇತರರೂ ಮುಂಚಿತವಾಗಿ ಯೋಜಿಸಸಾಧ್ಯವಿದೆ. ಈ ಆಗಸ್ಟ್ ತಿಂಗಳಿನಲ್ಲಿ, ನಾವು ಸೇವಾ ವರ್ಷವನ್ನು ಮುಕ್ತಾಯಗೊಳಿಸುವಾಗ, ಪ್ರತಿಯೊಬ್ಬರೂ ಶುಶ್ರೂಷೆಯಲ್ಲಿ ಸಾಧ್ಯವಾದಷ್ಟು ಪೂರ್ಣವಾಗಿ ಭಾಗವಹಿಸುವಂತೆ ಒಂದು ನಿಶ್ಚಿತ ಪ್ರಯತ್ನವು ಮಾಡಲ್ಪಡುವುದು.
3 ಟೆರಿಟೊರಿಯನ್ನು ಆವರಿಸಲು ಸಹಾಯದ ಅಗತ್ಯವಿರುವ ಹತ್ತಿರದ ಒಂದು ಸಭೆಗೆ ನೆರವು ನೀಡಲು ನೀವು ಯೋಜಿಸುತ್ತೀರೊ? ಅಂತಹ ಯಾವುದೇ ಅಗತ್ಯಗಳ ಕುರಿತು ಸರ್ಕಿಟ್ ಮೇಲ್ವಿಚಾರಕನು ಹಿರಿಯರಿಗೆ ತಿಳಿಸಸಾಧ್ಯವಿದೆ. ಇಲ್ಲವೆ ನೀವು ಅರ್ಹರಾಗಿರುವಲ್ಲಿ ಮತ್ತು ಅಪರೂಪವಾಗಿ ಕೆಲಸಮಾಡಲ್ಪಟ್ಟ ಅಥವಾ ಯಾರೂ ನೇಮಿಸಲ್ಪಟ್ಟಿರದ ಟೆರಿಟೊರಿಯನ್ನು ಆವರಿಸಲಿಕ್ಕಾಗಿ ಸೊಸೈಟಿಗೆ ಅರ್ಜಿಹಾಕಲು ಇಷ್ಟಪಡುವುದಾದರೆ, ಸಾಧ್ಯತೆಗಳ ಕುರಿತು ನಿಮ್ಮ ಹಿರಿಯರೊಂದಿಗೆ ಮಾತಾಡಿರಿ. ಮನೆಯಿಂದ ದೂರ ನೀವು ರಜಾಕಾಲವನ್ನು ಕಳೆಯುತ್ತಿರುವುದಾದರೆ, ಆ ಸ್ಥಳದಲ್ಲಿರುವ ಸಭೆಯೊಂದಿಗೆ ಕೂಟಗಳಿಗೆ ಹಾಜರಾಗಲು ಮತ್ತು ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ಯೋಜಿಸಿರಿ. ಯೆಹೋವನ ಸಾಕ್ಷಿಗಳಲ್ಲದ ಸಂಬಂಧಿಕರನ್ನು ನೀವು ಭೇಟಿಮಾಡುವಲ್ಲಿ, ಅವರೊಂದಿಗೆ ಸತ್ಯವನ್ನು ಹಂಚಿಕೊಳ್ಳಸಾಧ್ಯವಿರುವ ವಿಧಗಳನ್ನು ಮುಂಚಿತವಾಗಿ ತಯಾರಿಸಿರಿ.
4 “ದೇವರ ಜೀವನ ಮಾರ್ಗ” ಅಧಿವೇಶನವು, ನಾವೆಲ್ಲರೂ ನಮ್ಮ ಯೋಜನೆಗಳಲ್ಲಿ ಸೇರಿಸಬೇಕಾದ ಒಂದು ಘಟನೆಯಾಗಿದೆ. ಅಧಿವೇಶನದ ಪ್ರತಿಯೊಂದು ದಿನವೂ ನೀವು ಉಪಸ್ಥಿತರಿರುವಂತೆ, ಕೆಲಸದಿಂದ ಅಥವಾ ಶಾಲೆಯಿಂದ ರಜೆಯನ್ನು ತೆಗೆದುಕೊಳ್ಳಲು ಮುಂಚಿತವಾಗಿಯೇ ಏರ್ಪಾಡನ್ನು ಮಾಡಿರಿ. ಪ್ರಾಯೋಗಿಕವಾಗಿರುವಷ್ಟು ಬೇಗನೆ, ನಿಮ್ಮ ವಸತಿಯ ಸ್ಥಳವನ್ನು ಕಾದಿರಿಸಿರಿ ಮತ್ತು ನಿಮ್ಮ ಪ್ರಯಾಣಕ್ಕಾಗಿ ಏರ್ಪಾಡುಗಳನ್ನು ಮಾಡಿರಿ.
5 ಬೇಸಗೆಕಾಲಕ್ಕೆ ನಿಮ್ಮ ಯೋಜನೆಗಳು ಏನಾಗಿವೆ? ನಿಸ್ಸಂದೇಹವಾಗಿಯೂ ನೀವು ಶಾರೀರಿಕವಾಗಿ ಚೈತನ್ಯಪಡೆದುಕೊಳ್ಳಲು ಬಯಸುವಿರಿ. ಆದರೆ ನಿಮ್ಮ ಜೀವಿತದಲ್ಲಿ ರಾಜ್ಯವನ್ನು ಪ್ರಥಮವಾಗಿಡಲು ಮುಂದುವರಿಯುವ ಮೂಲಕ, ಆತ್ಮಿಕವಾಗಿ ನಿಮ್ಮನ್ನು ಬಲಪಡಿಸಲಿಕ್ಕಾಗಿರುವ ಹೆಚ್ಚು ಪ್ರಾಮುಖ್ಯವಾದ ಅವಕಾಶಗಳನ್ನು ಅಲಕ್ಷಿಸದಿರಿ.—ಮತ್ತಾ. 6:33; ಎಫೆ. 5:15, 16.