ಮಳೆಗಾಲದ ಅವಧಿಯಿಂದ ದೇವಪ್ರಭುತ್ವ ರೀತಿಯಲ್ಲಿ ಅತಿ ಹೆಚ್ಚನ್ನು ಪಡೆಯುವುದು
1 ಭವಿಷ್ಯವು, ಯಾರು ಅದಕ್ಕಾಗಿ ತಯಾರಿಸುತ್ತಾರೋ ಅವರಿಗೆ ಸೇರಿದೆ ಎಂದು ಹೇಳುವದುಂಟು. ನಮ್ಮ ಸಮಯದ ಉಪಯೋಗವು ಒಂದು ಪೂರೈಕೆಯ ಭಾವವನ್ನು ನಮಗೆ ತರಬೇಕಾದರೆ, ನಾವು ಮುಂಚಿತವಾಗಿ ಯೋಜನೆ ಮಾಡಲೇಬೇಕು. ಭಾರತದ ಅನೇಕ ಭಾಗಗಳಲ್ಲಿ ಜುಲೈ ತಿಂಗಳೊಳಗೆ ಮಳೆಗಾಲ ಆರಂಭಿಸಿರುತ್ತದೆ. ಈ ಅವಧಿಯಲ್ಲಿ ನಮ್ಮ ಸಮಯವನ್ನು ದೇವಪ್ರಭುತ್ವ ರೀತಿಯಲ್ಲಿ ಸದುಪಯೋಗಕ್ಕೆ ಹಾಕುವಂತೆ ನಾವು ಈಗ ಯಾವ ಯೋಜನೆಗಳನ್ನು ಮಾಡಬಹುದು?
2 ಮಾರ್ಚ್ 30ರ ಸ್ಮಾರಕಾಚರಣೆಗೆ ಹೊಸಾಸಕ್ತ ಜನರು ಬಹು ಸಂಖ್ಯೆಯಲ್ಲಿ ಹಾಜರಿದ್ದರು. ಅವರ ಆತ್ಮಿಕ ಪ್ರಗತಿಯು ಬಹುವಾಗಿ ನಮ್ಮಿಂದ ಅವರು ಪಡೆಯುವ ಸಹಾಯದ ಮೇಲೆ ಅಧರಿಸಿದೆ. ಜಿಲ್ಲಾ ಅಧಿವೇಶನವನ್ನು ಹಾಜರಾಗುವುದು ಅವರಿಗೊಂದು ಆಶೀರ್ವಾದಪ್ರದ ವಿಷಯವಾಗಿರುವುದು. ಅದರ ಅನೇಕ ಆತ್ಮಿಕ ಪ್ರಯೋಜನಗಳನ್ನು ಅವರಿಗೆ ನಾವು ತಿಳಿಸಬಹುದು ಮತ್ತು ಅವರ ಪ್ರಯಾಣದ ಏರ್ಪಾಡಿಗೆ ನೆರವಾಗಬಹುದು, ಪ್ರಾಯಶಃ ನಮ್ಮೊಂದಿಗೆ ಅಥವಾ ಇತರರೊಂದಿಗೆ ಹೋಗುವಂತೆ ಆಮಂತ್ರಿಸಲೂಬಹುದು.
3 ಅಧಿವೇಶನಕ್ಕೆ ಹಾಜರಾಗುವಿಕೆಯು ಅವಿಧಿ ಸಾಕ್ಷಿಗೆ ಹೆಚ್ಚಿನ ಸಂದರ್ಭಗಳನ್ನು ತೆರೆಯುತ್ತದೆ. ಪೂರ್ವ ಯೋಜನೆಯಲ್ಲಿ ಹೊಸ ಪ್ರಕಾಶನಗಳ ಸಂಗ್ರಹವನ್ನು ಪ್ಯಾಕ್ ಮಾಡುವುದೂ ಸೇರಿರಬೇಕು. ಪೆಟ್ರೋಲ್ ಅಂಗಡಿಗಳಲ್ಲಿ, ಹೊಟೇಲುಗಳಲ್ಲಿ ಮತ್ತು ವಸತಿಗೃಹಗಳಲ್ಲಿ ಇರುವ ಜನರಿಗೆ ಹಾಗೂ ಸಾರ್ವಜನಿಕ ವಾಹನಗಳಲ್ಲಿ ಪ್ರವಾಸ ಮಾಡುವವರಿಗೂ ನಾವು ಸಾಕ್ಷಿ ನೀಡಬಲ್ಲೆವು. ಅನೇಕ ಉತ್ತೇಜನಕ ಅನುಭವಗಳನ್ನು ಆನಂದಿಸುವದಕ್ಕೆ ಇದೊಂದು ಉತ್ತಮ ಮಾರ್ಗವು.
4 ಎಲ್ಲಿ ಅಧಿವೇಶನಗಳು ವರ್ಷಾಂತ್ಯದ ಸುಮಾರಿಗೆ ನಡೆಯುತ್ತವೆಯೋ ಅಲ್ಲಿ ಅನೇಕ ಯುವಕರು ರಜೆಯ ಅವಧಿಯನ್ನು ಸಮ್ಮೇಳನದ ಅವಧಿಯೊಂದಿಗೆ ಜೋಡಿಸುತ್ತಾರೆ. ಕೆಲವು ಹಿತಕರವಾದ ಮನೋರಂಜನೆ ಉಪಯುಕ್ತವಾದರೂ, ಈ ಬಿಡುವಿನ ಅವಧಿಯಲ್ಲಿ ಕೆಲವನ್ನು ಸಹಾಯಕ ಪಯನೀಯರ ಸೇವೆಯೇ ಮುಂತಾದ ಅಧಿಕ ಸಾಕ್ಷಿಕಾರ್ಯದಲ್ಲಿ ಉಪಯೋಗಿಸಬಹುದೇ? ತಮ್ಮ ಮಕ್ಕಳು ಯೋಜನೆಗಳನ್ನು ಮಾಡುವಂತೆ ನೆರವಾಗಲು ಹೆತ್ತವರು ಈಗಲೇ ಆರಂಭಿಸಬಹುದು. ಪ್ರಾಯಶಃ ಬೇರೆ ಬೇರೆ ಕುಟುಂಬದ ಮಕ್ಕಳು ಇದರಲ್ಲಿ ಸೇರಿ ಒಂದು ಗುಂಪು ಸೇವೆಯನ್ನು ಮಾಡಬಹುದು. ಪಯನೀಯರಾಗಿ ಸೇವೆ ಮಾಡಲಾಗದವರು, ವಿಶೇಷವಾಗಿ ವಾರಾಂತ್ಯದ ಸೇವೆಯಲ್ಲಿ ಭಾಗಿಗಳಾಗಿ ಹೆಚ್ಚನ್ನು ಮಾಡ ಸಾಧ್ಯವಿದೆ.
5 ಕೆಲವರು ಅವರ ಲೌಕಿಕ ಉದ್ಯೋಗದಿಂದ ರಜೆ ತಕ್ಕೊಳ್ಳುವುದರಿಂದ ಬೇರೆ ಸ್ಥಳಗಳಿಗೆ ಪ್ರಯಾಣ ಮಾಡುತ್ತಾರೆ. ಅಲ್ಲಿನ ಸ್ಥಳೀಕ ಸಭೆಯ ಕೂಟಗಳಿಗೆ ಹಾಜರಾಗಲು ಮತ್ತು ಅವರೊಂದಿಗೆ ಸೇವೆಯಲ್ಲಿ ಭಾಗವಹಿಸಲು ಯೋಜನೆ ಮಾಡುವ ಫಲವಾಗಿ ಪರಸ್ಪರ ಪ್ರೋತ್ಸಾಹನೆಯ ಉತ್ತಮ ವಿನಿಮಯವಾಗುವುದು. ನೀವು ಹೋಗುವ ಸ್ಥಳದಲ್ಲಿ ಕಡಿಮೆ ಸೇವೆಯಾದ ತುಂಬಾ ಟೆರಿಟೆರಿ ಇರಬಹುದಾದರಿಂದ, ರಾಜ್ಯದ ಸಂದೇಶವನ್ನು ಕೇಳುವ ಅಪೂರ್ವ ಸಂದರ್ಭವಿರುವ ಜನರಿಗೆ ಸಾಕ್ಷಿ ಕೊಡಲು ನೀವು ಶಕ್ತರಾಗುವಿರಿ.
6 ಅನೇಕ ಯುವ ಜನರು ಇತ್ತೀಚೆಗೆ ಅಥವಾ ಶೀಘ್ರವೇ ಶಾಲೆಯ ವಿದ್ಯಾಭ್ಯಾಸ ಮುಗಿಸಲಿಕ್ಕಿರಬಹುದು. ಇದು ಅವರ ಜೀವಿತದ ಗುರಿಗಳ ಕುರಿತು ಗಂಭೀರ ಚಿಂತೆಯನ್ನು ಎಬ್ಬಿಸುತ್ತದೆ. ದೇವಪ್ರಭುತ್ವ ಗುರಿಗಳ ಸುತ್ತಲೂ ತಮ್ಮ ಭವಿಷ್ಯತ್ತನ್ನು ಯೋಜಿಸುವ ಯುವ ಜನರು ಖಂಡಿತವಾಗಿ ಆಶೀರ್ವದಿಸಲ್ಪಡುವರು. (1 ಯೋಹಾ. 2:15-17) ಕ್ರಮದ ಪಯನೀಯರ ಸೇವೆಯನ್ನು ತಕ್ಕೊಳ್ಳುವ ನಿರ್ಣಯವು, ಅನೇಕ ವಿಶೇಷ ಸುಯೋಗಗಳುಳ್ಳ ಒಂದು ಸಂತೃಪ್ತಿಕರ ಜೀವಿತಕ್ಕೆ ನಡಿಸಬಲ್ಲದು.
7 ನಮ್ಮಲ್ಲಿ ಎಷ್ಟೋ ಹೆಚ್ಚು ಮಂದಿಗೆ ಸ್ವಲ್ಪ ಅಧಿಕ ಬಿಡುವಿನ ಸಮಯ ದೊರೆಯಲಿದೆ. ನಾವು ವಿವೇಕದಿಂದ ಕಾರ್ಯನಡಿಸುತ್ತಾ, ‘ಸಿಗುವ ಸಮಯವನ್ನು ನಮಗಾಗಿ ಖರೀದಿಸೋಣ.’ (ಎಫೆ. 5:15, 16) ಹೀಗೆ, ಯೆಹೋವನ ಸೇವೆಯಲ್ಲಿ ತಲ್ಲೀನರಾಗಿರಲು ಮಾಡುವ ಯೋಜನೆಗಳು ನಮಗೂ ಇತರರಿಗೂ ಬಾಳುವ ಪ್ರಯೋಜನಗಳನ್ನು ತರುವವು.—1 ತಿಮೊ. 4:15, 16.