ಸಾರಲು ಯಾರು ಅರ್ಹರಾಗಿದ್ದಾರೆ?
1 ಶುಶ್ರೂಷೆಯ ವಿಷಯದಲ್ಲಿ, ನಿಮಗೆ ಎಂದಾದರೂ ಮೋಶೆಯಂತೆ ಅನಿಸಿದೆಯೋ? ಅವನು ಹೇಳಿದ್ದು: “ಸ್ವಾಮೀ, ನಾನು ಮೊದಲಿನಿಂದಲೂ ನೀನು ದಾಸನ ಸಂಗಡ ಮಾತಾಡಿದ ಮೇಲೆಯೂ ವಾಕ್ಚಾತುರ್ಯವಿಲ್ಲದವನು.” (ವಿಮೋ. 4:10) ಆ ರೀತಿಯಲ್ಲಿ ನಿಮಗೆ ಅನಿಸುವುದಾದರೆ, ಸಾರುವುದರಿಂದ ವಿಮುಖರಾಗಲು ನೀವು ಒಲವುಳ್ಳರಾಗಬಹುದು. ಆದರೂ, ಯೇಸು “ನಮಗೆ ಸಾರಲು ಮತ್ತು ಒಂದು ಅಮೂಲಾಗ್ರವಾದ ಸಾಕ್ಷಿಯನ್ನು ನೀಡಲು ಆಜ್ಞಾಪಿಸಿದನು.” (ಅ. ಕೃ. 10:42, NW) ಆದುದರಿಂದ ನಾವು ಹೇಗೆ ಸುವಾರ್ತೆಯ ಅರ್ಹ ಪ್ರಚಾರಕರಾಗಿ ಪರಿಣಮಿಸುತ್ತೇವೆ?
2 ನಮ್ಮನ್ನು ಶುಶ್ರೂಷೆಗಾಗಿ ಅರ್ಹಗೊಳಿಸುವುದು ನಮ್ಮ ಐಹಿಕ ಶಿಕ್ಷಣದ ಮಟ್ಟವಾಗಿರುವುದಿಲ್ಲ. “ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ” ಮತ್ತು “ಇಹಲೋಕ ಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ” ಎಂದು ಪೌಲನು ಹೇಳಿದನು. (1 ಕೊರಿಂ. 1:26; 3:19) ಯೇಸು ತನ್ನ ಅಪೊಸ್ತಲರನ್ನು ಶ್ರಮಿಕ ವರ್ಗದಿಂದ—ಬೆಸ್ತರಾಗಿದ್ದ, ಕಡಿಮೆ ಪಕ್ಷ ನಾಲ್ವರನ್ನು—ಆರಿಸಿದನು. ಹಮ್ಮಿನ ಧಾರ್ಮಿಕ ಮುಖಂಡರು ಅವರನ್ನು “ಶಾಸ್ತ್ರಾಭ್ಯಾಸಮಾಡದ ಸಾಧಾರಣ”ರೋಪಾದಿ ಉಪೇಕ್ಷೆಯಿಂದ ವೀಕ್ಷಿಸಿದರು. ಲೌಕಿಕ ಮಟ್ಟಗಳಿಂದ ತೀರ್ಮಾನಿಸಲ್ಪಟ್ಟಾಗ, ಅಪೊಸ್ತಲರು ಸಾರಲು ಅನರ್ಹರಾಗಿದ್ದರು. ಆದರೂ, ಪಂಚಾಶತ್ತಮದ ದಿನದಂದು ನೀಡಲ್ಪಟ್ಟ ಪೇತ್ರನ ಪರಿಣತಿಯ ಭಾಷಣವು, 3,000 ಜನರನ್ನು ದೀಕ್ಷಾಸ್ನಾನಿತರಾಗುವಂತೆ ಪ್ರಚೋದಿಸಿತು!—ಅ. ಕೃ. 2:14, 37-41; 4:13.
3 ಸಾರುವುದಕ್ಕೆ ನಮ್ಮನ್ನು ಯೆಹೋವನು ಅರ್ಹಗೊಳಿಸುತ್ತಾನೆ: ಪೌಲನು ಪ್ರಕಟಿಸಿದ್ದು: “ನಮಗಿರುವ ಸಾಮರ್ಥ್ಯವು [“ಅರ್ಹತೆ,” NW] ದೇವರಿಂದಲೇ ಬಂದದ್ದು.” (2 ಕೊರಿಂ. 3:5) ಇತರರಿಗೆ ರಾಜ್ಯದ ಸತ್ಯವನ್ನು ಸಾರಲು ಕೋಟ್ಯಂತರ ಜನರಿಗೆ ವಿವೇಕದ ಮೂಲನಾದ ಯೆಹೋವನು ಕಲಿಸಿದ್ದಾನೆ. (ಯೆಶಾ. 54:13) ಈ ಕೆಲಸದ ಪರಿಣಾಮಕಾರಿತ್ವ ಮತ್ತು ಫಲೋತ್ಪಾದಕತೆಯು, ಕಳೆದ ವರ್ಷ ಸಜೀವ ‘ಯೋಗ್ಯತಾಪತ್ರಗಳೋಪಾದಿ’ ದೀಕ್ಷಾಸ್ನಾನಗೊಂಡ 3,38,491ರ ಸಂಖ್ಯೆಯಲ್ಲಿ ನೋಡಸಾಧ್ಯವಿದೆ. (2 ಕೊರಿಂ. 3:1-3) ಯೆಹೋವನಿಂದ ನಾವು ಕಲಿತಿರುವ ವಿಷಯಗಳ ಕುರಿತು ಧೈರ್ಯದಿಂದ ಮತ್ತು ನಿಶ್ಚಿತಾಭಿಪ್ರಾಯದಿಂದ ಸಾರುವುದಕ್ಕೆ ನಮಗೆ ಕಾರಣವೂ ಇದೆ.
4 ಶುಶ್ರೂಷಕರಿಗಾಗಿ ಒಂದು ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ದೇವರ ಸಂಸ್ಥೆಯು ಸ್ಥಾಪಿಸಿದೆ. ಶಾಸ್ತ್ರವಚನಗಳ ಮತ್ತು ಒಂದು ಮಹತ್ತಾದ ವೈವಿಧ್ಯಮಯ ಬೈಬಲ್ ಅಭ್ಯಾಸದ ನೆರವಿಗಳ ಮೂಲಕ, ನಾವು ಶಿಕ್ಷಿತರಾಗಿ, ಸಾರುವುದಕ್ಕೆ ‘ಪ್ರವೀಣರಾಗಿ . . . ಸನ್ನದ್ಧ’ರಾಗಲು ತರಬೇತಿಗೊಳಿಸಲ್ಪಡುತ್ತೇವೆ. (2 ತಿಮೊ. 3:16, 17) ಸೊಸೈಟಿಯ ಪ್ರಕಾಶನಗಳಲ್ಲಿ ಕಂಡುಬರುವ ಪಾಂಡಿತ್ಯದಿಂದ ಅನೇಕರು ಪ್ರಭಾವಿಸಲ್ಪಟ್ಟಿದ್ದಾರೆ. ಉದಾಹರಣೆಗಾಗಿ, ಒಂದು ಸ್ವೀಡಿಷ್ ನಿಯತಕಾಲಿಕ ಪತ್ರಿಕೆಯು ಹೇಳಿದ್ದು: “ಯೆಹೋವನ ಸಾಕ್ಷಿಗಳಿಂದ ಸಾರಲ್ಪಡುತ್ತಿರುವ ನಂಬಿಕೆಯ ಹಿಂದೆ, ಗಮನಾರ್ಹವಾದ ರೀತಿಯಲ್ಲಿ ಶ್ರೇಷ್ಠಮಟ್ಟದ ಮತ್ತು ಅಂತಾರಾಷ್ಟ್ರೀಯಾಭಿಮುಖವಾದ ಬೈಬಲ್ ಪಾಂಡಿತ್ಯವಿದೆ.”
5 ನಮ್ಮ ಐದು ಸಾಪ್ತಾಹಿಕ ಕೂಟಗಳಲ್ಲಿ ನೀಡಲ್ಪಡುವ ಮಾರ್ಗದರ್ಶನೆ, ಬೈಬಲ್ ಓದುವಿಕೆ ಮತ್ತು ಅಧ್ಯಯನಕ್ಕಾಗಿರುವ ನಮ್ಮ ಕಾರ್ಯಕ್ರಮ, ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿನ ಸಲಹೆನೀಡುವಿಕೆ, ಅನುಭವಸ್ಥ ಶುಶ್ರೂಷಕರಾಗಿರುವ ಇತರರಿಂದ ವೈಯಕ್ತಿಕ ನೆರವು, ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ, ಯೆಹೋವನ ಪವಿತ್ರ ಆತ್ಮದ ಬೆಂಬಲದೊಂದಿಗೆ, ಯೆಹೋವನು ನಮ್ಮನ್ನು ಸಾರುವುದಕ್ಕೆ ಸಂಪೂರ್ಣ ಅರ್ಹ ವ್ಯಕ್ತಿಗಳೋಪಾದಿ ವೀಕ್ಷಿಸುತ್ತಾನೆಂದು ನಾವು ಭರವಸೆಯಿಂದಿರಸಾಧ್ಯವಿದೆ. “ದೇವರಿಂದ ಉಪದೇಶಹೊಂದಿದವರಿಗೆ ತಕ್ಕ ಹಾಗೆ ಕ್ರಿಸ್ತನ ಅನ್ಯೋನ್ಯತೆಯಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತಾಡುತ್ತೇವೆ.”—2 ಕೊರಿಂ. 2:17.
6 ದೇವರ ಸಂಸ್ಥೆಯ ಮುಖಾಂತರ ಆತನಿಂದ ಒದಗಿಸಲ್ಪಡುವ ದೇವಪ್ರಭುತ್ವ ತರಬೇತಿಯ ಪೂರ್ಣ ಲಾಭವನ್ನು ನಾವು ತೆಗೆದುಕೊಳ್ಳುವುದಾದರೆ, ಸಾರುವುದರಿಂದ ವಿಮುಖರಾಗಲು ಅಥವಾ ಹೆದರಿಕೆಯ ಭಾವನೆಯುಳ್ಳವರಾಗಲು ಯಾವ ಕಾರಣವೂ ನಮಗಿರುವುದಿಲ್ಲ. ನಮ್ಮ ಪರಿಶ್ರಮಗಳನ್ನು ಯೆಹೋವನು ಆಶೀರ್ವದಿಸುವನೆಂಬ ಖಾತ್ರಿಯಿಂದ, ನಾವು ಇತರರಿಗೆ ಹರ್ಷಭರಿತರಾಗಿ ಸಾರಬಲ್ಲೆವು.—1 ಕೊರಿಂ. 3:6.