ಬೈಬಲು ನಿರೀಕ್ಷೆ ಮತ್ತು ಮಾರ್ಗದರ್ಶನೆಯನ್ನು ಒದಗಿಸುತ್ತದೆ
1 “ಭೂಮಿಯಲ್ಲಿ ಸಂತೋಷ—ಇದನ್ನು ಸ್ವಲ್ಪ ಸಮಯಕ್ಕಾದರೂ ಅನುಭವಿಸುವುದು ಅಸಾಧ್ಯವೆಂಬಂತೆ ಕಾಣುತ್ತದೆ. ಸಮಸ್ಯೆಗಳಲ್ಲಿ ಕೆಲವೇ ಆಗಿರುವ ರೋಗ, ವೃದ್ಧಾಪ್ಯ, ಹಸಿವೆ ಮತ್ತು ಪಾತಕಗಳು ಅನೇಕ ವೇಳೆ ಜೀವನವನ್ನು ದುರವಸ್ಥೆಯದ್ದಾಗಿ ಮಾಡುತ್ತವೆ. ಆದುದರಿಂದ ಭೂಮಿಯ ಪ್ರಮೋದವನದಲ್ಲಿ ಸದಾ ಜೀವಿಸುವ ವಿಷಯ ಮಾತಾಡುವುದು ಸತ್ಯಕ್ಕೆ ಕಣ್ಣು ಮುಚ್ಚಿಕೊಂಡ ಹಾಗೆ ಎಂದು ನೀವೆನ್ನಬಹುದು. ಅದರ ಕುರಿತು ಮಾತಾಡುವುದು ಸಮಯ ನಷ್ಟವೆಂದೂ ಸದಾ ಜೀವಿಸುವುದು ಸ್ವಪ್ನವೆಂದೂ ನೀವೆಣಿಸಬಹುದು.”
2 ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವು ಹೀಗೆ ಆರಂಭಿಸುತ್ತದೆ. ಅದರ ಪೀಠಿಕೆಯು, ಅದು ಹದಿನಾಲ್ಕು ವರ್ಷಗಳ ಹಿಂದೆ ಪ್ರಕಾಶಿಸಲ್ಪಟ್ಟ ಸಮಯಕ್ಕಿಂತಲೂ ಇಂದು ಇನ್ನೂ ಹೆಚ್ಚು ಪ್ರಸಕ್ತವಾಗಿದೆ. ಬೈಬಲು ಮಾರ್ಗದರ್ಶನೆಯನ್ನು ಕೊಡುತ್ತದೆ, ಮತ್ತು ಜನರನ್ನು ಬಾಧಿಸುತ್ತಿರುವ ಎಲ್ಲಾ ಸಮಸ್ಯೆಗಳಿಗಾಗಿ ಒಂದು ಪರಿಹಾರವನ್ನು ವಾಗ್ದಾನಿಸುತ್ತದೆಂದು ಅವರಿಗೆ ತಿಳಿಯುವ ಅಗತ್ಯವಿದೆ. ಡಿಸೆಂಬರ್ ತಿಂಗಳಿನಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಜನರಿಗೆ ನೀಡುವ ಮೂಲಕ ನಾವು ಅವರಿಗೆ ಸಹಾಯ ಮಾಡಲು ಯತ್ನಿಸುವೆವು. ಒಬ್ಬ ವ್ಯಕ್ತಿಯೊಂದಿಗೆ ಕೇವಲ ಸಾಹಿತ್ಯವನ್ನು ಬಿಟ್ಟುಬರುವುದು, ಅವನು ರಾಜ್ಯ ನಿರೀಕ್ಷೆಯನ್ನು ಸ್ವೀಕರಿಸುವನೆಂಬುದಕ್ಕೆ ಖಾತರಿಯಾಗಿರುವುದಿಲ್ಲವೆಂಬುದು ಖಂಡಿತ. ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುವ ಗುರಿಯೊಂದಿಗೆ ನಾವು ಪುನರ್ಭೇಟಿಗಳನ್ನು ಮಾಡಲೇಬೇಕು. ನಾವು ಅಂತಹ ಪ್ರಯತ್ನವನ್ನು ಮಾಡುವುದಾದರೆ ನಮಗೆ ಸಹಾಯದ ಆಶ್ವಾಸನೆಯಿದೆ. (ಮತ್ತಾ. 28:19, 20) ಇಲ್ಲಿ ಸೂಚಿಸಲ್ಪಟ್ಟಿರುವ ಕೆಲವು ನಿರೂಪಣೆಗಳಿವೆ:
3 ಒಬ್ಬ ವೃದ್ಧ ವ್ಯಕ್ತಿಯನ್ನು ನೀವು ಭೇಟಿಯಾಗುವಲ್ಲಿ, ನೀವು ಈ ಸಮೀಪಿಸುವಿಕೆಯನ್ನು ಪ್ರಯತ್ನಿಸಬಹುದು:
◼ “ನಾನು ಒಂದು ಪ್ರಶ್ನೆಯನ್ನು ಕೇಳಬಹುದೊ: ನೀವು ಯೌವನಸ್ಥರಾಗಿದ್ದಾಗ, ಸಮುದಾಯದಲ್ಲಿನ ಜನರು ಒಬ್ಬರನ್ನೊಬ್ಬರು ಹೇಗೆ ಉಪಚರಿಸುತ್ತಿದ್ದರು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈಗ ವಿಷಯಗಳು ತುಂಬಾ ಬದಲಾಗಿಬಿಟ್ಟಿವೆ, ಅಲ್ಲವೇ? ಈ ಬದಲಾವಣೆಗೆ ಕಾರಣವೇನೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಾವು ನಿಜವಾಗಿ ಬೈಬಲಿನಲ್ಲಿರುವ ಒಂದು ಪ್ರವಾದನೆಯ ನೆರವೇರಿಕೆಯನ್ನು ನೋಡುತ್ತಿದ್ದೇವೆ. [2 ತಿಮೊಥೆಯ 3:1-5ನ್ನು ಓದಿರಿ.] ಲೋಕವು ಇಂದು ಹೇಗಿದೆಯೋ ಅದನ್ನು ಬೈಬಲ್ ನಿಷ್ಕೃಷ್ಟವಾಗಿ ವರ್ಣಿಸುತ್ತದೆ. ಅಷ್ಟು ಮಾತ್ರವಲ್ಲದೆ, ಸಮೀಪ ಭವಿಷ್ಯತ್ತಿನಲ್ಲಿ ಒಂದು ಉತ್ತಮ ಲೋಕದ ಕುರಿತಾಗಿಯೂ ಅದು ವಾಗ್ದಾನಿಸುತ್ತದೆ. ಬೈಬಲಿನಲ್ಲಿರುವ ಎಷ್ಟೋ ಪ್ರವಾದನೆಗಳು ನೆರವೇರಿರುವ ಕಾರಣ, ಭವಿಷ್ಯತ್ತಿನ ಕುರಿತಾಗಿ ಅದು ಏನನ್ನು ಹೇಳುತ್ತದೊ ಅದು ಕೂಡ ನಿಜವಾಗುವುದೆಂಬ ನಂಬಿಕೆ ನಮಗಿದೆ. ಬೈಬಲಿನಲ್ಲಿರುವ ಅಂತಹ ಒಂದು ವಾಗ್ದಾನವು, ದೇವರ ನಿರ್ದೇಶನದ ಕೆಳಗೆ ಒಂದು ಲೋಕ ಸರಕಾರದ ಕುರಿತಾಗಿದೆ.” ಸದಾ ಜೀವಿಸಬಲ್ಲಿರಿ ಪುಸ್ತಕದ 112ನೆಯ ಪುಟಕ್ಕೆ ತಿರುಗಿಸಿ, 2ನೆಯ ಪ್ಯಾರಗ್ರಾಫನ್ನು ಓದಿರಿ. ಭವಿಷ್ಯತ್ತಿಗಾಗಿ ಬೈಬಲ್ ಯಾವ ನಿರೀಕ್ಷೆಯನ್ನು ಮುಂದಿಡುತ್ತದೆಂಬುದನ್ನು ಅಭ್ಯಾಸಿಸಲು ಸಾಧ್ಯವಾಗುವಂತೆ, ಮನೆಯವನು ಆ ಪುಸ್ತಕವನ್ನು ಪಡೆಯಲು ಉತ್ತೇಜಿಸಿರಿ.
4 ನೀವು “ಸದಾ ಜೀವಿಸಬಲ್ಲಿರಿ” ಪುಸ್ತಕವನ್ನು ನೀಡಿರುವ ಒಬ್ಬ ವೃದ್ಧ ವ್ಯಕ್ತಿಯನ್ನು ಪುನಃ ಸಂದರ್ಶಿಸುವಾಗ, ನೀವು ಹೀಗೆ ಹೇಳಸಾಧ್ಯವಿದೆ:
◼ “ನಾವು ಕಳೆದ ಸಲ ಮಾತಾಡಿದಾಗ, ಹಿಂದಿನ ಕೆಲವು ವರ್ಷಗಳ ಜೀವಿತಕ್ಕೆ ಹೋಲಿಸುವಾಗ, ಆಧುನಿಕ ಸಮಾಜವು ಅನೇಕ ವಿಧಗಳಲ್ಲಿ ಕೆಟ್ಟ ರೀತಿಯಲ್ಲಿ ಬದಲಾಗಿದೆಯೆಂಬ ವಿಷಯವನ್ನು ನಾವು ಒಪ್ಪಿದೆವು. ಹಾಗಿದ್ದರೂ, ಭವಿಷ್ಯತ್ತಿನಲ್ಲಿ ಹೆಚ್ಚು ಉತ್ತಮವಾದ ಲೋಕವೊಂದರ ಪ್ರತೀಕ್ಷೆಗಳನ್ನು ಬೈಬಲ್ ನೀಡುತ್ತದೆಂಬುದನ್ನು ನಿಮಗೆ ತೋರಿಸಲು ನಾನು ಪುನಃ ಬಂದಿದ್ದೇನೆ. [ಪ್ರಕಟನೆ 21:3, 4ನ್ನು ಓದಿರಿ.] ನಾವೆಲ್ಲರೂ ಉತ್ತಮ ಪರಿಸ್ಥಿತಿಗಳಲ್ಲಿ ಜೀವಿಸಲು ಇಷ್ಟಪಡುವುದರಿಂದ, ಈ ವಿಷಯದ ಕುರಿತಾಗಿ ಬೈಬಲಿಗೆ ಇನ್ನೇನನ್ನು ಹೇಳಲಿಕ್ಕಿದೆಯೆಂಬುದನ್ನು ನಾವು ನೋಡಬೇಕು.” ಸದಾ ಜೀವಿಸಬಲ್ಲಿರಿ ಪುಸ್ತಕವನ್ನು 19ನೆಯ ಅಧ್ಯಾಯಕ್ಕೆ ತಿರುಗಿಸಿ, 1-3ನೆಯ ಪ್ಯಾರಗ್ರಾಫ್ಗಳನ್ನು ಓದಿರಿ. ಒಂದು ಉಚಿತ ಮನೆ ಬೈಬಲಭ್ಯಾಸವನ್ನು ನೀಡಿರಿ.
5 ಒಬ್ಬ ಯುವ ವ್ಯಕ್ತಿಯನ್ನು ನೀವು ಸಂಭಾಷಣೆಯಲ್ಲಿ ತೊಡಗಿಸುವುದಾದರೆ, ನೀವು ಹೀಗೆ ಹೇಳಸಾಧ್ಯವಿದೆ:
◼ “ನಾನು ನಿಮಗೆ ಒಂದು ಪ್ರಶ್ನೆಯನ್ನು ಕೇಳಲು ಇಷ್ಟಪಡುತ್ತೇನೆ: ಒಬ್ಬ ಯುವ ವ್ಯಕ್ತಿಯೋಪಾದಿ, ಮುಂದೆ ಏನು ಕಾದಿದೆಯೊ ಅದರ ಕುರಿತಾಗಿ ಆಶಾವಾದಿಗಳಾಗಿರಲು ನಿಮಗೆ ಕಾರಣವಿದೆಯೆಂದು ನಿಮಗನಿಸುತ್ತದೊ? ಭವಿಷ್ಯತ್ತು ನಿಮಗೆ ಹೇಗೆ ತೋರುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಸಂತೋಷಕರವಾಗಿ, ಭವಿಷ್ಯತ್ತಿನ ಕುರಿತಾಗಿ ಆಶಾವಾದಿಗಳಾಗಿರಲು ನಿಜವಾದ ಕಾರಣವಿದೆ. [ಕೀರ್ತನೆ 37:10, 11ನ್ನು ಓದಿರಿ.] ಬೈಬಲ್ ಮತ್ತು ಅದರ ಒಳವಿಷಯಗಳ ಕುರಿತಾಗಿ ಜನರಿಗೆ ವಿಭಿನ್ನ ದೃಷ್ಟಿಕೋನಗಳಿರುವುದರಿಂದ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಈ ಪುಸ್ತಕವನ್ನು ನಾವು ಪ್ರಕಾಶಿಸಿದ್ದೇವೆ. ಬೈಬಲ್ ಏನನ್ನು ಹೇಳುತ್ತದೊ ಅದನ್ನು ನಂಬಲಿಕ್ಕಾಗಿ ಅದು ಕೊಡುವಂತಹ ಕಾರಣಗಳನ್ನು ಗಮನಿಸಿರಿ. [ಪುಟ 56ರಲ್ಲಿರುವ 27ನೆಯ ಪ್ಯಾರಗ್ರಾಫ್ನ ಪ್ರಥಮ ಮೂರು ವಾಕ್ಯಗಳನ್ನು ಮತ್ತು ಇಡೀ 28ನೆಯ ಪ್ಯಾರಗ್ರಾಫನ್ನು ಓದಿರಿ.] ಬೈಬಲ್ ಏನನ್ನು ಹೇಳುತ್ತದೊ ಅದರಲ್ಲಿ ನಾವು ನಂಬಿಕೆಯನ್ನಿಡಬಲ್ಲೆವೆಂಬುದರ ಕುರಿತಾಗಿ ನಾವು ಒಮ್ಮೆ ಮನಗಾಣಿಸಲ್ಪಟ್ಟರೆ, ಭವಿಷ್ಯತ್ತಿಗಾಗಿ ನಮಗೆ ಒಂದು ಖಚಿತವಾದ ನಿರೀಕ್ಷೆಯಿರುವುದು. ಈ ಪುಸ್ತಕದ ಒಂದು ಪ್ರತಿಯನ್ನು ಪಡೆದು, ಅದನ್ನು ಓದುವಂತೆ ನಾನು ನಿಮ್ಮನ್ನು ಉತ್ತೇಜಿಸುತ್ತೇನೆ.”
6 “ಸದಾ ಜೀವಿಸಬಲ್ಲಿರಿ” ಪುಸ್ತಕವನ್ನು ಸ್ವೀಕರಿಸಿದಂತಹ ಒಬ್ಬ ಯುವ ವ್ಯಕ್ತಿಯನ್ನು ಭೇಟಿಮಾಡಲು ಹಿಂದಿರುಗುವಾಗ, ಹೀಗೆ ಹೇಳುವ ಮೂಲಕ ನೀವು ಆರಂಭಿಸಬಹುದು:
◼ “ಭವಿಷ್ಯತ್ತಿನ ಕುರಿತಾಗಿ ನೀವು ಎಷ್ಟು ಚಿಂತಿತರಾಗಿದ್ದೀರೆಂಬುದನ್ನು ನಾನು ಗಣ್ಯಮಾಡಿದೆ. ಒಂದು ಸಂತೋಷದ ಮತ್ತು ಭದ್ರವಾದ ಭವಿಷ್ಯತ್ತನ್ನು ವಾಗ್ದಾನಿಸುವ ಒಂದು ಬೈಬಲ್ ವಚನವನ್ನು ನಾನು ನಿಮಗೆ ತೋರಿಸಿದ್ದನ್ನು ಜ್ಞಾಪಿಸಿಕೊಳ್ಳಿರಿ. ಇಲ್ಲಿ ಇನ್ನೊಂದು ವಚನವಿದೆ. [ಪ್ರಕಟನೆ 21:3, 4ನ್ನು ಓದಿರಿ.] ನಾನು ನಿಮ್ಮೊಂದಿಗೆ ಬಿಟ್ಟುಹೋದಂತಹ ಪುಸ್ತಕವು, ಬೈಬಲ್ ದೇವರಿಂದ ಪ್ರೇರಿತವಾದ ಒಂದು ಪವಿತ್ರ ಪುಸ್ತಕವಾಗಿದೆಯೆಂಬುದರ ಕುರಿತು ಮನಗಾಣಿಸುವಂತಹ ರುಜುವಾತನ್ನು ನಿಮಗೆ ಕೊಡುತ್ತದೆ. ಆ ವಾಸ್ತವಾಂಶಕ್ಕೆ ಅಗಾಧವಾದ ಸೂಚಿತಾರ್ಥಗಳಿವೆ. ದೇವರ ಕುರಿತಾಗಿ ಬೈಬಲ್ ಏನನ್ನು ಹೇಳುತ್ತದೊ ಅದನ್ನು ನಾವು ಸ್ವೀಕರಿಸಬಹುದೆಂಬುದನ್ನು ಅದು ಅರ್ಥೈಸಬಲ್ಲದು. [47ನೆಯ ಪುಟದಲ್ಲಿ, 1-2ನೆಯ ಪ್ಯಾರಗ್ರಾಫ್ಗಳನ್ನು ಓದಿರಿ.] ನಿಮಗೆ ಇಷ್ಟವಿರುವಲ್ಲಿ, ನಾನು ನಿಮ್ಮೊಂದಿಗೆ ಬೈಬಲನ್ನು ಉಚಿತವಾಗಿ ಅಭ್ಯಾಸಿಸಲು ಸಂತೋಷಿಸುವೆ.” ಒಂದು ಅಭ್ಯಾಸವು ಸ್ವೀಕರಿಸಲ್ಪಡುವಲ್ಲಿ, ಆ ವ್ಯಕ್ತಿ ಬೈಬಲಿನ ಒಂದು ಪ್ರತಿಯನ್ನು ಪಡೆದಿದ್ದಾನೊ ಎಂದು ಕೇಳಿರಿ. ಅವನಲ್ಲಿ ಇಲ್ಲದಿರುವುದಾದರೆ, ಒಂದು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲನ್ನು ಅಥವಾ ಅವನು ಇಷ್ಟಪಡುವ ಭಾಷೆಯಲ್ಲಿ ಬೈಬಲಿನ ಒಂದು ಪ್ರತಿಯನ್ನು ತಂದುಕೊಡಲು ಸಿದ್ಧರಿದ್ದೀರೆಂದು ಹೇಳಿರಿ.
7 ಜೀವನದ ಸಮಸ್ಯೆಗಳನ್ನು ನಿಭಾಯಿಸಲು ಮಾರ್ಗದರ್ಶನೆಗಾಗಿ ಎಲ್ಲಿ ತಿರುಗಬೇಕೆಂದು ತಿಳಿದಿರದ ಒಬ್ಬ ವ್ಯಕ್ತಿಯು, ಈ ರೀತಿಯ ಸಮೀಪಿಸುವಿಕೆಗೆ ಪ್ರತಿಕ್ರಿಯಿಸಬಹುದು:
◼ “ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯವೊಂದರಲ್ಲಿ ನಾವು ಜೀವಿಸುತ್ತಿದ್ದೇವೆ. ಅನೇಕರು ಮಾರ್ಗದರ್ಶನೆಗಾಗಿ ಎಲ್ಲಾ ವಿಧದ ಸಲಹೆಗಾರರ ಕಡೆಗೆ ತಿರುಗುತ್ತಾರೆ. ಕೆಲವರು ಸಹಾಯಕ್ಕಾಗಿ ಮನಶ್ಶಾಸ್ತ್ರಜ್ಞರ ಕಡೆಗೆ ನೋಡುತ್ತಾರೆ. ನಮಗಾಗಿ ನಿಜವಾದ ಲಾಭವನ್ನು ತರುವಂತಹ ರೀತಿಯ ಸ್ವಸ್ಥ ಸಲಹೆಯನ್ನು ನಾವು ಎಲ್ಲಿ ಕಂಡುಕೊಳ್ಳಬಹುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಾವೆಲ್ಲರೂ ತಿಳಿದುಕೊಳ್ಳಬೇಕಾದ ಒಂದು ಪ್ರಾಮುಖ್ಯ ವಾಸ್ತವಾಂಶವನ್ನು ಬೈಬಲ್ ತಿಳಿಸುತ್ತದೆ.” ಯೆರೆಮೀಯ 10:23ನ್ನು ಓದಿರಿ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕದ 29ನೆಯ ಅಧ್ಯಾಯವನ್ನು ತೆರೆದು, 3ನೆಯ ಪ್ಯಾರಗ್ರಾಫನ್ನು ಓದಿರಿ. “ಬೈಬಲ್ನಲ್ಲಿ ಕೊಡಲ್ಪಟ್ಟಿರುವ ಮೂಲತತ್ವಗಳನ್ನು ಅನುಸರಿಸುವುದು, ಈಗ ನಮ್ಮ ಜೀವನದ ಗುಣಮಟ್ಟವನ್ನು ಹೇಗೆ ಉತ್ತಮಗೊಳಿಸಸಾಧ್ಯವಿದೆ, ಮತ್ತು ದೇವರ ರಾಜ್ಯದ ಕೆಳಗೆ ನಮ್ಮ ಎಲ್ಲಾ ಸಮಸ್ಯೆಗಳು ಹೇಗೆ ನಿರ್ಮೂಲಗೊಳಿಸಲ್ಪಡುವವು ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಈ ಪುಸ್ತಕವು ನಿಮಗೆ ಸಹಾಯ ಮಾಡುವುದು. ನೀವು ಇದನ್ನು ಓದಲು ಇಷ್ಟಪಡುವಿರೊ?” ಪುಸ್ತಕವನ್ನು ನೀಡಿರಿ.
8 ಮನುಷ್ಯನಿಗಿರುವ ಮಾರ್ಗದರ್ಶನದ ಅಗತ್ಯದ ಕುರಿತಾಗಿ ನೀವು ಆರಂಭದ ಭೇಟಿಯಲ್ಲಿ ಮಾತಾಡಿರುವಲ್ಲಿ, ಹೀಗೆ ಹೇಳುವ ಮೂಲಕ ನೀವು ಪುನರ್ಭೇಟಿಯಲ್ಲಿ ಚರ್ಚೆಯನ್ನು ಮುಂದುವರಿಸಸಾಧ್ಯವಿದೆ:
◼ “ನಾವು ಪ್ರಥಮ ಸಲ ಭೇಟಿಯಾದಾಗ, ಜೀವನದ ಸಮಸ್ಯೆಗಳನ್ನು ನಾವು ಯಶಸ್ವಿಕರವಾಗಿ ನಿಭಾಯಿಸಬೇಕಾದರೆ ನಮಗೆ ದೇವರಿಂದ ಮಾರ್ಗದರ್ಶನದ ಅಗತ್ಯವಿದೆಯೆಂಬ ವಿಷಯವನ್ನು ನಾವು ಒಪ್ಪಿಕೊಂಡೆವು. ನಾನು ನಿಮ್ಮೊಂದಿಗೆ ಬಿಟ್ಟುಹೋದಂತಹ ಪುಸ್ತಕದಲ್ಲಿ, ಆ ವಿಷಯದ ಕುರಿತಾಗಿ ಕೊಡಲ್ಪಟ್ಟಿರುವ ಸಮಾಪ್ತಿಯ ಹೇಳಿಕೆಗಳನ್ನು ನೀವು ಗಣ್ಯಮಾಡುವಿರೆಂದು ನಾನು ನೆನಸುತ್ತೇನೆ. [ಸದಾ ಜೀವಿಸಬಲ್ಲಿರಿ ಪುಸ್ತಕದ 255ನೆಯ ಪುಟದಲ್ಲಿ 14-15ನೆಯ ಪ್ಯಾರಗ್ರಾಫ್ಗಳನ್ನು ಓದಿರಿ.] ನಾನು ನಿಮಗೆ ಒಂದು ಉಚಿತ ಮನೆ ಬೈಬಲ್ ಅಭ್ಯಾಸ ಕ್ರಮವನ್ನು ನೀಡಲು ಸಂತೋಷಿಸುತ್ತೇನೆ, ಮತ್ತು ಅದನ್ನು ಈಗಲೇ ನಿಮಗೆ ಪ್ರದರ್ಶಿಸಿ ತೋರಿಸಲು ಸಿದ್ಧನಾಗಿದ್ದೇನೆ.”
9 ನಮ್ಮ ಜೀವಿತದಲ್ಲಿ ದೇವರ ವಾಕ್ಯ ಮತ್ತು ಅದರ ಮಾರ್ಗದರ್ಶನದ ಮೌಲ್ಯವನ್ನು ಗಣ್ಯಮಾಡುವಂತೆ ನಾವು ಅಬಾಲವೃದ್ಧರಿಗೆ ಸಹಾಯ ಮಾಡುತ್ತಿರುವಂತೆ, ಯೆಹೋವನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನು.—ಕೀರ್ತ. 119:105.