‘ನಿಮ್ಮ ಮನೆವಾರ್ತೆಯನ್ನು ಬಲಪಡಿಸಿರಿ’
1 ಲೋಕದಾದ್ಯಂತ ಇರುವ ಪ್ರತಿಯೊಂದು ಸಂಸ್ಕೃತಿ
ಯಲ್ಲೂ, ಕುಟುಂಬ ಜೀವಿತವು ಛಿನ್ನಭಿನ್ನವಾಗುತ್ತಿದೆಯೆಂಬುದು ಸ್ಫುಟ. ಸೈತಾನನ ಲೋಕವು ವಂಚನೆ ಮತ್ತು ಅನೈತಿಕತೆಯಲ್ಲಿ ಹೊರಳಾಡುತ್ತಿದೆ. (1 ಯೋಹಾ. 5:19) ಇದು ನಾವು ‘ನಮ್ಮ ಮನೆವಾರ್ತೆಯನ್ನು ಬಲಪಡಿಸುವ’ ಮತ್ತು ಇತರರು ತಮ್ಮ ಮನೆವಾರ್ತೆಗಳಿಗಾಗಿ ಇದನ್ನೇ ಮಾಡಸಾಧ್ಯವಿರುವ ವಿಧವನ್ನು ಅವರಿಗೆ ಕಲಿಸುವ ತುರ್ತನ್ನು ಒತ್ತಿಹೇಳುತ್ತದೆ.—ಜ್ಞಾನೋ. 24:3, 27 (NW).
2 ಬೈಬಲ್ ಮೂಲತತ್ವಗಳು ರಕ್ಷಣೆಯಾಗಿವೆ: ನಿಜ ಕುಟುಂಬ ಸಂತೋಷದ ರಹಸ್ಯವು, ಬೈಬಲ್ ಮೂಲತತ್ತ್ವಗಳ ಅನ್ವಯದಲ್ಲಿ ಕಂಡುಬರುತ್ತದೆ. ಈ ಪ್ರಭಾವಶಾಲಿ ಸತ್ಯಗಳು, ಮನೆವಾರ್ತೆಯ ಪ್ರತಿಯೊಬ್ಬ ಸದಸ್ಯನಿಗೂ ಜೀವಿತದ ಎಲ್ಲಾ ಅಂಶಗಳಲ್ಲಿ ಪ್ರಯೋಜನವನ್ನು ತರುತ್ತವೆ. ಅವುಗಳನ್ನು ಅನ್ವಯಿಸಿಕೊಳ್ಳುವ ಕುಟುಂಬವು ಸಂತೋಷದಿಂದಿದ್ದು, ದೈವಿಕ ಶಾಂತಿಯನ್ನು ಅನುಭವಿಸುವುದು.—ಯೆಶಾಯ 32:17, 18ನ್ನು ಹೋಲಿಸಿರಿ.
3 ನಮ್ಮ ಮನೆವಾರ್ತೆಯನ್ನು ಬಲಪಡಿಸಲು ನಮಗೆ ಸಹಾಯ ಮಾಡಬಲ್ಲ ಮೂಲತತ್ತ್ವಗಳು, ಕುಟುಂಬ ಸಂತೋಷದ ರಹಸ್ಯ ಎಂಬ ಹೊಸ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ಕೊಡಲ್ಪಟ್ಟಿವೆ. ಪ್ರತಿಯೊಂದು ಅಧ್ಯಾಯವು, ಕುಟುಂಬ ಸದಸ್ಯರು ನೆನಪಿನಲ್ಲಿಡಬೇಕಾದ ಮೂಲತತ್ತ್ವಗಳನ್ನು ಒತ್ತಿಹೇಳುವ ಒಂದು ಸಹಾಯಕಾರಿ ಕಲಿಸುವಿಕೆಯ ರೇಖಾಚೌಕದೊಂದಿಗೆ ಕೊನೆಗೊಳ್ಳುತ್ತದೆ. ಈ ರೇಖಾಚೌಕಗಳಲ್ಲಿ ಹೆಚ್ಚಿನವು, “ಈ ಬೈಬಲ್ ಮೂಲತತ್ತ್ವಗಳು ಹೇಗೆ ಸಹಾಯ ಮಾಡಬಲ್ಲವು?” ಎಂಬ ಪ್ರಶ್ನೆಯೊಂದಿಗೆ ಆರಂಭವಾಗುತ್ತವೆ. ಇದು, ಚರ್ಚಿಸಲ್ಪಟ್ಟಿರುವ ವಿಷಯದ ಕುರಿತಾಗಿ ದೇವರ ಆಲೋಚನೆಯನ್ನು ನಾವು ಪಡೆದುಕೊಳ್ಳಸಾಧ್ಯವಾಗುವಂತೆ ದೇವರ ವಿಚಾರಗಳಿಗೆ ಗಮನವನ್ನು ಸೆಳೆಯುತ್ತದೆ.—ಯೆಶಾ. 48:17.
4 ಪುಸ್ತಕದೊಂದಿಗೆ ಪರಿಚಿತರಾಗಿರಿ. ವಿವಿಧ ಸಮಸ್ಯೆಗಳು ಏಳುವಾಗ, ನೆರವನ್ನೀಯಬಲ್ಲ ಮೂಲತತ್ತ್ವಗಳನ್ನು ಹುಡುಕಿನೋಡಲು ಕಲಿಯಿರಿ. ಈ ಕೆಳಗಿನಂತಹ ವಿಷಯಗಳನ್ನು ಆ ಪುಸ್ತಕವು ಚರ್ಚಿಸುತ್ತದೆ: ಒಬ್ಬ ಭಾವಿ ವಿವಾಹ ಸಂಗಾತಿಯನ್ನು ಪರಿಗಣಿಸುವಾಗ ಒಬ್ಬನು ನೋಡಬೇಕಾದ ಸಂಗತಿಗಳು (ಅಧ್ಯಾಯ 2), ಚಿರಸ್ಥಾಯಿ ವೈವಾಹಿಕ ಸಂತೋಷದ ಬಾಗಿಲನ್ನು ತೆರೆಯುವ ಪ್ರಮುಖ ಕೀಲಿ ಕೈಗಳು (ಅಧ್ಯಾಯ 3), ಹೆತ್ತವರು ತಮ್ಮ ಹದಿವಯಸ್ಕರನ್ನು ಜವಾಬ್ದಾರರಾದ, ದೇವಭಯವುಳ್ಳ ವಯಸ್ಕರಾಗಿ ಬೆಳೆಸಬಲ್ಲ ವಿಧ (ಅಧ್ಯಾಯ 6), ಕುಟುಂಬವನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸುವ ವಿಧ (ಅಧ್ಯಾಯ 8), ಒಂಟಿ ಹೆತ್ತವರ ಕುಟುಂಬಗಳು ಯಶಸ್ವಿಗೊಳ್ಳುವಂತೆ ಸಹಾಯ ಮಾಡುವ ಮೂಲತತ್ತ್ವಗಳು (ಅಧ್ಯಾಯ 9), ಮದ್ಯವ್ಯಸನ ಮತ್ತು ಹಿಂಸಾಚಾರದಿಂದ ಪೀಡಿತವಾಗಿರುವ ಕುಟುಂಬಗಳಿಗಾಗಿ ಆತ್ಮಿಕ ಸಹಾಯ (ಅಧ್ಯಾಯ 12), ವಿವಾಹ ಸಂಬಂಧಗಳು ಮುರಿದುಹೋಗುವ ಹಂತದಲ್ಲಿರುವಾಗ ಮಾಡಬೇಕಾದ ಸಂಗತಿ (ಅಧ್ಯಾಯ 13), ವೃದ್ಧ ಹೆತ್ತವರನ್ನು ಸನ್ಮಾನಿಸಲು ಮಾಡಸಾಧ್ಯವಿರುವ ವಿಷಯಗಳು (ಅಧ್ಯಾಯ 15), ಮತ್ತು ಒಬ್ಬನ ಕುಟುಂಬಕ್ಕಾಗಿ ಒಂದು ಚಿರಸ್ಥಾಯಿಯಾದ ಭವಿಷ್ಯತ್ತನ್ನು ದೊರಕಿಸಿಕೊಳ್ಳುವ ವಿಧ (ಅಧ್ಯಾಯ 16).
5 ಹೊಸ ಪುಸ್ತಕದ ಪೂರ್ಣ ಉಪಯೋಗವನ್ನು ಮಾಡಿರಿ: ನೀವು ಈಗಾಗಲೇ ಒಂದು ಕುಟುಂಬದೋಪಾದಿ, ಕುಟುಂಬ ಸಂತೋಷ ಪುಸ್ತಕವನ್ನು ಜೊತೆಯಾಗಿ ಅಭ್ಯಾಸಮಾಡಿರದಿದ್ದಲ್ಲಿ, ಹಾಗೆ ಮಾಡಬಾರದೇಕೆ? ಅಲ್ಲದೆ, ನಿಮ್ಮ ಕುಟುಂಬವು ಹೊಸ ಸಮಸ್ಯೆಗಳು ಅಥವಾ ಪಂಥಾಹ್ವಾನಗಳಿಂದ ಎದುರಿಸಲ್ಪಡುವಾಗಲೆಲ್ಲಾ, ಇವುಗಳನ್ನು ಚರ್ಚಿಸುವ ಈ ಪುಸ್ತಕದಲ್ಲಿನ ಅಧ್ಯಾಯಗಳನ್ನು ಪುನರ್ವಿಮರ್ಶಿಸಿರಿ, ಮತ್ತು ಆ ಸಲಹೆಯನ್ನು ಹೇಗೆ ಅನ್ವಯಿಸುವುದೆಂಬುದನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿರಿ. ಇದಕ್ಕೆ ಕೂಡಿಸಿ, ಮಾರ್ಚ್ ತಿಂಗಳಿನಲ್ಲಿ ನೀವು ಸಾಧ್ಯವಿರುವಷ್ಟು ಹೆಚ್ಚು ಜನರ ಕೈಗಳಲ್ಲಿ ಕುಟುಂಬ ಸಂತೋಷದ ರಹಸ್ಯ ಪುಸ್ತಕವನ್ನು ನೀಡಲು ಪ್ರಯತ್ನಿಸಸಾಧ್ಯವಾಗುವಂತೆ, ಕ್ಷೇತ್ರ ಶುಶ್ರೂಷೆಗಾಗಿ ಸಮಯವನ್ನು ಬದಿಗಿರಿಸುವುದರಲ್ಲಿ ಉದಾರಭಾವವುಳ್ಳವರಾಗಿರಿ.
6 ದೈವಿಕ ಭಕ್ತಿಯನ್ನು ಅಭ್ಯಾಸಿಸುವ ಕುಟುಂಬಗಳು, ಆತ್ಮಿಕವಾಗಿ ಬಲಗೊಳಿಸಲ್ಪಟ್ಟು, ಐಕ್ಯವಾಗಿರುವವು ಹಾಗೂ ಸೈತಾನನ ಆಕ್ರಮಣಗಳನ್ನು ನಿಭಾಯಿಸಲು ಚೆನ್ನಾಗಿ ತಯಾರಾಗಿರುವವು. (1 ತಿಮೊ. 4:7, 8; 1 ಪೇತ್ರ 5:8, 9) ಕುಟುಂಬದ ಮೂಲಕರ್ತನಿಂದ ದೈವಿಕ ಉಪದೇಶವು ನಮಗಿರುವುದರಿಂದ ನಾವೆಷ್ಟು ಕೃತಜ್ಞರಾಗಿದ್ದೇವೆ!