ಪ್ರಶ್ನಾ ರೇಖಾಚೌಕ
◼ ಒಂದು ಶವಸಂಸ್ಕಾರವನ್ನು ಏರ್ಪಡಿಸುವುದರಲ್ಲಿ ಸಹಾಯ ಮಾಡುವಂತೆ ಸಭೆಗೆ ಕರೆನೀಡಲ್ಪಡುವಾಗ, ಈ ಮುಂದಿನ ಪ್ರಶ್ನೆಗಳು ಏಳಬಹುದು:
ಶವಸಂಸ್ಕಾರ ಭಾಷಣವನ್ನು ಯಾರು ಕೊಡತಕ್ಕದ್ದು? ಇದು ಕುಟುಂಬ ಸದಸ್ಯರಿಂದ ಮಾಡಲ್ಪಡಬೇಕಾದ ಒಂದು ನಿರ್ಣಯವಾಗಿದೆ. ಒಳ್ಳೆಯ ನಿಲುವಿನಲ್ಲಿರುವ ಯಾವನೇ ದೀಕ್ಷಾಸ್ನಾನಿತ ಸಹೋದರನನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು. ಒಬ್ಬ ಭಾಷಣಕರ್ತನನ್ನು ಒದಗಿಸಲು ಹಿರಿಯರ ಮಂಡಳಿಗೆ ಕೇಳಿಕೊಳ್ಳಲ್ಪಡುವಲ್ಲಿ, ಅವರು ಸಾಮಾನ್ಯವಾಗಿ, ಸೊಸೈಟಿಯ ಹೊರಮೇರೆಯ ಮೇಲೆ ಆಧಾರಿತವಾದ ಭಾಷಣವನ್ನು ಕೊಡಲಿಕ್ಕಾಗಿ ಒಬ್ಬ ಸಮರ್ಥ ಹಿರಿಯನನ್ನು ಆರಿಸಿಕೊಳ್ಳುವರು. ಮೃತ ವ್ಯಕ್ತಿಯ ಗುಣಗಾನವನ್ನು ಮಾಡದಿದ್ದರೂ, ಅವನು ಅಥವಾ ಅವಳು ಪ್ರದರ್ಶಿಸಿದಂತಹ ಆದರ್ಶಪ್ರಾಯ ಗುಣಗಳ ಕಡೆಗೆ ಗಮನವನ್ನು ಸೆಳೆಯುವುದು ಸೂಕ್ತವಾಗಿರಬಹುದು.
ರಾಜ್ಯ ಸಭಾಗೃಹವನ್ನು ಉಪಯೋಗಿಸಬಹುದೊ? ಹಿರಿಯರ ಮಂಡಳಿಯಿಂದ ಅನುಮತಿಯು ನೀಡಲ್ಪಟ್ಟಿರುವಲ್ಲಿ ಮತ್ತು ಅದು ಕ್ರಮವಾಗಿ ನಿಗದಿಪಡಿಸಲ್ಪಟ್ಟಿರುವ ಒಂದು ಕೂಟಕ್ಕೆ ಅಡ್ಡಬರದಿದ್ದರೆ, ಅದನ್ನು ಉಪಯೋಗಿಸಸಾಧ್ಯವಿದೆ. ಮೃತ ವ್ಯಕ್ತಿಗೆ ಒಂದು ಶುದ್ಧವಾದ ಖ್ಯಾತಿಯಿತ್ತಾದರೆ ಮತ್ತು ಅವನು ಸಭೆಯ ಒಬ್ಬ ಸದಸ್ಯನು ಅಥವಾ ಒಬ್ಬ ಸದಸ್ಯನ ಅಪ್ರಾಪ್ತ ಮಗುವಾಗಿದ್ದಲ್ಲಿ ಸಭಾಗೃಹವನ್ನು ಉಪಯೋಗಿಸಬಹುದು. ಅಕ್ರೈಸ್ತ ನಡತೆಯಿಂದಾಗಿ ಆ ವ್ಯಕ್ತಿಯು ಸಾರ್ವಜನಿಕ ಕುಖ್ಯಾತಿಯನ್ನು ಉಂಟುಮಾಡಿದ್ದಲ್ಲಿ, ಅಥವಾ ಸಭೆಗೆ ಅಪಕೀರ್ತಿಯನ್ನು ತರುವಂತಹ ಇತರ ಅಂಶಗಳಿರುವಲ್ಲಿ, ಸಭಾಗೃಹದ ಬಳಕೆಯನ್ನು ಅನುಮತಿಸದಂತೆ ಹಿರಿಯರು ನಿರ್ಣಯಿಸಬಹುದು.—ನಮ್ಮ ಶುಶ್ರೂಷೆ ಪುಸ್ತಕದ, 62-3ನೆಯ ಪುಟಗಳನ್ನು ನೋಡಿರಿ.
ಸಾಮಾನ್ಯವಾಗಿ, ರಾಜ್ಯ ಸಭಾಗೃಹಗಳು ಅವಿಶ್ವಾಸಿಗಳ ಶವಸಂಸ್ಕಾರಗಳಿಗಾಗಿ ಬಳಸಲ್ಪಡುವುದಿಲ್ಲ. ಜೀವಿಸುತ್ತಿರುವ ಕುಟುಂಬ ಸದಸ್ಯರು ದೀಕ್ಷಾಸ್ನಾನಿತ ಪ್ರಚಾರಕರೋಪಾದಿ ಸಕ್ರಿಯವಾಗಿ ಸಹವಾಸಿಸುತ್ತಿರುವಲ್ಲಿ, ಮೃತ ವ್ಯಕ್ತಿಯು ಸತ್ಯದ ಕಡೆಗೆ ಒಂದು ಪ್ರಸನ್ನಕರವಾದ ಮನೋಭಾವವನ್ನು ಹೊಂದಿದ್ದನು ಎಂದು ಸಭೆಯಲ್ಲಿರುವ ಸಾಕಷ್ಟು ಪ್ರಚಾರಕರಿಗೆ ತಿಳಿದಿರುವಲ್ಲಿ ಮತ್ತು ಅವನು ಸಮುದಾಯದಲ್ಲಿ ಯಥಾರ್ಥ ನಡತೆಗಾಗಿ ಒಂದು ಒಳ್ಳೆಯ ಖ್ಯಾತಿಯನ್ನು ಪಡೆದಿದ್ದಲ್ಲಿ, ಮತ್ತು ಯಾವುದೇ ಲೌಕಿಕ ಪದ್ಧತಿಗಳು ಕಾರ್ಯಕ್ರಮದಲ್ಲಿ ಸೇರಿಸಲ್ಪಡದಿರುವಲ್ಲಿ, ವಿನಾಯಿತಿಯನ್ನು ನೀಡಬಹುದು.
ರಾಜ್ಯ ಸಭಾಗೃಹದ ಬಳಕೆಗೆ ಅನುಮತಿಯನ್ನು ನೀಡುವಾಗ, ರೂಢಿಯ ಪ್ರಕಾರ ಶವಸಂಸ್ಕಾರದಲ್ಲಿ ಶವಪೆಟ್ಟಿಗೆಯು ಇರುವುದನ್ನು ನಿರೀಕ್ಷಿಸಲಾಗುತ್ತದೊ ಎಂಬುದನ್ನು ಹಿರಿಯರು ಪರಿಗಣಿಸುವರು. ಅದು ನಿರೀಕ್ಷಿಸಲ್ಪಡುವಲ್ಲಿ ಅದನ್ನು ಸಭಾಗೃಹದೊಳಗೆ ತರುವಂತೆ ಅವರು ಅನುಮತಿಸಬಹುದು.
ಲೌಕಿಕ ಜನರಿಗಾಗಿ ಶವಸಂಸ್ಕಾರಗಳನ್ನು ನಡಿಸುವುದರ ಕುರಿತಾಗಿ ಏನು? ಮೃತ ವ್ಯಕ್ತಿಗೆ ಸಮುದಾಯದಲ್ಲಿ ಒಂದು ಒಳ್ಳೆಯ ಖ್ಯಾತಿ ಇದ್ದಲ್ಲಿ, ಒಬ್ಬ ಸಹೋದರನು ಮನೆಯಲ್ಲಿ ಅಥವಾ ಸಮಾಧಿಯ ಬದಿಯಲ್ಲಿ ಒಂದು ಸಾಂತ್ವನದಾಯಕ ಬೈಬಲ್ ಭಾಷಣವನ್ನು ಕೊಡಬಹುದು. ಅನೈತಿಕ, ಕಾನೂನುಬಾಹಿರ ನಡತೆಗಾಗಿ ಕುಖ್ಯಾತನಾಗಿದ್ದ ಅಥವಾ ಯಾರ ಜೀವನ ಶೈಲಿಯು ಬೈಬಲ್ ಮೂಲತತ್ತ್ವಗಳಿಗೆ ವಿರುದ್ಧವಾಗಿತ್ತೊ ಅಂತಹ ವ್ಯಕ್ತಿಗಾಗಿ ಶವಸಂಸ್ಕಾರವನ್ನು ನಡೆಸಲು ಸಭೆಯು ನಿರಾಕರಿಸುವುದು. ಒಬ್ಬ ಸಹೋದರನು ಒಂದು ಮಧ್ಯನಂಬಿಕೆಯ ಸೇವೆ ಅಥವಾ ಮಹಾ ಬಾಬೆಲಿನ ಒಂದು ಚರ್ಚಿನಲ್ಲಿ ನಡೆಸಲ್ಪಟ್ಟಿರುವ ಯಾವುದೇ ಶವಸಂಸ್ಕಾರದಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳದಿರುವನು.
ಮೃತ ವ್ಯಕ್ತಿಯು ಬಹಿಷ್ಕೃತ
ನಾಗಿರುವಲ್ಲಿ ಆಗೇನು? ಸಭೆಯು ಸಾಮಾನ್ಯವಾಗಿ ಅದರಲ್ಲಿ ಒಳಗೂಡುವುದೂ ಇಲ್ಲ, ರಾಜ್ಯ ಸಭಾಗೃಹವೂ ಉಪಯೋಗಿಸಲ್ಪಡುವುದಿಲ್ಲ. ಆ ವ್ಯಕ್ತಿಯು ಪಶ್ಚಾತ್ತಾಪದ ಪುರಾವೆಯನ್ನು ಕೊಡುತ್ತಿದ್ದಲ್ಲಿ ಮತ್ತು ಪುನಸ್ಸ್ಥಾಪಿಸಲ್ಪಡಲಿಕ್ಕಾಗಿದ್ದ ತನ್ನ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಲ್ಲಿ, ಅವಿಶ್ವಾಸಿಗಳಿಗೆ ಒಂದು ಸಾಕ್ಷಿಯನ್ನು ಮತ್ತು ಸಂಬಂಧಿಕರಿಗೆ ಸಾಂತ್ವನವನ್ನು ಕೊಡಲಿಕ್ಕಾಗಿ, ಶವಸಂಸ್ಕಾರದ ಮನೆಯಲ್ಲಿ ಅಥವಾ ಸಮಾಧಿ ಬದಿಯಲ್ಲಿ ಒಂದು ಬೈಬಲ್ ಭಾಷಣವನ್ನು ಕೊಡಲಿಕ್ಕಾಗಿ ಒಬ್ಬ ಸಹೋದರನ ಮನಸ್ಸಾಕ್ಷಿಯು ಅನುಮತಿಸಬಹುದು. ಆದಾಗಲೂ ಈ ನಿರ್ಣಯವನ್ನು ಮಾಡುವ ಮುಂಚೆ, ಆ ಸಹೋದರನು ಹಿರಿಯರ ಮಂಡಳಿಯೊಂದಿಗೆ ವಿಚಾರಿಸಿಕೊಂಡು, ಅವರು ಏನನ್ನು ಶಿಫಾರಸ್ಸು ಮಾಡುತ್ತಾರೋ ಅದನ್ನು ಪರಿಗಣಿಸುವುದು ವಿವೇಕಯುತವಾಗಿರುವುದು. ಆ ಸಹೋದರನು ಒಳಗೂಡುವುದು ವಿವೇಕಯುತವಾಗಿರದ ಪರಿಸ್ಥಿತಿಗಳಲ್ಲಿ, ಮೃತ ವ್ಯಕ್ತಿಯ ಕುಟುಂಬದ ಸದಸ್ಯನಾಗಿರುವ ಒಬ್ಬ ಸಹೋದರನು, ಸಂಬಂಧಿಕರನ್ನು ಸಂತೈಸಲಿಕ್ಕಾಗಿ ಒಂದು ಭಾಷಣವನ್ನು ಕೊಡುವುದು ಸೂಕ್ತವಾಗಿರಬಹುದು.
ಹೆಚ್ಚಿನ ನಿರ್ದೇಶನವನ್ನು, ವಾಚ್‌ಟವರ್ ಪತ್ರಿಕೆಯ ಈ ಸಂಚಿಕೆಗಳಲ್ಲಿ ಕಂಡುಕೊಳ್ಳಬಹುದು: ಅಕ್ಟೋಬರ್ 15, 1990, ಪುಟಗಳು 30-1; ಸೆಪ್ಟಂಬರ್ 15, 1981, ಪುಟ 31; ಮಾರ್ಚ್ 15, 1980, ಪುಟಗಳು 5-7; ಜೂನ್ 1, 1978, ಪುಟಗಳು 5-8; ಜೂನ್ 1, 1977, ಪುಟಗಳು 347-8; ಮಾರ್ಚ್ 15, 1970, ಪುಟಗಳು 191-2; ಮತ್ತು ಅವೇಕ್! ಪತ್ರಿಕೆಯ ಈ ಸಂಚಿಕೆಗಳಲ್ಲಿ ಕಂಡುಕೊಳ್ಳಬಹುದು: ಸೆಪ್ಟಂಬರ್ 8, 1990, ಪುಟಗಳು 22-3 ಮತ್ತು ಮಾರ್ಚ್ 22, 1977, ಪುಟಗಳು 12-15.