ಇಂಟರ್ನೆಟ್ನಲ್ಲಿ ಸುವಾರ್ತೆ
ನಮ್ಮ ಯಂತ್ರಕಲಾಶಾಸ್ತ್ರ ಯುಗದಲ್ಲಿ, ಇಂಟರ್ನೆಟ್ಟನ್ನೂ ಒಳಗೊಂಡ, ಇಲೆಕ್ಟ್ರಾನಿಕ್ ಮೂಲಗಳಿಂದ ಕೆಲವು ಜನರು ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಆದುದರಿಂದ ಸೊಸೈಟಿಯು, ಯೆಹೋವನ ಸಾಕ್ಷಿಗಳ ನಂಬಿಕೆಗಳು ಹಾಗೂ ಚಟುವಟಿಕೆಗಳ ಕುರಿತಾಗಿ ಕೆಲವೊಂದು ನಿಷ್ಕೃಷ್ಟ ಮಾಹಿತಿಯನ್ನು ಇಂಟರ್ನೆಟ್ನಲ್ಲಿ ಹಾಕಿದೆ.
ನಮ್ಮ ಇಂಟರ್ನೆಟ್ ವೆಬ್ ಸೈಟ್, http://www.watchtower.org ಎಂಬ ವಿಳಾಸವನ್ನು ಹೊಂದಿದ್ದು, ಇಂಗ್ಲಿಷ್, ಚೈನೀಸ್ (ಸರಳೀಕರಿಸಿದ್ದು), ಜರ್ಮನ್, ರಷ್ಯನ್, ಮತ್ತು ಸ್ಪ್ಯಾನಿಷ್, ಹಾಗೂ ಇನ್ನಿತರ ಭಾಷೆಗಳಲ್ಲಿ ಕಿರುಹೊತ್ತಗೆಗಳು, ಬ್ರೋಷರ್ಗಳು ಮತ್ತು ಕಾವಲಿನಬುರುಜು ಹಾಗೂ ಎಚ್ಚರ! ಲೇಖನಗಳ ಆಯ್ದ ಸಂಗ್ರಹವನ್ನು ಒಳಗೊಂಡಿದೆ. ಈ ವೆಬ್ ಸೈಟ್ನಲ್ಲಿರುವ ಪ್ರಕಾಶನಗಳು ಸಭೆಗಳ ಮೂಲಕ ಈಗಾಗಲೇ ಲಭ್ಯವಿವೆ ಹಾಗೂ ಶುಶ್ರೂಷೆಯಲ್ಲಿ ಬಳಸಲ್ಪಡುತ್ತಿವೆ. ನಮ್ಮ ವೆಬ್ ಸೈಟ್ನ ಉದ್ದೇಶವು ಹೊಸ ಪ್ರಕಾಶನಗಳನ್ನು ಬಿಡುಗಡೆಗೊಳಿಸುವುದಲ್ಲ ಬದಲಿಗೆ, ಇಲೆಕ್ಟ್ರಾನಿಕ್ ಕ್ರಮವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಮಾಹಿತಿಯನ್ನು ಲಭ್ಯಗೊಳಿಸುವುದೇ ಆಗಿದೆ. ಯಾವುದೇ ವ್ಯಕ್ತಿ, ಯೆಹೋವನ ಸಾಕ್ಷಿಗಳ, ನಮ್ಮ ಚಟುವಟಿಕೆಗಳ ಅಥವಾ ನಂಬಿಕೆಗಳ ಕುರಿತಾಗಿ ಇಂಟರ್ನೆಟ್ ಪೇಜ್ (ಪುಟ)ಗಳನ್ನು ತಯಾರಿಸುವ ಅಗತ್ಯವಿರುವುದಿಲ್ಲ. ಇದನ್ನು ತಿಳಿದುಕೊಳ್ಳಲು ಬಯಸುವ ಯಾರಿಗೇ ಆದರೂ ನಮ್ಮ ಅಧಿಕೃತ ವೆಬ್ ಸೈಟ್ ನಿಷ್ಕೃಷ್ಟ ಮಾಹಿತಿಯನ್ನು ನೀಡುತ್ತದೆ.
ನಮ್ಮ ವೆಬ್ ಸೈಟ್, ಇಲೆಕ್ಟ್ರಾನಿಕ್ ಸಂದೇಶಗಳಿಗಾಗಿ (ಈ-ಮೆಯ್ಲ್) ಸೌಕರ್ಯವನ್ನು ಒದಗಿಸುವುದಿಲ್ಲವಾದರೂ, ಅದು ಭೂಮಂಡಲದ ಸುತ್ತಲೂ ಇರುವ ಬ್ರಾಂಚ್ಗಳ ಅಂಚೆ ವಿಳಾಸಗಳನ್ನು ಪಟ್ಟಿಮಾಡುತ್ತದೆ. ಹೀಗೆ ಜನರು ಅಧಿಕ ಮಾಹಿತಿಯನ್ನು ಪಡೆದುಕೊಳ್ಳಲು ಅಥವಾ ಸ್ಥಳಿಕ ಸಾಕ್ಷಿಗಳಿಂದ ವೈಯಕ್ತಿಕ ನೆರವನ್ನು ಸ್ವೀಕರಿಸಲು ಪತ್ರವನ್ನು ಬರೆಯಸಾಧ್ಯವಿದೆ. ಈ ಕ್ರಮವ್ಯವಸ್ಥೆಯಿಂದ ಬೈಬಲಿನ ಸತ್ಯವನ್ನು ಕಲಿಯತೊಡಗಲು ಒಲವುಳ್ಳವರಾಗಿರಬಹುದಾದ ಯಾವುದೇ ವ್ಯಕ್ತಿಗಾದರೂ ಮೇಲಿನ ಇಂಟರ್ನೆಟ್ ವಿಳಾಸವನ್ನು ಹಂಚಿಕೊಳ್ಳಲು ಅನುಮತಿಯಿದೆ.