ಅವರಿಗೆ ಸಹಾಯವನ್ನು ನೀಡಲಿಕ್ಕಾಗಿ ಒಂದು ಮಾಧ್ಯಮ
ಸುವಾರ್ತೆಯನ್ನು ಸಾರುವ ಬಹಿರಂಗ ಶುಶ್ರೂಷೆಯಲ್ಲಿ ಸತ್ಯ ಕ್ರೈಸ್ತರು ಭಾಗವಹಿಸುತ್ತಾರೆ. (ಫಿಲಿ. 2:17) ಅದನ್ನು ಪೂರೈಸಲು ನೆರವಾಗುವಂತೆ, ಕೆಲವು ಮೂಲಭೂತ ಬ್ರೋಷರ್ಗಳು, ಟ್ರ್ಯಾಕ್ಟ್ಗಳು, ಮತ್ತು ಲೇಖನಗಳು 20 ಭಾಷೆಗಳಲ್ಲಿ ಇಂಟರ್ನೆಟ್ನಲ್ಲಿ www.watchtower.org ಎಂಬ ವೆಬ್ ಸೈಟ್ ವಿಳಾಸದಲ್ಲಿ ಲಭ್ಯಗೊಳಿಸಲ್ಪಟ್ಟಿವೆ. ಈ ವೆಬ್ ಸೈಟ್ ಯೆಹೋವನ ಸಾಕ್ಷಿಗಳಿಗೆ ಪ್ರಸ್ತುತ ಪ್ರಕಾಶನಗಳನ್ನು ವಿತರಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವುದಿಲ್ಲ. ಇದರ ಹೇತುವು, ಯೆಹೋವನ ಸಾಕ್ಷಿಗಳು ಬೈಬಲಿನಿಂದ ಏನನ್ನು ಕಲಿಸುತ್ತಾರೆ ಎಂಬುದರ ನಿಷ್ಕೃಷ್ಟ ಮಾಹಿತಿಯನ್ನು ಸಾರ್ವಜನಿಕರಿಗೆ ಕೊಡುವುದಾಗಿದೆ.
ಇತ್ತೀಚೆಗೆ, ನಮ್ಮ ಅಧಿಕೃತ ವೆಬ್ ಸೈಟ್ಗೆ ಒಂದು ವಿಶಿಷ್ಟವಾದ ಸೇರ್ಪಡೆಯಾಗಿದೆ. ಇದು ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಾಗಿದ್ದು, 220ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಲಭ್ಯಗೊಳಿಸಲ್ಪಟ್ಟಿದೆ. ಮತ್ತು, 2004ನೇ ಇಸವಿಯ ಜನವರಿ 1 ಮತ್ತು ಜನವರಿ 8ರ ಸಂಚಿಕೆಗಳಿಂದ ಆರಂಭಿಸುತ್ತಾ, ಎಲ್ಲಾ ಭಾಷೆಯ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಅದರ ಹಿಂದಿನ ಪುಟದಲ್ಲಿ ನಮ್ಮ ವೆಬ್ ವಿಳಾಸವನ್ನು ತೋರಿಸುವುದು.
ನೀವು ಈ ಸಾಧನವನ್ನು ಹೇಗೆ ಉಪಯೋಗಿಸಬಹುದು? ಆಸಕ್ತಿಯನ್ನು ತೋರಿಸುವುದಾದರೂ ಮತ್ತೊಂದು ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುವ ಒಬ್ಬ ವ್ಯಕ್ತಿಯನ್ನು ನೀವು ಭೇಟಿಮಾಡಬಹುದು. ಅಂಥವರಿಗೆ ಇಂಟರ್ನೆಟ್ನ ಸೌಲಭ್ಯವಿರುವುದಾದರೆ, ನೀವು ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯ ಹಿಂದಿನ ಪುಟದಲ್ಲಿರುವ ವಿಳಾಸವನ್ನು ತೋರಿಸಬಹುದು. ಹೀಗೆ, ನೀವು ಅವರ ಭಾಷೆಯಲ್ಲಿ ಸಾಹಿತ್ಯವನ್ನು ತರುವ ತನಕ ಅವರು ತಮ್ಮ ಮಾತೃಭಾಷೆಯಲ್ಲಿ ಅಪೇಕ್ಷಿಸು ಬ್ರೋಷರನ್ನು ಪರಿಶೀಲಿಸಲು ಸಾಧ್ಯವಾಗಬಹುದು. ಅಥವಾ ಅವರ ಭಾಷೆಯನ್ನು ನಿರ್ವಹಿಸುವ ಸಭೆ ಅಥವಾ ಗುಂಪಿಗೆ ನೀವು ಈ ವ್ಯಕ್ತಿಯ ಕುರಿತು ತಿಳಿಸಲು ಸಾಧ್ಯವಾಗಬಹುದು.