ಜ್ಞಾಪಕಾಚರಣೆಯ ಸಮಯಾವಧಿ—ಹೆಚ್ಚಿನ ಚಟುವಟಿಕೆಯ ಕಾಲಾವಧಿ
1. ಯೆಹೋವನಿಂದ ‘ನೇಮಕವಾದ ಹಬ್ಬಗಳು’ ದೇವಭಯವುಳ್ಳ ಇಸ್ರಾಯೇಲ್ಯರ ಮೇಲೆ ಯಾವ ಪರಿಣಾಮವನ್ನು ಬೀರಿದವು?
1 ಪುರಾತನಕಾಲದ ಇಸ್ರಾಯೇಲ್ಯರು ವರ್ಷದ ನಿರ್ದಿಷ್ಟ ಸಮಯಗಳಲ್ಲಿ ‘ಯೆಹೋವನಿಂದ ನೇಮಕವಾದ ಹಬ್ಬಗಳನ್ನು’ ಆಚರಿಸುತ್ತಿದ್ದರು. (ಯಾಜ. 23:2) ತಮ್ಮ ದೇವರ ಒಳ್ಳೇತನದ ಕುರಿತು ಧ್ಯಾನಿಸಲು ಸಮಯವನ್ನು ತೆಗೆದುಕೊಂಡದ್ದು ಅವರಿಗೆ ಮಹಾ ಸಂತೋಷವನ್ನು ತಂದಿತು ಮತ್ತು ಶುದ್ಧಾರಾಧನೆಯಲ್ಲಿ ಹುರುಪುಳ್ಳವರಾಗಿರುವಂತೆ ಅವರನ್ನು ಪ್ರೋತ್ಸಾಹಿಸಿತು.—2 ಪೂರ್ವ. 30:21–31:2.
2, 3. ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ನಮ್ಮ ಆಧ್ಯಾತ್ಮಿಕ ಚಟುವಟಿಕೆಯನ್ನು ಹೆಚ್ಚಿಸುವುದು ಏಕೆ ಯುಕ್ತವಾಗಿದೆ, ಮತ್ತು ನಾವು ಜ್ಞಾಪಕಾಚರಣೆಯನ್ನು ಯಾವಾಗ ಆಚರಿಸಲಿರುವೆವು?
2 ಆಧುನಿಕ ದಿನಗಳಲ್ಲಿ, ಪ್ರತಿ ವರ್ಷ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ನಮ್ಮ ಸಂತೋಷಭರಿತ ದೇವಪ್ರಭುತ್ವಾತ್ಮಕ ಚಟುವಟಿಕೆಯು ತೀವ್ರಗೊಳ್ಳುತ್ತದೆ. ಯೆಹೋವನು ನಮಗಾಗಿ ತನ್ನ ಏಕಜಾತ ಪುತ್ರನನ್ನು ಬಹುಮೂಲ್ಯವಾದ ಕೊಡುಗೆಯಾಗಿ ಕೊಟ್ಟದ್ದರ ಕುರಿತು ನಾವು ಗಾಢವಾಗಿ ಧ್ಯಾನಿಸುವ ಸಮಯವು ಅದಾಗಿದೆ. (ಯೋಹಾ. 3:16; 1 ಪೇತ್ರ 1:18, 19) ದೇವರಿಂದ ಮತ್ತು ಆತನ ಕುಮಾರನಿಂದ ತೋರಿಸಲ್ಪಟ್ಟ ಪ್ರೀತಿಯ ಕುರಿತು ಧ್ಯಾನಿಸುವಾಗ, ನಾವು ಯೆಹೋವನಿಗೆ ಸ್ತೋತ್ರವನ್ನು ಸಲ್ಲಿಸುವಂತೆ ಮತ್ತು ದೈವಿಕ ಚಿತ್ತವನ್ನು ಮಾಡುವುದರಲ್ಲಿ ಸತತ ಪ್ರಯತ್ನವನ್ನು ಮಾಡುವಂತೆ ಪ್ರೇರಿಸಲ್ಪಡುತ್ತೇವೆ.—2 ಕೊರಿಂ. 5:14, 15.
3 ಈ ವರ್ಷ, ಮಾರ್ಚ್ 24ರ ಗುರುವಾರದಂದು ಸೂರ್ಯಾಸ್ತಮಾನದ ಅನಂತರ ಕರ್ತನ ಸಂಧ್ಯಾ ಭೋಜನವು ಆಚರಿಸಲ್ಪಡುವುದು. ನಾವು ಶುಶ್ರೂಷೆಯಲ್ಲಿನ ನಮ್ಮ ಪಾಲ್ಗೊಳ್ಳುವಿಕೆಯನ್ನು ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಹೇಗೆ ಹೆಚ್ಚಿಸಬಲ್ಲೆವು?
4, 5. (ಎ) ಸುವಾರ್ತೆಯೊಂದಿಗೆ ಹೆಚ್ಚಿನ ಜನರನ್ನು ತಲಪುವಂತೆ ಕೆಲವರಿಗೆ ಯಾವುದು ಸಹಾಯಮಾಡಿದೆ? (ಬಿ) ಸ್ಥಳಿಕವಾಗಿ ಯಾವುದು ಪರಿಣಾಮಕಾರಿಯಾಗಿರುವುದಾಗಿ ನೀವು ಕಂಡುಕೊಂಡಿದ್ದೀರಿ?
4 ಹೆಚ್ಚಿನ ಜನರನ್ನು ತಲಪುವುದು: ನೀವು ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವಾಗ ಸಾಧ್ಯವಾದಷ್ಟು ಹೆಚ್ಚು ಜನರನ್ನು ಸಂಪರ್ಕಿಸಲು ಮಾರ್ಗಗಳಿಗಾಗಿ ಹುಡುಕಿರಿ. ಹೆಚ್ಚಿನ ಜನರು ಮನೆಯಲ್ಲಿರುವಾಗ, ಅಂದರೆ ಮಧ್ಯಾಹ್ನ ತಡವಾಗಿ ಅಥವಾ ಸಾಯಂಕಾಲದಲ್ಲಿ ಮನೆ-ಮನೆಯ ಸೇವೆಯಲ್ಲಿ ಭಾಗವಹಿಸಲು ನೀವು ಯೋಜಿಸಬಲ್ಲಿರೋ? ನಿಮ್ಮ ಪುಸ್ತಕ ಅಧ್ಯಯನ ಗುಂಪಿನಲ್ಲಿರುವ ಕೆಲವರು, ಪುಸ್ತಕ ಅಧ್ಯಯನಕ್ಕೆ ಮುಂಚೆ ಸೇವೆಯಲ್ಲಿ ಭಾಗವಹಿಸಲು ಬಯಸುವುದಾದರೆ, ಹತ್ತಿರದ ಒಂದು ಟೆರಿಟೊರಿಯಲ್ಲಿ ಕೆಲಸಮಾಡಲು ಸಾಧ್ಯವಾಗುವಂತೆ ಪುಸ್ತಕ ಅಧ್ಯಯನ ಮೇಲ್ವಿಚಾರಕನಿಗೆ ಒಂದು ಚುಟುಕಾದ ಕ್ಷೇತ್ರ ಸೇವೆಗಾಗಿರುವ ಕೂಟವನ್ನು ಏರ್ಪಡಿಸಲು ಸಾಧ್ಯವಿರಬಹುದು.
5 ಜನರನ್ನು ತಲಪುವ ಮತ್ತೊಂದು ವಿಧವು, ಸಾರ್ವಜನಿಕ ಸ್ಥಳಗಳಲ್ಲಿ ಸಾಕ್ಷಿಕೊಡುವ ಮೂಲಕವೇ. ಜಪಾನಿನಲ್ಲಿರುವ ಒಬ್ಬ ಸಹೋದರಿಗೆ ಪೂರ್ಣ ಸಮಯದ ಉದ್ಯೋಗವಿದ್ದರೂ ಅವಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಬಯಸಿದಳು. ಪ್ರತಿ ದಿನ ತನ್ನ ಐಹಿಕ ಕೆಲಸಕ್ಕೆ ಹೋಗುವ ಮುನ್ನ ಒಂದು ರೈಲು ನಿಲ್ದಾಣದ ಬಳಿ ಬೀದಿ ಸಾಕ್ಷಿಕಾರ್ಯವನ್ನು ಮಾಡುವಂತೆ ಒಬ್ಬ ಹಿರಿಯನು ಅವಳಿಗೆ ಸಲಹೆ ಕೊಟ್ಟನು. ತನ್ನ ಪುಕ್ಕಲುತನವನ್ನು ಮತ್ತು ಕೆಲವು ಮಂದಿ ನಿತ್ಯ ಪ್ರಯಾಣಿಕರ ಅಪಹಾಸ್ಯವನ್ನು ಜಯಿಸಿದ ಬಳಿಕ, ಸುಮಾರು 40 ವ್ಯಕ್ತಿಗಳೊಂದಿಗೆ ಅವಳು ಪತ್ರಿಕಾ ಮಾರ್ಗವನ್ನು ಸ್ಥಾಪಿಸಿದಳು. ಇದರಲ್ಲಿ ನಿತ್ಯ ಪ್ರಯಾಣಿಕರು, ರೈಲು ನಿಲ್ದಾಣದಲ್ಲಿನ ಕೆಲಸಗಾರರು ಮತ್ತು ಹತ್ತಿರದಲ್ಲಿರುವ ಅಂಗಡಿ ಮಾಲೀಕರು ಸೇರಿದ್ದರು. ಪ್ರತಿ ತಿಂಗಳು ಅವಳು ಸರಾಸರಿಯಾಗಿ 235 ಪತ್ರಿಕೆಗಳನ್ನು ನೀಡಿದಳು. ಪ್ರತಿ ದಿನ ಕೇವಲ ಕೆಲವು ನಿಮಿಷಗಳಿಗೆ ಜನರೊಂದಿಗೆ ಶಾಸ್ತ್ರೀಯ ಅಂಶಗಳನ್ನು ಹಂಚಿಕೊಳ್ಳುವ ಮೂಲಕ, ಅವಳಿಗೆ ಆರು ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಸಾಧ್ಯವಾಯಿತು.
6. ಯುವ ಜನರು ತಮ್ಮ ಆಧ್ಯಾತ್ಮಿಕ ಚಟುವಟಿಕೆಯನ್ನು ಹೇಗೆ ಹೆಚ್ಚಿಸಬಲ್ಲರು?
6 ಸಾಕ್ಷಿಕೊಡುವ ಸಂದರ್ಭಗಳು: ಶಾಲಾ ವಯಸ್ಸಿನ ಅನೇಕ ಪ್ರಚಾರಕರಿಗೆ ವರ್ಷದಲ್ಲಿ ರಜಾ ದಿನಗಳು ಸಿಗುತ್ತವೆ. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಇವು ಅತ್ಯುತ್ತಮ ಸಮಯಗಳಾಗಿವೆ. ಮಾತ್ರವಲ್ಲದೆ, ಶಾಲೆಯಲ್ಲಿ ಸಾಕ್ಷಿಕೊಡುವ ಮೂಲಕವೂ ಕ್ರೈಸ್ತ ಯುವ ಜನರು ತಮ್ಮ ಚಟುವಟಿಕೆಯನ್ನು ಹೆಚ್ಚಿಸಬಲ್ಲರು. ನಿಮ್ಮ ಸಹಪಾಠಿಗಳು ನಿಮ್ಮ ನಂಬಿಕೆಗಳ ಕುರಿತು ತಿಳಿದುಕೊಳ್ಳಲು ಎಷ್ಟು ಕೌತುಕರಾಗಿದ್ದಾರೆ ಎಂಬುದನ್ನು ನೋಡಿ ನಿಮಗೇ ಆಶ್ಚರ್ಯವಾದೀತು. ತರಗತಿಯಲ್ಲಿನ ಚರ್ಚೆಗಳನ್ನು ಅಥವಾ ಶಾಲಾ ಪ್ರಬಂಧ ಲೇಖನ ಕಾರ್ಯಕ್ರಮಗಳನ್ನು ಸಾಕ್ಷಿನೀಡುವ ಸಂದರ್ಭಗಳನ್ನಾಗಿ ಏಕೆ ಉಪಯೋಗಿಸಿಕೊಳ್ಳಬಾರದು? ಕೆಲವರಿಗೆ, ನಮ್ಮ ವಿಡಿಯೋಗಳನ್ನು ಉಪಯೋಗಿಸುವ ಮೂಲಕ ಸಾಕ್ಷಿ ನೀಡಲು ಸಾಧ್ಯವಾಗಿದೆ. ಇನ್ನೂ ಕೆಲವರು ಸಹಪಾಠಿಗಳೊಂದಿಗೆ ಬೈಬಲ್ ಅಧ್ಯಯನಗಳನ್ನು ಆರಂಭಿಸಿದ್ದಾರೆ ಮತ್ತು ಸಮರ್ಪಣೆ ಹಾಗೂ ದೀಕ್ಷಾಸ್ನಾನದ ವರೆಗೆ ಪ್ರಗತಿಯನ್ನು ಮಾಡುವಂತೆ ಅವರಿಗೆ ಸಹಾಯಮಾಡಿದ್ದಾರೆ. ‘ಯೆಹೋವನನ್ನು ಕೊಂಡಾಡಲು’ ಇವು ಅತ್ಯುತ್ತಮ ವಿಧಾನಗಳಾಗಿವೆ.—ಕೀರ್ತ. 148:12, 13.
7. (ಎ) ಇತರರಿಗೆ ಸಾಕ್ಷಿನೀಡಲು ದೊರೆತ ಸಂದರ್ಭಗಳನ್ನು ಒಬ್ಬ ಸಹೋದರನು ಹೇಗೆ ಸದುಪಯೋಗಿಸಿಕೊಂಡನು? (ಬಿ) ನಿಮಗೆ ತದ್ರೀತಿಯ ಅನುಭವವಾಗಿದೆಯೋ?
7 ನಿಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿರುವಾಗ, ನಮ್ಮ ಅದ್ಭುತಕರ ದೇವರ ಮತ್ತು ಆತನ ಆಶ್ಚರ್ಯಕರವಾದ ವಾಗ್ದಾನಗಳ ಕುರಿತು ಜನರೊಂದಿಗೆ ಮಾತಾಡಲು ಮಾರ್ಗಗಳಿಗಾಗಿ ಹುಡುಕಿರಿ. ಒಬ್ಬ ಸಹೋದರನು, ತಾನು ಪ್ರತಿನಿತ್ಯ ಪ್ರಯಾಣಿಸುವ ರೈಲುಗಾಡಿಗಳಲ್ಲಿ ಸೂಕ್ತವಾಗಿರುವಾಗ ಇತರ ನಿತ್ಯ ಪ್ರಯಾಣಿಕರಿಗೆ ಸಾಕ್ಷಿಯನ್ನು ನೀಡುತ್ತಾನೆ. ಉದಾಹರಣೆಗೆ, ಅವನು ತನ್ನ ಮುಂದಿನ ರೈಲುಗಾಡಿಗಾಗಿ ಒಂದು ನಿಲ್ದಾಣದಲ್ಲಿ ಕಾಯುತ್ತಿರುವಾಗ, ಪ್ರತಿ ದಿನ ಒಬ್ಬ ಯುವಕನಿಗೆ ಐದು ನಿಮಿಷಗಳ ಸಾಕ್ಷಿಯನ್ನು ನೀಡುತ್ತಿದ್ದನು. ಇದರ ಪರಿಣಾಮವಾಗಿ, ಆ ಯುವಕನು ಮತ್ತು ಅವನ ಜೊತೆ ಕಾರ್ಮಿಕನು ಒಂದು ಬೈಬಲ್ ಅಧ್ಯಯನಕ್ಕಾಗಿ ಒಪ್ಪಿಕೊಂಡರು. ಅವರು ಪ್ರಯಾಣಿಸುತ್ತಿದ್ದಂತೆ ರೈಲುಗಾಡಿಯಲ್ಲಿಯೇ ಬೈಬಲ್ ಅಧ್ಯಯನವು ನಡೆಸಲ್ಪಟ್ಟಿತು. ಕೆಲಕಾಲದ ಅನಂತರ, ಅವರ ಸಂಭಾಷಣೆಗಳಿಗೆ ಕಿವಿಗೊಡುತ್ತಿದ್ದ ಒಬ್ಬ ವೃದ್ಧ ಸ್ತ್ರೀಯು ಸಹೋದರನನ್ನು ಸಮೀಪಿಸಿ ಒಂದು ಬೈಬಲ್ ಅಧ್ಯಯನಕ್ಕಾಗಿ ಕೇಳಿಕೊಂಡಳು. ಅವಳು ಸಹ ರೈಲುಗಾಡಿಯಲ್ಲಿ ಪ್ರಯಾಣಿಸುವ ದಿನಗಳಂದು ಅಧ್ಯಯನದಲ್ಲಿ ಆನಂದಿಸುತ್ತಿದ್ದಾಳೆ. ಈ ರೀತಿಯಲ್ಲಿ, ಆ ಸಹೋದರನು ರೈಲುಗಾಡಿಯಲ್ಲಿ ಹತ್ತು ವಿಭಿನ್ನ ವ್ಯಕ್ತಿಗಳೊಂದಿಗೆ ಅಧ್ಯಯನವನ್ನು ನಡೆಸಿದ್ದಾನೆ.
8. ವೃದ್ಧಾಪ್ಯ ಅಥವಾ ಆರೋಗ್ಯದ ಸಮಸ್ಯೆಗಳಿಂದಾಗಿ ಕೆಲವು ಇತಿಮಿತಿಗಳಿಗೆ ಒಳಪಟ್ಟಿರುವವರು ಶುಶ್ರೂಷೆಯಲ್ಲಿನ ತಮ್ಮ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವಂತೆ ಯಾವ ಸೇವಾ ವಿಧಾನವು ಸಾಧ್ಯಗೊಳಿಸಬಹುದು?
8 ವೃದ್ಧಾಪ್ಯ ಅಥವಾ ಆರೋಗ್ಯದ ಸಮಸ್ಯೆಗಳಿಂದಾಗಿ ನೀವು ಮಾಡುವಂಥವುಗಳಲ್ಲಿ ನಿಮಗೆ ಮಿತಿಗಳಿದ್ದರೆ ಆಗೇನು? ಆಗಲೂ ಯೆಹೋವನಿಗೆ ನಿಮ್ಮ ಸ್ತುತಿಯನ್ನು ಹೆಚ್ಚಿಸಲು ನಿಮಗೆ ಕೆಲವು ವಿಧಾನಗಳು ತೆರೆದಿರಬಹುದು. ನೀವು ಟೆಲಿಫೋನ್ ಸಾಕ್ಷಿಕಾರ್ಯವನ್ನು ಪ್ರಯತ್ನಿಸಿದ್ದೀರೋ? ಇದನ್ನು ಹೇಗೆ ಮಾಡುವುದು ಎಂಬುದು ನಿಮಗೆ ತಿಳಿದಿಲ್ಲವಾದರೆ, ನಿಮ್ಮ ಪುಸ್ತಕ ಅಧ್ಯಯನ ಮೇಲ್ವಿಚಾರಕನಿಗೆ ಇದರ ಕುರಿತು ತಿಳಿಸಿರಿ. ಈ ವಿಧಾನವನ್ನು ಉಪಯೋಗಿಸುವ ಪ್ರಚಾರಕರು ನಿಮ್ಮೊಂದಿಗೆ ಕೆಲಸಮಾಡುವಂತೆ ಅವನು ಏರ್ಪಾಡುಮಾಡಬಹುದು. ಹೀಗೆ ಜೊತೆಯಾಗಿ ಕೆಲಸಮಾಡುವ ಮೂಲಕ ನೀವು ಒಬ್ಬರಿಂದ ಒಬ್ಬರು ವಿಷಯಗಳನ್ನು ಕಲಿತುಕೊಳ್ಳಬಹುದು ಮತ್ತು ಪರಿಣಾಮಕಾರಿಯಾದ ಸಾಕ್ಷಿಯನ್ನು ಕೊಡಲು ಒಬ್ಬರಿಗೊಬ್ಬರು ಸಹಾಯಮಾಡಬಹುದು. ಟೆಲಿಫೋನ್ ಸಾಕ್ಷಿಕಾರ್ಯವನ್ನು ಮಾಡಲಿಕ್ಕಾಗಿರುವ ಉತ್ತಮ ಸಲಹೆ-ಸೂಚನೆಗಳನ್ನು ಫೆಬ್ರವರಿ 2001ರ ನಮ್ಮ ರಾಜ್ಯದ ಸೇವೆಯ ಪುಟ 5-6ರಲ್ಲಿ ಕಂಡುಕೊಳ್ಳಸಾಧ್ಯವಿದೆ.
9. ಬೈಬಲ್ ವಿದ್ಯಾರ್ಥಿಗಳು ಸಭೆಯೊಂದಿಗೆ ಸಾರ್ವಜನಿಕ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಂತೆ ಅವರನ್ನು ಅರ್ಹರಾಗಿಸಲು ನಾವು ಹೇಗೆ ಸಹಾಯಮಾಡಬಹುದು?
9 ಜ್ಞಾಪಕಾಚರಣೆಗೆ ಹಾಜರಾಗುವುದು ಯೆಹೋವನಿಗೆ ತಮ್ಮ ಸ್ತುತಿಯನ್ನು ಹೆಚ್ಚಿಸುವಂತೆ ಹೊಸಬರನ್ನು ಪ್ರೇರಿಸಬಹುದು. ಔಪಚಾರಿಕ ಸಾಕ್ಷಿಕಾರ್ಯದ ಬಗ್ಗೆ ಅವರಿಗಿರುವ ಯಾವುದೇ ಹೆದರಿಕೆಯನ್ನು, ನೀವು ಅವರಿಗೆ ಸಕಾರಾತ್ಮಕವಾದ ಕ್ಷೇತ್ರ ಸೇವಾ ಅನುಭವಗಳನ್ನು ತಿಳಿಸುವ ಮೂಲಕ ಮತ್ತು ಬೈಬಲ್ ಬೋಧನೆಗಳನ್ನು ವಿವರಿಸುವಂತೆಯೂ ತಮ್ಮ ನಂಬಿಕೆಯನ್ನು ಸಮರ್ಥಿಸುವಂತೆಯೂ ಪ್ರಗತಿಪರವಾಗಿ ತರಬೇತುಗೊಳಿಸುವ ಮೂಲಕ ಹೋಗಲಾಡಿಸಲು ಸಹಾಯಮಾಡಸಾಧ್ಯವಿದೆ. (1 ಪೇತ್ರ 3:15) ಒಬ್ಬ ಬೈಬಲ್ ವಿದ್ಯಾರ್ಥಿಯು ಸುವಾರ್ತೆಯನ್ನು ಸಾರುವ ಇಚ್ಛೆಯನ್ನು ವ್ಯಕ್ತಪಡಿಸುವುದಾದರೆ, ಅಧ್ಯಕ್ಷ ಮೇಲ್ವಿಚಾರಕನೊಂದಿಗೆ ಮಾತನಾಡಿರಿ. ವಿದ್ಯಾರ್ಥಿಯು ಸಭೆಯೊಂದಿಗೆ ಸೇರಿ ಸಾರ್ವಜನಿಕ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಅರ್ಹನಾಗಿದ್ದಾನೋ ಎಂಬುದನ್ನು ನಿರ್ಧರಿಸಲು ಅವರು ಅವನೊಂದಿಗೆ ಒಂದು ಕೂಟವನ್ನು ನಡೆಸಲು ಏರ್ಪಾಡು ಮಾಡುವರು. ಹೊಸಬರು ಪರಮಾಧಿಕಾರದ ವಿವಾದದಲ್ಲಿ ತನ್ನ ಪಕ್ಷವನ್ನು ವಹಿಸುತ್ತಿರುವುದನ್ನು ನೋಡುವುದು ಯೆಹೋವನ ಮನಸ್ಸನ್ನು ಎಷ್ಟು ಸಂತೋಷಪಡಿಸುತ್ತಿರಬೇಕು!—ಜ್ಞಾನೋ. 27:11.
10. (ಎ) ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವಂತೆ ಒಂದು ಒಳ್ಳೆಯ ಶೆಡ್ಯೂಲ್ ನಮಗೆ ಹೇಗೆ ಸಹಾಯಮಾಡಬಲ್ಲದು? (ಬಿ) ಕಳೆದ ವರ್ಷ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ನಿಮ್ಮಿಂದ ಸಾಧ್ಯವಾಯಿತೋ? ಅದು ಹೇಗೆ?
10 ನಿಮ್ಮಿಂದ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಸಾಧ್ಯವೋ? ಆಕ್ಸಿಲಿಯರಿ ಪಯನೀಯರರು ವರದಿಸಬೇಕಾದ 50 ತಾಸುಗಳ ಆವಶ್ಯಕತೆಯು ಗಂಭೀರವಾಗಿ ವೀಕ್ಷಿಸಲ್ಪಡಬೇಕು. (ಮತ್ತಾ. 5:37) ಪ್ರತಿ ವಾರ ನೀವು ಕ್ಷೇತ್ರ ಸೇವೆಯಲ್ಲಿ ಸರಾಸರಿಯಾಗಿ 12 ತಾಸುಗಳನ್ನು ಕಳೆಯುವಂತೆ ಏರ್ಪಾಡು ಮಾಡಿಕೊಳ್ಳಬೇಕೆಂಬುದು ಇದರರ್ಥ. ಪುಟ 5ರಲ್ಲಿ ಕೊಡಲ್ಪಟ್ಟಿರುವ ಮಾದರಿ ಆಕ್ಸಿಲಿಯರಿ ಪಯನೀಯರ್ ಶೆಡ್ಯೂಲ್ಗಳಲ್ಲಿ ಯಾವುದಾದರೊಂದು ನಿಮಗೆ ಸೂಕ್ತವಾಗಿ ತೋರುತ್ತದೋ? ಇಲ್ಲವಾದರೆ, ಮಾರ್ಚ್, ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಸಾಧ್ಯವಾಗುವಂತೆ ನೀವೇ ಒಂದು ಶೆಡ್ಯೂಲನ್ನು ತಯಾರಿಸಬಲ್ಲಿರೋ? ನಿಮ್ಮ ಸೇವಾ ಚಟುವಟಿಕೆಯನ್ನು ಹೆಚ್ಚಿಸಲು ನೀವು ಮಾಡುವ ಪ್ರಯತ್ನಗಳನ್ನು ಆಶೀರ್ವದಿಸುವಂತೆ ಯೆಹೋವನನ್ನು ಕೇಳಿಕೊಳ್ಳಿ.—ಜ್ಞಾನೋ. 16:3.
11. ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಸಲ್ಲಿಸಲಿರುವವರಿಗೆ ಹಿರಿಯರು ಮತ್ತು ಶುಶ್ರೂಷಾ ಸೇವಕರು ಹೇಗೆ ನೆರವನ್ನು ನೀಡಸಾಧ್ಯವಿದೆ?
11 ಈ ಜ್ಞಾಪಕಾಚರಣೆಯ ಸಮಯಾವಧಿಯನ್ನು ಯೆಹೋವನಿಗೆ ವಿಶೇಷ ಸ್ತುತಿಯನ್ನು ಸಲ್ಲಿಸುವ ಸಮಯಾವಧಿಯಾಗಿ ಮಾಡುವ ನಿಮ್ಮ ಶ್ರಮದ ಪ್ರಯತ್ನಗಳಿಗೆ ಹಿರಿಯರು ಮತ್ತು ಶುಶ್ರೂಷಾ ಸೇವಕರು ಸಂಪೂರ್ಣ ಬೆಂಬಲವನ್ನು ನೀಡುವರು. ಪ್ರಾಯಶಃ, ಅವರಲ್ಲೇ ಅನೇಕರು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಹುದು. ಹಿರಿಯರು ಕ್ಷೇತ್ರ ಸೇವೆಗಾಗಿರುವ ಹೆಚ್ಚಿನ ಕೂಟಗಳಿಗಾಗಿ ಏರ್ಪಾಡುಗಳನ್ನು ಮಾಡಬಹುದು. ಇದು ಅಗತ್ಯಕ್ಕನುಸಾರ ಮಧ್ಯಾಹ್ನ ತಡವಾಗಿ, ವಾರದ ದಿನಗಳ ಸಾಯಂಕಾಲಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ಮಾಡಲ್ಪಡಬಹುದು. ಈ ಕೂಟಗಳು ಎಲ್ಲಿ ಮತ್ತು ಯಾವಾಗ ನಡೆಸಲ್ಪಡುವವು ಹಾಗೂ ಮುಂದಾಳುತ್ವ ವಹಿಸಲು ಯಾರು ಲಭ್ಯವಿರುವರು ಎಂಬುದನ್ನು ನಿರ್ಧರಿಸಲು, ಹಿರಿಯರು ಪಯನೀಯರ್ ಸೇವೆ ಮಾಡಲು ನಿಶ್ಚಿತ ಯೋಜನೆಗಳನ್ನು ಮಾಡಿರುವವರೊಂದಿಗೆ ಅಥವಾ ಇದರ ಕುರಿತು ಯೋಚಿಸುತ್ತಿರುವವರೊಂದಿಗೆ ಮಾತಾಡಬಹುದು. ನೀವು ಸೇವೆಗಾಗಿ ಬದಿಗಿರಿಸಿರುವ ದಿನಗಳಂದು ಮತ್ತು ಸಮಯದಲ್ಲಿ ನಿಮ್ಮೊಂದಿಗೆ ಇತರ ಪ್ರಚಾರಕರು ಸೇವೆಯಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಹಿರಿಯರು ಏರ್ಪಾಡುಗಳನ್ನು ಮಾಡಲು ಸಕಲ ಪ್ರಯತ್ನವನ್ನು ಮಾಡುವರು. ಈ ರೀತಿಯಲ್ಲಿ, ಯೋಜನೆಗಳನ್ನು ನಿಶ್ಚಿತಗೊಳಿಸಸಾಧ್ಯವಿದೆ ಮತ್ತು ಹೆಚ್ಚಿನ ಒಳಿತು ಸಾಧಿಸಲ್ಪಡಸಾಧ್ಯವಿದೆ.—ಜ್ಞಾನೋ. 20:18.
12. ಯೆಹೋವನನ್ನು ಎಡೆಬಿಡದೆ ಕೊಂಡಾಡುವಂತೆ ನಮ್ಮನ್ನು ಯಾವುದು ಉತ್ತೇಜಿಸುತ್ತದೆ?
12 ಅತ್ಯುತ್ತಮ ಪ್ರಯತ್ನವನ್ನು ಮಾಡಿರಿ: ನಿಮ್ಮ ಪರಿಸ್ಥಿತಿಗಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಅನುಮತಿಸದಿದ್ದರೆ, ಯೆಹೋವನು ನಮ್ಮ ಪ್ರಯತ್ನ ಮತ್ತು ತ್ಯಾಗಗಳನ್ನು ‘ನಮ್ಮಲ್ಲಿ ಇಲ್ಲದ್ದಕ್ಕನುಸಾರವಾಗಿ ಅಲ್ಲ, ಇರುವದಕ್ಕೆ ಅನುಸಾರವಾಗಿ’ ಸ್ವೀಕರಿಸುತ್ತಾನೆ ಎಂಬುದನ್ನು ನೆನಪಿನಲ್ಲಿಡಿ. (2 ಕೊರಿಂ. 8:12) ಯೆಹೋವನಿಗೆ ಉಪಕಾರ ಸಲ್ಲಿಸಲು ನಮ್ಮಲ್ಲಿ ಎಷ್ಟೋ ವಿಷಯಗಳಿವೆ. ಸಕಾರಣದಿಂದಲೇ ದಾವೀದನು ಬರೆದದ್ದು: “ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು.” (ಕೀರ್ತ. 34:1) ಈ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ನಮ್ಮ ದೃಢಸಂಕಲ್ಪವೂ ಇದೇ ಆಗಿರಲಿ.
[ಪುಟ 3ರಲ್ಲಿರುವಚೌಕ]
ನೀವು ನಿಮ್ಮ ಚಟುವಟಿಕೆಯನ್ನು ಹೇಗೆ ಹೆಚ್ಚಿಸುವಿರಿ?
◼ ಜನರು ಮನೆಯಲ್ಲಿರುವಾಗ ಸಾರಿರಿ
◼ ಸಾರ್ವಜನಿಕ ಸ್ಥಳಗಳಲ್ಲಿ ಸಾಕ್ಷಿಕೊಡಿರಿ
◼ ಕೆಲಸದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಸಾಕ್ಷಿಕೊಡಿರಿ
◼ ಟೆಲಿಫೋನ್ ಸಾಕ್ಷಿಕಾರ್ಯವನ್ನು ಮಾಡಿರಿ
◼ ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಸಲ್ಲಿಸಿ
[ಪುಟ 5ರಲ್ಲಿರುವಚಿತ್ರ]
ಮಾದರಿ ಆಕ್ಸಿಲಿಯರಿ ಪಯನೀಯರ್ ಶೆಡ್ಯೂಲ್ಗಳು—ಪ್ರತಿ ವಾರ 12 ತಾಸುಗಳನ್ನು ಶೆಡ್ಯೂಲ್ ಮಾಡುವ ವಿಭಿನ್ನ ವಿಧಾನಗಳು
ಬೆಳಗ್ಗೆ—ಸೋಮವಾರದಿಂದ ಶನಿವಾರ
ಕೆಳಗೆ ಕೊಡಲ್ಪಟ್ಟಿರುವ ಯಾವುದೇ ದಿನಕ್ಕೆ ಬದಲಾಗಿ ನೀವು ಭಾನುವಾರವನ್ನು ಕ್ಷೇತ್ರ ಸೇವೆಗಾಗಿ ಆಯೋಜಿಸಬಹುದು.
ದಿನ ವೇಳೆ ತಾಸುಗಳು
ಸೋಮವಾರ ಬೆಳಗ್ಗೆ 2
ಮಂಗಳವಾರ ಬೆಳಗ್ಗೆ 2
ಬುಧವಾರ ಬೆಳಗ್ಗೆ 2
ಗುರುವಾರ ಬೆಳಗ್ಗೆ 2
ಶುಕ್ರವಾರ ಬೆಳಗ್ಗೆ 2
ಶನಿವಾರ ಬೆಳಗ್ಗೆ 2
ಒಟ್ಟು ತಾಸುಗಳು: 12
ಎರಡು ಪೂರ್ಣ ದಿನಗಳು
ವಾರದಲ್ಲಿ ಯಾವುದೇ ಎರಡು ದಿನಗಳನ್ನು ಆರಿಸಿಕೊಳ್ಳಬಹುದು. (ಆರಿಸಿಕೊಳ್ಳಲ್ಪಡುವ ದಿನಗಳ ಮೇಲೆ ಅವಲಂಬಿಸುತ್ತಾ ಈ ಶೆಡ್ಯೂಲ್ನಿಂದ ತಿಂಗಳಲ್ಲಿ ಕೇವಲ 48 ತಾಸುಗಳು ಮಾತ್ರ ಸಿಗಬಹುದು.)
ದಿನ ವೇಳೆ ತಾಸುಗಳು
ಬುಧವಾರ ಇಡೀ ದಿನ 6
ಶನಿವಾರ ಇಡೀ ದಿನ 6
ಒಟ್ಟು ತಾಸುಗಳು: 12
ಎರಡು ಸಂಜೆಗಳು ಮತ್ತು ವಾರಾಂತ್ಯ
ವಾರದಲ್ಲಿ ಯಾವುದೇ ಎರಡು ಸಂಜೆಗಳನ್ನು ಆರಿಸಿಕೊಳ್ಳಬಹುದು.
ದಿನ ವೇಳೆ ತಾಸುಗಳು
ಸೋಮವಾರ ಸಾಯಂಕಾಲ 11 /2
ಬುಧವಾರ ಸಾಯಂಕಾಲ 11 /2
ಶನಿವಾರ ಇಡೀ ದಿನ 6
ಭಾನುವಾರ ಅರ್ಧ ದಿನ 3
ಒಟ್ಟು ತಾಸುಗಳು: 12
ಮೂರು ಮಧ್ಯಾಹ್ನಗಳು ಮತ್ತು ಶನಿವಾರ
ಕೆಳಗೆ ಕೊಡಲ್ಪಟ್ಟಿರುವ ಯಾವುದೇ ದಿನಕ್ಕೆ ಬದಲಾಗಿ ನೀವು ಭಾನುವಾರವನ್ನು ಕ್ಷೇತ್ರ ಸೇವೆಗಾಗಿ ಆಯೋಜಿಸಬಹುದು.
ದಿನ ವೇಳೆ ತಾಸುಗಳು
ಸೋಮವಾರ ಮಧ್ಯಾಹ್ನ 2
ಬುಧವಾರ ಮಧ್ಯಾಹ್ನ 2
ಶುಕ್ರವಾರ ಮಧ್ಯಾಹ್ನ 2
ಶನಿವಾರ ಇಡೀ ದಿನ 6
ಒಟ್ಟು ತಾಸುಗಳು: 12
ನನ್ನ ವೈಯಕ್ತಿಕ ಸೇವಾ ಶೆಡ್ಯೂಲ್
ಪ್ರತಿ ವೇಳೆಗಾಗಿರುವ ತಾಸುಗಳನ್ನು ತೀರ್ಮಾನಿಸಿರಿ.
ದಿನ ವೇಳೆ ತಾಸುಗಳು
ಸೋಮವಾರ
ಮಂಗಳವಾರ
ಬುಧವಾರ
ಗುರುವಾರ
ಶುಕ್ರವಾರ
ಶನಿವಾರ
ಭಾನುವಾರ
ಒಟ್ಟು ತಾಸುಗಳು: 12