ಹಳೆಯ ಪುಸ್ತಕಗಳ ಸದುಪಯೋಗವನ್ನು ಮಾಡಿರಿ
1 ಭೂಮಿಯ ಮೂಲೆ ಮೂಲೆಯಲ್ಲಿರುವ ಲೈಬ್ರರಿಗಳಲ್ಲಿ ಕೋಟಿಗಟ್ಟಲೇ ಹಳೆಯ ಪುಸ್ತಕಗಳನ್ನು ಮನುಷ್ಯನು ಸಂಗ್ರಹಿಸಿಟ್ಟಿದ್ದಾನೆ. ಆದರೆ ಈ ಪುಸ್ತಕಗಳು ಮಾನವಕುಲಕ್ಕೆ ಏನಾದರೂ ನಿತ್ಯ ಲಾಭವನ್ನು ತಂದಿದೆಯೋ? (ಪ್ರಸಂ. 12:12) ದೇವರ ರಾಜ್ಯದ ಮೇಲೆ ಮತ್ತು ಅದು ಮಾನವಕುಲಕ್ಕಾಗಿ ಏನನ್ನು ಮಾಡಲಿದೆಯೋ ಅದರ ಮೇಲೆ ಗಮನವನ್ನು ಸೆಳೆಯುವಂತಹ ಪ್ರಕಾಶನಗಳು ಅವುಗಳಿಗಿಂತ ಹೆಚ್ಚು ಬೆಲೆಯುಳ್ಳದ್ದಾಗಿರುತ್ತವೆ. ಅನೇಕ ಸಭೆಗಳು ಅಂತಹ ಪುಸ್ತಕಗಳ ಸಂಗ್ರಹವನ್ನೇ ಹೊಂದಿವೆ. ಜನವರಿ ತಿಂಗಳಿನಲ್ಲಿ ಇಂತಹ ಹಳೆಯ ಪುಸ್ತಗಳನ್ನು ನಾವು ಜನರಿಗೆ ನೀಡಲಿರುವೆವು.
2 ಅವು ನಿಜವಾಗಿಯೂ ಬಹಳ ಅಮೂಲ್ಯವಾದದ್ದಾಗಿವೆ: ನಮ್ಮ ಹೊಸ ಪ್ರಕಾಶನಗಳಿಗೆ ಹೋಲಿಸಿದರೆ ಇವುಗಳು ಹಳೆಯದ್ದೆಂದು ನಮ್ಮಲ್ಲಿ ಕೆಲವರಿಗೆ ಅನಿಸಬಹುದು. ಆದರೆ ಅವುಗಳಲ್ಲಿ ಶಾಸ್ತ್ರೀಯ ಸತ್ಯವಿದೆ ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು. ಅವು ವಿವರಿಸುವಂತಹ ರಾಜ್ಯದ ಸಂದೇಶವು ಇಂದಿಗೂ ಅಮೂಲ್ಯವಾದದ್ದಾಗಿದೆ ಮತ್ತು ಅದನ್ನು ಪಾಲಿಸುವಲ್ಲಿ, ನಿಜವಾಗಿಯೂ ಅದು ಜೀವ ರಕ್ಷಕವಾಗಿರಸಾಧ್ಯವಿದೆ. (ಯೋಹಾ. 17:3) ಆದುದರಿಂದ, ಈ ಹಳೆಯ ಪುಸ್ತಕಗಳನ್ನು ಸದುಪಯೋಗಿಸಲು ನಾವು ಇನ್ನೂ ಹೆಚ್ಚಿನ ಪ್ರಯತ್ನವನ್ನು ಮಾಡಬೇಕು.
3 ಹಳೆಯ ಕಾವಲಿನಬುರುಜು ಪ್ರಕಾಶನಗಳನ್ನು ತನ್ನ ಅಜ್ಜಿಯಿಂದ ಆಸ್ತಿಯಾಗಿ ಪಡೆದುಕೊಂಡ ಒಬ್ಬ ಮಹಿಳೆಯ ಅನುಭವವು ಅವುಗಳ ಮೌಲ್ಯವನ್ನು ಎತ್ತಿತೋರಿಸುತ್ತದೆ. ಆ ಪ್ರಕಾಶನಗಳ ನಿಜ ಮೌಲ್ಯವು ಅವಳಿಗೆ ಗೊತ್ತಿದೆಯೋ ಎಂದು ಒಬ್ಬ ಸಾಕ್ಷಿ ಆ ಮಹಿಳೆಯನ್ನು ಕೇಳಿದಳು. “ಅವುಗಳ ನಿಜವಾದ ಬೆಲೆಯು ನನಗೆ ಗೊತ್ತಿಲ್ಲ, ಆದರೆ ಅದನ್ನು ನಾನು ಹೇಗೆ ಕಂಡುಕೊಳ್ಳಸಾಧ್ಯವಿದೆ?” ಎಂದು ಅವಳು ಕೇಳಿದಳು. ಆ ಮಹಿಳೆಯು ಒಂದು ಬೈಬಲ್ ಅಭ್ಯಾಸವನ್ನು ಪ್ರಾರಂಭಿಸಿ, ಸತ್ಯವನ್ನು ಸ್ವೀಕರಿಸಿದಳು, ಮತ್ತು ಅಂದಿನಿಂದ ತನ್ನ ಅಜ್ಜಿಯು ಕೊಟ್ಟಿದ್ದ ಪ್ರಕಾಶನಗಳನ್ನು ಅಮೂಲ್ಯವೆಂದೆಣಿಸಲು ಆರಂಭಿಸಿದಳು. ಆ ಹಳೆಯ ಪುಸ್ತಕಗಳು ಎಷ್ಟೊಂದು ಅಮೂಲ್ಯ ಆಸ್ತಿಯಾಗಿ ಪರಿಣಮಿಸಿದವು!
4 ಅವುಗಳನ್ನು ವಿತರಿಸಿರಿ: ಈ ಹಳೆಯ ಪುಸ್ತಕಗಳನ್ನು ಮನೆಯಿಂದ ಮನೆಯಲ್ಲಿ ಮಾತ್ರವಲ್ಲದೆ, ನಮ್ಮ ಪ್ರಕಾಶನಗಳನ್ನು ಓದಲು ಇಷ್ಟಪಡುವವರನ್ನು ಪುನರ್ಭೇಟಿಮಾಡುವಾಗ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಚಂದಾದಾರರಾಗಿರುವ ಜನರಿಗೆ ಮತ್ತು ನಿಮ್ಮ ಪತ್ರಿಕಾ ಮಾರ್ಗದಲ್ಲಿರುವ ಜನರೆಲ್ಲರಿಗೂ ನೀಡಿರಿ. ನಿಮ್ಮೊಡನೆ ಬೈಬಲನ್ನು ಅಭ್ಯಾಸಿಸುತ್ತಿರುವವರಿಗೆ, ನಿರ್ದಿಷ್ಟ ಹಳೆಯ ಪುಸ್ತಕಗಳು, ಸತ್ಯದ ಬಗ್ಗೆ ಅವರಿಗಿರುವ ತಿಳುವಳಿಕೆಯನ್ನು ಇನ್ನೂ ಹೆಚ್ಚಿಸಲಿಕ್ಕಾಗಿ ಬೇಕಾದ ಜ್ಞಾನವನ್ನು ನೀಡಸಾಧ್ಯವಿದೆ. ನಿಮ್ಮ ವೈಯಕ್ತಿಕ ಸಂಗ್ರಹದಲ್ಲಿರದ ಹಳೆಯ ಪುಸ್ತಕಗಳನ್ನು ಪಡೆದುಕೊಳ್ಳುವುದನ್ನು ಮರೆಯದಿರಿ. ಈ ರೀತಿಯಲ್ಲಿ, ನಿಮ್ಮ ವೈಯಕ್ತಿಕ ಅಧ್ಯಯನವನ್ನು ಸಂಪದ್ಯುಕ್ತಗೊಳಿಸಲು ನೀವು ಉಪಯೋಗಿಸಸಾಧ್ಯವಿರುವ, ಬೆಲೆಬಾಳುವ ದೇವಪ್ರಭುತ್ವ ಲೈಬ್ರರಿಯನ್ನು ಸಂಗ್ರಹಿಸುವಿರಿ.
5 ಹಳೆಯ ಪುಸ್ತಕಗಳನ್ನು ಸುಮ್ಮನೇ ಸಂಗ್ರಹಿಸಿಡುವ ಬದಲು, “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು”ವಂತೆ ಜನರನ್ನು ಪ್ರೇರೇಪಿಸಲಿಕ್ಕಾಗಿ ಇವುಗಳನ್ನು ನಾವು ಸದುಪಯೋಗಿಸೋಣ. —ಪ್ರಸಂ. 12:13.