ಸುವಾರ್ತೆಯನ್ನು ನೀಡುವದು ಹಳೆಯ ಪ್ರಕಾಶನಗಳೊಂದಿಗೆ
1 ದೇವರನ್ನು ಆರಾಧಿಸುವ ನಿರ್ಣಯವನ್ನು ಮಾಡುವದು ಮಹತ್ವದ್ದು. ಜೀವವು ಅದರಲ್ಲಿದೆ. ಹೀಗೆ ಸ್ಪಷ್ಟವಾದ ಜ್ಞಾನವನ್ನು ಗಳಿಸುವದು ಮತ್ತು ಅದನ್ನು ಅನ್ವಯಿಸುವ ವಿವೇಕವನ್ನು ಸಂಪಾದಿಸುವದು ಅರ್ಹವಾದ ಗುರಿಯು.—ಜ್ಞಾನೋ. 23:23; ಯೋಹಾ. 17:3.
2 ಜ್ಞಾನವನ್ನು ಸಂಪಾದಿಸಲು ಮತ್ತು ವಿವೇಕದಲ್ಲಿ ಬೆಳೆಯಲು ನಾವು ಎಡೆಬಿಡದೆ ದೇವರ ವಾಕ್ಯವನ್ನು ಅಭ್ಯಾಸಿಸಲೇ ಬೇಕು. ಈ ರೀತಿಯಲ್ಲಿ ನಾವು ಆತನ ಆಜ್ನೆ, ನಿಯಮ, ವಿಧಿ, ಕಟ್ಟಳೆಗಳ ಪರಿಚಯವನ್ನು ಹೊಂದುವೆವು. ಯೆಹೋವನು ತನ್ನ ಜನರೊಂದಿಗೆ ವ್ಯವಹರಿಸಿರುವ ರೀತಿಯನ್ನೂ ನಾವು ಮನನ ಮಾಡುವ ಅಗತ್ಯವಿದೆ. ತನ್ನನ್ನು ಪ್ರಾಮಾಣಿಕವಾಗಿ ಹುಡುಕುವವರಿಗೆ ದೇವರು ಜ್ಞಾನವನ್ನೂ ವಿವೇಕವನ್ನೂ ಉದಾರವಾಗಿ ದಯಪಾಲಿಸುತ್ತಾನೆ. ವರ್ಷಾನುಕಾಲದಿಂದ ಆತನು ತನ್ನ ಸಂಸ್ದೆಯ ಮೂಲಕವಾಗಿ ಬೈಬಲ್ ಜ್ಞಾನದ ಅನೇಕ ರಂಗಗಳನ್ನು ಆವರಿಸುವ ಹೇರಳವಾದ ಸಾಹಿತ್ಯಗಳನ್ನು ಒದಗಿಸಿರುತ್ತಾನೆ. ಯಾರು ಯಹೋವನನ್ನು ತಿಳಿದಿಲ್ಲವೋ ಅಂತಹ ಅನೇಕರಿಗೆ ಇದು ಮಹಾ ಪ್ರಯೋಜನಕಾರಿಯು.
ಹಳೇ ಪ್ರಕಾಶನಗಳ ಮೂಲ್ಯತೆ
3 ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ 1980 ಕ್ಕಿಂತ ಮುಂಚೆ ಪ್ರಕಟವಾದ ಯಾವುದೇ 192 ಪುಟದ ಪುಸ್ತಕಗಳನ್ನು ನಾವು ಉಪಯೋಗಿಸಬಹುದು. ಈ ಪುಸ್ತಕಗಳಲ್ಲಿ ಸಮಾಚಾರದ ಸಂಪತ್ತು ಅಡಕವಾಗಿದೆ. ಅವು ಜನರಿಗೆ ನಿಜ ಆತ್ಮಿಕ ಮೂಲ್ಯತೆಯವುಗಳು. (ಮತ್ತಾಯ 5:14—16ನೋಡಿ.) ಆದ್ದರಿಂದ ಈ ಎರಡು ತಿಂಗಳಲ್ಲಿ ನಮ್ಮ ಸಭೆಯಲ್ಲಿರುವ ಎಲ್ಲಾ ಹಳೇ ಪುಸ್ತಕಗಳ ಸಾಕ್ಟನ್ನು ನೀಡಲು ನಾವು ಪ್ರಯತ್ನ ಮಾಡೋಣ.
4ಈ ಪುಸ್ತಕಗಳನ್ನು ಜನರಿಗೆ ತಲಪಿಸುವ ಮಹತ್ವವು ಕೆಳಗಿನ ಅನುಭವದಿಂದ ತಿಳಿದು ಬರುತ್ತದೆ. ಸಾಕ್ಷಿ ಪತ್ನಿಯೊಬ್ಬಳು ಹಳೇ ಪುಸ್ತಕಗಳಲ್ಲೊಂದನ್ನು ತನ್ನ ಗಂಡನಿಗೆ ಇನಾಮಾಗಿ ಕೊಟ್ಟಳು. ಆ ತನಕ ಅವನು ಸತ್ಯದಲ್ಲಿ ಯಾವ ಆಸಕ್ತಿಯನ್ನೂ ತೋರಿಸಿರಲಿಲ್ಲ. ಒಂದು ಸಂಜೆಯೊಳಗೇ ಅವನು ಆ ಇಡೀ ಪುಸ್ತಕವನ್ನು ಓದಿ ಮುಗಿಸಿದ್ದನ್ನು ಕಂಡು ಅವಳಿಗೆ ಅಚ್ಚರಿ. ಇದು ದೇವರ ವಾಕ್ಯದಲ್ಲಿ ಅವನ ನಂಬಿಕೆಯನ್ನು ಎಷ್ಟು ಗಟ್ಟಿಯಾಗಿ ಕಟ್ಟಿತ್ತೆಂದರೆ ಅವನು ಮಾರಣೇ ಕೂಟಕ್ಕೇ ಹಾಜರಾದನು ಮತ್ತು ಒಂದು ಬೈಬಲಭ್ಯಾಸಕ್ಕಾಗಿ ವಿನಂತಿಸಿದನು. ಮಾರು ತಿಂಗಳೊಳಗೆ ಅವನು ಸೇವೆಗಿಳಿದನು ಮತ್ತು ಈಗ ಸ್ನಾನಿತನು.
ಖಂಡಿತಭಾವ ಉಳ್ಳವರಾಗಿರಿ
5ದೇವರ ವಾಕ್ಯದ ಬಲವನ್ನು ಹಗುರವೆಣಿಸದಿರ್ರಿ. ಈ ಹಳೇ ಪ್ರಕಾಶನಗಳು ಬೈಬಲ್ ಸತ್ಯವನ್ನು ಎತ್ತಿಹೇಳುವದರಿಂದ ಖಂಡಿತಭಾವದಿಂದ ಅದನ್ನು ನೀಡಿರಿ. ನಿಶ್ಚಯವಾಗಿ ನೀವು ನೀಡುವ ಹಳೇ ಪುಸ್ತಕಗಳು ಒಳ್ಳೇ ಸ್ಥಿತಿಯಲ್ಲಿರುವಂತೆ ನೀವು ಬಯಸುವಿರಿ. ಪುಸ್ತಕವು ಹಾಳಾಗಿದ್ದರೆ ಯಾ ಪುಟಗಳು ಬಣ್ಣಗೆಟ್ಟಿದ್ದರೆ ಅವನ್ನು ಮನೆಮನೆಯಲ್ಲಿ ನೀಡಬಾರದು ಯಾಕೆಂದರೆ ಅವು ನಮ್ಮ ಸಂದೇಶವನ್ನು ಅಪಕರ್ಶಿಸೀತು.
6ಈ ಚಟುವಟಿಕೆಯಲ್ಲಿ ನೇಮಿತವಾದ 192 ಪುಟದ ಪುಸ್ತಕಗಳು ನಿಮ್ಮ ಸಭೆಯಲ್ಲಿಲ್ಲದಿದ್ದರೆ ಬೇರೆ ಯಾವುದೇ 192 ಪುಟದ ಪುಸ್ತಕವನ್ನು 10 ರೂಪಾಯಿಗೆ ನೀಡಬಹುದು.
7ಹೀಗೆ ನಾವೆಲ್ಲರೂ ಈ ಹಳೇ ಪ್ರಕಾಶನಗಳೊಂದಿಗೆ ದೇವರ ವಾಕ್ಯದ ಜ್ಞಾನವನ್ನು ಹಂಚುವ ಮೂಲಕ ಫಲದಾಯಕ ಶುಶ್ರೂಷೆಯಲ್ಲಿ ಅನಂದಿಸೋಣ.