ನಿಮ್ಮ ಬಳಿ ಪತ್ರಿಕಾ ಆರ್ಡರ್ ಇದೆಯೋ?
1 ಕ್ಷೇತ್ರ ಸೇವೆಗಾಗಿರುವ ಕೂಟಕ್ಕೆ ಹೋದಾಗ, ನಿಮ್ಮ ಬ್ಯಾಗ್ನಲ್ಲಿ ಪತ್ರಿಕೆಗಳಿಲ್ಲದೆ ಇದ್ದ ಸಂದರ್ಭವನ್ನು ನೀವು ಎದುರಿಸಿದ್ದೀರೋ? ಒಳ್ಳೆಯದು, 1996ರ ಜನವರಿ ತಿಂಗಳಿನ ನಮ್ಮ ರಾಜ್ಯದ ಸೇವೆಯಲ್ಲಿರುವ “ನಮ್ಮ ಪತ್ರಿಕೆಗಳ ಅತ್ಯುತ್ತಮ ಉಪಯೋಗವನ್ನು ಮಾಡಿರಿ” ಎಂಬ ಶೀರ್ಷಿಕೆಯುಳ್ಳ ಪುರವಣಿಯನ್ನು ಜ್ಞಾಪಿಸಿಕೊಳ್ಳಿರಿ. ಅದು ನಾವು ‘ಖಚಿತವಾದ ಒಂದು ಪತ್ರಿಕಾ ಆರ್ಡರ್ ಅನ್ನು ಹೊಂದಿರುವಂತೆ’ ಸೂಚಿಸಿತು. ಅದು ಹೇಳಿದ್ದು: “ಪ್ರತಿ ಸಂಚಿಕೆಯ ಖಚಿತ ಸಂಖ್ಯೆಯ ಪ್ರತಿಗಳಿಗಾಗಿ, ಪತ್ರಿಕೆಗಳನ್ನು ನಿರ್ವಹಿಸುತ್ತಿರುವ ಸಹೋದರರೊಂದಿಗೆ ವಾಸ್ತವಿಕವಾದ ಆರ್ಡರ್ ಅನ್ನು ಇಟ್ಟುಕೊಂಡಿರಿ. ಈ ರೀತಿಯಲ್ಲಿ ನೀವು ಮತ್ತು ನಿಮ್ಮ ಕುಟುಂಬವು ಪತ್ರಿಕೆಗಳ ಒಂದು ಕ್ರಮವಾದ ಮತ್ತು ಸಾಕಷ್ಟು ಪ್ರಮಾಣದ ಸರಬರಾಯಿಯನ್ನು ಹೊಂದಿರುವುದು.” ನೀವು ಇದನ್ನು ಮಾಡಿದ್ದೀರೋ?
2 ಪತ್ರಿಕೆಗಳಿಗಾಗಿ ಏಕೆ ಆರ್ಡರ್ ಮಾಡಬಾರದು? ವಾರವಾರವೂ ಪತ್ರಿಕೆಗಳನ್ನು ವಿತರಿಸಲು ಹೆಚ್ಚಿನ ಜವಾಬ್ದಾರಿಯನ್ನು ಪಡೆದುಕೊಳ್ಳುವಿರಿ ಮತ್ತು ಹಾಗೆ ಮಾಡುವುದರಲ್ಲಿ ನೀವು ಹೆಚ್ಚಿನ ಆನಂದವನ್ನು ಅನುಭವಿಸುವಿರಿ. ಈಗಾಗಲೇ ನೀವು ಆರ್ಡರ್ ಮಾಡಿರುವಲ್ಲಿ, ಶುಶ್ರೂಷೆಯಲ್ಲಿ ತಿಂಗಳಿಗೆ ಬೇಕಾಗಿರುವಷ್ಟು ಪತ್ರಿಕೆಯನ್ನು ನೀವು ಪಡೆದುಕೊಳ್ಳುತ್ತಿದ್ದೀರೋ ಇಲ್ಲವೋ ಎಂಬುದನ್ನು ಪುನರ್ಪರಿಶೀಲಿಸಿರಿ. ಪ್ರತಿ ವಾರವೂ ಆರ್ಡರ್ ಮಾಡಿದ ಪತ್ರಿಕೆಗಳನ್ನು ತೆಗೆದುಕೊಳ್ಳುವುದರಲ್ಲಿ ನಾವು ಭರವಸಾರ್ಹರಾಗಿರಲು ಬಯಸುತ್ತೇವೆ ಮತ್ತು ಹಾಗೆ ಮಾಡುವುದು ನಮ್ಮ ಕರ್ತವ್ಯವೆಂದು ನಾವು ನೆನಸುತ್ತೇವೆ. ದೀರ್ಘ ಸಮಯದ ವರೆಗೆ ನೀವು ಸಭೆಯಿಂದ ದೂರ ಹೋಗುವಲ್ಲಿ, ನೀವು ಹಿಂದಿರುಗಿ ಬರುವ ತನಕ ನಿಮ್ಮ ಪತ್ರಿಕೆಗಳನ್ನು ಬೇರೆಯವರಿಗೆ ಕೊಡಬಹುದೋ ಇಲ್ಲವೋ ಎಂಬುದನ್ನು ಪತ್ರಿಕಾ ಸೇವಕನಿಗೆ ತಿಳಿಯಪಡಿಸಿರಿ.
3 ಮೇಲೆ ತಿಳಿಸಲ್ಪಟ್ಟಿರುವ ಪುರವಣಿಯು ನಾವು “ಒಂದು ಕ್ರಮವಾದ ಪತ್ರಿಕಾ ದಿನವನ್ನು ಶೆಡ್ಯೂಲ್” ಮಾಡಿ ಇಡುವಂತೆ ಹೇಳಿತು. ಸಾಪ್ತಾಹಿಕ ಪತ್ರಿಕಾ ದಿನವನ್ನು ನೀವು ಬೆಂಬಲಿಸಸಾಧ್ಯವೋ? ಯೆಹೋವನ ಸಾಕ್ಷಿಗಳ 1999ರ ಕ್ಯಾಲೆಂಡರ್ನಲ್ಲಿ (ಇಂಗ್ಲಿಷ್) ತೋರಿಸಲ್ಪಟ್ಟಿರುವಂತೆ, ಇದು ವರ್ಷದ ಪ್ರತಿಯೊಂದು ಶನಿವಾರವಾಗಿದೆ! ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ವಿತರಿಸುವ ಮಹತ್ವವನ್ನು ಅಲ್ಪವೆಂದೆಣಿಸದಿರಿ. ಪತ್ರಿಕಾ ಚಟುವಟಿಕೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ನಾವು ಶ್ರಮಿಸುವಾಗ, ನಾವು ನಮ್ಮ ನೆರೆಹೊರೆಯವರಿಗೆ “ಒಳ್ಳೆಯ ಶುಭವರ್ತಮಾನವನ್ನು” ತರುತ್ತಿದ್ದೇವೆ.—ಯೆಶಾ. 52:7.