ಪತ್ರಿಕಾ ಚಟುವಟಿಕೆಗಾಗಿ ಸಮಯವನ್ನು ಬದಿಗಿಡಿರಿ
1 ತನ್ನ ಮಾರ್ಗಗಳನ್ನು ಅನುಸರಿಸುವವರಿಗಾಗಿ ‘ಶಾಂತಿ, ಒಂದು ಭವಿಷ್ಯತ್ತು, ಮತ್ತು ಒಂದು ನಿರೀಕ್ಷೆ’ ಇರುವುದೆಂದು ಯೆಹೋವನು ದೃಢನಿಶ್ಚಯಮಾಡಿದ್ದಾನೆ. (ಯೆರೆ. 29:11) ಈ ಪ್ರತೀಕ್ಷೆಯ ಕುರಿತಾದ ಸಮಾಚಾರವು ಕಾವಲಿನಬುರುಜು ಮತ್ತು ಎಚ್ಚರ! ಗಳಲ್ಲಿ ಒಂದು ಸಮಯೋಚಿತ ರೀತಿಯಲ್ಲಿ ಕೊಡಲ್ಪಡುತ್ತದೆ. ಪ್ರತಿಯೊಂದು ಪರಿಸ್ಥಿತಿಯ ಕೆಳಗೆ ಎಲ್ಲಾ ರೀತಿಯ ಜನರು ಈ ಪತ್ರಿಕೆಗಳಿಂದ ಪ್ರಯೋಜನ ಪಡೆಯಬಲ್ಲರು. (1 ತಿಮೊ. 2:4) ನೀವು ಮತ್ತು ನಿಮ್ಮ ಕುಟುಂಬ ಪತ್ರಿಕಾ ಹಂಚುವಿಕೆಗಾಗಿ ಕ್ರಮವಾಗಿ ಸಮಯವನ್ನು ಬದಿಗಿರಿಸುತ್ತೀರೊ?
2 ನಿಮ್ಮ ಪತ್ರಿಕಾ ಕೊಡಿಗೆ (ಪ್ಲೇಸ್ಮೆಂಟ್ಸ್)ಗಳು ಕಡಿಮೆಯಾಗುತ್ತಿರುವುದಾದರೆ, ಈ ಪ್ರವೃತ್ತಿಯನ್ನು ಹೇಗೆ ಸರಿಪಡಿಸಬಹುದಾಗಿದೆ? ನಮ್ಮ ಪತ್ರಿಕೆಗಳ ಒಳ ವಿಷಯಗಳ ಕಡೆಗೆ ನಿಮ್ಮ ಗಣ್ಯತೆಯನ್ನು ಸಜೀವವಾಗಿಡುವುದು ಒಂದು ಆವಶ್ಯಕವಾದ ಅಂಶವಾಗಿದೆ. “ನಿಮ್ಮ ಪತ್ರಿಕೆಗಳನ್ನು ಓದುವುದು ನಿಜವಾಗಿಯೂ ಒಂದು ಆನಂದದಾಯಕ ಅನುಭವವಾಗಿದೆ. ನಿಕೃಷ್ಟವಾದ, ಕೆಳ ದರ್ಜೆಯ ‘ಸಂತೈಸುವಿಕೆಗಳು’ ಅವುಗಳಾಗಿಲ್ಲ, ಆದರೆ ಜೀವಿತವನ್ನು ಅರ್ಥಭರಿತವನ್ನಾಗಿ ಮಾಡುವುದರ ಕುರಿತಾದ ಮಾರ್ಗದರ್ಶನ ಮತ್ತು ನಿರ್ದೇಶನವು ಅವುಗಳಲ್ಲಿದೆ,” ಎಂದು ಒಬ್ಬ ವ್ಯಕ್ತಿಯು ಬರೆದನು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು, ಬಹು ಎಚ್ಚರಿಕೆಯ ಸಂಶೋಧನೆಯ ಉತ್ಪನ್ನಗಳೂ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ”ನ ಒದಗಿಸುವಿಕೆಗಳೂ ಆಗಿವೆ. (ಮತ್ತಾ. 24:45) ಅವುಗಳು ಜನರ ಹೃದಯವನ್ನು ತಲಪಲು ಪರಿಣಾಮಕಾರಿ ಸಾಧನಗಳಾಗಿವೆ.
3 ನೀವು ನೀಡುತ್ತಿರುವ ಪತ್ರಿಕೆಗಳಲ್ಲಿರುವ ಲೇಖನಗಳೊಂದಿಗೆ ಚಿರಪರಿಚಿತರಾಗಿರ್ರಿ. ನಿಮ್ಮ ಸಮಾಜದಲ್ಲಿರುವ ಪ್ರಚಲಿತ ಸಮಸ್ಯೆಗಳೊಂದಿಗೆ ಸಂಬಂಧಿಸುವ ಅಂಶಗಳಿಗಾಗಿ ದೃಷ್ಟಿ ಹರಿಸಿರಿ. ಮನೆ ಬಾಗಲುಗಳಲ್ಲಿ ಅಥವಾ ರಸ್ತೆಯಲ್ಲಿ ನೀವು ಭೇಟಿಯಾಗಬಹುದಾದ ಪುರುಷರು, ಸ್ತ್ರೀಯರು, ಮತ್ತು ಯುವಜನರೊಂದಿಗೆ ಮಾತಾಡಲಿಕ್ಕಾಗಿ ತಯಾರಿ ಮಾಡುವುದು ಉಚಿತವಾಗಿದೆ. ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ಈ ಪತ್ರಿಕೆಗಳು ಹೇಗೆ ಸಂಬಂಧಿಸುತ್ತವೆಂದು ತೋರಿಸಲು ಸಿದ್ಧರಾಗಿರ್ರಿ.
4 ಪತ್ರಿಕಾ ಪ್ರಜ್ಞೆಯುಳ್ಳವರಾಗಿರ್ರಿ: ಪತ್ರಿಕಾ ಸೇವೆಯು ನಿಮ್ಮ ಕ್ಷೇತ್ರ ಸೇವಾ ಶೆಡ್ಯೂಲ್ನ ಪ್ರಾಮುಖ್ಯ ಭಾಗವನ್ನು ವ್ಯಾಪಿಸಬೇಕು. ಪತ್ರಿಕೆಗಳನ್ನು ನೀಡಲು ನಿಮಗೆ ಅತ್ಯುತ್ತಮವಾಗಿರುವ ಸಮಯಗಳು ಯಾವುವು? ಅಪರಾಹ್ಣ ಸಮಯದಲ್ಲಿ ಒಂದು ತಾಸು ಅಥವಾ ಹೆಚ್ಚು, ಮನೆಯಿಂದ ಮನೆಯ ಅಥವಾ ನಿಮ್ಮ ಸಭಾ ಪುಸ್ತಕ ಅಭ್ಯಾಸಕ್ಕೆ ಮೊದಲು ಸಂಜೆಯ ವೇಳೆಯಲ್ಲಿ ಸಾಕ್ಷಿ ಕಾರ್ಯವನ್ನು ಮಾಡಲು ನೀವು ಪ್ರಯತ್ನಿಸಿದ್ದೀರೊ? ಕೆಲವು ಕ್ಷೇತ್ರಗಳಲ್ಲಿ ಸಂಜೆಯ ಸಾಕ್ಷಿಕಾರ್ಯವು ಹೆಚ್ಚು ಫಲಕಾರಿಯಾಗುತ್ತಿದೆ. ಅನೇಕ ವಿಧಗಳಲ್ಲಿ ಪತ್ರಿಕೆಗಳನ್ನು ಹಂಚಲಿಕ್ಕಾಗಿ ಶನಿವಾರವು ಒಂದು ಒಳ್ಳೆಯ ದಿನವಾಗಿದೆ, ಆದರೆ ಇತರ ದಿನಗಳನ್ನೂ ಸಹ ಈ ಚಟುವಟಿಕೆಗಾಗಿ ಉಪಯೋಗಿಸಬಹುದಾಗಿದೆ. ಮನೆಯಿಂದ ಮನೆಯ ಮತ್ತು ಅಂಗಡಿಯಿಂದ ಅಂಗಡಿಯ ಸಾಕ್ಷಿ ಕೆಲಸವು ಪತ್ರಿಕಾ ದಿನದ ಒಂದು ಕ್ರಮವಾದ ಭಾಗವಾಗಿರಬೇಕು.
5 ಪತ್ರಿಕೆಗಳ ಪ್ರತಿ ಸಂಚಿಕೆಯ ವಿತರಕ ಪ್ರತಿಗಳ ನಿರ್ಧರಿಸಲಾದ ಒಂದು ಸಂಖ್ಯೆಗಾಗಿ ಕ್ರಮಬದ್ಧವಾದ ಆರ್ಡರನ್ನು ಪ್ರತಿಯೊಬ್ಬರು ಮಾಡಿರಬೇಕು. ಕೆಲವೊಂದು ಸಂದರ್ಭದಲ್ಲಿ ಹಳೆಯ ಸಂಚಿಕೆಗಳು ನಿಮ್ಮಲ್ಲಿರುವಾಗ, ಪತ್ರಿಕೆಗಳಲ್ಲಿ ಆವರಿಸಲ್ಪಡುವ ವಿವಿಧ ರೀತಿಯ ವಸ್ತುವಿಷಯಗಳನ್ನು ಮನೆಯವರಿಗೆ ತೋರಿಸಲು ಇವುಗಳನ್ನು ಉಪಯೋಗಿಸಬಹುದು. ಅನೇಕ ವೇಳೆ, ಉದ್ಯೋಗದಿಂದ ನಿವೃತ್ತರಾದ ವ್ಯಕ್ತಿಗಳಿಗಾಗಿರುವ ಗೃಹಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ, ಮತ್ತು ಅನುಮತಿ ನೀಡುವಂತಹ ಆಸ್ಪತ್ರೆಗಳಲ್ಲಿ ಪ್ರಾಯಶಃ ಒಂದು ಜೊತೆ ಹಳೆಯ ಪ್ರತಿಗಳನ್ನು ಬಿಡಬಹುದು. ಅಂತಹ ಎಲ್ಲಾ ಪತ್ರಿಕೆಗಳನ್ನು ಕೊಡಿಗೆಗಳೆಂದು ಎಣಿಸಸಾಧ್ಯವಿದೆ ಮತ್ತು ಪ್ರತಿ ತಿಂಗಳು ಅವುಗಳನ್ನು ನಿಮ್ಮ ಕ್ಷೇತ್ರ ಸೇವಾ ವರದಿಯ ಸ್ಲಿಪ್ನಲ್ಲಿ ವರದಿಮಾಡಬೇಕು.
6 ಮೇಲಿನ ಸಲಹೆಗಳನ್ನು ಅನ್ವಯಿಸಿಕೊಳ್ಳುವ ಮೂಲಕ, ನಿಸ್ಸಂದೇಹವಾಗಿ, ನೀವು ನೀಡಶಕ್ತರಾಗಿರುವ ಪತ್ರಿಕೆಗಳ ಸಂಖ್ಯೆಯಲ್ಲಿ ಅಭಿವೃದ್ಧಿಯನ್ನು ನೀವು ಕಾಣುವಿರಿ. ಸದ್ಯದ ದುಷ್ಟ ವ್ಯವಸ್ಥೆಯ ಜೀವಿತದಿಂದ ಪೀಡಿತರಾಗಿರುವ ಪ್ರಾಮಾಣಿಕ ಹೃದಯದ ಜನರು, ಕಾವಲಿನಬುರುಜು ಮತ್ತು ಎಚ್ಚರ! ಗಳಲ್ಲಿ ಸಿಗುತ್ತಿರುವಂತಹ ಚೈತನ್ಯದಾಯಕ ಸಮಾಚಾರವನ್ನು ಗಣ್ಯಮಾಡುತ್ತಾರೆ. ಯೆಹೋವನ ಮೆಚ್ಚಿಗೆಯನ್ನು ಪಡೆಯಲು ಹುಡುಕುವವರೆಲ್ಲರಿಗೆ ಆವಶ್ಯಕವಾದ ಆತ್ಮಿಕ ಆಹಾರವನ್ನು ಈ ಪತ್ರಿಕೆಗಳು ನಿಜವಾಗಿಯೂ ಒದಗಿಸುತ್ತವೆ. ಆದುದರಿಂದ, ಪತ್ರಿಕಾ ಪ್ರಜ್ಞೆಯುಳ್ಳವರಾಗಿರ್ರಿ, ಮತ್ತು ನಿಮ್ಮ ಟೆರಿಟೊರಿಯಲ್ಲಿ ಈ ಅಮೂಲ್ಯವಾದ ಪ್ರಕಾಶನಗಳ ಹಂಚುವಿಕೆಯನ್ನು ಪ್ರಗತಿಗೊಳಿಸುವ ಮಾರ್ಗಗಳನ್ನು ಹುಡುಕಿರಿ.