ಬೈಬಲಿನ ಶಕ್ತಿಯನ್ನು ನೋಡಿರಿ!
ಅದು ಹೇಗೆ? ಬೈಬಲು—ನಿಮ್ಮ ಜೀವಿತದಲ್ಲಿ ಅದರ ಶಕ್ತಿ (ಇಂಗ್ಲಿಷ್) ಎಂಬ ಶೀರ್ಷಿಕೆಯ ವಿಡಿಯೋವನ್ನು ವೀಕ್ಷಿಸುವ ಮೂಲಕವೇ. ಬೈಬಲು—ವಾಸ್ತವಿಕತೆ ಮತ್ತು ಪ್ರವಾದನೆಯ ಗ್ರಂಥ (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ವಿಡಿಯೋಕ್ಯಾಸೆಟ್ನ ಸರಣಿಯಲ್ಲಿ ಇದು ಮೂರನೇ ಸಂಪುಟವಾಗಿರುತ್ತದೆ.
ನೀವು ಯಶಸ್ವಿಕರ ವಿವಾಹವನ್ನು ಬಯಸುತ್ತೀರೋ? ಕಠಿನ ಸಮಯಗಳನ್ನು ಪಾರಾಗಲು ನಿಮಗೆ ಸಹಾಯದ ಅಗತ್ಯವಿದೆಯೋ? ಯುವ ಜನರು ಬೆಳೆದು ಹೇಗೆ ಜವಾಬ್ದಾರಿಯುತ ಕ್ರೈಸ್ತರಾಗಬಹುದು? ಈ ವಿಡಿಯೋ ತೋರಿಸುವಂತೆ, ಬೈಬಲು ತಾನೇ ಸಹಾಯ ಮಾಡಬಲ್ಲದು. ಬೈಬಲು ತಮ್ಮ ಜೀವಿತಗಳಲ್ಲಿ ಒಳ್ಳೇದನ್ನು ಮಾಡಲಿಕ್ಕಾಗಿ ಬೀರಿರುವ ಶಕ್ತಿಯ ಕುರಿತು ಜನರು ಹೇಳುವ ವಿಷಯವನ್ನು ಕೇಳಿಸಿಕೊಳ್ಳಿರಿ. ಆಧುನಿಕ ದಿನದಲ್ಲಿನ ಜೀವಿತದ ಸಮಸ್ಯೆಗಳನ್ನು ಎದುರಿಸಲು ಅದರ ಮೂಲತತ್ವಗಳು ತಮಗೆ ಹೇಗೆ ಸಹಾಯಮಾಡಿವೆ ಎಂಬುದನ್ನು ಅವರು ವಿವರಿಸುವಾಗ ಅದನ್ನು ಆಲಿಸಿರಿ.
ದೇವರ ವಾಕ್ಯವನ್ನು ತಮ್ಮ ಜೀವಿತಗಳಲ್ಲಿ ಮಾರ್ಗದರ್ಶಿಯಾಗಿ ಉಪಯೋಗಿಸುವುದರಿಂದ ಸಿಗುವ ಪ್ರಯೋಜನಗಳನ್ನು ಹೊಸದಾಗಿ ಆಸಕ್ತಿಯನ್ನು ತೋರಿಸುವವರು ನೋಡುವಂತೆ ಸಹಾಯಮಾಡುವುದರಲ್ಲಿ ಈ ವಿಡಿಯೋ ಅತ್ಯಮೂಲ್ಯ ಸಾಧನವಾಗಿದೆ. ಬೈಬಲು—ನಿಮ್ಮ ಜೀವಿತದಲ್ಲಿ ಅದರ ಶಕ್ತಿ ಎಂಬ ವಿಡಿಯೋಕ್ಯಾಸೆಟ್ ಸೊಸೈಟಿಯ ಸ್ಟಾಕಿನಲ್ಲಿದೆ. ನಿಮ್ಮ ಸಭೆಯ ಲಿಟ್ರೇಚರ್ ಸೇವಕನ ಮೂಲಕ ನೀವು ಒಂದು ಕ್ಯಾಸೆಟ್ ಅನ್ನು ವಿನಂತಿಸಿಕೊಳ್ಳಬಹುದು.