ಪ್ರಶ್ನಾ ರೇಖಾಚೌಕ
◼ ಜಿಲ್ಲಾ ಅಧಿವೇಶನದ ಬ್ಯಾಡ್ಜ್ ಕಾರ್ಡನ್ನು ಯಾರು ಪಡೆದುಕೊಳ್ಳಬೇಕು?
ನಮ್ಮ ಸಹೋದರರನ್ನು ಗುರುತಿಸಲು ಮತ್ತು ಅಧಿವೇಶನದ ಬಗ್ಗೆ ಪ್ರಚಾರಮಾಡಲು ಅಧಿವೇಶನದ ಬ್ಯಾಡ್ಜ್ ಕಾರ್ಡುಗಳು ಬಹಳ ಸಹಾಯಮಾಡುತ್ತವೆ. ಹಾಗಿದ್ದರೂ, ವಿವೇಚನೆಯಿಲ್ಲದೆ ಅವುಗಳನ್ನು ವಿತರಿಸಬಾರದು. ಏಕೆಂದರೆ ಬ್ಯಾಡ್ಜ್ ಕಾರ್ಡನ್ನು ಧರಿಸಿರುವವನು, ಯೆಹೋವನ ಸಾಕ್ಷಿಗಳ ಒಂದು ನಿರ್ದಿಷ್ಟ ಸಭೆಯಲ್ಲಿ ಒಳ್ಳೆಯ ನಿಲುವುಳ್ಳವನಾಗಿದ್ದಾನೆಂದು ಅದು ಗುರುತಿಸುತ್ತದೆ.
ಬ್ಯಾಡ್ಜ್ ಕಾರ್ಡಿನಲ್ಲಿ, ವ್ಯಕ್ತಿಯ ಹಾಗೂ ಸಭೆಯ ಹೆಸರನ್ನು ಬರೆಯಲು ಸ್ಥಳವಿದೆ. ಆದುದರಿಂದ, ವ್ಯಕ್ತಿಯು ಬ್ಯಾಡ್ಜ್ ಕಾರ್ಡಿನಲ್ಲಿ ಸೂಚಿಸಲ್ಪಟ್ಟ ಸಭೆಯೊಂದಿಗೆ ಸಾಕಷ್ಟುಮಟ್ಟಿಗೆ ಸಹವಾಸವನ್ನು ಮಾಡುವವನಾಗಿರಬೇಕು. ದೀಕ್ಷಾಸ್ನಾನ ಪಡೆದಿರುವ ಮತ್ತು ದೀಕ್ಷಾಸ್ನಾನ ಪಡೆದಿರದ ಪ್ರತಿಯೊಬ್ಬ ಪ್ರಚಾರಕನಿಗೆ ಒಂದು ಬ್ಯಾಡ್ಜ್ ಕಾರ್ಡನ್ನು ಕೊಡುವುದು ಸೂಕ್ತವಾಗಿರುವುದು. ಕ್ರಮವಾಗಿ ಸಭೆಯ ಕೂಟಗಳಿಗೆ ಹಾಜರಾಗುವ ಮತ್ತು ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದಕ್ಕಾಗಿ ಪ್ರಗತಿಯನ್ನು ಮಾಡುತ್ತಿರುವ ಮಕ್ಕಳು ಮತ್ತು ಇತರರು ಸಹ ಒಂದು ಬ್ಯಾಡ್ಜ್ ಕಾರ್ಡನ್ನು ಪಡೆದುಕೊಳ್ಳಸಾಧ್ಯವಿದೆ. ಆದರೆ, ಬಹಿಷ್ಕರಿಸಲ್ಪಟ್ಟ ಒಬ್ಬ ವ್ಯಕ್ತಿಗೆ ಅಧಿವೇಶನದ ಬ್ಯಾಡ್ಜ್ ಕಾರ್ಡನ್ನು ಕೊಡುವುದು ಯೋಗ್ಯವಾಗಿರಲಾರದು.
ಬ್ಯಾಡ್ಜ್ ಕಾರ್ಡುಗಳು ಲಭ್ಯವಾದೊಡನೆ, ಅವು ಮೇಲಿನ ಮಾರ್ಗದರ್ಶನಗಳಿಗನುಸಾರ ವಿತರಿಸಲ್ಪಡುವಂತೆ ಹಿರಿಯರು ನೋಡಿಕೊಳ್ಳತಕ್ಕದ್ದು.