“ನೀವು ಏನೂ ನಡಿಸಿದರೂ ಭಕ್ತಿವೃದ್ಧಿಗಾಗಿಯೇ ನಡಿಸಿರಿ”
1 ನಮ್ಮ ಸಹೋದರರೊಂದಿಗೆ ವ್ಯವಹರಿಸುವಾಗ, ಅವರ ಭಕ್ತಿವೃದ್ಧಿಗೊಳಿಸುವ ವಿಷಯಗಳನ್ನೇ ನಾವು ಮಾಡಬೇಕು. ಇದರರ್ಥ, ನಾವು ಅವರ ಆತ್ಮಿಕ ಕ್ಷೇಮದ ಕುರಿತಾಗಿ ಚಿಂತಿಸಬೇಕು. ಒಂದು ಉತ್ಪಾದನೆಯ ಮಾರಾಟದ ಪ್ರಚಾರ ಇಲ್ಲವೇ ಸೇವಾಸೌಲಭ್ಯದ ಪ್ರಚಾರಮಾಡುವಂಥ ಕೆಲಸವನ್ನು ನಾವು ಮಾಡುತ್ತಿರುವಲ್ಲಿ, ನಮ್ಮ ಸಹೋದರರನ್ನು ಎಡವಿಸುವಂಥ ಯಾವುದೇ ವಿಷಯವನ್ನು ಮಾಡದಂತೆ ನಾವು ಜಾಗರೂಕರಾಗಿರಬೇಕು.—2 ಕೊರಿಂ. 6:3; ಫಿಲಿ. 1:9, 10.
2 ಕೆಲವರು ವಿವಿಧ ರೀತಿಯ ವ್ಯಾಪಾರಗಳಲ್ಲಿ ಒಳಗೂಡಿದ್ದಾರೆ ಮತ್ತು ತಮ್ಮ ಜೊತೆ ಕ್ರೈಸ್ತರನ್ನು ಗಿರಾಕಿಗಳನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೆಲವೊಂದು ಮಾರಾಟ ಸಂಸ್ಥೆಗಳು, ತಮ್ಮ ಸ್ವಂತ ಧರ್ಮದ ಜನರನ್ನೂ ಸೇರಿಸಿ ಪ್ರತಿಯೊಬ್ಬರನ್ನು ಸಂಭಾವ್ಯ ಗಿರಾಕಿಗಳಾಗಿ ವೀಕ್ಷಿಸುವಂತೆ ತಮ್ಮ ಪ್ರತಿನಿಧಿಗಳನ್ನು ಪ್ರೋತ್ಸಾಹಿಸುತ್ತವೆ. ಇತರ ಸಾಕ್ಷಿಗಳು ಒಂದು ವ್ಯಾಪಾರದಲ್ಲಿ ಒಳಗೂಡುವಂತೆ ಉತ್ತೇಜಿಸಲಿಕ್ಕಾಗಿ ಕೆಲವೊಂದು ಸಹೋದರರು ಸಾಕ್ಷಿಗಳ ದೊಡ್ಡ ಸಂತೋಷಕೂಟಗಳನ್ನು ಏರ್ಪಡಿಸಿದ್ದಾರೆ. ಇನ್ನಿತರರು, ತಮ್ಮ ಮಾರಾಟದ ಉತ್ಪನ್ನಗಳ ಅಥವಾ ಸೇವಾಸೌಲಭ್ಯಗಳ ಕುರಿತು ಜೊತೆ ವಿಶ್ವಾಸಿಗಳಿಗೆ ಲೇಖನಗಳು, ಬ್ರೋಷರುಗಳು, ಇಂಟರ್ನೆಟ್ನಲ್ಲಿ ಮಾಹಿತಿಯನ್ನು ಅಥವಾ ಆಡಿಯೊ ಮತ್ತು ವಿಡಿಯೊ ಕ್ಯಾಸೆಟ್ಗಳನ್ನು ಅವರು ಕೇಳಿರದಿದ್ದರೂ ತಾವೇ ಕೊಡುವ ಮೂಲಕ ಪ್ರಚಾರಮಾಡುತ್ತಾರೆ. ಈ ರೀತಿಯಲ್ಲಿ ಒಬ್ಬ ಕ್ರೈಸ್ತನು, ಕ್ರೈಸ್ತ ಸಹೋದರರೊಂದಿಗಿನ ತನ್ನ ಆತ್ಮಿಕ ಸಂಬಂಧವನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳುವುದು ಸರಿಯೊ? ಖಂಡಿತವಾಗಿಯೂ ಇಲ್ಲ!—1 ಕೊರಿಂ. 10:23, 24, 31-33.
3 ಸಹೋದರರು ಎಚ್ಚರಿಕೆಯಿಂದಿರಬೇಕು: ಒಬ್ಬ ಕ್ರೈಸ್ತನು ಇನ್ನೊಬ್ಬ ಕ್ರೈಸ್ತನೊಂದಿಗೆ ವ್ಯಾಪಾರವನ್ನು ಮಾಡಬಾರದೆಂದು ಇದರರ್ಥವಲ್ಲ. ಅದು ಅವರವರ ವೈಯಕ್ತಿಕ ವಿಷಯವಾಗಿದೆ. ಆದರೆ ಕೆಲವರು ದುರಾಸೆಯನ್ನು ಹುಟ್ಟಿಸುವಂತಹ ವ್ಯಾಪಾರ ಯೋಜನೆಗಳನ್ನು ಆರಂಭಿಸುತ್ತಾರೆ. ಮತ್ತು ಜೊತೆ ವಿಶ್ವಾಸಿಗಳು ತಮ್ಮೊಂದಿಗೆ ಪಾಲುದಾರರಾಗುವಂತೆ ಅಥವಾ ಬಂಡವಾಳಗಾರರಾಗುವಂತೆ ಅವರು ಪ್ರಚೋದಿಸುತ್ತಾರೆ. ಇಂತಹ ಅನೇಕ ವ್ಯಾಪಾರಗಳು ನೆಲಕಚ್ಚುತ್ತವೆ ಮತ್ತು ಅವುಗಳಿಗೆ ಬಂಡವಾಳ ನೀಡಿದವರು ಅಪಾರ ಹಣ ನಷ್ಟವನ್ನು ಅನುಭವಿಸುತ್ತಾರೆ. ಇಂತಹ ಉದ್ಯಮಗಳಿಗೆ ಪಾಲುದಾರರಾಗಿ ಸೇರಿದವರು, ಆದಷ್ಟು ಬೇಗ ಹಣಮಾಡುವ ಆಸೆಯಿಂದ ಪ್ರೇರೇಪಿಸಲ್ಪಟ್ಟಿರಬಹುದು. ಹಾಗಿದ್ದರೂ, ಒಂದು ವ್ಯಾಪಾರವು ಕುಸಿಯುವಾಗ, ಅದನ್ನು ಆರಂಭಿಸಿದವನು ಆ ಕುಸಿತಕ್ಕೆ ತಾನು ಜವಾಬ್ದಾರನಲ್ಲವೆಂದು ನೆನಸಬಾರದು. ಅವನು ಆ ವ್ಯಾಪಾರವನ್ನು ಆರಂಭಿಸುವ ಮುಂಚೆಯೇ, ವ್ಯಾಪಾರವು ಒಂದು ವೇಳೆ ಸೋಲುವಲ್ಲಿ, ಅದರಲ್ಲಿ ಒಳಗೂಡಿರುವ ತನ್ನ ಸಹೋದರರ ಆತ್ಮಿಕ ಮತ್ತು ಶಾರೀರಿಕ ಕ್ಷೇಮವು ಹೇಗೆ ಬಾಧಿಸಲ್ಪಡಬಹುದು ಎಂಬುದರ ಕುರಿತು ಜಾಗರೂಕವಾಗಿ ಯೋಚಿಸಬೇಕು. ಸಭೆಯಲ್ಲಿ ಜವಾಬ್ದಾರಿಯ ಸ್ಥಾನಗಳಲ್ಲಿರುವವರು, ವಿಶೇಷವಾಗಿ ತಮ್ಮ ವ್ಯಾಪಾರಗಳ ಕುರಿತಾಗಿ ಹೆಚ್ಚು ಎಚ್ಚರಿಕೆಯುಳ್ಳವರಾಗಿರಬೇಕು. ಯಾಕೆಂದರೆ ಬೇರೆಯವರು ಅವರನ್ನು ತುಂಬ ಗೌರವದಿಂದ ನೋಡುತ್ತಿರಬಹುದು ಮತ್ತು ಅವರಲ್ಲಿ ತುಂಬ ಭರವಸೆಯನ್ನೂ ಇಟ್ಟಿರಬಹುದು. ಅವರ ಆ ಭರವಸೆಯನ್ನು ದುರುಪಯೋಗಿಸುವುದು ತಪ್ಪಾಗಿರುವುದು. ಒಬ್ಬ ಸಹೋದರನು ಇತರರ ಮುಂದೆ ತನ್ನ ಗೌರವವನ್ನು ಕಳೆದುಕೊಳ್ಳುವುದಾದರೆ, ಅವನಿಗಿರುವ ಸೇವಾ ಸುಯೋಗಗಳು ತೆಗೆದುಹಾಕಲ್ಪಡಬಹುದು.
4 ‘ನಾವು ಏನು ನಡಿಸಿದರೂ ಭಕ್ತಿವೃದ್ಧಿಗಾಗಿ ನಡಿಸುವುದೇ’ ನಮ್ಮ ಗುರಿಯಾಗಿರಬೇಕು. (1 ಕೊರಿಂ. 14:26) ಸಭೆಯೊಳಗೆ ವ್ಯಾಪಾರಿ ಚಟುವಟಿಕೆಗಳನ್ನು ಆರಂಭಿಸುವ ಅಥವಾ ಪ್ರೋತ್ಸಾಹಿಸುವಂಥ ಯಾವುದೇ ಕೆಲಸದಿಂದ ನಾವು ದೂರವಿರಬೇಕು. ಯಾಕೆಂದರೆ ಅಂತಹ ಚಟುವಟಿಕೆಗಳಿಗೂ ನಾವು ಜೊತೆಯಾಗಿ ಕೂಡಿಬರುವುದಕ್ಕೆ ನಮಗಿರುವ ಶಾಸ್ತ್ರೀಯ ಕಾರಣಗಳಿಗೂ ಯಾವುದೇ ಸಂಬಂಧವಿಲ್ಲ.—ಇಬ್ರಿ. 10:24, 25.