ಹೊಸ ಸರ್ಕಿಟ್ ಸಮ್ಮೇಳನದ ಕಾರ್ಯಕ್ರಮ
ನಮ್ಮ ಪ್ರೀತಿ ಹಾಗೂ ಅನನ್ಯ ಭಕ್ತಿಗೆ ಯೆಹೋವ ದೇವರು ಅರ್ಹನಾಗಿದ್ದಾನೆಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಆದರೂ, ನಾವು ಆತನೊಂದಿಗೆ ಆಪ್ತವಾದ ಸಂಬಂಧವನ್ನು ಇಟ್ಟುಕೊಳ್ಳದಂತೆ, ನಮ್ಮನ್ನು ದೂರ ಸೆಳೆಯಲು ಈ ಲೋಕವು ಪ್ರಯತ್ನಿಸುತ್ತದೆ. (ಯೋಹಾ. 17:14) ದೇವರ ಮೇಲೆ ನಾವು ಇಟ್ಟಿರುವಂಥ ಪ್ರೀತಿಯನ್ನು ಹೆಚ್ಚಿಸಲು ಮತ್ತು ನಮ್ಮ ಆತ್ಮಿಕತೆಗೆ ಅಪಾಯವನ್ನೊಡ್ಡುವಂತಹ ಅನೇಕ ಲೌಕಿಕ ವಿಷಯಗಳನ್ನು ಎದುರಿಸಿ ನಿಲ್ಲುವಂತೆ ನಮ್ಮನ್ನು ಬಲಗೊಳಿಸಲು, 2001ರ ಸೇವಾ ವರ್ಷಕ್ಕಾಗಿ ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಸರ್ಕಿಟ್ ಸಮ್ಮೇಳನದ ಮುಖ್ಯ ವಿಷಯವು “ಲೋಕದಲ್ಲಿರುವವುಗಳನ್ನಲ್ಲ, ಬದಲಾಗಿ ದೇವರನ್ನು ಪ್ರೀತಿಸಿರಿ” ಎಂಬುದಾಗಿದೆ.—1 ಯೋಹಾ. 2:15-17.
ಯೆಹೋವನ ಮೇಲೆ ಇರುವಂಥ ಗಾಢವಾದ ಪ್ರೀತಿಯು, ಆತನ ಕುರಿತು ಸಾಕ್ಷಿ ಹೇಳುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಆದರೂ, ದೇವಜನರಲ್ಲಿ ಅನೇಕರಿಗೆ ಸುವಾರ್ತೆಯನ್ನು ಸಾರುವುದು ಸುಲಭವಾದ ಕೆಲಸವಾಗಿಲ್ಲ. “ದೇವರಿಗಾಗಿರುವ ಪ್ರೀತಿಯು ಸುವಾರ್ತೆಯನ್ನು ಸಾರುವಂತೆ ನಮ್ಮನ್ನು ಪ್ರಚೋದಿಸುತ್ತದೆ” ಎಂಬ ಕಾರ್ಯಕ್ರಮದ ಭಾಗದಲ್ಲಿ, ಈ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಅನೇಕರು ನಾಚಿಕೆ ಸ್ವಭಾವ ಹಾಗೂ ಇನ್ನಿತರ ಅಡಚಣೆಗಳನ್ನು ಹೇಗೆ ಜಯಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ.
ಹದಗೆಡುತ್ತಿರುವ ಲೋಕದ ಮಟ್ಟಗಳು ನಮ್ಮನ್ನು ಹೇಗೆ ಪ್ರಭಾವಿಸುತ್ತವೆ? ಒಂದು ಕಾಲದಲ್ಲಿ ದುರ್ನಡತೆಯಾಗಿ ನೆನಸುತ್ತಿದ್ದ ಕೃತ್ಯಗಳು ಇಂದು ಸರ್ವಸಾಮಾನ್ಯವಾಗಿ ವೀಕ್ಷಿಸಲ್ಪಡುತ್ತವೆ. “ಯೆಹೋವನನ್ನು ಪ್ರೀತಿಸುವವರೇ ಕೆಟ್ಟದನ್ನು ದ್ವೇಷಿಸಿರಿ” ಎಂಬ ಭಾಷಣ ಹಾಗೂ “ಲೋಕದಲ್ಲಿರುವವುಗಳನ್ನು ನಾವು ಹೇಗೆ ವೀಕ್ಷಿಸುತ್ತೇವೆ?” ಎಂಬ ಭಾಷಣಮಾಲೆಯು, ಕೆಟ್ಟ ಬಯಕೆಗಳನ್ನು ದೃಢಸಂಕಲ್ಪದಿಂದ ನಿರಾಕರಿಸಲು ಬೇಕಾದಂಥ ಸಹಾಯವನ್ನು ನಮಗೆ ನೀಡುತ್ತದೆ.
ದೇವಪ್ರಭುತ್ವ ಶುಶ್ರೂಷಾ ಶಾಲೆ ಹಾಗೂ ಸೇವಾ ಕೂಟದೊಂದಿಗೆ, ಆ ವಾರ ಅಭ್ಯಾಸಿಸಲ್ಪಡಬೇಕಾದ ಕಾವಲಿನಬುರುಜು ಲೇಖನದ ಸಾರಾಂಶವು ಕೂಡ ಕಾರ್ಯಕ್ರಮದಲ್ಲಿ ಸೇರಿಸಲ್ಪಟ್ಟಿದೆ. “ಪ್ರೀತಿ ಮತ್ತು ನಂಬಿಕೆಯು ಲೋಕವನ್ನು ಜಯಿಸುವ ವಿಧ” ಎಂಬ ಬಹಿರಂಗ ಭಾಷಣವು, ಲೋಕದ ಒತ್ತಡಗಳನ್ನು ಎದುರಿಸುವುದರಲ್ಲಿ ಯೇಸುವನ್ನು ಅನುಕರಿಸುವಂತೆ ನಮ್ಮನ್ನು ಪ್ರೋತ್ಸಾಹಿಸುವುದು. (ಯೋಹಾ. 16:33) ನಿಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಆಹ್ವಾನಿಸಲು ಮರೆಯಬೇಡಿ. ದೀಕ್ಷಾಸ್ನಾನ ಪಡೆದುಕೊಳ್ಳಲು ಇಚ್ಛಿಸುವವರು, ಆದಷ್ಟು ಬೇಗ ಅಧ್ಯಕ್ಷ ಮೇಲ್ವಿಚಾರಕನನ್ನು ಸಂಪರ್ಕಿಸಬೇಕು; ಇದರಿಂದ ಬೇಕಾದ ಏರ್ಪಾಡುಗಳನ್ನು ಮಾಡಲು ಅವರಿಗೆ ಸುಲಭವಾಗುವುದು.
ಯೆಹೋವನಿಂದ ಹೇರಳವಾದ ಆಶೀರ್ವಾದಗಳನ್ನು ಪಡೆದುಕೊಳ್ಳಬೇಕಾದರೆ, ನಮ್ಮ ಪ್ರೀತಿಯು ನಿರ್ದಿಷ್ಟವಾಗಿ ಯಾವುದರ ಮೇಲೆ ಕೇಂದ್ರೀಕರಿಸಲ್ಪಡಬೇಕೆಂಬುದನ್ನು ಈ ಸರ್ಕಿಟ್ ಸಮ್ಮೇಳನವು ಸಾದರಪಡಿಸುವುದು. ಕಾರ್ಯಕ್ರಮದ ಯಾವ ಭಾಗವನ್ನೂ ತಪ್ಪಿಸಿಕೊಳ್ಳಬೇಡಿ.