ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/00 ಪು. 7
  • ಪ್ರಶ್ನಾ ರೇಖಾಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ರೇಖಾಚೌಕ
  • 2000 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಬೈಬಲನ್ನು ಉಪಯೋಗಿಸಲು ಪ್ರೋತ್ಸಾಹಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸಭಿಕರಿಗೆ ಬೋಧಪ್ರದವಾದ ವಿಷಯ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ದೃಷ್ಟಿ ಸಂಪರ್ಕ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸಾರ್ವಜನಿಕರಿಗಾಗಿ ಕೊಡುವ ಭಾಷಣಗಳನ್ನು ತಯಾರಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
2000 ನಮ್ಮ ರಾಜ್ಯದ ಸೇವೆ
km 9/00 ಪು. 7

ಪ್ರಶ್ನಾ ರೇಖಾಚೌಕ

◼ ಒಬ್ಬ ಭಾಷಣಕರ್ತನು ತನ್ನ ಭಾಷಣವನ್ನು ಕೊಡುತ್ತಿರುವ ಸಮಯದಲ್ಲಿ, ಸಭಿಕರು ತಮ್ಮ ಬೈಬಲಿನಲ್ಲಿ ವಚನಗಳನ್ನು ತೆರೆದುನೋಡುವಂತೆ ಹೇಳುವಾಗ, ಅವರದನ್ನು ತೆರೆದುನೋಡುವುದು ಏಕೆ ಉಪಯುಕ್ತವಾಗಿದೆ?

ಭಾಷಣದಲ್ಲಿ ಚರ್ಚಿಸಲಾಗುತ್ತಿರುವ ವಿಷಯ ಮತ್ತು ದೇವರ ವಾಕ್ಯದ ಯಾವುದೇ ನಿರ್ದಿಷ್ಟ ಭಾಗದ ಪ್ರತಿಯೊಂದು ವಚನವನ್ನು ಭಾಷಣದಲ್ಲಿ ಪರಿಗಣಿಸಲಾಗುತ್ತಿದೆಯೊ ಇಲ್ಲವೊ ಎಂಬಂತಹ ಅಂಶಗಳ ಆಧಾರದ ಮೇಲೆ, ಸಭಿಕರು ಯಾವ ವಚನಗಳನ್ನು ತೆರೆದುನೋಡಬೇಕೆಂಬುದನ್ನು ಭಾಷಣಕರ್ತನು ನಿರ್ಧರಿಸುವನು.

ವಚನಗಳನ್ನು ಬೈಬಲಿನಲ್ಲಿ ತೆರೆದುನೋಡುವುದಕ್ಕೆ ಒಂದು ಕಾರಣವು, ಭಾಷಣಕರ್ತನು ಹೇಳುತ್ತಿರುವ ವಿಷಯವು ಬೈಬಲಿನಲ್ಲಿದೆ ಎಂಬುದನ್ನು ದೃಢಪಡಿಸುವುದಾಗಿದೆ ಎಂಬುದನ್ನು ಮನಸ್ಸಿನಲ್ಲಿಡುವುದು ಪ್ರಾಮುಖ್ಯ. (ಅ. ಕೃ. 17:11) ಎಲ್ಲರ ನಂಬಿಕೆಯು ಬಲಗೊಳಿಸಲ್ಪಡುವಂತೆ, ಚರ್ಚಿಸಲಾಗುತ್ತಿರುವ ವಿಷಯಕ್ಕೆ ಆಧಾರವಾಗಿ ಕೊಡಲ್ಪಟ್ಟಿರುವ ಶಾಸ್ತ್ರೀಯ ಪುರಾವೆಯನ್ನು ಪರೀಕ್ಷಿಸುವುದು ಇನ್ನೊಂದು ಉದ್ದೇಶವಾಗಿದೆ. ಭಾಷಣಕರ್ತನು ಒಂದು ವಚನವನ್ನು ಓದುತ್ತಿರುವಾಗ ಸ್ವತಃ ಬೈಬಲ್‌ ಏನು ಹೇಳುತ್ತದೆಂಬುದನ್ನು ನಾವು ನೋಡುವುದರಿಂದ, ಅದು ನಮ್ಮ ಮನಸ್ಸಿನಲ್ಲಿ ಹೆಚ್ಚು ಆಳವಾಗಿ ಅಚ್ಚೊತ್ತುವುದು. ವಚನಗಳನ್ನು ತೆರೆದುನೋಡುವುದರೊಂದಿಗೆ, ನೋಟ್ಸ್‌ಗಳನ್ನು ಬರೆದುಕೊಳ್ಳುವುದು ಮತ್ತು ಭಾಷಣಕರ್ತನು ಉಪಯೋಗಿಸುತ್ತಿರುವ ತರ್ಕಸರಣಿಯನ್ನು ಅನುಸರಿಸಿಕೊಂಡು ಹೋಗುವುದು ಸಹ ಉಪಯುಕ್ತವಾಗಿದೆ.

ಸೊಸೈಟಿಯ ಭಾಷಣದ ಹೊರಮೇರೆಯಲ್ಲಿ ಹೇರಳವಾದ ವಚನಗಳು ಕೊಡಲ್ಪಟ್ಟಿರಬಹುದು. ಆದರೆ ಈ ವಚನಗಳು, ಭಾಷಣಕರ್ತನ ಪ್ರಯೋಜನಕ್ಕಾಗಿ, ಅಂದರೆ ಅವನು ಭಾಷಣವನ್ನು ತಯಾರಿಸುವುದಕ್ಕೆ ಸಹಾಯವಾಗುವಂತೆ ಕೊಡಲ್ಪಟ್ಟಿವೆ. ಈ ವಚನಗಳು ಅವನಿಗೆ ಹಿನ್ನೆಲೆ ಮಾಹಿತಿಯನ್ನು ಕೊಡುತ್ತಿರಬಹುದು, ಮತ್ತು ಮೂಲಭೂತ ಶಾಸ್ತ್ರೀಯ ತತ್ತ್ವಗಳನ್ನು ಚೆನ್ನಾಗಿ ಗ್ರಹಿಸಲು ಮತ್ತು ಭಾಷಣದ ವಿಷಯವನ್ನು ಹೇಗೆ ಸ್ಪಷ್ಟೀಕರಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡಬಹುದು. ಭಾಷಣವನ್ನು ಸ್ಪಷ್ಟಗೊಳಿಸಲಿಕ್ಕಾಗಿ ಯಾವ ವಚನಗಳು ಅತ್ಯಾವಶ್ಯಕವಾಗಿವೆ ಎಂಬುದನ್ನು ಭಾಷಣಕರ್ತನು ನಿರ್ಧರಿಸುತ್ತಾನೆ. ಮತ್ತು ತಾನು ಆ ವಚನಗಳನ್ನು ಓದಿ ವಿವರಿಸುವಾಗ, ತನ್ನೊಂದಿಗೆ ಓದುವಂತೆ ಮತ್ತು ಗಮನಕೊಡುವಂತೆ ಸಭಿಕರನ್ನು ಆಮಂತ್ರಿಸುತ್ತಾನೆ. ಬೇರೆ ಆಧಾರ ವಚನಗಳನ್ನು ಓದದೆ ಕೇವಲ ತಿಳಿಸಿ, ಅದರ ತಾತ್ಪರ್ಯವನ್ನು ಹೇಳಬಹುದು. ಆದರೆ ಅಂತಹ ಸಂದರ್ಭಗಳಲ್ಲಿ ಸಭಿಕರು ಆ ವಚನಗಳನ್ನು ತೆರೆದುನೋಡಲೇಬೇಕೆಂದೇನಿಲ್ಲ.

ಭಾಷಣಕರ್ತನು ಆಯ್ಕೆಮಾಡಿರುವ ವಚನಗಳನ್ನು ಓದುವಾಗ, ಅವುಗಳನ್ನು ನೇರವಾಗಿ ಬೈಬಲಿನಿಂದಲೇ ಓದಬೇಕು. ಕಂಪ್ಯೂಟರ್‌ನಿಂದ ತೆಗೆಯಲಾಗಿರುವ ಒಂದು ಪ್ರಿಂಟ್‌ಔಟ್‌ನಿಂದ ಓದಬಾರದು. ಸಭಿಕರು ತನ್ನೊಂದಿಗೆ ಓದುವಂತೆ ಹೇಳುವಾಗ, ಭಾಷಣಕರ್ತನು ಬೈಬಲ್‌ ಪುಸ್ತಕದ ಹೆಸರನ್ನು, ಅಧ್ಯಾಯ ಮತ್ತು ವಚನ ಅಥವಾ ವಚನಗಳನ್ನು ಸ್ಪಷ್ಟವಾಗಿ ತಿಳಿಸುತ್ತಾನೆ. ಈ ವಚನವನ್ನು ಏಕೆ ಓದಲಾಗುತ್ತಿದೆ ಎಂಬುದರ ಬಗ್ಗೆ ಒಂದು ಪ್ರಶ್ನೆಯನ್ನು ಎಬ್ಬಿಸುವುದಕ್ಕಾಗಿ ಅಥವಾ ಸಂಕ್ಷಿಪ್ತವಾದ ಹೇಳಿಕೆಯನ್ನು ನೀಡುವುದಕ್ಕಾಗಿ ಸ್ವಲ್ಪ ಹೊತ್ತು ನಿಲ್ಲುವ ಮೂಲಕ, ಅವನು ಸಭಿಕರಿಗೆ ಆ ವಚನವನ್ನು ತೆರೆಯಲು ಸ್ವಲ್ಪ ಸಮಯಾವಕಾಶವನ್ನು ಕೊಡುವನು. ವಚನವನ್ನು ಪುನಃ ತಿಳಿಸುವುದು ಒಳ್ಳೇದು, ಯಾಕೆಂದರೆ ಆಗ ಸಭಿಕರು ಅದನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಅದು ಸಹಾಯಮಾಡುವುದು. ಆದರೆ, ಆ ವಚನವು ಯಾವ ಪುಟದಲ್ಲಿದೆ ಎಂಬುದನ್ನು ತಿಳಿಸದಿರುವುದು ಒಳ್ಳೇದು. ಯಾಕೆಂದರೆ, ಸಭಿಕರು ಉಪಯೋಗಿಸುತ್ತಿರುವ ಮುದ್ರಣಗಳಿಗೆ ತಕ್ಕಂತೆ ಅವುಗಳ ಪುಟಗಳ ಸಂಖ್ಯೆಯು ಬೇರೆಬೇರೆಯಾಗಿರಬಹುದು. ಸಾರ್ವಜನಿಕ ಭಾಷಣಗಳಲ್ಲಿ ಬೈಬಲನ್ನು ಸರಿಯಾಗಿ ಉಪಯೋಗಿಸುವುದು ತುಂಬ ಪ್ರಾಮುಖ್ಯ. ಯಾಕೆಂದರೆ ಭಾಷಣದಲ್ಲಿ ದೇವರ ವಾಕ್ಯದ ಅರ್ಥವನ್ನು ವಿವರಿಸುತ್ತಿರುವಾಗ, ಸಭಿಕರು ಅದರ ಶಕ್ತಿಯಿಂದ ಪ್ರಯೋಜನವನ್ನು ಹೊಂದುವಂತೆ ಅದು ಸಹಾಯಮಾಡುವುದು.—ಇಬ್ರಿ. 4:12.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ