ರಾಜ್ಯ ವಾರ್ತೆ ನಂ. 36ರಿಂದ ಹುರಿದುಂಬಿಸಲ್ಪಟ್ಟಿರುವ ಆಸಕ್ತಿಯನ್ನು ಬೆಳೆಸಿಕೊಳ್ಳಿರಿ
1 ನೀವು ರಾಜ್ಯ ವಾರ್ತೆ ನಂ. 36ನ್ನು ವಿತರಿಸಿದ್ದೀರೋ? “ಹೊಸ ಸಹಸ್ರಮಾನ—ಅದು ನಿಮಗಾಗಿ ಯಾವ ಭವಿಷ್ಯತ್ತನ್ನು ಕಾದಿರಿಸಿದೆ?” ಎಂಬ ಸಮಯೋಚಿತ ಪ್ರಶ್ನೆಯ ಕುರಿತು ಚಿಂತಿಸುವಂತೆ ಅದು ಎಲ್ಲರನ್ನು ಕೇಳಿಕೊಳ್ಳುತ್ತದೆ. 2000 ವರ್ಷವು ಹತ್ತಿರ ಬಂದಂತೆ, ಹೊಸ ಸಹಸ್ರಮಾನವು ಏನನ್ನು ತರುವುದೋ ಎಂಬ ಹತ್ತುಹಲವಾರು ನಿರೀಕ್ಷೆಗಳಿದ್ದವು. ರಾಜ್ಯ ವಾರ್ತೆ ನಂ. 36 ಕೆಲವೊಂದು ನಿರೀಕ್ಷೆಗಳನ್ನು ಪರಿಗಣಿಸುತ್ತದೆ ಮತ್ತು ಆಶಾವಾದಕ್ಕೆ ಒಂದು ನಿಜವಾದ ಆಧಾರವನ್ನು ಈ ಲೋಕವು ಕೊಡುವುದಿಲ್ಲ ಎಂಬ ವಿಚಾರವನ್ನು ನಮಗೆ ಮರುಜ್ಞಾಪಿಸುತ್ತದೆ. ಅನೇಕ ಜನರು ಯಾವುದಕ್ಕಾಗಿ ಹುಡುಕುತ್ತಿದ್ದಾರೋ ಆ ಶಾಂತಿಭದ್ರತೆಯನ್ನು ತರುವ ಏಕಮಾತ್ರ ಸಹಸ್ರಮಾನವು, ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಯೇ ಆಗಿದೆ. ಅವನ ರಾಜ್ಯವು ನಿಜವಾಗಿದೆ ಎಂಬ ನಂಬಿಕೆ ನಮಗಿರುವುದರಿಂದ, ನಾವು ರಾಜ್ಯ ವಾರ್ತೆ ನಂ. 36ನ್ನು ಆದಷ್ಟು ಜನರಿಗೆ ವಿತರಿಸುವಂತೆ ಪ್ರಚೋದಿಸಲ್ಪಟ್ಟಿದ್ದೇವೆ.
2 ರಾಜ್ಯ ವಾರ್ತೆಗೆ ಸಿಕ್ಕ ಪ್ರತಿಕ್ರಿಯೆಗಳು: ರಾಜ್ಯ ವಾರ್ತೆ ಟ್ರ್ಯಾಕ್ಟ್ಗಳ ಹಿಂದಿನ ವಿತರಣೆಗಳು ನಮ್ಮ ಕೆಲಸದಲ್ಲಿ ನಿಜವಾಗಿಯೂ ಒಂದು ಉತ್ತಮ ಪ್ರಚೋದನೆಯಾಗಿದ್ದವು. ರಾಜ್ಯ ವಾರ್ತೆ ನಂ. 35ರ ಕುರಿತಾಗಿ ಕೆನಡ ಬ್ರಾಂಚ್ ಬರೆದುದು: “ಕ್ಷೇತ್ರದಲ್ಲಿ ಪ್ರಚಾರಕರೂ ಪಯನೀಯರರೂ ಈ ವಿಶೇಷ ಕಾರ್ಯಾಚರಣೆಯನ್ನು ಹುರುಪು ಮತ್ತು ಉತ್ಸಾಹದಿಂದ ಬೆಂಬಲಿಸಿದರು. ಅಷ್ಟುಮಾತ್ರವಲ್ಲ, ಅನೇಕ ಉತ್ತೇಜನದಾಯಕ ಅನುಭವಗಳು ಅವರಿಗೆ ಸಿಕ್ಕಿದವು.” ರಾಜ್ಯ ವಾರ್ತೆ ನಂ. 36ರ ಕುರಿತು ನೀವು ತದ್ರೀತಿಯ ಹುರುಪು ಮತ್ತು ಉತ್ಸಾಹವನ್ನು ತೋರಿಸಿದ್ದೀರಿ ಎಂಬ ವಿಷಯದಲ್ಲಿ ಸಂದೇಹವಿಲ್ಲ.
3 ಈಗಿನ ರಾಜ್ಯ ವಾರ್ತೆಯ ಕಾರ್ಯಾಚರಣೆಯು 2000, ನವೆಂಬರ್ 30ರಂದು ಕೊನೆಗೊಳ್ಳಬೇಕು. ನಿಮ್ಮ ಸಭೆಗೆ ನೇಮಿಸಿದ ಎಲ್ಲ ಟೆರಿಟೊರಿಯನ್ನು ನೀವು ಸಂಪೂರ್ಣವಾಗಿ ಆವರಿಸಿದ್ದೀರೋ? ಇಲ್ಲದಿದ್ದರೆ, ಡಿಸೆಂಬರ್ ತಿಂಗಳಿನಲ್ಲೂ ವಿತರಣೆಯ ಈ ಕಾರ್ಯಾಚರಣೆಯನ್ನು ಮುಂದುವರಿಸಿಕೊಂಡು ಹೋಗುವಂತೆ ನಿಮಗೆ ಹಿರಿಯರು ಹೇಳಬಹುದು.
4 ಇಷ್ಟರ ವರೆಗೆ ನೀವಿರುವ ಸ್ಥಳದಲ್ಲಿ ರಾಜ್ಯ ವಾರ್ತೆ ನಂ. 36ನ್ನು ವಿತರಿಸಿರುವುದರಿಂದ ನಿಮಗೆ ಯಾವ ರೀತಿಯ ಪ್ರತಿಕ್ರಿಯೆಯು ಸಿಕ್ಕಿದೆ? ಕೂಪನ್ ಅನ್ನು ತುಂಬಿಸಿ, ಅಪೇಕ್ಷಿಸು ಬ್ರೋಷರ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಕೊಡುವಂತೆ ಕೇಳಿಕೊಳ್ಳಬಹುದು ಮತ್ತು/ಇಲ್ಲವೆ ಒಂದು ಮನೆ ಬೈಬಲ್ ಅಭ್ಯಾಸಕ್ಕಾಗಿ ಕೆಲವೇ ಜನರು ವಿನಂತಿಸಿಕೊಳ್ಳುವರು. ಆದರೂ, ಸಹಸ್ರಮಾನದ ವಿಷಯದಲ್ಲಿ ಮೊದಮೊದಲು ಆಸಕ್ತಿಯನ್ನು ತೋರಿಸುವ ಅನೇಕರು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಹೋಗಿ ಪುನಃ ಭೇಟಿಮಾಡಿದ ಹೊರತು ಅವರು ಹೆಜ್ಜೆಯನ್ನು ತೆಗೆದುಕೊಳ್ಳುವ ಸಂಭವವು ತೀರ ಕಡಿಮೆ. ಯಾರೆಲ್ಲ ಆಸಕ್ತಿಯನ್ನು ತೋರಿಸುತ್ತಾರೋ ಅವರನ್ನು ಪುನಃ ಹೋಗಿ ಭೇಟಿಮಾಡತಕ್ಕದ್ದು. ಭೇಟಿಮಾಡಲು ಯಾವ ಸಮಯವು ಒಳ್ಳೆಯದಾಗಿರುವುದು? ಆದಷ್ಟು ಬೇಗನೆ ಹೋಗುವುದು ಉತ್ತಮ.
5 ರಾಜ್ಯ ವಾರ್ತೆ ನಂ. 35ನ್ನು ಕೊಟ್ಟ ನಂತರ, ಪುನಃ ಭೇಟಿಮಾಡಿದ್ದರಿಂದ ಸಿಕ್ಕಿದ ಈ ಅನುಭವಗಳನ್ನು ಸ್ವಲ್ಪ ಗಮನಿಸಿರಿ. ಐರ್ಲೆಂಡ್ನಲ್ಲಿರುವ ಒಬ್ಬ ಪಯನೀಯರಳು, ಒಂದು ರೆಸ್ಟೊರೆಂಟ್ನ ಮಾಲೀಕಳಿಗೆ ರಾಜ್ಯ ವಾರ್ತೆಯನ್ನು ಕೊಟ್ಟಳು. ಅದರ ಸಂದೇಶದಿಂದ ಆ ಸ್ತ್ರೀಯು ಎಷ್ಟೊಂದು ಪ್ರಭಾವಿತಳಾದಳೆಂದರೆ, ತನ್ನನ್ನು ಭೇಟಿಮಾಡುವಂತೆ ಅವಳು ಸಹೋದರಿಯನ್ನು ಕೇಳಿಕೊಂಡಳು. ಎರಡು ದಿವಸಗಳ ನಂತರ ಸಹೋದರಿಯು ಅಲ್ಲಿಗೆ ಹೋದಳು ಮತ್ತು ಒಂದು ಬೈಬಲ್ ಅಭ್ಯಾಸವು ಪ್ರಾರಂಭವಾಯಿತು. ಡೆನ್ಮಾರ್ಕ್ನಲ್ಲಿ, ಒಂದು ಮನೆಯಲ್ಲಿ ಯಾರೂ ಇರಲಿಲ್ಲವಾದುದರಿಂದ, ಅಲ್ಲಿ ರಾಜ್ಯ ವಾರ್ತೆಯ ಒಂದು ಪ್ರತಿಯನ್ನು ಮನೆಯೊಳಗೆ ಹಾಕಲಾಯಿತು. ಆ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯು ಅದೇ ದಿನ ಕೂಪನ್ ಅನ್ನು ಅಲ್ಲಿನ ಬ್ರಾಂಚ್ ಆಫೀಸಿಗೆ ಕಳುಹಿಸಿದಳು. ಅದನ್ನು ಆಫೀಸು ಸ್ಥಳಿಕ ಸಭೆಗೆ ಕಳುಹಿಸಿತು. ಒಂದು ವಾರ ಕಳೆಯುವುದರೊಳಗೆ, ಇಬ್ಬರು ಸಹೋದರಿಯರು ಅವಳನ್ನು ಭೇಟಿಮಾಡಿದರು ಮತ್ತು ಒಂದು ಅಭ್ಯಾಸವು ಪ್ರಾರಂಭವಾಯಿತು. ಮತ್ತು ಆ ಸ್ತ್ರೀಯು ರಾಜ್ಯ ಸಭಾಗೃಹದಲ್ಲಿ ತನ್ನ ಮೊದಲ ಕೂಟಕ್ಕೆ ಹಾಜರಿದ್ದಳು!
6 ನೀವು ಹಿಂದಿರುಗಿಹೋದಾಗ ಏನು ಹೇಳಸಾಧ್ಯವಿದೆ? ರಾಜ್ಯ ವಾರ್ತೆ ಟ್ರ್ಯಾಕ್ಟ್ ಅನ್ನು ಕೊಟ್ಟ ಅನಂತರ ಪುನರ್ಭೇಟಿಗಳನ್ನು ಮಾಡುವುದು ಬಹಳ ಸುಲಭವಾಗಿದೆ ಮಾತ್ರವಲ್ಲ, ನಾವು ಶುಶ್ರೂಷೆಯಲ್ಲಿ ಆನಂದಿಸುವಂತೆ ಮಾಡುತ್ತದೆ. ಹಾಗೇ ಪುನಃ ಸಂದರ್ಶಿಸಲು ಹೋಗುವಾಗ ರಾಜ್ಯ ವಾರ್ತೆ ನಂ. 36ನ್ನು ತೆಗೆದುಕೊಂಡುಹೋಗುವುದು ಒಳ್ಳೆಯದು. ಏಕೆಂದರೆ ಮನೆಯವನ ಹತ್ತಿರ ಅದರ ಒಂದು ಪ್ರತಿಯಿಲ್ಲದಿರಬಹುದು. ಆಗ ಈ ಮುಂದಿನ ಸಲಹೆಗಳನ್ನು ನೀವು ಉಪಯೋಗಿಸಿ ನೋಡಸಾಧ್ಯವಿದೆ.
7 ಮನೆಯವನಿಗೆ ಪರಿಚಯಿಸಿಕೊಂಡ ಬಳಿಕ, ನೀವು ಹೀಗೆ ಹೇಳಬಹುದು:
◼ “‘ಹೊಸ ಸಹಸ್ರಮಾನ—ಅದು ನಿಮಗಾಗಿ ಯಾವ ಭವಿಷ್ಯತ್ತನ್ನು ಕಾದಿರಿಸಿದೆ?’ ಎಂಬ ಟ್ರ್ಯಾಕ್ಟ್ ಅನ್ನು ನಿಮಗೆ ನಾನು ಕೊಟ್ಟಿದ್ದೆ. ಕ್ರಿಸ್ತ ಯೇಸುವಿನ ಸಹಸ್ರ ವರ್ಷದಾಳಿಕೆಯು ಇನ್ನೇನು ಪ್ರಾರಂಭವಾಗಲಿದೆ, ಭೂಮಿಯ ಮೇಲೆ ಪ್ರಮೋದವನೀಯ ಪರಿಸ್ಥಿತಿಗಳನ್ನು ಅದು ತರಲಿದೆ ಎಂಬುದನ್ನು ಓದುವುದು ಉತ್ತೇಜನದಾಯಕವಾಗಿರಲಿಲ್ಲವೇ? [ರಾಜ್ಯ ವಾರ್ತೆ ನಂ. 36ರಲ್ಲಿರುವ ಪ್ರಮೋದವನದ ಚಿತ್ರಗಳನ್ನು ತೋರಿಸಿರಿ.] ಕೊನೆಯ ಪುಟದಲ್ಲಿ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಕೇಳಿ ತಿಳಿದುಕೊಳ್ಳುವಂತೆ ವಿನಂತಿಸಲಾಗಿದೆ.” ಬ್ರೋಷರನ್ನು ತೋರಿಸಿರಿ, ಪಾಠ 5ನ್ನು ತೆರೆಯಿರಿ ಹಾಗೂ ಮೊದಲ ಪ್ರಶ್ನೆಯನ್ನು, 1 ಹಾಗೂ 2ನೇ ಪ್ಯಾರಗ್ರಾಫ್ಗಳನ್ನು ಓದಿರಿ. ಅನಂತರ ಅದಕ್ಕೆ ಉತ್ತರವನ್ನು ನೀಡುವಂತೆ ಮನೆಯವನಿಗೆ ಹೇಳಿರಿ. ಒಂದೆರಡು ಶಾಸ್ತ್ರವಚನಗಳನ್ನು ಓದಿ, ಚರ್ಚಿಸಿರಿ. ಸಾಧ್ಯವಾದರೆ, ಮತ್ತೊಂದು ಪ್ರಶ್ನೆಯನ್ನು ಹಾಗೂ ಪ್ಯಾರಗ್ರಾಫನ್ನು ಓದಿ, ಚರ್ಚೆಯನ್ನು ಮುಂದುವರಿಸಲು ಪುನಃ ಬರುವಿರೆಂದು ಹೇಳಿರಿ.
8 ಡಿಸೆಂಬರ್ ತಿಂಗಳಿನಲ್ಲಿ ಪುನರ್ಭೇಟಿಯಲ್ಲಿ “ಜ್ಞಾನ” ಪುಸ್ತಕವನ್ನು ನೀಡಬೇಕಾಗಿರುವುದರಿಂದ ನೀವು ಹೀಗೆ ಹೇಳಬಹುದು:
◼ “ಇತ್ತೀಚೆಗೆ ನಿಮ್ಮನ್ನು ಭೇಟಿಯಾದಾಗ, ನಾನು ನಿಮಗೆ ‘ಹೊಸ ಸಹಸ್ರಮಾನ—ಅದು ನಿಮಗಾಗಿ ಯಾವ ಭವಿಷ್ಯತ್ತನ್ನು ಕಾದಿರಿಸಿದೆ?’ ಎಂಬ ಟ್ರ್ಯಾಕ್ಟ್ ಅನ್ನು ಕೊಟ್ಟಿದ್ದೆ. ನಾವು ಜನರೊಂದಿಗೆ ಉಚಿತವಾಗಿ ಮನೆ ಬೈಬಲ್ ಅಭ್ಯಾಸವನ್ನು ಮಾಡುತ್ತೇವೆ. ಆದುದರಿಂದ, ನಾವು ಯಾವ ಪುಸ್ತಕದಿಂದ ಅಭ್ಯಾಸವನ್ನು ಮಾಡುತ್ತೇವೆ ಎಂಬುದನ್ನು ತೋರಿಸಲು ನಾನು ಹಿಂದಿರುಗಿ ಬಂದಿದ್ದೇನೆ. [ಜ್ಞಾನ ಪುಸ್ತಕವನ್ನು ತೋರಿಸಿರಿ ಹಾಗೂ 188-9ನೇ ಪುಟಗಳಿಗೆ ತಿರುಗಿಸಿರಿ.] ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಸಹಸ್ರಮಾನವು ಈ ಚಿತ್ರದಲ್ಲಿ ತೋರಿಸಿರುವಂತಹ ಪರಿಸ್ಥಿತಿಗಳನ್ನು ತರುವುದು. ಪ್ರಮೋದವನದಲ್ಲಿರಲು ನಾವು ಇಷ್ಟಪಡುವುದಾದರೆ, ದೇವರ ನಿಷ್ಕೃಷ್ಟ ಜ್ಞಾನವನ್ನು ನಾವು ಪಡೆದುಕೊಳ್ಳುವ ಅಗತ್ಯವಿದೆ. ಬೈಬಲನ್ನು ನಾವು ಹೇಗೆ ಅಭ್ಯಾಸ ಮಾಡುತ್ತೇವೆ ಎಂಬುದನ್ನು ಸಂಕ್ಷಿಪ್ತವಾಗಿ ತೋರಿಸಲೋ?
9 ರಾಜ್ಯ ವಾರ್ತೆ ನಂ. 36ರ ವಿತರಣೆಯು ಶುಶ್ರೂಷೆಯಲ್ಲಿ ಇನ್ನೂ ಹೆಚ್ಚಾಗಿ ಪಾಲ್ಗೊಳ್ಳುವಂತೆ ಹಾಗೂ ಅಮೋಘವಾದ ಸಾಕ್ಷಿಯನ್ನು ನೀಡುವಂತೆ ನಮ್ಮನ್ನು ಪ್ರಚೋದಿಸಿದೆ. ಖಂಡಿತವಾಗಿಯೂ ಇದು ಟೆರಿಟೊರಿಯಲ್ಲಿರುವ ಅನೇಕ ಜನರ ಆಸಕ್ತಿಯನ್ನು ಪ್ರಚೋದಿಸಿದೆ. ಯೆಹೋವನ ಸಹಾಯದಿಂದ, ಈ ಆಸಕ್ತಿಯನ್ನು ಬೆಳೆಸಿಕೊಳ್ಳುವುದರಲ್ಲಿ ನಾವೆಲ್ಲರೂ ಒಟ್ಟಾಗಿ ಮಾಡುತ್ತಿರುವ ಪ್ರಯತ್ನವು, ಇನ್ನೂ ಹೆಚ್ಚಿನ ಕುರಿಸದೃಶ ಜನರನ್ನು ಸಂತೋಷದಿಂದ ಕಂಡುಕೊಳ್ಳುವುದಕ್ಕೆ ಸಹಾಯಮಾಡುವುದು.—ಮತ್ತಾ. 10:11; ಅ. ಕೃ. 13:48, 49, 52.