ದಿನವೆಲ್ಲಾ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರಿ
1 “ಯೆಹೋವನ ಭಯವೇ ಜ್ಞಾನಕ್ಕೆ [“ವಿವೇಕಕ್ಕೆ,” NW] ಮೂಲವು.” (ಕೀರ್ತ. 111:10) ಇದು ಒಳ್ಳೆಯ ಕೆಲಸಗಳನ್ನು ಮಾಡುವಂತೆಯೂ ಕೆಟ್ಟದ್ದನ್ನು ಮಾಡದಿರುವಂತೆಯೂ ನಮ್ಮನ್ನು ಪ್ರೇರೇಪಿಸುತ್ತದೆ. (ಜ್ಞಾನೋ. 16:6) ನಮ್ಮ ಸೃಷ್ಟಿಕರ್ತನಿಗಾಗಿ ಆಳವಾದ ಪೂಜ್ಯಭಾವನೆಯನ್ನು ತೋರಿಸುವ, ಆತನನ್ನು ಅಸಂತೋಷಪಡಿಸುವ ಹಾಗೂ ಅವಿಧೇಯತೆಯನ್ನು ತೋರಿಸುವಂತಹ ವಿಷಯಗಳಿಂದ ದೂರವಿರುವಂತಹ ಭಯವು ಇದಾಗಿದೆ. ಈ ರೀತಿಯ ಭಯವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಮಾತ್ರವಲ್ಲ, ದಿನವೆಲ್ಲಾ ಅದನ್ನು ತೋರಿಸಬೇಕು.—ಜ್ಞಾನೋ. 8:13.
2 ಪ್ರತಿದಿನವೂ ಸೈತಾನನ ಲೋಕವು, ತನ್ನ ಕೆಟ್ಟ ಮಾರ್ಗಗಳಿಗೆ ಅನುಸಾರ ನಡೆಯುವಂತೆ ನಮ್ಮ ಮೇಲೆ ಬಹಳಷ್ಟು ಒತ್ತಡವನ್ನು ಹಾಕುತ್ತದೆ. (ಎಫೆ. 6:11, 12) ನಾವು ಅಪರಿಪೂರ್ಣರಾಗಿದ್ದು, ಪಾಪಿಗಳಾಗಿರುವುದರಿಂದ, ಯಾವುದು ಕೆಟ್ಟದ್ದಾಗಿದೆಯೋ ಅದನ್ನೇ ಮಾಡುವ ಪ್ರವೃತ್ತಿಯುಳ್ಳವರಾಗಿರುವುದು ಸಹಜ. (ಗಲಾ. 5:17) ಆದುದರಿಂದ, ಯೆಹೋವನ ಆಜ್ಞೆಗಳನ್ನು ಕೈಕೊಂಡು ನಡೆಯಲು, ಸಂತೋಷದಿಂದಿರಲು ಮತ್ತು ಜೀವವನ್ನು ಪಡೆದುಕೊಳ್ಳಲು ದಿನವೆಲ್ಲಾ ಆತನಲ್ಲಿ ಭಯಭಕ್ತಿಯುಳ್ಳವರಾಗಿರುವುದು ಅತ್ಯಾವಶ್ಯಕ.—ಧರ್ಮೋ. 10:12, 13.
3 ನಾವು ಜೀವಿಸುತ್ತಿರುವ ಈ ಕಡೇ ದಿವಸಗಳಲ್ಲಿ, ಒಬ್ಬರನ್ನೊಬ್ಬರು “ಮತ್ತಷ್ಟು” ಉತ್ತೇಜಿಸಲಿಕ್ಕಾಗಿ ಒಟ್ಟಾಗಿ ಕೂಡಿಬರಬೇಕೆಂಬ ಬುದ್ಧಿವಾದವು ನಮಗೆ ಇಬ್ರಿಯ 10:24 25ರಲ್ಲಿ ಕೊಡಲ್ಪಟ್ಟಿದೆ. ಈ ಕಡೇ ದಿವಸಗಳಲ್ಲಿ ನಾವು ಬದುಕಿ ಉಳಿಯಬೇಕಾದರೆ ಕ್ರಮವಾಗಿ ಕೂಟಕ್ಕೆ ಹಾಜರಾಗುವುದು ಬಹಳ ಪ್ರಾಮುಖ್ಯ. ದೇವರನ್ನು ಅಸಂತೋಷಪಡಿಸಬಾರದು ಎಂಬ ಭಯವು, ಕೂಟಗಳಿಗೆ ಹಾಜರಾಗಲು ಹಾಗೂ ಅವುಗಳ ಉದ್ದೇಶವನ್ನು ಅತ್ಯಮೂಲ್ಯವೆಂದು ಎಣಿಸಲು ನಮ್ಮನ್ನು ಪ್ರಚೋದಿಸುತ್ತದೆ. ದೇವರಿಗೆ ಭಯಪಡುವವರು ಕ್ರೈಸ್ತ ಕೂಟಗಳಲ್ಲಿ ಭಾಗವಹಿಸುವುದು ಒಂದು ಪವಿತ್ರ ಸುಯೋಗವೆಂದು ನೆನಸುತ್ತಾರೆ.
4 ರಾಜ್ಯದ ಸುವಾರ್ತೆಯನ್ನು ಸಾರಬೇಕು ಎಂಬ ಆಜ್ಞೆಗೆ ವಿಧೇಯರಾಗುವುದು, ದೇವರಿಗೆ ನಾವು ಭಯಪಡುತ್ತೇವೆ ಎಂಬುದನ್ನು ತೋರಿಸುವ ಮತ್ತೊಂದು ವಿಧವಾಗಿದೆ. (ಮತ್ತಾ. 28:19, 20; ಅ. ಕೃ. 10:42) ಸಾರುವ ಕೆಲಸದ ನಮ್ಮ ಮುಖ್ಯ ಗುರಿಯು, ಇತರರು ಸಹ ಯೆಹೋವನಿಗೆ ಭಯಭಕ್ತಿಯುಳ್ಳವರಾಗಿ, ಆತನ ಚಿತ್ತಕ್ಕೆ ತಮ್ಮನ್ನು ಅಧೀನಪಡಿಸಿಕೊಳ್ಳುವಂತೆ ಸಹಾಯಮಾಡುವುದೇ ಆಗಿದೆ. ಇದನ್ನು ನಾವು ಪುನರ್ಭೇಟಿಗಳನ್ನು ಮಾಡುವ ಮೂಲಕ, ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಲು ಪ್ರಯತ್ನಿಸುವ ಹಾಗೂ ದೇವರ ಎಲ್ಲ ಆಜ್ಞೆಗಳನ್ನು ಇತರರಿಗೆ ಕಲಿಸುವ ಮೂಲಕ ಮಾಡುತ್ತೇವೆ. ಹೀಗೆ ದೇವರಿಗಾಗಿರುವ ಭಯಭಕ್ತಿ ಹಾಗೂ ನೆರೆಯವರಿಗಾಗಿರುವ ಪ್ರೀತಿಯನ್ನು ನಾವು ತೋರಿಸುತ್ತೇವೆ.—ಮತ್ತಾ. 22:37-39.
5 ದೇವರಿಗೆ ಭಯಪಡದವರು ಆತ್ಮಿಕ ವಿಷಯಗಳ ಕಡೆಗೆ ಗಣ್ಯತೆಯ ಮನೋಭಾವವನ್ನು ಬೆಳೆಸಿಕೊಳ್ಳಲು ತಪ್ಪಿಹೋಗುತ್ತಾರೆ ಮಾತ್ರವಲ್ಲ, ಈ ಲೋಕದ ವಿಷಕರವಾದ ವಾಯು ಅಥವಾ ಮನೋಭಾವಕ್ಕೆ ಬಲಿಯಾಗುತ್ತಾರೆ. (ಎಫೆ. 2:2) “ದೈವಿಕ ಭಯಭಕ್ತಿಯಿಂದ ದೇವರಿಗೆ ಪವಿತ್ರ ಸೇವೆಯನ್ನು” (NW) ಮಾಡಲು ನಾವು ದೃಢನಿರ್ಧಾರವನ್ನು ಮಾಡೋಣ. (ಇಬ್ರಿ. 12:28) ಹೀಗೆ ನಾವು ದಿನವೆಲ್ಲಾ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರುವಾಗ ದೇವರ ಆಶೀರ್ವಾದವು ನಮ್ಮ ಮೇಲಿರುವುದು.