ಬೈಬಲ್—ನಿಮ್ಮ ಜೀವಿತದಲ್ಲಿ ಅದರ ಪ್ರಭಾವ ಎಂಬ ವಿಡಿಯೊದ ಕುರಿತಾದ ಅಭಿಪ್ರಾಯಗಳು
ಮುಂದಿನ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ, ಈ ವಿಡಿಯೊದಲ್ಲಿ ಅಡಕವಾಗಿದ್ದ ಸಂದೇಶದ ಕುರಿತಾದ ನಿಮ್ಮ ಹೃತ್ಪೂರ್ವಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರಿ. (1ಎ) ಲಕ್ಷಾಂತರ ಮಂದಿ ತಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳುವಂತೆ ಯಾವುದು ಅವರನ್ನು ಶಕ್ತಗೊಳಿಸಿದೆ? (ಇಬ್ರಿ. 4:12) (1ಬಿ) ಬೈಬಲಿನ ಈ ಪ್ರಭಾವವನ್ನು ಪಡೆದುಕೊಳ್ಳಲು ಮತ್ತು ಅದನ್ನು ಒಬ್ಬನ ಜೀವಿತದಲ್ಲಿ ಕಾರ್ಯರೂಪಕ್ಕೆ ತರಲು ಯಾವುದು ಆವಶ್ಯಕವಾಗಿದೆ? (2) ವಿವಾಹ ಸಂಗಾತಿಗಳು (ಎ) ತಮ್ಮ ಸಂವಾದವನ್ನು ಉತ್ತಮಗೊಳಿಸಲು ಮತ್ತು (ಬಿ) ತಮ್ಮ ಕೋಪವನ್ನು ಹತೋಟಿಯಲ್ಲಿಡುವಂತೆ ಸಹಾಯಮಾಡಲು, ಬೈಬಲಿನ ಯಾವ ವಚನಗಳು ಉಲ್ಲೇಖಿಸಲ್ಪಟ್ಟಿದ್ದವು? (3) ವಿವಾಹದ ಕುರಿತ ಕ್ರಿಸ್ತೀಯ ದೃಷ್ಟಿಕೋನವು ಕುಟುಂಬ ಜೀವನವನ್ನು ಹೇಗೆ ಉತ್ತಮಗೊಳಿಸುತ್ತದೆ? (ಎಫೆ. 5:28, 29) (4) ಮಕ್ಕಳೆಲ್ಲರಿಗೂ ಅಗತ್ಯವಿರುವ ಹಾಗೂ ಅವರು ಬಯಸುವ ಮೂರು ವಿಷಯಗಳನ್ನು ಕೊಡುವುದರಲ್ಲಿ ಯೆಹೋವನು ಹೇಗೆ ಪರಿಪೂರ್ಣ ಮಾದರಿಯನ್ನು ಇಟ್ಟಿದ್ದಾನೆ ಮತ್ತು ಇಂದು ಹೆತ್ತವರು ತದ್ರೀತಿಯಲ್ಲಿ ಹೇಗೆ ಅದನ್ನು ಮಾಡಬಹುದು? (ಮಾರ್ಕ 1:9-11) (5) ವ್ಯಕ್ತಿಗತವಾಗಿ ಹೆತ್ತವರು ತಮ್ಮ ಮಕ್ಕಳಿಗೆ ಏಕೆ ಬೈಬಲಿನ ಬಗ್ಗೆ ಕಲಿಸಬೇಕು, ಮತ್ತು ಅದನ್ನು ಕ್ರಮಬದ್ಧವಾಗಿ ಮಾಡುವುದರ ಅಗತ್ಯವನ್ನು ಯಾವುದು ಸೂಚಿಸುತ್ತದೆ? (ಧರ್ಮೋ. 6:6, 7) (6) ಹೆತ್ತವರು ಕುಟುಂಬ ಅಭ್ಯಾಸವನ್ನು ಹೇಗೆ ಹೆಚ್ಚು ಆಸಕ್ತಿಕರವಾಗಿ ಮಾಡಸಾಧ್ಯವಿದೆ? (7) ಬೈಬಲ್ ಅಭ್ಯಾಸವಲ್ಲದೆ ಹೆತ್ತವರು ತಮ್ಮ ಮಕ್ಕಳಿಗೆ ಬೇರೆ ಯಾವುದನ್ನು ಸಹ ಒದಗಿಸುವಂತೆ ದೇವರ ವಾಕ್ಯವು ಪ್ರಚೋದಿಸುತ್ತದೆ? (8) ಕುಟುಂಬಗಳು ದುಂದುವೆಚ್ಚಮಾಡದೇ ಜೀವಿಸುವಂತೆ ಬೈಬಲಿನ ಬುದ್ಧಿವಾದವು ಹೇಗೆ ಸಹಾಯಮಾಡಸಾಧ್ಯವಿದೆ? (9) ಬೈಬಲಿನ ಯಾವ ಶಾಸ್ತ್ರೀಯ ಮೂಲತತ್ವಗಳನ್ನು ಅನ್ವಯಿಸುವಲ್ಲಿ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವವು? (10) ದೇವರ ವಾಕ್ಯದಲ್ಲಿರುವ ಮೂಲತತ್ವಗಳು ನಿಮ್ಮ ಸ್ವಂತ ಜೀವಿತದಲ್ಲಿ ಯಾವ ಬದಲಾವಣೆಗಳನ್ನು ಉಂಟುಮಾಡಿವೆ? (11) ಕ್ಷೇತ್ರ ಸೇವೆಯಲ್ಲಿ ನೀವು ಭೇಟಿಮಾಡಿದ ವ್ಯಕ್ತಿಯು ಈ ವಿಡಿಯೊವನ್ನು ನೋಡುವುದರಿಂದ ಬೈಬಲ್ ಅಭ್ಯಾಸವನ್ನು ಸ್ವೀಕರಿಸುವಂತೆ ಏಕೆ ಪ್ರೋತ್ಸಾಹಿಸಲ್ಪಡಬಹುದು?