ಚಂದಾ ನವೀಕರಣದ ಸರಳೀಕೃತ ಏರ್ಪಾಡು
ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಚಂದಾದಾರರು, ತಮ್ಮ ಚಂದಾಗಳು ಮುಗಿದುಹೋಗುವುದಕ್ಕೆ ಮೊದಲು ಎರಡು ರೀತಿಯ ನೋಟೀಸ್ಗಳನ್ನು ಪಡೆದುಕೊಳ್ಳುತ್ತಿದ್ದರು. ಮೊದಲನೆಯದ್ದು, ಸಭೆಯ ಮೂಲಕ ಚಂದಾದಾರರಿಗೆ ತಲಪಿಸಲ್ಪಡುವ ಚಂದಾ ಮುಗಿಯುತ್ತಿದೆ ಎಂಬ ಮುದ್ರಿತ ಸ್ಲಿಪ್ ಆಗಿದೆ. ಒಂದು ಚಂದಾವನ್ನು ನವೀಕರಿಸಲಿಕ್ಕಾಗಿ ಈ ಫಾರ್ಮನ್ನು ಉಪಯೋಗಿಸುವಂತೆ ಶಿಫಾರಸ್ಸು ಮಾಡಲಾಗುತ್ತದೆ.
ಎರಡನೆಯ ನೋಟೀಸ್, ಪತ್ರಿಕೆಯ ಜೊತೆಗೇ ಸೇರಿಸಿ ನೇರವಾಗಿ ಚಂದಾದಾರನಿಗೆ ಅಂಚೆಯ ಮೂಲಕ ಕಳುಹಿಸಲ್ಪಡುವ ಚಂದಾ ನವೀಕರಣ ಫಾರ್ಮ್ ಆಗಿದೆ. ಸಾಹಿತ್ಯ ವಿತರಣೆಯ ಸರಳೀಕೃತ ಏರ್ಪಾಡು ಜಾರಿಗೆ ಬಂದಂದಿನಿಂದ ಈ ನೋಟೀಸ್ ಕಳುಹಿಸುವುದನ್ನು ನಿಲ್ಲಿಸಲಾಯಿತು. ಆದರೂ, ಬ್ರೇಲ್ ಲೇಬಲ್ಗಳನ್ನು ಪಡೆದುಕೊಳ್ಳುವ ಚಂದಾದಾರರಿಗೆ, ಈ ನವೀಕರಣ ನೋಟೀಸ್ಗಳನ್ನು ಅಂಚೆಯ ಮೂಲಕ ಕಳುಹಿಸುವುದನ್ನು ಮುಂದುವರಿಸಲಾಗುತ್ತದೆ.
ಪ್ರಚಾರಕರು ಹಾಗೂ ಪಯನೀಯರರು, ವೈಯಕ್ತಿಕ ಚಂದಾಗಳಿಗಾಗಿ ವಿನಂತಿಯನ್ನು ಮಾಡುವ ಬದಲು, ಈ ಪತ್ರಿಕೆಗಳ ವೈಯಕ್ತಿಕ ಪ್ರತಿಗಳನ್ನು ರಾಜ್ಯ ಸಭಾಗೃಹದಲ್ಲಿ ಸಭೆಯ ಸರಬರಾಯಿಯಿಂದಲೇ ಪಡೆದುಕೊಳ್ಳುವಂತೆ ಅವರನ್ನು ಉತ್ತೇಜಿಸಲಾಗಿದೆ. ಇದರಿಂದ ಸೊಸೈಟಿಗೆ ಕೆಲಸ ಹಾಗೂ ವೆಚ್ಚವು ಕಡಿಮೆಯಾಗುತ್ತದೆ.—ಅಕ್ಟೋಬರ್ 15, 1999ರ, ಭಾರತದಲ್ಲಿರುವ ಎಲ್ಲ ಸಭೆಗಳಿಗೆ ಎಂಬ ಪತ್ರದ 2ನೆಯ ಪುಟದಲ್ಲಿರುವ “ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಮಾಡಲ್ಪಡುವ ಚಂದಾಗಳ ಕುರಿತಾಗಿ ಏನು?” ಎಂಬ ಮೇಲ್ಬರಹದ ಕೆಳಗಿರುವ ವಿಷಯವನ್ನು ನೋಡಿರಿ.
ಕ್ಷೇತ್ರದಿಂದ ಪಡೆದುಕೊಂಡ ಚಂದಾಗಳಿಗೆ ನೋಟೀಸ್ ನೀಡುವ ಮೂಲ ವಿಧಾನವು, ಚಂದಾ ಮುಗಿಯುತ್ತಿದೆ ಎಂಬ ಮುದ್ರಿತ ಸ್ಲಿಪ್ ಆಗಿದ್ದು, ಇದು ಸಭೆಯ ಮೂಲಕ ಅವರ ಕೈಸೇರುತ್ತದೆ. ಈ ಫಾರ್ಮ್ಗಳು ಸಭೆಗೆ ತಲಪಿದ ನಂತರ, ಮೂಲತಃ ಯಾರು ಈ ಚಂದಾಗಳನ್ನು ಪಡೆದುಕೊಂಡಿದ್ದರೋ ಆ ಪ್ರಚಾರಕರಿಗೆ ಆದಷ್ಟು ಬೇಗನೆ ಇವುಗಳನ್ನು ಕೊಡಲು ಪ್ರಯತ್ನಿಸಬೇಕು. ಈಗ, ಪತ್ರಿಕೆಯ ಜೊತೆಗೇ ಸೇರಿಸಿ ನೇರವಾಗಿ ಚಂದಾದಾರರಿಗೆ ಅಂಚೆಯ ಮೂಲಕ ಈ ನವೀಕರಣ ಫಾರ್ಮ್ ಕಳುಹಿಸಲ್ಪಡದ ಕಾರಣ, ಈ ಆಸಕ್ತ ಜನರನ್ನು ತಪ್ಪದೇ ಪುನಃ ಭೇಟಿಮಾಡುವುದು ಅತ್ಯಗತ್ಯವಾಗಿದೆ. ಆ ವ್ಯಕ್ತಿಗೆ ನಮ್ಮ ಪತ್ರಿಕೆಗಳಲ್ಲಿ ನಿಜವಾದ ಆಸಕ್ತಿಯಿದೆಯೋ ಮತ್ತು ಒಂದುವೇಳೆ ಪತ್ರಿಕೆಯನ್ನು ಕಳುಹಿಸುವುದನ್ನು ಮುಂದುವರಿಸಿದರೆ ಅವನು ಪ್ರಯೋಜನವನ್ನು ಪಡೆದುಕೊಳ್ಳುವನೋ ಎಂಬುದನ್ನು ನಿರ್ಧರಿಸಲು ನಾವು ಪ್ರಯತ್ನಿಸಬೇಕು. ಒಂದುವೇಳೆ ಚಂದಾದಾರನು ಪತ್ರಿಕೆಗಳನ್ನು ಪಡೆದುಕೊಳ್ಳಲು ಇಷ್ಟಪಡುವಲ್ಲಿ, ಚಂದಾಗಳನ್ನು ಕಳುಹಿಸುವ ಅಂಚೆ ವೆಚ್ಚಗಳನ್ನು ಉಳಿತಾಯಮಾಡುವುದರಲ್ಲಿ ಸಹಾಯಮಾಡಲಿಕ್ಕಾಗಿ ನಾವು ಆ ವ್ಯಕ್ತಿಯನ್ನು ನಮ್ಮ ಪತ್ರಿಕಾ ಮಾರ್ಗದಲ್ಲಿ ಒಳಗೂಡಿಸಬಹುದು. ಹೀಗೆ, ಚಂದಾವನ್ನು ನವೀಕರಿಸುವುದಕ್ಕೆ ಬದಲಾಗಿ, ಪ್ರತಿಯೊಂದು ಸಂಚಿಕೆಯನ್ನು ವೈಯಕ್ತಿಕವಾಗಿ ಆ ವ್ಯಕ್ತಿಗೆ ತಲಪಿಸುವ ಮೂಲಕ ಅವನ ಆಸಕ್ತಿಯನ್ನು ಬೆಳೆಸಿರಿ. ಆದರೆ ಪತ್ರಿಕೆಗಳನ್ನು ಈ ರೀತಿ ತಲಪಿಸುವುದು ಅಷ್ಟೊಂದು ಪ್ರಾಯೋಗಿಕವಾದದ್ದಲ್ಲ ಎಂದು ನಮಗನಿಸುವಲ್ಲಿ, ಚಂದಾವನ್ನು ನವೀಕರಿಸಲು ನಾವು ನಿರ್ಧರಿಸಬಹುದು. ಚಂದಾವನ್ನು ನವೀಕರಿಸುವಾಗ, ಚಂದಾ ಮುಗಿಯುತ್ತಿದೆ ಎಂಬ ಮುದ್ರಿತ ಸ್ಲಿಪ್ಪನ್ನೇ ಹಿಂದೆ ಕಳುಹಿಸುವುದು ಹೆಚ್ಚು ಸೂಕ್ತವಾದದ್ದಾಗಿದೆ. ಇದರಿಂದ ನವೀಕರಣದ ಕೆಲಸವು ಬೇಗನೆ ಮಾಡಲ್ಪಡುತ್ತದೆ. ನವೀಕರಿಸಲ್ಪಟ್ಟ ಚಂದಾಗಳನ್ನು ಯಾವಾಗಲೂ ಸಭೆಯ ಮೂಲಕವೇ ಕಳುಹಿಸತಕ್ಕದ್ದು.—ನವೆಂಬರ್ 1988ರ ನಮ್ಮ ರಾಜ್ಯದ ಸೇವೆಯ (ಇಂಗ್ಲಿಷ್) 4ನೆಯ ಪುಟ ಹಾಗೂ ಫೆಬ್ರವರಿ 1986ರ 4ನೆಯ ಪುಟವನ್ನು ನೋಡಿರಿ.
ತಲಪಲು ಕಷ್ಟಕರವಾಗಿರುವ ಕ್ಷೇತ್ರಗಳಲ್ಲಿ ಅಥವಾ ಬಹು ದೂರದ ಟೆರಿಟೊರಿಗಳಲ್ಲಿ ವಾಸಿಸುತ್ತಿರುವ ಚಂದಾದಾರರಿಗೆ, ಚಂದಾ ಮುಗಿಯುತ್ತಿದೆ ಎಂಬ ಮುದ್ರಿತ ಸ್ಲಿಪ್ಪನ್ನು ಸಭೆಯು ಅಂಚೆಯ ಮೂಲಕ ಕಳುಹಿಸಸಾಧ್ಯವಿದೆ.
ಅಂಧಕಾರ ತುಂಬಿರುವ ಲೋಕದಲ್ಲಿ ಈ ಸಮಯೋಚಿತ ಪತ್ರಿಕೆಗಳು ಆತ್ಮಿಕ ಬೆಳಕನ್ನು ಪ್ರಕಾಶಿಸುತ್ತವೆ. ಎಲ್ಲ ಚಂದಾದಾರರು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಒಂದು ಪ್ರತಿಯನ್ನೂ ಕಳೆದುಕೊಳ್ಳದಿರುವಂತೆ, ಈ ಹೊಸ ಏರ್ಪಾಡಿಗೆ ಅನುಸಾರವಾಗಿ ಎಲ್ಲರೂ ಕಾರ್ಯನಡಿಸುವರು ಎಂಬ ಖಾತ್ರಿ ನಮಗಿದೆ.