“ದೇವರ ವಾಕ್ಯದ ಬೋಧಕರು” ಜಿಲ್ಲಾ ಅಧಿವೇಶನದಲ್ಲಿ ನೀವೇನನ್ನು ಕಲಿತುಕೊಂಡಿರೋ ಅದನ್ನು ಅನ್ವಯಿಸಿಕೊಳ್ಳುತ್ತಿದ್ದೀರೋ?
1 ಕಳೆದ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಿದ್ದ ಎಲ್ಲರಿಗೂ, ಯೆಹೋವನ ಜನರು ದೇವರ ವಾಕ್ಯದ ಬೋಧಕರಾಗಿರುವ ತಮ್ಮ ನೇಮಕವನ್ನು ಪೂರೈಸುವುದಕ್ಕೆ ಪೂರ್ಣ ಗಮನ ಕೊಡುತ್ತಿದ್ದಾರೆ ಎಂಬುದನ್ನು ನೋಡಲು ಸಾಧ್ಯವಾಯಿತು. (ಮತ್ತಾ. 28:19, 20) ನೀವು ಮನೆಗೆ ಹಿಂದಿರುಗುತ್ತಿದ್ದಾಗ, ಉಪದೇಶಿಸಲ್ಪಟ್ಟ ಯಾವ ಮುಖ್ಯ ಅಂಶಗಳನ್ನು ನೀವು ನಿಮ್ಮ ಸ್ವಂತ ಜೀವನದಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ಅನ್ವಯಿಸಿಕೊಳ್ಳುವ ದೃಢತೀರ್ಮಾನ ಮಾಡಿದಿರಿ?
2 ಪ್ರೇರಿತ ಶಾಸ್ತ್ರಗಳು ಉಪದೇಶಕ್ಕೆ ಉಪಯುಕ್ತವಾಗಿವೆ: ಮೊದಲ ದಿನದ ಮುಖ್ಯ ವಿಷಯವು 2 ತಿಮೊಥೆಯ 3:16ನ್ನು ಎತ್ತಿತೋರಿಸಿತು. ನಾವು “ದೇವರ ವಾಕ್ಯದ ಬೋಧಕರೋಪಾದಿ ಪೂರ್ಣ ರೀತಿಯಲ್ಲಿ ಸನ್ನದ್ಧ”ರಾಗಿರಬೇಕಾದರೆ, ದೇವರ ವಾಕ್ಯವನ್ನು ಹೆಚ್ಚಾಗಿ ಮಾನ್ಯ ಮಾಡಬೇಕು, ಅದನ್ನು ಯಾವುದೇ ಮಾನವಕಲ್ಪಿತ ಅಭಿಪ್ರಾಯ ಅಥವಾ ಸಂಪ್ರದಾಯಕ್ಕಿಂತ ಹೆಚ್ಚಾಗಿ ಗೌರವಿಸಬೇಕು ಮತ್ತು ಸದಾ ಉಪಯೋಗಿಸಬೇಕು ಎಂಬುದನ್ನು ಮುಖ್ಯ ಭಾಷಣವು ತೋರಿಸಿತು. ನಮ್ಮ ಶುಶ್ರೂಷೆಯಲ್ಲಿ ನಮಗೆ ಸಹಾಯಮಾಡುವಂತೆ ನಾವು ದೇವರ ಪವಿತ್ರಾತ್ಮಕ್ಕಾಗಿ ಪ್ರತಿನಿತ್ಯ ಪ್ರಾರ್ಥಿಸಬೇಕು ಮತ್ತು ಅದರ ಪ್ರಪ್ರಥಮ ಫಲವಾದ ಪ್ರೀತಿಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಮತ್ತು ಯೆಹೋವನ ಭೂಸಂಸ್ಥೆಯು ಎಲ್ಲಾ ಸಭಾ ಕೂಟಗಳ ಮೂಲಕ ನಮ್ಮನ್ನು ಶುಶ್ರೂಷಕರನ್ನಾಗಿ ತರಬೇತಿಗೊಳಿಸುವಂತೆ ನಾವು ಅನುಮತಿಸಬೇಕು.
3 “ಬೇರೆಯವರಿಗೆ ಬೋಧಿಸುವಾಗ ಸ್ವತಃ ಬೋಧಿಸಿಕೊಳ್ಳುವುದು” ಎಂಬ ಮುಖ್ಯ ವಿಷಯವಿದ್ದ ಮೊದಲನೇ ದಿನದ ಭಾಷಣಮಾಲೆಯು, ನಾವು (1) ಕ್ರೈಸ್ತ ನೈತಿಕತೆಯ ಎಲ್ಲ ವೈಶಿಷ್ಟ್ಯಗಳಲ್ಲಿ ದೇವರ ನಿಯಮಗಳಿಗೆ ವಿಧೇಯರಾಗುವ, (2) ಕ್ರಮವಾದ ಅಭ್ಯಾಸದ ರೂಢಿಗಳನ್ನು ಇಟ್ಟುಕೊಳ್ಳುವ, ಮತ್ತು (3) ಪಿಶಾಚನು ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳಸಾಧ್ಯವಿರುವ ಹೃದಮನಗಳ ಮನೋಭಾವಗಳು ಮತ್ತು ಪರಿಸ್ಥಿತಿಗಳನ್ನು ತೆಗೆದುಹಾಕುವುದರಲ್ಲಿ ಮಾದರಿಗಳಾಗಿರಬೇಕು ಎಂಬುದನ್ನು ವಿವರಿಸಿತು. ನಂತರ, ಅಶ್ಲೀಲ ವಿಷಯವೆಂಬ ಲೌಕಿಕ ಪಿಡುಗಿನಿಂದ ನಮ್ಮ ಕುಟುಂಬಗಳನ್ನು ಸಂರಕ್ಷಿಸಬಹುದಾದ ಪ್ರಾಯೋಗಿಕ ವಿಧಗಳ ಕುರಿತು ನಾವು ಕಲಿತುಕೊಂಡೆವು. ಹೆತ್ತವರು ಒಂದು ಅನೈತಿಕ ದೃಶ್ಯದ ಕ್ಷಣಿಕ ನೋಟವನ್ನು ಕೂಡ ತ್ಯಜಿಸುವುದರಲ್ಲಿ ಮಾದರಿಯನ್ನು ಇಡುವಂತೆ ಮತ್ತು ತಮ್ಮ ಮಕ್ಕಳ ಇಂಟರ್ನೆಟ್ ಉಪಯೋಗ ಹಾಗೂ ಟಿವಿ ವೀಕ್ಷಣೆಯ ಮೇಲೆ ನಿಗಾ ಇಡುವಂತೆ ಪ್ರೋತ್ಸಾಹಿಸಲ್ಪಟ್ಟರು. ಶುಕ್ರವಾರದ ಕಾರ್ಯಕ್ರಮದಿಂದ ಯಾವ ಅಂಶಗಳನ್ನು ನೀವು ಅನ್ವಯಿಸಿಕೊಳ್ಳಲು ಆರಂಭಿಸಿದ್ದೀರಿ?
4 ಆ ದಿನದ ಕೊನೆಯ ಭಾಷಣವು, ಯೆಹೋವನ ಬೆಳಕನ್ನು ಗಣ್ಯಮಾಡಬೇಕು, ದೇವರ ನಂಬಿಗಸ್ತ ಅಭಿಷಿಕ್ತ ವರ್ಗದೊಂದಿಗೆ ನಿಕಟವಾಗಿ ಉಳಿಯಬೇಕು, ಮತ್ತು ಯೆಹೋವನ ಜನರ ಸಮಾಧಾನಕ್ಕೆ ಹೆಚ್ಚನ್ನು ಕೂಡಿಸಬೇಕು ಎಂಬ ನಮ್ಮ ದೃಢತೀರ್ಮಾನವನ್ನು ಇನ್ನಷ್ಟು ಬಲಪಡಿಸಿತು. ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II ಎಂಬ ಹೊಸದಾಗಿ ಬಿಡುಗಡೆಯಾದ ಪುಸ್ತಕವನ್ನು ನೀವು ಓದಿದ್ದೀರೋ?
5 ಇತರರಿಗೆ ಬೋಧಿಸಲು ಸಮರ್ಪಕವಾಗಿ ಅರ್ಹರಾಗಿರುವುದು: ಎರಡನೆಯ ದಿನದ ಮುಖ್ಯ ವಚನವು 2 ತಿಮೊಥೆಯ 2:2 ಆಗಿತ್ತು. ಬೆಳಗ್ಗಿನ ಭಾಷಣಮಾಲೆಗೆ ನೀವು ಕಿವಿಕೊಟ್ಟಾಗ, (1) ಯೋಗ್ಯ ವ್ಯಕ್ತಿಗಳನ್ನು ಹೇಗೆ ಹುಡುಕುವುದು, (2) ಅವರ ಆಸಕ್ತಿಯನ್ನು ಹೇಗೆ ಬೆಳೆಸುವುದು, ಮತ್ತು (3) ಯೇಸು ಆಜ್ಞಾಪಿಸಿದ್ದೆಲ್ಲವನ್ನೂ ಪಾಲಿಸುವಂತೆ ಅವರಿಗೆ ಹೇಗೆ ಬೋಧಿಸುವುದು ಎಂಬುದರ ಕುರಿತಾದ ಸಲಹೆಗಳನ್ನು ನೀವು ಗಮನಿಸಿದಿರೋ? ನೀವು ಕಲಿತಂಥ ವಿಷಯಗಳನ್ನು, ಅಂದರೆ ಮನೆಯವರಿಗೆ ಕಡಿಮೆಪಕ್ಷ ಒಂದು ಮುಖ್ಯ ಅಂಶವನ್ನು ಶಾಸ್ತ್ರವಚನಗಳಿಂದ ತೋರಿಸಬೇಕು ಮತ್ತು ಮುಂದಿನ ಭೇಟಿಗಾಗಿ ತಳಪಾಯವನ್ನು ಹಾಕಬೇಕು ಎಂಬ ಸಲಹೆಗಳನ್ನು ಅನ್ವಯಿಸಿಕೊಳ್ಳುತ್ತಿದ್ದೀರೋ?
6 ಮಧ್ಯಾಹ್ನದ ಕಾರ್ಯಕ್ರಮವು, ಮಹಾನ್ ಬೋಧಕನಾದ ಯೇಸುವನ್ನು ಅನುಕರಿಸುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳಿತು. ನೀವು ಅವನಂತೆಯೇ ಇರಲು ಯಾವ ರೀತಿಗಳಲ್ಲಿ ಪ್ರಯತ್ನಿಸುತ್ತಿದ್ದೀರಿ? ಆ ದಿನದ ಎರಡನೆಯ ಭಾಷಣಮಾಲೆಯಿಂದ ನೀವೇನನ್ನು ಕಲಿತುಕೊಂಡಿರೋ ಅದರಿಂದ, ನೀವು ಹೇಗೆ ‘ದೇವಪ್ರಭುತ್ವ ಶಿಕ್ಷಣದಿಂದ ಪೂರ್ಣವಾಗಿ ಪ್ರಯೋಜನವನ್ನು ಪಡೆಯಬಹುದು’ ಎಂದು ನಿಮಗನಿಸುತ್ತದೆ? ವೈಯಕ್ತಿಕ ಅಧ್ಯಯನ ಮತ್ತು ಸಭಾ ಕೂಟಗಳ ಸಮಯದಲ್ಲಿ ನಿಮ್ಮ ಗಮನಾವಧಿಯನ್ನು ಹೆಚ್ಚಿಸಲಿಕ್ಕಾಗಿ ನೀವು ಯಾವ ಸಲಹೆಗಳನ್ನು ಅನ್ವಯಿಸಿಕೊಳ್ಳುತ್ತಿದ್ದೀರಿ?
7 ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯುವುದು ಎಂಬ ಮುಂಬರಲಿರುವ ಪುಸ್ತಕವು, ದೇವರ ವಾಕ್ಯದ ಭಾಷಣಕರ್ತರಾಗಿ ಮತ್ತು ಬೋಧಕರಾಗಿ ನಮ್ಮ ಕೌಶಲಗಳಲ್ಲಿ ನಾವು ಅಭಿವೃದ್ಧಿಮಾಡುವಂತೆ ನಮಗೆ ಸಹಾಯಮಾಡುವುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಬೈಬಲ್ ಕಾಲಗಳಲ್ಲಿ ದೇವರ ನಂಬಿಗಸ್ತ ಸೇವಕರ ವೈಶಿಷ್ಟ್ಯವಾಗಿದ್ದ ವಾಕ್ಶಕ್ತಿಯ ಗುಣಲಕ್ಷಣಗಳ ಮೇಲೆ ಹೆಚ್ಚಿನ ಗಮನವು ಕೊಡಲ್ಪಡುವುದು. ಹೊಸ ಪಠ್ಯಪುಸ್ತಕದಲ್ಲಿರುವ ಪ್ರತಿಯೊಂದು ಪಾಠದಲ್ಲಿ ನಾವು ಏನು ಮಾಡಬೇಕು, ಅದು ಏಕೆ ಪ್ರಾಮುಖ್ಯವಾಗಿದೆ, ಮತ್ತು ಅದನ್ನು ಹೇಗೆ ಮಾಡುವುದು ಎಂಬುದನ್ನು ಸಂಕ್ಷಿಪ್ತವಾಗಿ ತೋರಿಸುವ ರೇಖಾಚೌಕಗಳಿವೆ. ಪ್ರಾಯೋಗಿಕ ಅಭ್ಯಾಸಪಾಠಗಳು ಒಳಸೇರಿಸಲ್ಪಟ್ಟಿವೆ. ಸಹೋದರಿಯರು ತಮ್ಮ ನೇಮಕಗಳನ್ನು ಪ್ರಸ್ತುತಪಡಿಸುವಾಗ ಆರಿಸಿಕೊಳ್ಳಲಿಕ್ಕಾಗಿ 29 ಹಿನ್ನೆಲೆಗಳು ಕೊಡಲ್ಪಟ್ಟಿವೆ. ಸಕಾಲದಲ್ಲಿ, ಶಾಲೆಯ ಕ್ರಮವ್ಯವಸ್ಥೆಯಲ್ಲಿ, ಪ್ರಕಟಿಸಲಾಗಿರುವ ಬದಲಾವಣೆಗಳು ಮಾಡಲ್ಪಡುವವು. ಪ್ರತಿ ವಾರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಿಂದ ಸಂಪೂರ್ಣವಾಗಿ ಪ್ರಯೋಜನ ಪಡೆಯಲಿಕ್ಕಾಗಿ ನಿಮಗೆ ಒಳ್ಳೆಯ ಅಧ್ಯಯನಮಾಡುವ ಮತ್ತು ತಯಾರಿಮಾಡುವ ರೂಢಿಗಳಿವೆಯೋ?
8 ಕಾಲವನ್ನು ನೋಡಿ ಬೋಧಕರಾಗಿರಿ: ಇಬ್ರಿಯ 5:12, ಅಧಿವೇಶನದ ಕೊನೆಯ ದಿನಕ್ಕಾಗಿ ಸಭಿಕರ ಮನಸ್ಸನ್ನು ಸಿದ್ಧಪಡಿಸಿತು. “ಮಲಾಕಿಯನ ಪ್ರವಾದನೆ ಯೆಹೋವನ ದಿನಕ್ಕಾಗಿ ನಮ್ಮನ್ನು ಸಿದ್ಧಗೊಳಿಸುತ್ತದೆ” ಎಂಬ ಬೆಳಗ್ಗಿನ ಭಾಷಣಮಾಲೆಯು, ಯೆಹೋವನ ಮಹಾ ಮತ್ತು ಭಯಚಕಿತಗೊಳಿಸುವಂಥ ದಿನವನ್ನು ನಾವು ಪಾರಾಗಬೇಕಾದರೆ, ಆತನಿಗೆ ನಮ್ಮ ಅತ್ಯುತ್ತಮವಾದದ್ದನ್ನು ಕೊಡುವಂತೆಯೂ ಎಲ್ಲ ರೀತಿಯ ಮೋಸಗಾರಿಕೆಯನ್ನು ಹೇಸುವಂತೆಯೂ ಉತ್ತೇಜಿಸಿತು. “ಯೆಹೋವನ ಅಧಿಕಾರವನ್ನು ಗೌರವಿಸಿರಿ” ಎಂಬ ಡ್ರಾಮಾ, ಪುರಾತನ ಕಾಲದ ಕೋರಹ ಮತ್ತು ಅವನ ಸಂಗಡಿಗರ ಹೆಮ್ಮೆ, ಸ್ಥಾನಮಾನಕ್ಕಾಗಿ ಅತ್ಯಾಸೆ, ಹೊಟ್ಟೆಕಿಚ್ಚು ಮತ್ತು ತಪ್ಪಾದ ನಿಷ್ಠೆಯು, ಹೇಗೆ ಯೆಹೋವನ ವಿರುದ್ಧವಾಗಿಯೇ ನೇರವಾದ ದಂಗೆಯ ಕೃತ್ಯಗಳಿಗೆ ನಡೆಸಿತು ಎಂಬುದನ್ನು ಬಲವರ್ಧಕವಾಗಿ ತೋರಿಸಿತು. ಅದರ ನಂತರ ಕೊಡಲ್ಪಟ್ಟ ಭಾಷಣವು, ಆಧುನಿಕ ಕಾಲದಲ್ಲಿ ಕುಟುಂಬದಲ್ಲಿ ಮತ್ತು ಸಭೆಯಲ್ಲಿ ದೈವಿಕ ಅಧಿಕಾರಕ್ಕೆ ಅಧೀನರಾಗಬೇಕಾದ ಅಗತ್ಯದ ಮೇಲೆ ಕೇಂದ್ರೀಕರಿಸಿತು. “ಎಲ್ಲಾ ಜನಾಂಗಗಳಿಗೆ ಸತ್ಯವನ್ನು ಯಾರು ಬೋಧಿಸುತ್ತಿದ್ದಾರೆ?” ಎಂಬ ಬಹಿರಂಗ ಭಾಷಣವು, ಬೈಬಲ್ ಸತ್ಯವನ್ನು ಬೋಧಿಸುತ್ತೇವೆ ಎಂದು ಕೇವಲ ಹೇಳಿಕೊಳ್ಳುವ ಕ್ರೈಸ್ತಪ್ರಪಂಚಕ್ಕೆ ವ್ಯತಿರಿಕ್ತವಾಗಿ ಯೆಹೋವನ ಸಾಕ್ಷಿಗಳು ಎಲ್ಲಾ ಜನಾಂಗಗಳಲ್ಲಿ ಸತ್ಯವನ್ನು ಬೋಧಿಸುತ್ತಿದ್ದಾರೆ ಎಂಬುದನ್ನು ತೋರಿಸಿತು.
9 ಸ್ಪಷ್ಟವಾಗಿಯೇ, ನಾವು ಆತನ ವಾಕ್ಯದ ಉತ್ತಮ ಬೋಧಕರಾಗಿರಲು ಯೆಹೋವನು ತರಬೇತಿಯನ್ನು ನೀಡುತ್ತಿದ್ದಾನೆ. ‘ನಮ್ಮ ವಿಷಯದಲ್ಲಿಯೂ ನಮ್ಮ [ಬೋಧನೆಯ] ವಿಷಯದಲ್ಲಿಯೂ ಎಚ್ಚರಿಕೆಯಾಗಿದ್ದು, ನಮ್ಮನ್ನೂ ನಮ್ಮ ಉಪದೇಶವನ್ನು ಕೇಳುವವರನ್ನೂ ರಕ್ಷಿಸಲಾಗುವಂತೆ,’ ಕಲಿತಂಥ ವಿಷಯಗಳನ್ನು ನಾವು ಅನ್ವಯಿಸಿಕೊಳ್ಳೋಣ.—1 ತಿಮೊ. 4:16.