“ಎಲ್ಲರಿಗೆ ಒಳ್ಳೇದನ್ನು ಮಾಡೋಣ”
1 “ದೇವರ ವಾಕ್ಯವನ್ನು ಸಂಪೂರ್ಣವಾಗಿ ಸಾರು” ಮತ್ತು “‘ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರಿ’” ಎಂಬವುಗಳು, 2002ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ನಮ್ಮ ರಾಜ್ಯದ ಸೇವೆಯ ಪುರವಣಿಗಳ ಮುಖ್ಯ ವಿಷಯಗಳಾಗಿದ್ದವು. (ಕೊಲೊ. 1:25, NW; 1 ತಿಮೊ. 6:18) ಆ ಸಂಚಿಕೆಗಳಲ್ಲಿ, ಆಸಕ್ತ ವ್ಯಕ್ತಿಗಳು ಜ್ಞಾಪಕಾಚರಣೆಗೆ ಹಾಜರಾಗಲು, ನಿಷ್ಕ್ರಿಯ ವ್ಯಕ್ತಿಗಳು ಸಭೆಯಲ್ಲಿ ಪುನಃ ಭಾಗಿಗಳಾಗಲು, ಮತ್ತು ನಮ್ಮ ಮಕ್ಕಳು ಹಾಗೂ ಅರ್ಹರಾಗುವ ವಿದ್ಯಾರ್ಥಿಗಳು ಸುವಾರ್ತೆಯನ್ನು ಪ್ರಚಾರಮಾಡುವುದನ್ನು ಆರಂಭಿಸಲು ಸಹಾಯಮಾಡುವುದಕ್ಕಾಗಿ ಹೆಚ್ಚಿನ ಪ್ರಯತ್ನವನ್ನು ಮಾಡುವಂತೆ ನಮ್ಮನ್ನು ಉತ್ತೇಜಿಸಲಾಯಿತು. ನಮ್ಮ ಒಳ್ಳೆಯ ಪ್ರಯತ್ನಗಳಿಂದಾಗಿ ನಾವು ಒಂದಿಷ್ಟು ಯಶಸ್ಸನ್ನು ಪಡೆದುಕೊಂಡಿದ್ದೇವೆ ಎಂಬುದರಲ್ಲಿ ಸಂದೇಹವಿಲ್ಲ. ಈಗ, ‘ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡುವುದನ್ನು [ಮುಂದುವರಿಸೋಣ].’—ಗಲಾ. 6:10.
2 ಅವರು ಪುನಃ ಹಾಜರಾಗುವಂತೆ ಆಮಂತ್ರಿಸಿರಿ: ಭಾರತದ ಬ್ರಾಂಚ್ ಕ್ಷೇತ್ರದಲ್ಲಿ, ಕಳೆದ ವರ್ಷ ಜ್ಞಾಪಕಾಚರಣೆಗೆ ಹಾಜರಾದವರಲ್ಲಿ ಮೂವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಸುವಾರ್ತೆಯ ಪ್ರಚಾರಕರಾಗಿರಲಿಲ್ಲ. ಅವರ ಹಾಜರಿಯು ಒಂದಿಷ್ಟು ಮಟ್ಟಿಗಿನ ಆಸಕ್ತಿಯನ್ನು ತೋರಿಸುವುದರಿಂದ, “ನಿತ್ಯ ಜೀವಕ್ಕೆ ಯೋಗ್ಯ ಪ್ರವೃತ್ತಿಯುಳ್ಳವರು” ‘ವಿಶ್ವಾಸಿಗಳಾಗುವಂತೆ’ ಅವರನ್ನು ಪ್ರಚೋದಿಸಲು ನಾವೇನು ಮಾಡಬೇಕು? (ಅ. ಕೃ. 13:48, NW) ಅವರು ಆದಷ್ಟು ಬೇಗನೆ ಸಭಾ ಕೂಟಗಳಿಗೆ ಪುನಃ ಬರುವಂತೆ ಅವರಿಗೆ ಪ್ರೋತ್ಸಾಹವನ್ನು ನೀಡಿರಿ.
3 ಒಬ್ಬ ಆಸಕ್ತ ವ್ಯಕ್ತಿಯು, ಯೆಶಾಯನ ಪ್ರವಾದನೆಯ ಆಸಕ್ತಿಕರ ಚರ್ಚೆಯಲ್ಲಿ ಆನಂದಿಸಲಿಕ್ಕಾಗಿ ಒಂದು ಸಭಾ ಪುಸ್ತಕ ಅಧ್ಯಯನಕ್ಕೆ ಹಾಜರಾಗುವಂತೆ ಅವನನ್ನು ಏಕೆ ಆಮಂತ್ರಿಸಬಾರದು? ನೀವು ಆ ವ್ಯಕ್ತಿಯ ಸಂಬಂಧಿಕರೋ ಅಥವಾ ಪರಿಚಯಸ್ಥರೋ ಆಗಿರುವಲ್ಲಿ ಮತ್ತು ನೀವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಮುಂಬರಲಿರುವ ಒಂದು ಭಾಷಣವನ್ನು ಕೊಡಲು ನೇಮಿಸಲ್ಪಟ್ಟಿರುವಲ್ಲಿ, ಆ ವ್ಯಕ್ತಿಯು ಬಂದು ಅದನ್ನು ಕೇಳಿಸಿಕೊಳ್ಳವಂತೆ ನೀವು ಏಕೆ ಆಮಂತ್ರಿಸಬಾರದು? ಮುಂದಿನ ವಾರಗಳಲ್ಲಿ ಕೊಡಲ್ಪಡಲಿರುವ ಬಹಿರಂಗ ಭಾಷಣಗಳ ಮುಖ್ಯ ವಿಷಯಗಳ ಕುರಿತು ಅವನಿಗೆ ಸುದ್ದಿ ಮುಟ್ಟಿಸುತ್ತಾ ಇರ್ರಿ. (ಒಂದು ಸದ್ಯೋಚಿತ ಶೆಡ್ಯೂಲ್, ಇನ್ಫರ್ಮೇಷನ್ ಬೋರ್ಡ್ನ ಮೇಲೆ ಹಾಕಲ್ಪಟ್ಟಿರಬೇಕು.) ಆ ವ್ಯಕ್ತಿಯಲ್ಲಿ, ಯೆಹೋವನನ್ನು ಆರಾಧಿಸುವ ಆಸೆಯನ್ನು ಹುಟ್ಟಿಸುವ ಸಂದರ್ಭಗಳಿಗಾಗಿ ಹುಡುಕುತ್ತಾ ಇರ್ರಿ. ಮತ್ತು, ಸಭೆಯಲ್ಲಿ ಯಾರೊಂದಿಗೂ ಆ ವ್ಯಕ್ತಿ ಈಗಾಗಲೇ ಒಂದು ಬೈಬಲ್ ಅಧ್ಯಯನವನ್ನು ನಡೆಸುತ್ತಿಲ್ಲದಿರುವಲ್ಲಿ, ನೀವು ದಯಾಭಾವದಿಂದ ಒಂದು ಅಧ್ಯಯನದ ನೀಡಿಕೆಯನ್ನು ಮಾಡಬಹುದು.
4 ನಿಷ್ಕ್ರಿಯರಾಗಿರುವವರನ್ನು ಉತ್ತೇಜಿಸುತ್ತಾ ಇರ್ರಿ: ಜ್ಞಾಪಕಾಚರಣೆಗೆ ಹಾಜರಾಗುವವರಲ್ಲಿ ಅನೇಕ ಮಂದಿ ಈಗಾಗಲೇ ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಆದರೂ, ಯಾವುದೋ ಒಂದು ಹಂತದಲ್ಲಿ ಅವರು ಸಕ್ರಿಯವಾಗಿ ಸುವಾರ್ತೆಯನ್ನು ಸಾರುವುದನ್ನು ನಿಲ್ಲಿಸಿಬಿಟ್ಟರು. ಆದರೂ, ‘ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರ ಕಡೆಗೆ ಒಳ್ಳೇದನ್ನು ಮಾಡೋಣ’ ಎಂದು ಪೌಲನು ಉತ್ತೇಜಿಸಿದನು. (ಗಲಾ. 6:10) ಆದುದರಿಂದ, ನಿಷ್ಕ್ರಿಯ ವ್ಯಕ್ತಿಗಳು ನಮ್ಮ ಪ್ರಮುಖ ಚಿಂತೆಯಾಗಿರಬೇಕು.
5 ಪ್ರಾಯಶಃ ಕೆಲವರು ಹಿರಿಯರ ಮತ್ತು ಇತರರ ಪ್ರೋತ್ಸಾಹದಿಂದಾಗಿ ಪುನಃ ಒಮ್ಮೆ ಶುಶ್ರೂಷೆಯಲ್ಲಿ ಭಾಗವಹಿಸಲು ತೊಡಗಿರಬಹುದು. ಪುನಃ ಸಕ್ರಿಯಗೊಳಿಸಲ್ಪಟ್ಟಿರುವ ಒಬ್ಬ ಪ್ರಚಾರಕನೊಂದಿಗೆ ಕೆಲಸಮಾಡುವಂತೆ ನೀವು ಹಿರಿಯರಿಂದ ನೇಮಿಸಲ್ಪಟ್ಟಿರುವುದಾದರೆ, ಯೆಹೋವನಿಗಾಗಿ ಮತ್ತು ಕ್ಷೇತ್ರ ಶುಶ್ರೂಷೆಗಾಗಿರುವ ನಿಮ್ಮ ಪ್ರೀತಿಯು, ಆ ವ್ಯಕ್ತಿಯಲ್ಲಿ ದೃಢವಿಶ್ವಾಸವನ್ನು ತುಂಬಿಸುವುದು ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ. ಶುಶ್ರೂಷೆಯ ವಿಭಿನ್ನವಾದ ಭಾಗಗಳಲ್ಲಿ ನೀವು ಹೇಗೆ ಭಾಗವಹಿಸುತ್ತೀರಿ ಎಂಬುದನ್ನು ಅವನಿಗೆ ತೋರಿಸಿರಿ, ಮತ್ತು ಹೀಗೆ ಅವನು ಅದರಲ್ಲಿ ಆನಂದವನ್ನು ಕಂಡುಕೊಳ್ಳಲು ಮತ್ತು ಸಾರುವ ಕೆಲಸಕ್ಕೆ ಅಂಟಿಕೊಂಡಿರಲು ಸಾಧ್ಯವಾಗುವುದು ಮಾತ್ರವಲ್ಲ, ಅವನು ಯೆಹೋವನ ಆಶೀರ್ವಾದಗಳನ್ನೂ ಅನುಭವಿಸಬಹುದು.
6 ಹೊಸ ಪ್ರಚಾರಕರಿಗೆ ಒಳ್ಳೆಯ ಆರಂಭವನ್ನು ಕೊಡಿರಿ: ಒಬ್ಬ ಹೊಸ ಆಸಕ್ತ ಸ್ತ್ರೀಯು ತಾನು ದೇವರ ಸತ್ಯ ಸಂಸ್ಥೆಯನ್ನು ಕಂಡುಕೊಂಡಿದ್ದೇನೆ ಎಂಬುದನ್ನು ಗ್ರಹಿಸಿದಾಗ, ಅವಳು ಆಗಲೇ ಸೇವೆಯನ್ನು ಆರಂಭಿಸಲು ಬಯಸಿದಳು. ಅವಳಿಂದ ಏನು ಅಪೇಕ್ಷಿಸಲ್ಪಡುತ್ತದೆ ಎಂಬುದನ್ನು ಅವಳು ತಿಳಿದುಕೊಂಡಾಗ, ಅವಳು ಹೇಳಿದ್ದು: “ನಾನು ಆ ಆವಶ್ಯಕ ಹೆಜ್ಜೆಗಳನ್ನು ತತ್ಕ್ಷಣವೇ ತೆಗೆದುಕೊಳ್ಳಲಿದ್ದೇನೆ.” ನೀವು ಯಾರೊಂದಿಗೆ ಅಧ್ಯಯನ ಮಾಡುತ್ತಿದ್ದಿರೋ ಆ ವ್ಯಕ್ತಿಯು ಈಗ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಂತೆ ಅಂಗೀಕರಿಸಲ್ಪಟ್ಟಿರುವುದಾದರೆ, “ಆವಶ್ಯಕ ಹೆಜ್ಜೆಗಳನ್ನು ತತ್ಕ್ಷಣವೇ ತೆಗೆದುಕೊಳ್ಳ”ಲು ಇರುವ ಜರೂರಿಯನ್ನು ನೋಡುವಂತೆ ಅವನಿಗೆ ಸಹಾಯಮಾಡಿರಿ, ಮತ್ತು ಹೀಗೆ ಹೊಸ ಪ್ರಚಾರಕನನ್ನು ಒಂದು ಒಳ್ಳೆಯ ಆರಂಭಕ್ಕೆ ನಡೆಸಿರಿ. ಅವನು ಪ್ರತಿ ವಾರ ಕ್ಷೇತ್ರ ಶುಶ್ರೂಷೆಗಾಗಿ ತಯಾರಿಸುವ ಮತ್ತು ಅದರಲ್ಲಿ ಕ್ರಮವಾಗಿ ಭಾಗವಹಿಸುವ ಒಂದು ರೂಢಿಯನ್ನು ಬೆಳೆಸಿಕೊಳ್ಳುವಂತೆ ಅವನಿಗೆ ಸಹಾಯಮಾಡಿರಿ.
7 ಹೊಸ ಅಸ್ನಾತ ಪ್ರಚಾರಕರಾಗಿರುವುದು ನಿಮ್ಮ ಸ್ವಂತ ಮಗನಾಗಿರುವಲ್ಲಿ, ಅವನ ವಯಸ್ಸು ಮತ್ತು ಸಾಮರ್ಥ್ಯಕ್ಕನುಸಾರ ಪ್ರಗತಿಯನ್ನು ಮಾಡಲಾಗುವಂತೆ ಅವನೊಂದಿಗೆ ಕೆಲಸಮಾಡಿರಿ. ನಿಮ್ಮಿಂದ ಸ್ವಲ್ಪ ಸಹಾಯ ಸಿಗುವಾಗ, ಅವನು ಎಷ್ಟು ಚೆನ್ನಾಗಿ ಒಬ್ಬ ವ್ಯಕ್ತಿಯನ್ನು ಸಂಭಾಷಣೆಯಲ್ಲಿ ಒಳಗೂಡಿಸಬಲ್ಲನು, ಬೈಬಲನ್ನು ಓದಬಲ್ಲನು, ಮತ್ತು ಸಾಹಿತ್ಯವನ್ನು ನೀಡಬಲ್ಲನು ಎಂಬುದನ್ನು ನೋಡಿ ನೀವು ಚಕಿತರಾಗಬಹುದು. ಕ್ಷೇತ್ರ ಸೇವೆಯಲ್ಲಿ ಅವನು ಆಸಕ್ತಿಯನ್ನು ತೋರಿಸುವಂಥ ಒಬ್ಬ ವ್ಯಕ್ತಿಯನ್ನು ಕಂಡುಕೊಳ್ಳುವಲ್ಲಿ, ಪುನರ್ಭೇಟಿಯನ್ನು ಮಾಡುವಂತೆ ಮತ್ತು ಕಂಡುಕೊಂಡ ಆಸಕ್ತಿಯನ್ನು ಬೆಳೆಸುವಂತೆ ಅವನಿಗೆ ತರಬೇತು ನೀಡಿರಿ.
8 ನಿಮ್ಮ ಸ್ವಂತ ಶುಶ್ರೂಷೆಯನ್ನು ವಿಸ್ತರಿಸಿರಿ: ನಿಮ್ಮ ಪರಿಸ್ಥಿತಿಗಳು ನೀವು ಜ್ಞಾಪಕಾಚರಣೆಯ ಸಮಯದ ನಂತರವೂ ಸೌವಾರ್ತಿಕ ಕೆಲಸದಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಹೆಚ್ಚಿಸುವಂತೆ ನಿಮ್ಮನ್ನು ಅನುಮತಿಸುತ್ತವೋ? ಪ್ರತಿ ವಾರ ನೀವು ಸೇವೆಯಲ್ಲಿ ಎಷ್ಟು ತಾಸುಗಳನ್ನು ಕಳೆಯುತ್ತಿದ್ದೀರೋ ಅದಕ್ಕೆ ನೀವು ಇನ್ನೂ ಒಂದೋ ಎರಡೋ ತಾಸುಗಳನ್ನು ಕೂಡಿಸಬಲ್ಲಿರೋ? ನೀವು ಪುನಃ ಯಾವಾಗ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಹುದು ಎಂಬುದನ್ನು ನಿಮ್ಮ ಕ್ಯಾಲೆಂಡರಿನಲ್ಲಿ ಮುನ್ನೋಡುತ್ತಿದ್ದೀರೋ? ಅಥವಾ ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರವೇಶಿಸಲಿಕ್ಕಾಗಿ ನೀವು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಬಲ್ಲಿರೋ? ನಾವು ಶುಶ್ರೂಷೆಯಲ್ಲಿ ಹಾಕುವಂಥ ಎಲ್ಲ ಪ್ರಯತ್ನವು, ಒಬ್ಬ ವ್ಯಕ್ತಿಯು ಸತ್ಯವನ್ನು ಸ್ವೀಕರಿಸುವಂತೆ ಸಹಾಯಮಾಡಬಹುದು! (ಅ. ಕೃ. 8:26-39) ನಾವು ಮುಂಬರಲಿರುವ ದಿನಗಳಿಗಾಗಿ ಎದುರುನೋಡುತ್ತಿರುವಾಗ, “ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವದಲ್ಲದೆ ಎಲ್ಲರಿಗೂ ಹಿತವನ್ನು” ಮಾಡುತ್ತಾ ಇರೋಣ.—1 ಥೆಸ. 5:15.
[ಪುಟ 3 ರಲ್ಲಿರುವ ಚೌಕ]
ಇವರಿಗೆ ನೆರವು ನೀಡುವುದನ್ನು ಮುಂದುವರಿಸಿರಿ
□✔ ಜ್ಞಾಪಕಾಚರಣೆಗೆ ಹಾಜರಾದವರಿಗೆ
□✔ ಪುನಃ ಸಕ್ರಿಯಗೊಳಿಸಲ್ಪಟ್ಟಿರುವ ಪ್ರಚಾರಕರಿಗೆ
□✔ ಹೊಸ ಅಸ್ನಾತ ಪ್ರಚಾರಕರಿಗೆ