ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ-ಸೆಪ್ಟೆಂ.
“ಭೂಕಂಪಗಳು ನಿಸರ್ಗದ ಅತಿ ವಿನಾಶಕಾರಿ ಮತ್ತು ಪ್ರಬಲವಾದ ಶಕ್ತಿಗಳಲ್ಲಿ ಒಂದಾಗಿವೆ. ಪಾರಾಗಿ ಉಳಿಯುವವರು ಅನೇಕವೇಳೆ ನಿರ್ಗತಿಕರಾಗಿ, ಚೇತರಿಸಿಕೊಳ್ಳಲು ಏನೂ ಇಲ್ಲದೆ ಬಿಡಲ್ಪಡುತ್ತಾರೆ. ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ಭೂಕಂಪಕ್ಕೆ ಒಳಗಾದವರು ಅದರ ನಂತರದ ಪರಿಣಾಮಗಳನ್ನು ಹೇಗೆ ನಿಭಾಯಿಸಲು ಶಕ್ತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಭೂಕಂಪಗಳು ಹೇಗೆ ಅತಿ ಪ್ರಾಮುಖ್ಯವಾದ ಒಂದು ಬೈಬಲ್ ಪ್ರವಾದನೆಯಲ್ಲೂ ತೋರಿಬರುತ್ತವೆ ಎಂಬುದನ್ನು ಸಹ ಇದು ವಿವರಿಸುತ್ತದೆ.”
ಕಾವಲಿನಬುರುಜು ಆಗ.15
“ಯಾವ ರೀತಿಯ ನಿಷ್ಠೆಯು ಅತಿ ಶ್ರೇಷ್ಠವಾದದ್ದಾಗಿದೆ ಎಂದು ನಿಮಗೆ ಅನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಲೇಖನವು ಸತ್ಯ ದೇವರಿಗೆ ನಿಷ್ಠೆಯನ್ನು ತೋರಿಸಬೇಕೆಂಬುದನ್ನು ಒತ್ತಿಹೇಳುತ್ತದೆ. [5ನೆಯ ಪುಟವನ್ನು ತೋರಿಸಿರಿ ಮತ್ತು 2 ಸಮುವೇಲ 22:26ನ್ನು ಓದಿ.] ದೇವರ ಕಡೆಗಿನ ನಿಷ್ಠೆಯು, ಜನರು ಇತರರ ಕಡೆಗೆ ಪ್ರೀತಿರಹಿತವಾಗಿ ವರ್ತಿಸುವುದರಿಂದ ಅವರನ್ನು ತಡೆಯಲು ಸಹಾಯಮಾಡುತ್ತದೆ ಎಂಬುದು ನಿಮಗೆ ಗೊತ್ತಿತ್ತೊ? ಅದರ ಕುರಿತು ಓದುವುದರಿಂದ ನೀವು ಸಂತೋಷಪಡುವಿರಿ ಎಂಬುದು ನನಗೆ ಗೊತ್ತು.”
ಎಚ್ಚರ! ಜುಲೈ-ಸೆಪ್ಟೆಂ.
“ಒಬ್ಬ ತಾಯಿಗೆ, ಇನ್ನೂ ಹುಟ್ಟಿರದಂಥ ಒಂದು ಮಗುವನ್ನು ಕಳೆದುಕೊಳ್ಳುವುದು ಅತಿ ವೇದನಾಭರಿತ ಅನುಭವವಾಗಿರುವುದು. ಆ ನೋವನ್ನು ನಿವಾರಿಸಲು ಕುಟುಂಬದ ಸದಸ್ಯರು ಏನು ಮಾಡಬಲ್ಲರು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು, ಕುಟುಂಬದ ಸದಸ್ಯರು ಕೊಡಬಹುದಾದ ನಿರ್ದಿಷ್ಟವಾದ ಪ್ರಾಯೋಗಿಕ ಸಹಾಯದ ಕುರಿತು ವಿವರಿಸುತ್ತದೆ ಮತ್ತು ಅದರೊಟ್ಟಿಗೆ ದೇವರು ಅತಿ ಶೀಘ್ರದಲ್ಲೇ ಈ ಸಮಸ್ಯೆಯನ್ನು ತೆಗೆದುಹಾಕಲಿದ್ದಾನೆ ಎಂಬ ಹೃದಯೋತ್ತೇಜಕ ನಿರೀಕ್ಷೆಯನ್ನೂ ಕೊಡುತ್ತದೆ. [ಪ್ರಕಟನೆ 21:3, 4ನ್ನು ಓದಿರಿ.] ಈ ವಿಷಯವನ್ನು ನೀವು ಹಂಚಿಕೊಳ್ಳಬಹುದಾದ ಯಾರಾದರೂ ನಿಮಗೆ ತಿಳಿದಿರಬಹುದು.”
ಕಾವಲಿನಬುರುಜು ಸೆಪ್ಟೆಂ.1
“ಒಂದು ಸಮಯದಲ್ಲಿ ನೆರೆಯವರು ಪರಸ್ಪರ ಅರಿತುಕೊಂಡು ಬಾಳುತ್ತಿದ್ದರು, ಆದರೆ ಅನೇಕ ಸ್ಥಳಗಳಲ್ಲಿ ಇಂದು ಹಾಗೆ ಇಲ್ಲ ಎಂಬುದನ್ನು ನೀವು ಗಮನಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಯೇಸು, ಒಳ್ಳೆಯ ನೆರೆಯವರಾಗಿರುವುದಕ್ಕೆ ಒಂದು ಕೀಲಿ ಕೈಯಂತಿರುವ ಒಂದು ಮೂಲತತ್ತ್ವವನ್ನು ಹೇಳಿದನು. [ಮತ್ತಾಯ 7:12ನ್ನು ಓದಿ.] ಈ ಲೇಖನಗಳು, ನಾವು ಹೇಗೆ ಒಳ್ಳೆಯ ನೆರೆಯವರಾಗಿರಬಹುದು ಮತ್ತು ಇದನ್ನೇ ಮಾಡುವಂತೆ ಇತರರನ್ನೂ ಪ್ರೋತ್ಸಾಹಿಸಬಹುದು ಎಂಬುದನ್ನು ತೋರಿಸುತ್ತವೆ.”