ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ಹಿಂದೆ ಕೇವಲ ಹೊರದೇಶಗಳಲ್ಲಿ ಸಾಮಾನ್ಯವಾಗಿದ್ದ ಸಮಸ್ಯೆಗಳನ್ನು ಇಂದು ನಮ್ಮ ದೇಶಗಳಲ್ಲಿರುವ ಯುವ ಜನರು ಹೆಚ್ಚೆಚ್ಚು ಎದುರಿಸುತ್ತಿದ್ದಾರೆ ಎಂದು ತೋರುತ್ತದೆ. ನೀವು ಇದನ್ನು ಒಪ್ಪುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಉದಾಹರಣೆಗೆ ಈ ಒಂದು ಸಮಸ್ಯೆಯ ಬಗ್ಗೆ ಪರಿಗಣಿಸಿರಿ. [ಪತ್ರಿಕೆಯ 18ನೇ ಪುಟದಲ್ಲಿರುವ ಲೇಖನವನ್ನು ತೋರಿಸಿರಿ.] ಯುವ ಜನರಿಗಾಗಿ ಇಲ್ಲಿ ಯಾವ ಉತ್ತಮ ಸಲಹೆಯಿದೆ ಎಂದು ನೋಡಿ. [ಜ್ಞಾನೋಕ್ತಿ 18:13ನ್ನು ಓದಿ ಮತ್ತು ಪುನಃ ಪುಟ 18ರಲ್ಲಿರುವ ಲೇಖನದ ಕಡೆಗೆ ಮನೆಯವರ ಗಮನವನ್ನು ಸೆಳೆಯಿರಿ.] ನಾವು ಯೋಚಿಸಬೇಕಾದ ಕೆಲವು ವಿಷಯಗಳನ್ನು ಈ ಲೇಖನವು ಎತ್ತಿತೋರಿಸುತ್ತದೆ.”
ಕಾವಲಿನಬುರುಜು ಆಗ.15
“ಒಬ್ಬ ಪ್ರಿಯ ವ್ಯಕ್ತಿಯನ್ನು ಮರಣದಲ್ಲಿ ಕಳೆದುಕೊಂಡ ನಂತರ, ಮರಣದಲ್ಲಿ ಏನು ಸಂಭವಿಸುತ್ತದೆ ಎಂದು ಅನೇಕರು ಚಿಂತಿಸುತ್ತಾರೆ. ಮರಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿದೆ ಎಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮೃತರ ಸ್ಥಿತಿಯ ಕುರಿತು ಬೈಬಲ್ ಏನನ್ನುತ್ತದೆ ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ. ಮೃತರಾಗಿರುವ ನಮ್ಮ ಪ್ರಿಯ ಜನರನ್ನು ಪುನರುತ್ಥಾನಗೊಳಿಸುವ ದೇವರ ವಾಗ್ದಾನದ ಕುರಿತಾಗಿಯೂ ಇದು ಚರ್ಚಿಸುತ್ತದೆ.” ಯೋಹಾನ 5:28, 29ನ್ನು ಓದಿ.
ಎಚ್ಚರ! ಜುಲೈ - ಸೆಪ್ಟೆಂ.
“ಹೆಚ್ಚಿನ ಹೆತ್ತವರು ತಮ್ಮ ಮಕ್ಕಳು ಏನನ್ನು ವೀಕ್ಷಿಸಬಹುದೆಂದು ಅನುಮತಿಸುವ ವಿಷಯದಲ್ಲಿ ಬಹಳ ಜಾಗರೂಕರಾಗಿರುತ್ತಾರೆ. ನಿಮ್ಮ ಕುಟುಂಬಕ್ಕೆ ಸೂಕ್ತವಾಗಿರುವ ಚಲನಚಿತ್ರಗಳನ್ನು ಆಯ್ಕೆಮಾಡುವುದು ಕಷ್ಟಕರವಾಗಿಬಿಟ್ಟಿದೆಯೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಎಫೆಸ 4:17ನ್ನು ಓದಿ.] ಹಿತಕರವಾಗಿರುವ ಮನೋರಂಜನೆಯನ್ನು ಆರಿಸಿಕೊಳ್ಳುವ ವಿಷಯದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯಮಾಡಬಲ್ಲರು ಎಂಬುದನ್ನು ಈ ಲೇಖನವು ಪರಿಗಣಿಸುತ್ತದೆ.”
ಕಾವಲಿನಬುರುಜು ಸೆಪ್ಟೆಂ.1
“ಇಂದಿನ ಲೋಕದಲ್ಲಿ ಅನೇಕವೇಳೆ ನಿಷ್ಠೆ ಎಂಬ ಸದ್ಗುಣವನ್ನು ಕ್ರಿಯೆಯಲ್ಲಿ ತೋರಿಸುವುದಕ್ಕಿಂತಲೂ ಹೆಚ್ಚಾಗಿ ಬರೀ ಹೊಗಳಲಾಗುತ್ತದೆ. ಹೆಚ್ಚು ಜನರು ಇಲ್ಲಿ ವರ್ಣಿಸಲಾದ ಒಬ್ಬ ಸ್ನೇಹಿತನಂತೆ ಇರುವುದಾದರೆ ಅದೆಷ್ಟು ಉತ್ತಮವಾಗಿ ಇರುತ್ತಿತ್ತಲ್ಲವೆ? [ಜ್ಞಾನೋಕ್ತಿ 17:17ನ್ನು ಓದಿ. ಅನಂತರ ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಮ್ಮ ಕುಟುಂಬ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ನಿಷ್ಠರಾಗಿರುವುದರಿಂದ ದೊರಕುವ ಪ್ರಯೋಜನಗಳನ್ನು ಈ ಪತ್ರಿಕೆಯು ಚರ್ಚಿಸುತ್ತದೆ.”