ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ಮಲೇರಿಯ, ಡೆಂಗೀ ಜ್ವರ, ಮತ್ತು ಪೀತಜ್ವರದಂಥ ರೋಗಗಳನ್ನು ತಡೆಗಟ್ಟಲು ನಾವು ಆಸಕ್ತರಾಗಿದ್ದೇವೆ. ಇಂಥ ಕೀಟರವಾನಿತ ರೋಗಗಳಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲು ನಾವು ಕೆಲವು ಕ್ರಮಗಳನ್ನು ಕೈಕೊಳ್ಳಸಾಧ್ಯವಿದೆ ಎಂಬುದು ನಿಮಗೆ ತಿಳಿದಿತ್ತೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು ಆ ಕ್ರಮಗಳ ಕುರಿತು ಹಾಗೂ ಅಸ್ವಸ್ಥತೆಯೇ ಇಲ್ಲದಿರುವಂಥ ಒಂದು ಕಾಲದ ಬಗ್ಗೆ ದೇವರು ಮಾಡಿರುವ ವಾಗ್ದಾನದ ಕುರಿತು ಚರ್ಚಿಸುತ್ತದೆ.” ಯೆಶಾಯ 33:24ನ್ನು ಓದುವ ಮೂಲಕ ಕೊನೆಗೊಳಿಸಿ.
ಕಾವಲಿನಬುರುಜು ಆಗ.15
“ಹೆಚ್ಚಿನ ಜನರು ಉತ್ತಮ ಖ್ಯಾತಿಯನ್ನು ಮೌಲ್ಯವುಳ್ಳದ್ದಾಗಿ ನೆನಸುತ್ತಾರೆ. ತಮ್ಮ ಮರಣದ ನಂತರ ತಮ್ಮನ್ನು ಹೇಗೆ ಜ್ಞಾಪಿಸಿಕೊಳ್ಳಲಾಗಬಹುದು ಎಂಬುದರ ಕುರಿತಾಗಿಯೂ ಕೆಲವರು ಆಲೋಚಿಸುತ್ತಾರೆ. ನೀವು ಈ ಕುರಿತು ಎಂದಾದರೂ ಆಲೋಚಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ, ಪ್ರಸಂಗಿ 7:1ನ್ನು ಓದಿರಿ.] ಈ ಕಾವಲಿನಬುರುಜು, ಮಾನವರೊಂದಿಗೆ ಮತ್ತು ದೇವರೊಂದಿಗೆ ನಾವು ಹೇಗೆ ಒಂದು ಉತ್ತಮ ಹೆಸರನ್ನು ಗಳಿಸಸಾಧ್ಯವಿದೆ ಎಂಬುದನ್ನು ಚರ್ಚಿಸುತ್ತದೆ.”
ಎಚ್ಚರ! ಜುಲೈ - ಸೆಪ್ಟೆಂ.
“ಕಟುವಾದ ಮಾತುಗಳು ವೈವಾಹಿಕ ಜೀವನವನ್ನು ಬಲಹೀನಗೊಳಿಸಬಲ್ಲವೆಂಬುದನ್ನು ನೀವು ಪ್ರಾಯಶಃ ಒಪ್ಪುತ್ತೀರಿ. [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ‘ಹಾನಿಕಾರಕ ಮಾತುಗಳನ್ನು ತ್ಯಜಿಸಿರಿ’ ಎಂಬ ಈ ಲೇಖನವು, ಕುಟುಂಬ ಸಂಬಂಧಗಳನ್ನು ಬಲಗೊಳಿಸಲು ಗುಣಪಡಿಸುವಂಥ ಮಾತುಗಳನ್ನು ಉಪಯೋಗಿಸುವ ಅಗತ್ಯದ ಕುರಿತು ವಿವರಿಸುತ್ತದೆ.” ಎಫೆಸ 4:29ನ್ನು ಓದುವ ಮೂಲಕ ಸಮಾಪ್ತಿಗೊಳಿಸಿರಿ.
ಕಾವಲಿನಬುರುಜು ಸೆಪ್ಟೆಂ.1
“ಮಾನವಕುಲದ ವಿವಿಧ ಧರ್ಮಗಳು, ಒಂದೇ ಗುರಿಯ ಕಡೆಗೆ ನಡಿಸುವ ವಿವಿಧ ಹಾದಿಗಳೆಂದು ಅನೇಕ ಜನರು ಭಾವಿಸುತ್ತಾರೆ. ಇನ್ನಿತರರು, ಕೇವಲ ಒಂದೇ ಸತ್ಯ ಧರ್ಮವಿದೆ ಎಂಬುದಾಗಿ ನಂಬುತ್ತಾರೆ. ನೀವು ಇದರ ಕುರಿತು ಆಲೋಚಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು, ಈ ಪ್ರಶ್ನೆಯನ್ನು ಸ್ಪಷ್ಟವಾಗಿ ಉತ್ತರಿಸುವಂಥ ಒಂದು ಪ್ರಾಚೀನ ಸಾಮ್ಯವನ್ನು ಪರಿಶೀಲಿಸುತ್ತದೆ.” ಮತ್ತಾಯ 13:24-30ನ್ನು ಎತ್ತಿತೋರಿಸಿರಿ.