ಇತರರಿಗೆ ಶುದ್ಧ ಭಾಷೆಯನ್ನು ಕಲಿಸಿರಿ
1 ಯೆಹೋವನ ಸಾಕ್ಷಿಗಳು ಅನೇಕ ‘ಜನಾಂಗ, ಕುಲ, ಪ್ರಜೆ ಮತ್ತು ಭಾಷೆಗಳಿಂದ’ ಬಂದಿರುವುದಾದರೂ, ಅವರು ಐಕ್ಯರಾದ, ಒಂದು ನಿಜ ಅಂತಾರಾಷ್ಟ್ರೀಯ ಸಹೋದರತ್ವವನ್ನು ಪಡೆದಿರುವ ಜನರಾಗಿದ್ದಾರೆ. (ಪ್ರಕ. 7:9) ಇಂದಿನ ವಿಭಾಜಿತ ಲೋಕದಲ್ಲಿ ಇದು ಗಮನಾರ್ಹವಾದ ಸಂಗತಿಯಾಗಿದೆ. ಆದರೆ ಇದು ಸಾಧ್ಯವಾದದ್ದು ಹೇಗೆ? ಹೇಗೆಂದರೆ ನಮ್ಮನ್ನು ‘ಒಂದು ಶುದ್ಧ ಭಾಷೆಗೆ ಮಾರ್ಪಡಿಸಲಾಗಿದೆ.’—ಚೆಫ. 3:9, NW.
2 ಅದ್ಭುತಕರ ಪರಿಣಾಮಗಳು: ಈ ಶುದ್ಧ ಭಾಷೆ ಏನಾಗಿದೆ? ಇದು, ಯೆಹೋವನ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ದೇವರ ವಾಕ್ಯದಲ್ಲಿರುವ ಸೂಕ್ತವಾದ ತಿಳಿವಳಿಕೆಯೇ ಆಗಿದೆ; ವಿಶೇಷವಾಗಿ ದೇವರ ರಾಜ್ಯದ ಕುರಿತಾದ ಸತ್ಯದ ತಿಳಿವಳಿಕೆಯಾಗಿದೆ. ಯೇಸುವಿನಿಂದ ಮುಂತಿಳಿಸಲ್ಪಟ್ಟಂತೆ, ಈ ಸತ್ಯವನ್ನು ಒಂದು ದೃಶ್ಯ ಭೂಮಾಧ್ಯಮವಾಗಿರುವ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ವಿತರಿಸಲಾಗುತ್ತಿದೆ. ಇದರ ಫಲಿತಾಂಶವಾಗಿ “ಜನಾಂಗಗಳ ವಿವಿಧಭಾಷೆಗಳ” ಜನರು ಸತ್ಯಾರಾಧನೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.—ಮತ್ತಾ. 24:45; ಜೆಕ. 8:23.
3 ಜನರು ಶುದ್ಧ ಭಾಷೆಯನ್ನು ಕಲಿಯುತ್ತಿರುವಾಗ, ಅವರು ತಮ್ಮ ಜೀವಿತಗಳನ್ನು ಯೆಹೋವನ ಮಟ್ಟಗಳಿಗೆ ಹೊಂದಿಸಿಕೊಳ್ಳುವಂತೆ ಪ್ರಚೋದಿಸಲ್ಪಡುತ್ತಾರೆ. ಅವರು “ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿ”ರಲು ಕಲಿಯುತ್ತಾರೆ. (1 ಕೊರಿಂ. 1:10) ದೈವಿಕ ಬೋಧನೆಯು, ವಿಶೇಷವಾಗಿ ಇತರರಿಗೆ ಸುವಾರ್ತೆಯನ್ನು ಸಾರುವ ವಿಷಯದಲ್ಲಿ ಅವರಲ್ಲಿ ಯಥಾರ್ಥ ನಡವಳಿಕೆ ಹಾಗೂ ಹಿತಕರವಾದ ಸತ್ಯಭರಿತ ಮಾತುಗಳನ್ನು ಹುಟ್ಟಿಸುತ್ತದೆ. (ತೀತ 2:7, 8; ಇಬ್ರಿ. 13:15) ಈ ಅದ್ಭುತಕರ ಬದಲಾವಣೆಗಳು ಯೆಹೋವನಿಗೆ ಘನತೆಯನ್ನು ತರುತ್ತವೆ.
4 ಉದಾಹರಣೆಗೆ, ಸುವಾರ್ತೆಯನ್ನು ಕೇಳಿಸಿಕೊಂಡಿದ್ದ ಒಬ್ಬ ಮನುಷ್ಯನಿಗೆ ಅನೇಕ ಪ್ರಶ್ನೆಗಳಿದ್ದವು, ಮತ್ತು ಇವೆಲ್ಲವುಗಳನ್ನು ಬೈಬಲಿನಿಂದ ಉತ್ತರಿಸಲಾಯಿತು. ತಾನು ಕೇಳಿಸಿಕೊಂಡ ವಿಷಯಗಳಿಂದ ಪ್ರಚೋದಿತನಾದ ಅವನು, ವಾರಕ್ಕೆ ಎರಡಾವರ್ತಿ ಅಧ್ಯಯನ ಮಾಡಲು ಆರಂಭಿಸಿದನು ಮತ್ತು ಕೂಟಗಳಿಗೆ ಹಾಜರಾಗತೊಡಗಿದನು. ರಾಜ್ಯ ಸಭಾಗೃಹದಲ್ಲಿ ತಾನು ಪಡೆದುಕೊಂಡ ಹಾರ್ದಿಕ ಸ್ವಾಗತದಿಂದ ಅವನು ಆಶ್ಚರ್ಯಗೊಂಡನು, ಏಕೆಂದರೆ ಹಾಜರಿದ್ದವರಲ್ಲಿ ಅನೇಕರು ಬೇರೆ ಬೇರೆ ಕುಲಕ್ಕೆ ಸೇರಿದವರಾಗಿದ್ದರು. ಸ್ವಲ್ಪ ಕಾಲಾವಧಿಯೊಳಗೆ ಅವನು ಹಾಗೂ ಅವನ ಪತ್ನಿ ತಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡು, ದೀಕ್ಷಾಸ್ನಾನವನ್ನು ಪಡೆದುಕೊಂಡರು. ಅಂದಿನಿಂದ ಅವನು ತನ್ನ ಕುಟುಂಬದ ಅನೇಕ ಸದಸ್ಯರನ್ನೂ ಒಳಗೊಂಡು, ಸುಮಾರು 40 ಮಂದಿಗೆ ಯೆಹೋವನ ಸೇವೆಮಾಡಲು ಸಹಾಯಮಾಡಿದ್ದಾನೆ. ಒಂದು ದೌರ್ಬಲ್ಯದಿಂದ ಅವನು ಕಷ್ಟಾನುಭವಿಸುತ್ತಿರುವುದಾದರೂ, ಇತ್ತೀಚಿಗೆ ಅವನು ಒಬ್ಬ ಪಯನೀಯರನಾಗಿ ಸೇವೆಸಲ್ಲಿಸಲು ಆರಂಭಿಸಿದನು.
5 ಇತರರಿಗೆ ಕಲಿಸುವುದು: ಲೋಕದ ಘಟನೆಗಳು, ಅನೇಕ ಪ್ರಾಮಾಣಿಕ ಜನರು ತಮ್ಮ ಆಲೋಚನೆಯನ್ನು ಹಾಗೂ ತಮ್ಮ ಜೀವಿತಗಳನ್ನು ಪುನಃ ಪರೀಕ್ಷಿಸುವಂತೆ ಮಾಡುತ್ತಿವೆ. ಯೇಸುವಿನಂತೆ, ನಾವು ಅವರಿಗೆ ಸಹಾಯಮಾಡುವ ಬಯಕೆಯುಳ್ಳವರಾಗಿರಬೇಕು. ಯಥಾರ್ಥ ಜನರು ಶುದ್ಧ ಭಾಷೆಯನ್ನು ಕಲಿಯುವಂತೆ ಸಹಾಯಮಾಡಲು, ಪರಿಣಾಮಕಾರಿ ಪುನರ್ಭೇಟಿಗಳು ಮತ್ತು ಬೈಬಲ್ ಅಧ್ಯಯನಗಳು ಕೀಲಿ ಕೈಯಾಗಿವೆ.
6 ಕಾರ್ಯಮಗ್ನ ಜನರೊಂದಿಗೆ, ಅವರ ಮನೆ ಬಾಗಿಲ ಬಳಿಯೇ ಸಂಕ್ಷಿಪ್ತ ಬೈಬಲ್ ಅಧ್ಯಯನವನ್ನು ನಡೆಸುವುದು ಪರಿಣಾಮಕಾರಿಯಾಗಿ ಕಂಡುಬಂದಿರುವ ಸಮೀಪಿಸುವಿಕೆಯಾಗಿದೆ. (km-KA 5/02 ಪು. 1) ನೀವಿದನ್ನು ಮಾಡಲು ಪ್ರಯತ್ನಿಸಿದ್ದೀರೋ? ನೀವು ಒಂದು ಪುನರ್ಭೇಟಿಯನ್ನು ಮಾಡಲು ಸಿದ್ಧರಾಗುತ್ತಿರುವಾಗ, ಮನೆಯವನಿಗೆ ಸೂಕ್ತವಾಗಿರುವ ಒಂದು ನಿರೂಪಣೆಯನ್ನು 2002ರ ನಮ್ಮ ರಾಜ್ಯದ ಸೇವೆಯ ಜನವರಿ ಸಂಚಿಕೆಯ ಪುರವಣಿಯಿಂದ ಆಯ್ದುಕೊಳ್ಳಿರಿ. ಈ ಪುರವಣಿಯಲ್ಲಿರುವ ಅನೇಕ ನಿರೂಪಣೆಗಳು, ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕದ ಒಂದು ಚರ್ಚೆಗೆ ನೇರವಾಗಿ ನಡೆಸುವಂತೆ ವಿನ್ಯಾಸಿಸಲ್ಪಟ್ಟಿವೆ. ನೀವು ಪೀಠಿಕೆಯಿಂದ ಪ್ಯಾರಗ್ರಾಫ್ಗಳಲ್ಲಿ ಒಂದರ ಚರ್ಚೆಗೆ ಸುಲಭವಾಗಿ ಮುನ್ನಡಿಸಸಾಧ್ಯವಾಗುವಂತೆ, ನಿರೂಪಣೆಯನ್ನು ಪ್ರ್ಯಾಕ್ಟಿಸ್ ಮಾಡಿರಿ. ಪ್ಯಾರಗ್ರಾಫ್ನಲ್ಲಿರುವ ಒಂದು ಅಥವಾ ಎರಡು ಶಾಸ್ತ್ರವಚನಗಳನ್ನು ಓದಲು ಮತ್ತು ಚರ್ಚಿಸಲು ಆರಿಸಿಕೊಳ್ಳಿರಿ, ಹಾಗೂ ಮುಕ್ತಾಯಕ್ಕಾಗಿ ಒಂದು ಪ್ರಶ್ನೆಯನ್ನು ಸಿದ್ಧಪಡಿಸಿರಿ. ಇದು, ನಿಮ್ಮ ಮುಂದಿನ ಭೇಟಿಯಲ್ಲಿ ನೀವು ಚರ್ಚಿಸಲು ಯೋಜಿಸುವ ಪ್ಯಾರಗ್ರಾಫಿಗೆ ಮುನ್ನಡಿಯಲು ಸಹಾಯಮಾಡುವುದು.
7 ಶುದ್ಧ ಭಾಷೆಯನ್ನು ಕಲಿಯುತ್ತಿರುವುದರ ಫಲಿತಾಂಶವಾಗಿ, ಯೆಹೋವನ ಜನರು ಅನೇಕ ಆಶೀರ್ವಾದಗಳನ್ನು ಅನುಭವಿಸುತ್ತಿದ್ದಾರೆ. ‘ಯೆಹೋವನ ಹೆಸರನ್ನೆತ್ತಿ’ ಕರೆಯುವುದರಲ್ಲಿ ಮತ್ತು ‘ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸುವುದರಲ್ಲಿ’ ಇತರರು ನಮ್ಮ ಜೊತೆಗೂಡುವಂತೆ ನಾವು ಶ್ರದ್ಧಾಪೂರ್ವಕವಾಗಿ ಅವರಿಗೆ ಸಹಾಯಮಾಡೋಣ.—ಚೆಫ. 3:9.