‘ಜ್ಯೋತಿರ್ಮಂಡಲಗಳಂತೆ ಹೊಳೆಯುವುದು’
1 ಆತ್ಮಿಕ ಮತ್ತು ನೈತಿಕ ಅಂಧಕಾರದಲ್ಲಿರುವ ಈ ವಿಷಯಗಳ ವ್ಯವಸ್ಥೆಯ ಮಧ್ಯದಲ್ಲಿ, ಸತ್ಯದೇವರಾದ ಯೆಹೋವನ ಸುಮಾರು ಅರುವತ್ತು ಲಕ್ಷ ಆರಾಧಕರು ಲೋಕವ್ಯಾಪಕವಾಗಿ 234 ದೇಶಗಳಲ್ಲಿ ‘ಜ್ಯೋತಿರ್ಮಂಡಲಗಳಂತೆ ಹೊಳೆ’ಯುತ್ತಿದ್ದಾರೆ. (ಫಿಲಿ. 2:16) ಇದು ನಮ್ಮನ್ನು ಜನರ ಗಮನಕ್ಕೆ ಸುಲಭವಾಗಿ ಬೀಳುವಂತೆ ಮಾಡುತ್ತದೆ. ಯೆಹೋವನಿಂದ ಬರುವ ಸತ್ಯದ ಅತ್ಯಮೂಲ್ಯ ಬೆಳಕನ್ನು ನಾವು ಹೇಗೆ ಪ್ರತಿಬಿಂಬಿಸಬಲ್ಲೆವು?—2 ಕೊರಿಂ. 3:18.
2 ನಮ್ಮ ನಡತೆಗಳು: ನಮ್ಮ ನಡವಳಿಕೆಯನ್ನು ಜನರು ಬೇಗನೆ ಗಮನಿಸುತ್ತಾರೆ. (1 ಪೇತ್ರ 2:12) ಒಬ್ಬಾಕೆ ಸ್ತ್ರೀಯು, ದಯಾಪರನೂ ಉಪಕಾರ ಮಾಡುವವನೂ ಅಸಹ್ಯವಾದ ಭಾಷೆಗಳನ್ನಾಡದವನೂ ಅಥವಾ ಹೊಲಸಾದ ಹಾಸ್ಯಗಳನ್ನು ಇತರರು ಹೇಳುವಾಗ ಅದನ್ನು ಕೇಳಿ ನಗಾಡದವನೂ ಆದ ಒಬ್ಬ ಸಾಕ್ಷಿ ಸಹೋದ್ಯೋಗಿಯನ್ನು ಗಮನಿಸಿದಳು. ಇತರರು ಅಸಭ್ಯ ಭಾಷೆಗಳನ್ನು ಉಪಯೋಗಿಸುತ್ತಾ ಈ ಸಾಕ್ಷಿಗೆ ಕೋಪವೆಬ್ಬಿಸಲು ಪ್ರಯತ್ನಿಸಿದರೂ, ಅವನು ಶಾಂತವಾಗಿದ್ದನು; ಆದರೆ ಅದೇ ಸಮಯದಲ್ಲಿ ಯಾವುದು ಸರಿಯೋ ಅದರ ವಿಷಯದಲ್ಲಿ ದೃಢವಾಗಿದ್ದನು. ಇದು ಆ ಸ್ತ್ರೀಯ ಮೇಲೆ ಯಾವ ಪ್ರಭಾವವನ್ನು ಬೀರಿತು? ಅವಳು ತಿಳಿಸುವುದು: “ಅವನ ನಡತೆಯಿಂದ ನಾನು ಎಷ್ಟು ಪ್ರಭಾವಿತಳಾದೆ ಎಂದರೆ ನಾನು ಅವನಲ್ಲಿ ಬೈಬಲಿನ ಕುರಿತಾಗಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿದೆ. ನಾನು ಬೈಬಲ್ ಅಧ್ಯಯನವನ್ನು ಆರಂಭಿಸಿದೆ, ನಂತರ ದೀಕ್ಷಾಸ್ನಾನವನ್ನೂ ಪಡೆದುಕೊಂಡೆ.” ಅವಳು ಮುಂದುವರಿಸುವುದು: “ಯೆಹೋವನ ಸಾಕ್ಷಿಗಳ ನಂಬಿಕೆಗಳನ್ನು ಪರಿಶೀಲಿಸುವಂತೆ ಅವನ ನಡತೆಯೇ ನನ್ನನ್ನು ಪ್ರಚೋದಿಸಿತು.”
3 ಅಧಿಕಾರಿಗಳ ಕಡೆಗೆ ನಮ್ಮ ಮನೋಭಾವ, ಲೌಕಿಕ ಆಚಾರಗಳ ಕಡೆಗೆ ನಮ್ಮ ದೃಷ್ಟಿಕೋನ, ಮತ್ತು ನಮ್ಮ ಸಭ್ಯವಾದ ಮಾತು—ಇವೆಲ್ಲವೂ ಯೆಹೋವನ ಸಾಕ್ಷಿಗಳನ್ನು ಬೈಬಲಿನ ಉನ್ನತ ಮಟ್ಟಗಳಿಗನುಸಾರ ಜೀವಿಸುವ ಜನರೋಪಾದಿ ಎದ್ದುಕಾಣುವಂತೆ ಮಾಡುವಂತದ್ದಾಗಿವೆ. ಇಂಥ ಉತ್ತಮವಾದ ಕೆಲಸಗಳು ಯೆಹೋವನಿಗೆ ಮಹಿಮೆಯನ್ನು ತರಸಾಧ್ಯವಿದೆ ಮತ್ತು ಇತರರನ್ನೂ ಆತನ ಆರಾಧನೆಯ ಕಡೆಗೆ ಸೆಳೆಯಸಾಧ್ಯವಿದೆ.
4 ನಮ್ಮ ಮಾತುಗಳು: ನಮ್ಮ ಉತ್ತಮ ನಡತೆಯನ್ನು ಗಮನಿಸುವ ಜನರೊಂದಿಗೆ ನಮ್ಮ ನಂಬಿಕೆಗಳ ಕುರಿತು ಮಾತಾಡದಿದ್ದರೆ, ನಾವೇಕೆ ವ್ಯತ್ಯಾಸವಾದ ಜನರಾಗಿದ್ದೇವೆ ಎಂಬುದನ್ನು ಅವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ನಿಮ್ಮೊಂದಿಗೆ ಕೆಲಸಮಾಡುವವರಿಗೆ ಅಥವಾ ನಿಮ್ಮ ಸಹಪಾಠಿಗಳಿಗೆ ನೀವೊಬ್ಬ ಯೆಹೋವನ ಸಾಕ್ಷಿಯಾಗಿದ್ದೀರೆಂದು ತಿಳಿದಿದೆಯೋ? ಸಾಮಾನ್ಯ ಸಂಭಾಷಣೆಯ ಸಮಯದಲ್ಲಿ ಸಾಕ್ಷಿಕೊಡುವ ಸಂದರ್ಭಕ್ಕಾಗಿ ನೀವು ಹುಡುಕುತ್ತೀರೋ? ಸೂಕ್ತವಾದ ಪ್ರತಿಯೊಂದು ಸನ್ನಿವೇಶದಲ್ಲೂ, “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿ”ಸುವಂತೆ ಮಾಡುವುದು ನಿಮ್ಮ ನಿರ್ಧಾರವಾಗಿದೆಯೋ?—ಮತ್ತಾ. 5:14-16.
5 ಬೆಳಕು ವಾಹಕರೋಪಾದಿ ನಮ್ಮ ಕರ್ತವ್ಯವನ್ನು ನೆರವೇರಿಸಲು, ಸ್ವತ್ಯಾಗದ ಆತ್ಮವು ಅಗತ್ಯವಾಗಿದೆ. ಪೂರ್ಣಪ್ರಾಣದ ಮನೋಭಾವವು ನಮ್ಮನ್ನು, ಕಡಿಮೆ ಪ್ರಾಮುಖ್ಯವಾದ ವಿಷಯಗಳಿಂದ ದೂರವಿದ್ದು, ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಈ ಜೀವರಕ್ಷಕ ಕೆಲಸದಲ್ಲಿ ನಮ್ಮಿಂದ ಸಾಧ್ಯವಾದಷ್ಟು ಹೆಚ್ಚನ್ನು ಮಾಡುವಂತೆ ಪ್ರಚೋದಿಸುತ್ತದೆ.—2 ಕೊರಿಂ. 12:15.
6 ನಮ್ಮ ನಡೆನುಡಿಗಳ ಮೂಲಕ ನಾವು ಜ್ಯೋತಿರ್ಮಂಡಲಗಳಾಗಿ ಹೊಳೆಯುತ್ತಾ ಮುಂದುವರಿಯೋಣ. ನಾವು ಹೀಗೆ ಮಾಡುವಲ್ಲಿ, ಯೆಹೋವನನ್ನು ಮಹಿಮೆಪಡಿಸುವುದರಲ್ಲಿ ಇತರರೂ ನಮ್ಮೊಂದಿಗೆ ಜೊತೆಗೂಡುವಂತೆ ಪ್ರಚೋದಿಸಲ್ಪಡುವರು.