ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ. - ಜೂನ್
“ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ನಮ್ಮ ಸಮಯದ ಒಂದು ಭೀಕರ ಸತ್ಯವಾದ ಬಾಲ್ಯ ವೇಶ್ಯಾವೃತ್ತಿಯ ಕುರಿತು ವರದಿಮಾಡುತ್ತದೆ. ಮಕ್ಕಳನ್ನು ದುರುಪಯೋಗಮಾಡುವಂತಹ ಈ ದುಃಖಕರವಾದ ವಿಷಯವು ಬೇಗನೆ ಅಂತ್ಯಗೊಳ್ಳುವುದೆಂದು ಬೈಬಲ್ ವಾಗ್ದಾನಿಸುತ್ತದೆ. [ಜ್ಞಾನೋಕ್ತಿ 2:21, 22ನ್ನು ಓದಿರಿ.] ಈ ರೀತಿಯಲ್ಲಿ ಮಕ್ಕಳನ್ನು ಶೋಷಣೆ ಮಾಡುವುದರ ಹಿಂದೆ ಏನು ಅಡಕವಾಗಿದೆ ಮತ್ತು ಇದು ಹೇಗೆ ನಿಲ್ಲಿಸಲ್ಪಡುವುದು ಎಂಬುದರ ಕುರಿತು ಈ ಪತ್ರಿಕೆಯು ತಿಳಿಸುತ್ತದೆ.”
ಕಾವಲಿನಬುರುಜು ಏಪ್ರಿ.15
“ಇತ್ತೀಚಿನ ವರುಷಗಳಲ್ಲಿ ಅನೇಕ ಜನರು, ಆಧ್ಯಾತ್ಮಿಕ ಮೌಲ್ಯಗಳ ಕುಸಿತವನ್ನು ಗಮನಿಸಿದ್ದಾರೆ. ನೀವು ಇದನ್ನು ಗಮನಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ತದನಂತರ, ಕೀರ್ತನೆ 119:105ನ್ನು ಓದಿರಿ.] ಜೀವನದಲ್ಲಿ ಬರುವ ಅನೇಕ ಸಮಸ್ಯೆಗಳನ್ನು ತಡೆಗಟ್ಟಲು ಜನರಿಗೆ ಆಧ್ಯಾತ್ಮಿಕ ಮೌಲ್ಯಗಳು ಸಹಾಯಮಾಡಬಲ್ಲವು. ನೀವು ನಿಜವಾದ ಆಧ್ಯಾತ್ಮಿಕ ಮೌಲ್ಯಗಳನ್ನು ಎಲ್ಲಿ ಕಂಡುಕೊಳ್ಳಬಲ್ಲಿರಿ ಎಂಬುದನ್ನು ಈ ಪತ್ರಿಕೆಯು ತಿಳಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಪ್ರಾಮಾಣಿಕತೆಯೇ ಪರಮಾರ್ಥ ಎಂಬುದಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಕಲಿಸಲಾಗುತ್ತದೆ. ಹಾಗಿದ್ದರೂ, ಪರೀಕ್ಷೆಯಲ್ಲಿ ಅನೇಕ ಮಕ್ಕಳು ಏಕೆ ವಂಚಿಸುತ್ತಾರೆ? ಮತ್ತು ಹಾಗೆ ಮಾಡುವುದು ಯೋಗ್ಯವೇ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ಇಬ್ರಿಯ 13:18ನ್ನು ಓದಿರಿ.] ಎಚ್ಚರ! ಪತ್ರಿಕೆಯ [ಪು 17ನ್ನು ತೋರಿಸಿರಿ] ಈ ಸಂಚಿಕೆಯು, ಪರೀಕ್ಷೆಯಲ್ಲಿ ವಂಚಿಸುವುದು ತಪ್ಪೋ? ಎಂಬ ಪ್ರಶ್ನೆಗೆ ಉತ್ತರವನ್ನು ನೀಡುತ್ತದೆ.”
ಕಾವಲಿನಬುರುಜು ಮೇ1
“ಕೆಲವು ಪ್ರಶ್ನೆಗಳಿಗೆ ಉತ್ತರವನ್ನೀಯಲು ಮಾನವ ಸಾಮರ್ಥ್ಯದಿಂದಾಗದು. ಈ ಉದಾಹರಣೆಯನ್ನು ಪರಿಗಣಿಸಿರಿ. [ಯೋಬ 21:7 ವನ್ನು ಓದಿ.] ನೀವು ದೇವರಲ್ಲಿ ಕೇಳಬಯಸುವ ಯಾವುದಾದರೊಂದು ಪ್ರಶ್ನೆಯು ನಿಮ್ಮ ಮನಸ್ಸಿನಲ್ಲಿದೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಲೋಕವ್ಯಾಪಕವಾಗಿರುವ ಜನರು, ಜೀವಿತದ ಮೂರು ಅತಿ ಪ್ರಾಮುಖ್ಯ ಪ್ರಶ್ನೆಗಳಿಗೆ ಹೇಗೆ ತೃಪ್ತಿಕರವಾದ ಉತ್ತರಗಳನ್ನು ಕಂಡುಕೊಂಡಿದ್ದಾರೆಂದು ಈ ಪತ್ರಿಕೆಯು ವಿವರಿಸುತ್ತದೆ.”