ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಏಪ್ರಿ. 1
“ಇತ್ತೀಚಿನ ವರ್ಷಗಳಲ್ಲಿ ದೇವದೂತರ ವಿಷಯದಲ್ಲಿ ಕುತೂಹಲವು ಹೆಚ್ಚುತ್ತಿದೆ. ಅವರು ಯಾರು ಮತ್ತು ಅವರು ನಮಗಾಗಿ ಏನೆಲ್ಲಾ ಮಾಡಬಲ್ಲರು ಎಂಬುದರ ಕುರಿತು ನೀವು ಎಂದಾದರೂ ಯೋಚಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಬಳಿಕ ಕೀರ್ತನೆ 34:7ನ್ನು ಓದಿ.] ದೇವದೂತರ ಹಿಂದಿನ, ಇಂದಿನ ಮತ್ತು ಮುಂದಿನ ಚಟುವಟಿಕೆಗಳ ಬಗ್ಗೆ ಬೈಬಲ್ ಏನನ್ನುತ್ತದೆ ಎಂಬುದನ್ನು ಈ ಪತ್ರಿಕೆಯು ತಿಳಿಸುತ್ತದೆ.” ಪುಟ 12ರಲ್ಲಿರುವ ಲೇಖನವನ್ನು ತೋರಿಸಿರಿ.
ಎಚ್ಚರ! ಏಪ್ರಿ. - ಜೂನ್
“ವೈದ್ಯಕೀಯ ವಿಜ್ಞಾನವು ರೋಗರುಜಿನಗಳನ್ನು ನಿರ್ಮೂಲಗೊಳಿಸುವುದರಲ್ಲಿ ಗಮನಾರ್ಹ ಪ್ರಗತಿಯನ್ನು ಮಾಡಿದೆ. ಆದರೆ, ಕಾಯಿಲೆಗಳೇ ಇಲ್ಲದ ಒಂದು ಲೋಕವನ್ನು ನಾವೆಂದಾದರೂ ನೋಡುವೆವು ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಇಲ್ಲಿರುವ ಈ ಪ್ರವಾದನೆ ನೆರವೇರುವಾಗ ಭೂಮಿಯ ಮೇಲಿರುವ ಪ್ರತಿಯೊಬ್ಬರೂ ಪರಿಪೂರ್ಣ ಆರೋಗ್ಯದಿಂದ ಇರುವರೆಂದು ಈ ಪತ್ರಿಕೆಯು ವಿವರಿಸುತ್ತದೆ.” ಯೆಶಾಯ 33:24ನ್ನು ಓದಿ.
ಕಾವಲಿನಬುರುಜು ಮೇ 1
“ಕ್ರೂರ ಕೃತ್ಯಗಳು ಇತ್ತೀಚಿಗೆ ಸರ್ವಸಾಮಾನ್ಯವಾಗುತ್ತಿವೆ ಎಂದನಿಸುತ್ತದೆ. [ಸ್ಥಳಿಕ ಅಥವಾ ಪತ್ರಿಕೆಯಲ್ಲಿರುವ ಉದಾಹರಣೆಯೊಂದನ್ನು ಕೊಡಿ.] ಜನರು ಯಾಕೆ ಇಷ್ಟು ಕ್ರೂರರಾಗಿದ್ದಾರೆಂದು ನೀವೆಂದಾದರೂ ಆಶ್ಚರ್ಯಪಟ್ಟದ್ದುಂಟೋ? [ಪ್ರತಿಕ್ರಿಯೆಗಾಗಿ ಅವಕಾಶ ಕೊಡಿ.] ಕ್ರೂರತನವು ಹೆಚ್ಚಾಗುವುದೆಂದು ಬೈಬಲ್ ಮುಂತಿಳಿಸಿತು. [2 ತಿಮೊಥೆಯ 3:1-5ನ್ನು ಓದಿ.] ‘ಕ್ರೂರತನವು ಎಂದಾದರೂ ಕೊನೆಗೊಳ್ಳುವುದೋ?’ ಎಂಬ ಪ್ರಶ್ನೆಗೆ ಈ ಪತ್ರಿಕೆಯು ಉತ್ತರ ನೀಡುತ್ತದೆ.”
ಎಚ್ಚರ! ಏಪ್ರಿ. - ಜೂನ್
“ದೀನಭಾವವು ಬಲವಲ್ಲ ಬಲಹೀನತೆಯೆಂದು ಜನರು ಅನೇಕವೇಳೆ ಹೇಳುತ್ತಾರೆ. ಇದು ನಿಜವೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಬಳಿಕ ಜ್ಞಾನೋಕ್ತಿ 22:4ನ್ನು ಓದಿ] ಈ ಗುಣದ ಬಗ್ಗೆ ಬೈಬಲ್ ಏನು ಹೇಳುತ್ತದೆಂದು ಈ ಪತ್ರಿಕೆಯು ತೋರಿಸುತ್ತದೆ.” ಪುಟ 20ರಲ್ಲಿರುವ ಲೇಖನವನ್ನು ತೋರಿಸಿರಿ.