ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ. - ಜೂನ್
“ನಮ್ಮ ಮಕ್ಕಳು ಸಂತೋಷಕರವಾದ, ಯಶಸ್ವಿದಾಯಕ ಜೀವನಗಳನ್ನು ನಡೆಸುವುದನ್ನು ನೋಡಲು ನಾವೆಲ್ಲರೂ ಬಯಸುತ್ತೇವೆ. ಇಂದಿನ ಒತ್ತಡಭರಿತ ಲೋಕದೊಂದಿಗೆ ವ್ಯವಹರಿಸಲು ಮಕ್ಕಳಿಗೆ ಅತಿ ಪ್ರಮುಖವಾಗಿ ಏನು ಅಗತ್ಯವಾಗಿದೆ ಎಂದು ನಿಮಗನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಜ್ಞಾನೋಕ್ತಿ 22:6ನ್ನು ಓದಿರಿ.] ಮಕ್ಕಳಿಗೆ ಏನು ಅಗತ್ಯವಾಗಿದೆ ಮತ್ತು ಹೆತ್ತವರು ಅವುಗಳನ್ನು ಹೇಗೆ ಪೂರೈಸಬಲ್ಲರು ಎಂಬುದನ್ನು ಎಚ್ಚರ! ಪತ್ರಿಕೆಯ ಈ ಸಂಚಿಕೆಯು ಚರ್ಚಿಸುತ್ತದೆ.”
ಕಾವಲಿನಬುರುಜು ಏಪ್ರಿ.15
“ದುರಂತಗಳನ್ನು ಸೇರಿಸಿ ಜೀವನದಲ್ಲಿ ಸಂಭವಿಸುವ ಎಲ್ಲಾ ಘಟನೆಗಳು ದೇವರ ಚಿತ್ತಕ್ಕನುಸಾರವಾಗಿವೆ ಎಂದು ಕೆಲವರು ನೆನಸುತ್ತಾರೆ. ನೀವು ಇದರ ಕುರಿತು ಎಂದಾದರೂ ಯೋಚಿಸಿದ್ದುಂಟೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅನೇಕರಿಗೆ ಈ ಪ್ರಾರ್ಥನೆಯು ತಿಳಿದಿದೆ. [ಮತ್ತಾಯ 6:10ಬಿ ಓದಿ.] ಭೂಮಿಗಾಗಿ ದೇವರ ಚಿತ್ತವು ಏನಾಗಿದೆ, ಮತ್ತು ಇದು ಯಾವಾಗ ಸಂಪೂರ್ಣವಾಗಿ ನೆರವೇರುವುದು? ಈ ಪತ್ರಿಕೆಯು ಬೈಬಲಿನ ಉತ್ತರವನ್ನು ಒದಗಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ರಾಜತಂತ್ರದ ಮೂಲಕ ನಿಜ ಲೋಕ ಶಾಂತಿಯನ್ನು ತರಸಾಧ್ಯವಿದೆ ಎಂದು ಅನೇಕರು ನಂಬುತ್ತಾರೆ. ಹಾಗಾದರೆ, ಶಾಂತಿ ಸಂಧಾನಗಳು ಸೀಮಿತ ಯಶಸ್ಸನ್ನು ಮಾತ್ರ ಕಾಣುವುದೇಕೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ರಾಜತಂತ್ರವು ಅನೇಕಾವರ್ತಿ ಏಕೆ ನೆಲಕಚ್ಚುತ್ತದೆ ಎಂಬುದನ್ನು ಈ ಪತ್ರಿಕೆಯು ಪರಿಶೀಲಿಸುತ್ತದೆ. ಮಾತ್ರವಲ್ಲದೆ, ನಾವು ನಿತ್ಯಕ್ಕೂ ಅನುಭವಿಸಸಾಧ್ಯವಿರುವ ನಿಜ ಶಾಂತಿಯು ಸ್ಥಾಪಿಸಲ್ಪಡಬೇಕೆಂಬ ನಮ್ಮ ಬಯಕೆಯು ಕೈಗೂಡಲಿರುವಂಥ ಒಂದು ಲೋಕದ ಕುರಿತಾದ ಬೈಬಲ್ ವಾಗ್ದಾನವನ್ನೂ ಅದು ವಿವರಿಸುತ್ತದೆ! [ಕೀರ್ತನೆ 37:11, 29ನ್ನು ಓದಿರಿ.]”
ಕಾವಲಿನಬುರುಜು ಮೇ1
“ಮಾನವ ಸಮಾಜವನ್ನು ಉದ್ಧಾರಗೊಳಿಸುವ ಸಲುವಾಗಿ, ಕೆಲವು ಧಾರ್ಮಿಕ ಮುಖಂಡರು ರಾಜಕೀಯದಲ್ಲಿ ಒಳಗೂಡುತ್ತಾರೆ. ಆದರೂ, ಜನರು ಯೇಸುವನ್ನು ರಾಜನನ್ನಾಗಿ ಮಾಡಲು ಬಯಸಿದಾಗ ಅವನು ಏನು ಮಾಡಿದನೆಂಬುದನ್ನು ಗಮನಿಸಿರಿ. [ಯೋಹಾನ 6:15ನ್ನು ಓದಿರಿ.] ಇತರರಿಗೆ ಬಾಳುವ ಒಳಿತನ್ನು ತರುವ ವಿಷಯದ ಮೇಲೆ ಯೇಸು ಗಮನವನ್ನು ಕೇಂದ್ರೀಕರಿಸಿದನು. ಅದು ಏನಾಗಿದೆ ಎಂಬುದನ್ನು ಈ ಪತ್ರಿಕೆಯು ಚರ್ಚಿಸುತ್ತದೆ.”