ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ಒಂದು ದುರ್ಘಟನೆಯು ಒಬ್ಬ ವ್ಯಕ್ತಿಯನ್ನು ವೈಯಕ್ತಿಕವಾಗಿ ಬಾಧಿಸುವಾಗ, ಅವನು ಅನೇಕವೇಳೆ, ‘ದೇವರು ಸರ್ವಶಕ್ತನಲ್ಲವೇ? ಹೀಗೆ ನಾನು ಕಷ್ಟಾನುಭವಿಸುವಂತೆ ಆತನೇಕೆ ಅಪೇಕ್ಷಿಸುತ್ತಾನೆ?’ ಎಂದು ಆಲೋಚಿಸಬಹುದು. ನೀವು ಎಂದಾದರೂ ಹಾಗೆ ಯೋಚಿಸಿದ್ದುಂಟೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇದರ ಕುರಿತು ಬೈಬಲ್ ಕಾಲಗಳಲ್ಲಿ ಕೆಲವು ನಂಬಿಗಸ್ತ ವ್ಯಕ್ತಿಗಳು ಸೋಜಿಗಪಟ್ಟದ್ದುಂಟು. [ಹಬಕ್ಕೂಕ 1:13ನ್ನು ಓದಿ.] ಆ ಪ್ರಶ್ನೆಗೆ ದೇವರ ಉತ್ತರವೇನೆಂಬುದನ್ನು ಎಚ್ಚರ! ಪತ್ರಿಕೆಯ ಈ ಲೇಖನದಲ್ಲಿ ಸವಿವರವಾಗಿ ತಿಳಿಸಲಾಗಿದೆ.”
ಕಾವಲಿನಬುರುಜು ಆಗ.15
“ಇಂದು, ವಿವಾಹ ಮತ್ತು ಮಕ್ಕಳನ್ನು ಬೆಳೆಸುವುದರ ಕುರಿತು ಸಲಹೆಸೂಚನೆಗಳನ್ನು ಪಡೆದುಕೊಳ್ಳಲು ಜನರು ಅನೇಕ ಮೂಲಗಳಿಗೆ ಹೋಗುತ್ತಾರೆ. ಆದರೆ, ಅತ್ಯುತ್ತಮವಾದ ಸಲಹೆಯು ಎಲ್ಲಿ ಸಿಗುವುದು ಎಂದು ನಿಮಗನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು ಕುಟುಂಬ ಜೀವನದ ಕುರಿತು ಮಾನವಕುಲದ ಸೃಷ್ಟಿಕರ್ತನು ಒದಗಿಸಿರುವ ವಿವೇಕಯುತ ಬುದ್ಧಿವಾದದಲ್ಲಿ ಕೆಲವೊಂದನ್ನು ಚರ್ಚಿಸುತ್ತದೆ.” ಕೀರ್ತನೆ 32:8ನ್ನು ಓದಿ.
ಎಚ್ಚರ! ಜುಲೈ - ಸೆಪ್ಟೆಂ.
“ಅನೇಕರು ಈಗಲೂ ವಿವಾಹವನ್ನು ಪವಿತ್ರವಾದದ್ದಾಗಿ ವೀಕ್ಷಿಸುವುದಾದರೂ, ವೈವಾಹಿಕ ಜೀವನದಲ್ಲಿನ ಅಸಂತೋಷವು ಹೆಚ್ಚುತ್ತಿದೆ ಎಂಬುದನ್ನು ನೀವು ಒಪ್ಪುವುದಿಲ್ಲವೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಶಾಸ್ತ್ರವಚನದಲ್ಲಿ ಒತ್ತಿ ಹೇಳಲ್ಪಟ್ಟಿರುವ ಎರಡು ಗುಣಗಳು ವಿವಾಹಿತ ದಂಪತಿಗಳಿಗೆ ಹೇಗೆ ಸಹಾಯಮಾಡಬಲ್ಲದೆಂಬುದರ ಕುರಿತು ಯೋಚಿಸಿರಿ. [ಎಫೆಸ 5:33ನ್ನು ಓದಿ.] ಕಷ್ಟದ ಪರಿಸ್ಥಿತಿಗಳು ಎದ್ದಾಗಲೂ ಗಂಡ ಮತ್ತು ಹೆಂಡತಿ ಹೇಗೆ ಪರಸ್ಪರ ಪ್ರೀತಿ ಮತ್ತು ಗೌರವವನ್ನು ತೋರಿಸಬಲ್ಲರು ಎಂಬುದನ್ನು ಎಚ್ಚರ! ಪತ್ರಿಕೆಯ ಈ ಲೇಖನವು ವಿವರಿಸುತ್ತದೆ.”
ಕಾವಲಿನಬುರುಜು ಸೆಪ್ಟಂ.1
“ನಾವೆಲ್ಲರೂ ಸಂತೋಷವಾಗಿರಲು ಬಯಸುತ್ತೇವೆ. ಇಲ್ಲಿ ಸೂಚಿಸಲ್ಪಟ್ಟಿರುವ ವಿಷಯಗಳು ನಿಜವಾಗಿಯೂ ಸಂತೋಷವನ್ನು ತರಬಲ್ಲವು ಎಂದು ನಿಮಗನಿಸುತ್ತದೋ? [ಮತ್ತಾಯ 5:4, 6, 10ನ್ನು ಓದಿ. ನಂತರ ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಪ್ರಖ್ಯಾತ ಪರ್ವತಪ್ರಸಂಗದಿಂದ ತೆಗೆಯಲ್ಪಟ್ಟ ಆ ಮಾತುಗಳ ಅರ್ಥವನ್ನು ಈ ಪತ್ರಿಕೆಯು ವಿವರಿಸುತ್ತದೆ ಮತ್ತು ಸಂತೋಷವಾಗಿರಲು ಇನ್ನಾವ ವಿಷಯಗಳು ಅಗತ್ಯ ಎಂಬುದನ್ನು ಚರ್ಚಿಸುತ್ತದೆ.”