ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/03 ಪು. 1
  • ಬ್ರಾಂಚ್‌ ಪತ್ರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬ್ರಾಂಚ್‌ ಪತ್ರ
  • 2003 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರೀತಿ, ನಂಬಿಕೆ ಮತ್ತು ವಿಧೇಯತೆಗೆ ಒಂದು ಪುರಾವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಬ್ರಾಂಚ್‌ನಿಂದ ಪತ್ರ
    2005 ನಮ್ಮ ರಾಜ್ಯದ ಸೇವೆ
  • ಬ್ರಾಂಚ್‌ನಿಂದ ಪತ್ರ
    2006 ನಮ್ಮ ರಾಜ್ಯದ ಸೇವೆ
  • ಬ್ರಾಂಚ್‌ ಆಫೀಸ್‌ನಲ್ಲಿ ಏನೆಲ್ಲ ಕೆಲಸಕಾರ್ಯ ನಡೆಯುತ್ತದೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
2003 ನಮ್ಮ ರಾಜ್ಯದ ಸೇವೆ
km 9/03 ಪು. 1

ಬ್ರಾಂಚ್‌ ಪತ್ರ

ಪ್ರಿಯ ರಾಜ್ಯ ಪ್ರಚಾರಕರೇ:

‘ದೇವರು ಬೆಳೆಸುತ್ತಾ ಬಂದನು.’ (1 ಕೊರಿಂ. 3:6) ಭಾರತ ದೇಶದಲ್ಲಿ ದೇವಪ್ರಭುತ್ವಾತ್ಮಕ ಅಭಿವೃದ್ಧಿಯನ್ನು ನೋಡುವುದು ಎಷ್ಟು ರೋಮಾಂಚನದಾಯಕವಾಗಿದೆ! 2003ರ ಸೇವಾ ವರ್ಷದಲ್ಲಿ, 17,000ಕ್ಕಿಂತಲೂ ಹೆಚ್ಚು ಬೈಬಲ್‌ ಅಧ್ಯಯನಗಳು ನಡೆಸಲ್ಪಡುತ್ತಿದ್ದು, ಬೈಬಲ್‌ ಅಧ್ಯಯನಗಳಲ್ಲಿ ಒಂದು ಹೊಸ ಉಚ್ಚಾಂಕವನ್ನು ನಾವು ದಾಖಲಿಸಿದ್ದೇವೆ. ಇದು ನಿಜಕ್ಕೂ ಶ್ಲಾಘನೀಯ. ನಾವು ಜ್ಞಾಪಕಾಚರಣೆಯ ಹಾಜರಿಯಲ್ಲಿ ಒಂದು ಹೊಸ ಉಚ್ಚಾಂಕವನ್ನು ಪಡೆದಿದ್ದೇವೆ. ಅದು 56,856 ಆಗಿದ್ದು, ಕಳೆದ ವರ್ಷದ ಹಾಜರಿಗಿಂತ 2,226 ಹೆಚ್ಚಳವಾಗಿದೆ, ಮತ್ತು ಇದು ಭಾರತದ ಪ್ರಚಾರಕರ ಒಟ್ಟು ಸಂಖ್ಯೆಗಿಂತ ಸುಮಾರು ಮೂವತ್ತಮೂರು ಸಾವಿರ ಅಧಿಕವಾಗಿದೆ. ಇದು ಭವಿಷ್ಯತ್ತಿನಲ್ಲಿ ಅಭಿವೃದ್ಧಿಗೆ ಅತ್ಯುತ್ತಮ ಸಾಧ್ಯತೆಯಿದೆ ಎಂಬುದನ್ನು ಸೂಚಿಸುತ್ತದೆ.

ಈಗ ನಾವು, ಭಾರತೀಯ ಭಾಷೆಗಳ ಪತ್ರಿಕೆಗಳನ್ನು ಮುದ್ರಿಸುತ್ತಿರುವ ಏಕಮಾತ್ರ ಬ್ರಾಂಚ್‌ ಆಗಿದ್ದೇವೆ. ಈ ಪತ್ರಿಕೆಗಳು 25ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ವಿತರಿಸಲ್ಪಡುತ್ತವೆ. ಇದು ಪತ್ರಿಕೆಗಳ ಉತ್ಪಾದನೆಯಲ್ಲಿ 65 ಪ್ರತಿಶತದಷ್ಟು ಹೆಚ್ಚಳಕ್ಕೆ ನಡೆಸಿವೆ. ಮುದ್ರಣ ವಿಭಾಗದಲ್ಲಿ ಈ ಹೆಚ್ಚಿನ ಕೆಲಸವನ್ನು ಸೀಮಿತ ಸಂಖ್ಯೆಯ ಸಿಬ್ಬಂದಿಯಿಂದ ಸಾಧಿಸಲಾಗುತ್ತಿದೆ. ಈ ದೊಡ್ಡ ಮೊತ್ತದ ಬೇಡಿಕೆಯನ್ನು ಪೂರೈಸಲಿಕ್ಕಾಗಿ ಇನ್ನೊಂದು ನಾಲ್ಕು-ವರ್ಣದ ಮುದ್ರಣ ಯಂತ್ರವನ್ನು ಸೇರಿಸಲಾಗಿದೆ. ಈ ಮುದ್ರಣ ಯಂತ್ರಗಳು ನಿಮಿಷಕ್ಕೆ 60 ಪತ್ರಿಕೆಗಳನ್ನು ಛಾಪಿಸುತ್ತವೆ. ಲೋಕವ್ಯಾಪಕ ಕ್ಷೇತ್ರಕ್ಕೆ ಸರಬರಾಯಿ ಮಾಡಲಿಕ್ಕಾಗಿ, ಪತ್ರಿಕೆಗಳ ಮತ್ತು ಇತರ ಸಾಹಿತ್ಯದ ಗುಣಮಟ್ಟವನ್ನು ಉತ್ತಮಗೊಳಿಸಲು ಶ್ರೇಷ್ಠ ಮಟ್ಟದ ಕಾಗದವನ್ನು ಉಪಯೋಗಿಸಲಾಗುತ್ತಿದೆ.

ನಾವು 2004ರ ಸೇವಾ ವರ್ಷವನ್ನು ಆರಂಭಿಸುತ್ತಿರುವಾಗ, 2003, ಡಿಸೆಂಬರ್‌ 7ರಂದು ಬೆಂಗಳೂರಿನಲ್ಲಿರುವ ಹೊಸ ಬ್ರಾಂಚ್‌ ಸೌಕರ್ಯಗಳ ಸಮರ್ಪಣೆಗಾಗಿ ನಾವು ಎದುರುನೋಡುತ್ತಿದ್ದೇವೆ. ಈ ಸಂದರ್ಭವು ಹಾಜರಿರುವವರಿಗೆ ಒಂದು ಆತ್ಮಿಕ ಸಂಭ್ರಮವಾಗಿರಲಿ ಮತ್ತು ಯೆಹೋವನಿಗೆ ಮಹಾ ಸ್ತುತಿಗಳು ಫಲಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಹೌದು, ಹೊಸ ಬ್ರಾಂಚ್‌ ಸೌಕರ್ಯಗಳನ್ನು ಯೆಹೋವನು ‘ಬೆಳೆಸುತ್ತಾ ಬರುವಾಗ,’ ಅದು ಆತನಿಂದ ಉಪಯೋಗಿಸಲ್ಪಡುತ್ತಾ ಮುಂದುವರಿಯುವುದು ಎಂಬ ಖಾತ್ರಿ ನಮಗಿದೆ.

ನಿಮ್ಮ ಸಹೋದರರು,

ಭಾರತದ ಬ್ರಾಂಚ್‌ ಆಫೀಸ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ