ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ. - ಮಾರ್ಚ್
“ನೈಸರ್ಗಿಕ ವಿಪತ್ತುಗಳಿಂದ ಆಗುವ ಕಷ್ಟಸಂಕಷ್ಟಗಳನ್ನು ನೋಡುವುದು ಅಪಾರ ದುಃಖವನ್ನುಂಟುಮಾಡುತ್ತದೆ. [ಸ್ಥಳಿಕವಾಗಿ ಎಲ್ಲರಿಗೆ ತಿಳಿದಿರುವ ಒಂದು ಉದಾಹರಣೆಯನ್ನು ತಿಳಿಸಿರಿ.] ಇಂತಹ ವಿಪತ್ತುಗಳು ಹೆಚ್ಚಾಗುತ್ತಾ ಇವೆಯೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪ್ರಶ್ನೆಯ ಕುರಿತು ಈ ಪತ್ರಿಕೆಯು ವಿವರಿಸುತ್ತದೆ. ಮತ್ತು ಇಂತಹ ದುರಂತಗಳಲ್ಲಿ ತಮ್ಮ ಪ್ರಿಯ ಜನರನ್ನು ಕಳೆದುಕೊಂಡಿರುವವರಿಗೆ ಇದು ಸಾಂತ್ವನವನ್ನು ಸಹ ನೀಡುತ್ತದೆ.” ಯೋಹಾನ 5:28, 29ನ್ನು ಓದಿರಿ.
ಕಾವಲಿನಬುರುಜು ಮಾರ್ಚ್15
“ನಮ್ಮಲ್ಲಿ ಹೆಚ್ಚಿನವರು ತಮ್ಮ ಪ್ರಿಯ ವ್ಯಕ್ತಿಯನ್ನು ಮರಣದಲ್ಲಿ ಕಳೆದುಕೊಂಡಾಗ ಉಂಟಾಗುವ ತೀವ್ರ ದುಃಖವನ್ನು ಅನುಭವಿಸಿದ್ದೇವೆ. ಸಾಂತ್ವನ ನೀಡುವ ಈ ವಾಗ್ದಾನದ ಕುರಿತು ನಿಮಗೆ ತಿಳಿದಿದೆಯೊ? [ಅ. ಕೃತ್ಯಗಳು 24:15ನ್ನು ಓದಿರಿ. ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಆದರೆ ಯಾರಿಗೆ ಪುನರುತ್ಥಾನವಾಗುವುದು, ಯಾವಾಗ ಪುನರುತ್ಥಾನವಾಗುವುದು ಮತ್ತು ಎಲ್ಲಿ ಪುನರುತ್ಥಾನವಾಗುವುದು ಎಂಬುದರ ಬಗ್ಗೆ ಅನೇಕರು ಯೋಚಿಸುತ್ತಾರೆ. ಈ ಎಲ್ಲ ಪ್ರಶ್ನೆಗಳಿಗೆ ಬೈಬಲಿನಲ್ಲಿರುವ ಉತ್ತರಗಳನ್ನು ಈ ಪತ್ರಿಕೆಯು ನೀಡುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಮುಂದಿನ 20 ಅಥವಾ 30 ವರುಷಗಳಲ್ಲಿ ಲೋಕವು ಹೇಗಿರುತ್ತದೆಂದು ನೀವು ಎಂದಾದರೂ ಆಲೋಚಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಕೀರ್ತನೆ 119:105ನ್ನು ಓದಿರಿ.] ಭವಿಷ್ಯತ್ತಿನಲ್ಲಿ ಏನಾಗಲಿದೆ ಎಂಬುದನ್ನು ನಾವು ವಿವೇಚಿಸಿ ತಿಳಿದುಕೊಳ್ಳಲು ಸಾಧ್ಯವಾಗುವಂತೆ ನಮ್ಮ ಮುಂದಿರುವ ಮಾರ್ಗವನ್ನು ಬೈಬಲ್ ಬೆಳಗಿಸುತ್ತದೆ. ಕಾಲಪ್ರವಾಹದಲ್ಲಿ ನಾವೀಗ ಎಲ್ಲಿದ್ದೇವೆ ಮತ್ತು ಉಜ್ವಲ ಭವಿಷ್ಯತ್ತನ್ನು ನಾವೇಕೆ ಎದುರುನೋಡಸಾಧ್ಯವಿದೆ ಎಂಬುದನ್ನು ತೋರಿಸುವ ಪ್ರವಾದನೆಗಳನ್ನು ಈ ಪತ್ರಿಕೆಯು ಪರಿಶೀಲಿಸುತ್ತದೆ.”
ಕಾವಲಿನಬುರುಜು ಏಪ್ರಿ.1
“ಈ ಪ್ರಖ್ಯಾತ ಹೇಳಿಕೆಯು ದೇವರ ಜ್ಞಾನವನ್ನು ಪಡೆದುಕೊಳ್ಳುವುದರ ಪ್ರಮುಖತೆಯನ್ನು ಎತ್ತಿಹೇಳುತ್ತದೆ. [ಮತ್ತಾಯ 4:4ನ್ನು ಓದಿರಿ.] ಆದರೆ, ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾದದ್ದಾಗಿದೆ ಎಂದು ಅನೇಕ ಜನರು ನೆನಸುತ್ತಾರೆ. ನಿಮಗೆ ಹಾಗನಿಸಿದೆಯೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯಮಾಡಬಲ್ಲ ಪ್ರಾಯೋಗಿಕ ಸಲಹೆಗಳನ್ನು ಈ ಪತ್ರಿಕೆಯು ನೀಡುತ್ತದೆ.”