ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜನವರಿ-ಮಾರ್ಚ್
“ದೇವರಲ್ಲಿ ನಂಬಿಕೆಯಿಟ್ಟರೆ ಐಶ್ವರ್ಯಕೊಟ್ಟು ನಮ್ಮನ್ನು ಆಶೀರ್ವದಿಸುತ್ತಾನೆ, ಆದರೆ ಬಡತನ ಆತನ ಶಾಪ ಎಂದು ಕೆಲವರು ಹೇಳುತ್ತಾರೆ. ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಐಶ್ವರ್ಯದ ವ್ಯಾಮೋಹ ತಪ್ಪೆಂದು ದೇವರು ಯಾಕೆ ಹೇಳುತ್ತಾನೆಂಬುದಕ್ಕೆ ಒಂದು ವಚನವನ್ನು ನಿಮಗೆ ಓದಿ ಹೇಳಲೋ? [ಮನೆಯವನು ಒಪ್ಪುವಲ್ಲಿ 1 ತಿಮೊಥೆಯ 6:9, 10 ಓದಿ.] ದೇವಭಕ್ತರು ಯಾವ ರೀತಿಯ ಆಶೀರ್ವಾದಗಳನ್ನು ನಿರೀಕ್ಷಿಸಬಹುದೆಂದು ಈ ಪತ್ರಿಕೆ ಚರ್ಚಿಸುತ್ತದೆ.”
ಎಚ್ಚರ! ಜನವರಿ-ಮಾರ್ಚ್
“ಇಂದು ಕುಟುಂಬಗಳು ತುಂಬ ಸಮಸ್ಯೆಗಳನ್ನು ಎದುರಿಸುತ್ತಿವೆ. ಕುಟುಂಬ ಸಂತೋಷಕ್ಕೆ ಮನೆಯಲ್ಲಿರುವ ಪ್ರತಿಯೊಬ್ಬರೂ ಹೇಗೆ ನೆರವಾಗಬಹುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಕುಟುಂಬ ಸಂತೋಷವನ್ನು ಹೆಚ್ಚಿಸುವ ಒಂದು ಸೂತ್ರವನ್ನು ಬೈಬಲಿನಿಂದ ನಿಮಗೆ ಓದಿ ತಿಳಿಸಲೋ? [ಮನೆಯವನು ಒಪ್ಪುವಲ್ಲಿ ಜ್ಞಾನೋಕ್ತಿ 1:5 ಓದಿ.] ಈ ಪತ್ರಿಕೆಯಲ್ಲಿ, ನಾನಾ ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ಯಶಸ್ವಿಗಳಾಗಿರುವ ಕುಟುಂಬಗಳ ಸತ್ಯಕಥೆಗಳಿವೆ.” ಪುಟ 14ರಿಂದ ಪ್ರಾರಂಭವಾಗುವ ಲೇಖನಗಳನ್ನು ತೋರಿಸಿ.