ಮಹಾ ಬೋಧಕನಿಂದ ಕಲಿಯಿರಿ ಪುಸ್ತಕವನ್ನು ನೀಡುವುದು
◼ “ಇಲ್ಲಿ ಹೇಳಿರುವಂಥ ರೀತಿಯಲ್ಲಿ ಜನರು ಜೀವಿಸುವುದಾದರೆ ಈ ಲೋಕವು ಜೀವಿಸಲು ಹೆಚ್ಚು ಉತ್ತಮವಾದ ಸ್ಥಳವಾಗಿರುವುದು ಎಂದು ನಿಮಗನಿಸುತ್ತದೋ? [ಮತ್ತಾಯ 7:12ಎ ಭಾಗವನ್ನು ಓದಿ. ನಂತರ ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪುಸ್ತಕವು, ಜೀವಿಸಿರುವವರಲ್ಲೇ ಅತ್ಯಂತ ಮಹಾನ್ ಬೋಧಕನು ಕೊಟ್ಟ ಅನೇಕ ಪಾಠಗಳನ್ನು ಹೊಂದಿದೆ.” ಅಧ್ಯಾಯ 17ರಲ್ಲಿರುವ ಚಿತ್ರಗಳು ಮತ್ತು ಅವುಗಳ ಕೆಳಗಿನ ಹೇಳಿಕೆಗಳನ್ನು ಎತ್ತಿತೋರಿಸಿರಿ.
◼ “ಅನೇಕ ಹೆತ್ತವರು ತಮ್ಮ ಮಕ್ಕಳಲ್ಲಿ ಹಿತಕರವಾದ ಮೌಲ್ಯಗಳನ್ನು ಬೇರೂರಿಸಲು ಪ್ರಯತ್ನಿಸುತ್ತಾರೆ. ಇದು ಪ್ರಾಮುಖ್ಯವೆಂದು ನಿಮಗೆ ತೋರುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಜ್ಞಾನೋಕ್ತಿ 22:6ನ್ನು ಓದಿ.] ಹೆತ್ತವರು ತಮ್ಮ ಮಕ್ಕಳಿಗೆ ಚಿಕ್ಕ ಪ್ರಾಯದಿಂದಲೇ ತರಬೇತುಗೊಳಿಸಬೇಕು ಎಂದು ಪ್ರೋತ್ಸಾಹಿಸಲ್ಪಟ್ಟಿರುವುದನ್ನು ಗಮನಿಸಿರಿ. ಇದನ್ನು ಮಾಡುವಂತೆ ಹೆತ್ತವರಿಗೆ ಸಹಾಯಮಾಡುವ ಸಲುವಾಗಿ ಈ ಪುಸ್ತಕವನ್ನು ವಿನ್ಯಾಸಿಸಲಾಗಿದೆ.” ಅಧ್ಯಾಯ 15, 18, ಅಥವಾ 32ರಲ್ಲಿರುವ ಚಿತ್ರಗಳು ಮತ್ತು ಅವುಗಳ ಕೆಳಗಿನ ಹೇಳಿಕೆಗಳನ್ನು ಎತ್ತಿತೋರಿಸಿರಿ.
◼ “ಅನೇಕವೇಳೆ ತಮ್ಮ ಮಕ್ಕಳು ಕೇಳುವ ಪ್ರಶ್ನೆಗಳಿಂದ ಹೆತ್ತವರು ಕಂಗಾಲಾಗುತ್ತಾರೆ. ಅವುಗಳಲ್ಲಿ ಕೆಲವು ಪ್ರಶ್ನೆಗಳನ್ನು ಉತ್ತರಿಸಲು ಸಹ ಕಷ್ಟಕರವಾಗಿರಬಹುದು, ಅಲ್ಲವೇ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ 2 ತಿಮೊಥೆಯ 3:14, 15ನ್ನು ಓದಿ.] ತಿಮೊಥೆಯನ ತಾಯಿ ಮತ್ತು ಅಜ್ಜಿ ಅವನು ಚಿಕ್ಕವನಾಗಿದ್ದಾಗಿನಿಂದಲೇ ಅವನಿಗೆ ಶಾಸ್ತ್ರವಚನಗಳ ಕುರಿತು ಕಲಿಸಿದರು. ಇಂದು ತಮ್ಮ ಮಕ್ಕಳಿಗೂ ಹೀಗೆಯೇ ಕಲಿಸುವಂತೆ ಈ ಪುಸ್ತಕವು ಹೆತ್ತವರಿಗೆ ಸಹಾಯಮಾಡಬಲ್ಲದು.” ಅಧ್ಯಾಯ 11, 12, ಅಥವಾ 34ರಿಂದ 36ರಲ್ಲಿರುವ ಚಿತ್ರಗಳು ಮತ್ತು ಅವುಗಳ ಕೆಳಗಿನ ಹೇಳಿಕೆಗಳಲ್ಲಿ ಕೆಲವನ್ನು ಎತ್ತಿತೋರಿಸಿರಿ.