ಪ್ರಶ್ನಾ ಚೌಕ
◼ ಬೇರೆ ದೇಶಗಳಲ್ಲಿನ ಅಗತ್ಯದಲ್ಲಿರುವ ಸಹೋದರರಿಗೆ ಧನಸಹಾಯವನ್ನು ಕಳುಹಿಸುವ ಅತ್ಯುತ್ತಮ ವಿಧ ಯಾವುದು?
ಕೆಲವೊಮ್ಮೆ ಹಿಂಸಾಚಾರ, ದುರಂತ, ಅಥವಾ ಇತರ ಕಷ್ಟಕರ ಪರಿಸ್ಥಿತಿಗಳ ಕಾರಣದಿಂದಾಗಿ ಬೇರೊಂದು ದೇಶದಲ್ಲಿರುವ ಸಹೋದರರು ಭೌತಿಕ ಅಗತ್ಯದಲ್ಲಿರುವುದರ ಕುರಿತು ನಾವು ಕೇಳಿಸಿಕೊಳ್ಳುತ್ತೇವೆ. ಕೆಲವು ಸಹೋದರರು ಈ ಹಣವನ್ನು ಒಬ್ಬ ನಿರ್ದಿಷ್ಟ ವ್ಯಕ್ತಿ, ನಿರ್ದಿಷ್ಟ ಸಭೆ, ಅಥವಾ ಒಂದು ನಿರ್ದಿಷ್ಟ ನಿರ್ಮಾಣಕಾರ್ಯ ಯೋಜನೆಗೆ ಉಪಯೋಗಿಸುವಂತೆ ವಿನಂತಿಸಿಕೊಳ್ಳುತ್ತಾ, ಇಂಥ ದೇಶಗಳಲ್ಲಿರುವ ಬ್ರಾಂಚ್ ಆಫೀಸ್‌ಗಳಿಗೆ ನೇರವಾಗಿ ದಾನಗಳನ್ನು ಕಳುಹಿಸಲು ಪ್ರೇರಿಸಲ್ಪಟ್ಟಿದ್ದಾರೆ.—2 ಕೊರಿಂ. 8:1-4.
ಜೊತೆ ವಿಶ್ವಾಸಿಗಳಿಗಾಗಿ ತೋರಿಸಲ್ಪಡುವ ಇಂತಹ ಪ್ರೀತಿಪರ ಕಾಳಜಿಯು ಶ್ಲಾಘನೀಯವಾಗಿರುವುದಾದರೂ, ಅನೇಕವೇಳೆ ದಾನಿಯ ಮನಸ್ಸಿನಲ್ಲಿರುವ ವಿಷಯಕ್ಕಿಂತ ಹೆಚ್ಚು ತುರ್ತಿನ ಅಗತ್ಯಗಳು ಬೇರೆ ಇರುತ್ತವೆ. ಕೆಲವು ವಿದ್ಯಮಾನಗಳಲ್ಲಿ, ದಾನಿಯು ಯಾವ ವಿಷಯಕ್ಕಾಗಿ ಉಪಯೋಗಿಸುವಂತೆ ಕಳುಹಿಸುತ್ತಾನೋ ಅದು ಈಗಾಗಲೇ ಪೂರೈಸಲ್ಪಟ್ಟಿರುತ್ತದೆ. ಹೀಗಿರುವುದಾದರೂ, ಲೋಕವ್ಯಾಪಕ ಕೆಲಸಕ್ಕಾಗಿ, ರಾಜ್ಯ ಸಭಾಗೃಹ ನಿಧಿಗಾಗಿ, ಅಥವಾ ದುರಂತ ಪರಿಹಾರಕ್ಕಾಗಿ ಕಾಣಿಕೆಗಳು ಕಳುಹಿಸಲ್ಪಡುವಾಗ ಅವು ದಾನಿಯು ನಿರ್ದೇಶಿಸಿದಂತೆ ಉಪಯೋಗಿಸಲ್ಪಡುವುದು ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ.
ಅನಿರೀಕ್ಷಿತವಾಗಿ ಬರುವ ಅಗತ್ಯಗಳ ವಿಷಯದಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸುವಂತೆ ಎಲ್ಲ ಬ್ರಾಂಚ್‌ಗಳಲ್ಲಿರುವ ಸಹೋದರರನ್ನು ಸಂಪೂರ್ಣವಾಗಿ ತರಬೇತುಗೊಳಿಸಲಾಗಿದೆ. ಎಲ್ಲ ವಿದ್ಯಮಾನಗಳಲ್ಲೂ, ಈ ವಿಷಯದ ಕುರಿತು ಬ್ರಾಂಚ್ ಆಫೀಸು ಆಡಳಿತ ಮಂಡಲಿಗೆ ತಿಳಿಸುತ್ತಾ ಇರುತ್ತದೆ. ಹೆಚ್ಚಿನ ನೆರವು ಬೇಕಾಗಿರುವಲ್ಲಿ, ಆಡಳಿತ ಮಂಡಲಿಯು ಹತ್ತಿರದ ಬ್ರಾಂಚ್‌ಗಳು ಸಹಾಯಮಾಡುವಂತೆ ಕೇಳಿಕೊಳ್ಳಬಹುದು ಅಥವಾ ಮುಖ್ಯ ಕಾರ್ಯಾಲಯದಿಂದಲೇ ದಾನಗಳು ನೇರವಾಗಿ ಕಳುಹಿಸಲ್ಪಡಬಹುದು.—2 ಕೊರಿಂ. 8:14, 15.
ಆದುದರಿಂದ, ಲೋಕವ್ಯಾಪಕ ಕೆಲಸಕ್ಕಾಗಿ, ಬೇರೆ ದೇಶಗಳಲ್ಲಿನ ನಿರ್ಮಾಣ ಕಾರ್ಯಕ್ಕಾಗಿ, ಅಥವಾ ದುರಂತ ಪರಿಹಾರಕ್ಕಾಗಿ ಕೊಡಲ್ಪಡುವ ಎಲ್ಲ ಕಾಣಿಕೆಗಳು ಸಭೆಯ ಮೂಲಕವಾಗಿ ಅಥವಾ ನೇರವಾಗಿ ನೀವು ಜೀವಿಸುತ್ತಿರುವ ದೇಶದಲ್ಲಿನ ಬ್ರಾಂಚ್ ಆಫೀಸ್‌ಗೆ ಕಳುಹಿಸಲ್ಪಡಬೇಕು. ಈ ರೀತಿಯಲ್ಲಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಡಳಿತ ಮಂಡಲಿಯು ಸ್ಥಾಪಿಸಿರುವ ಸಂಘಟನಾತ್ಮಕ ಏರ್ಪಾಡುಗಳ ಮೂಲಕ ಲೋಕವ್ಯಾಪಕ ಸಹೋದರರ ಬಳಗದ ಅಗತ್ಯಗಳನ್ನು ಕ್ರಮಬದ್ಧವಾದ ರೀತಿಯಲ್ಲಿ ಪೂರೈಸುತ್ತದೆ.—ಮತ್ತಾ. 24:45-47; 1 ಕೊರಿಂ. 14:33, 40.