ಸಾಧ್ಯವಿರುವಷ್ಟು ಹೆಚ್ಚು ಜನರನ್ನು ತಲಪುವುದು
1. ಸಾಧ್ಯವಿರುವಷ್ಟು ಹೆಚ್ಚು ಜನರಿಗೆ ಸುವಾರ್ತೆಯನ್ನು ದೊರಕಿಸಲು ಆರಂಭದ ಕ್ರೈಸ್ತರು ಏನು ಮಾಡಿದರು?
1 ರಾಜ್ಯದ ಸಂದೇಶವನ್ನು ಹಬ್ಬಿಸಲು ಯೇಸುವಿನ ಆರಂಭದ ಹಿಂಬಾಲಕರು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿದರು. ಸಾಧ್ಯವಿರುವಷ್ಟು ಹೆಚ್ಚು ಜನರಿಗೆ ಸುವಾರ್ತೆಯನ್ನು ತಲಪಿಸಲಿಕ್ಕಾಗಿ ಅವರು ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಂಡರು. ಕ್ರೈಸ್ತ ಬೈಬಲ್ ಲೇಖಕರು ತಮ್ಮ ಪ್ರೇರಿತ ಬರಹಗಳನ್ನು, ರೋಮನ್ ಸಾಮ್ರಾಜ್ಯದ ಅಂತಾರಾಷ್ಟ್ರೀಯ ಭಾಷೆಯಾಗಿದ್ದ ಸಾಮಾನ್ಯ ಗ್ರೀಕ್ ಭಾಷೆಯಲ್ಲಿ ಬರೆದರು. ಅನಂತರ, ಒಂದುವೇಳೆ ಸಾ.ಶ. ಎರಡನೇ ಮತ್ತು ಮೂರನೇ ಶತಮಾನಗಳಿಂದ ಹುರುಪಿನ ಪ್ರಚಾರಕರು ಕೋಡೆಕ್ಸ್ ಗ್ರಂಥಗಳನ್ನು ಉಪಯೋಗಿಸುವುದರಲ್ಲಿ ಅಗ್ರಗಣ್ಯರಾಗಿದ್ದಿರಬಹುದು. ಸುರುಳಿಗಳಿಗಿಂತ ಈ ಕೋಡೆಕ್ಸ್ ಗ್ರಂಥಗಳಲ್ಲಿ ರೆಫರೆನ್ಸ್ಗಳನ್ನು ನೋಡುವುದು ಬಹಳ ಸುಲಭವಾಗಿತ್ತು.
2, 3. (ಎ) ಆಧುನಿಕ ದಿನಗಳಲ್ಲಿ ಯೆಶಾಯ 60:16ರ ಮಾತುಗಳು ಹೇಗೆ ನೆರವೇರುತ್ತಿವೆ? (ಬಿ) ಶುದ್ಧಾರಾಧನೆಯನ್ನು ಅಭಿವೃದ್ಧಿಗೊಳಿಸಲು ತಂತ್ರಜ್ಞಾನವನ್ನು ಹೇಗೆ ಉಪಯೋಗಿಸಲಾಗುತ್ತಿದೆ?
2 ತಂತ್ರಜ್ಞಾನದ ಉಪಯೋಗ: ಪ್ರವಾದಿ ಯೆಶಾಯನ ಮೂಲಕ ಯೆಹೋವನು ಮುಂತಿಳಿಸಿದ್ದು: “ನೀನು ಜನಾಂಗಗಳ ಮೊಲೆಕೂಸಾಗುವಿ.” (ಯೆಶಾ. 60:16) ಈ ಪ್ರವಾದನೆಯ ಆಧುನಿಕ ದಿನದ ನೆರವೇರಿಕೆಯಲ್ಲಿ, ಯೆಹೋವನ ಸಾಕ್ಷಿಗಳು ಜನಾಂಗಗಳ ಬೆಲೆಬಾಳುವ ಸಂಪನ್ಮೂಲಗಳನ್ನು ತಮ್ಮ ಸಾರುವ ಕೆಲಸದ ಅಭಿವೃದ್ಧಿಗಾಗಿ ಉಪಯೋಗಿಸುತ್ತಿದ್ದಾರೆ. ಉದಾಹರಣೆಗೆ, ಧ್ವನಿವ್ಯವಸ್ಥೆಯನ್ನು ಹೊಂದಿದ್ದ ಚಲನಚಿತ್ರಗಳು ವಾಣಿಜ್ಯ ಲೋಕದಲ್ಲಿ ಯಶಸ್ವಿಯನ್ನು ಕಂಡುಕೊಳ್ಳುವುದಕ್ಕಿಂತ ಅನೇಕ ವರುಷಗಳ ಹಿಂದೆ, ಅಂದರೆ 1914ರಲ್ಲಿ ಬೈಬಲ್ ವಿದ್ಯಾರ್ಥಿಗಳು “ಫೋಟೋ ಡ್ರಾಮ ಆಫ್ ಕ್ರಿಏಷನ್” ಎಂಬ ಚಲನಚಿತ್ರವನ್ನು ಪ್ರದರ್ಶಿಸಲು ಆರಂಭಿಸಿದರು. ಎಂಟು ತಾಸುಗಳ ಈ ಚಲನಚಿತ್ರ ಮತ್ತು ಸ್ಲೈಡ್ ಪ್ರದರ್ಶನವು, ವರ್ಣರಂಜಿತವೂ ಧ್ವನಿವ್ಯವಸ್ಥೆಯುಳ್ಳದ್ದೂ ಆಗಿತ್ತು ಮತ್ತು ಕೋಟ್ಯಂತರ ಜನರಿಗೆ ಪ್ರಭಾವಶಾಲಿ ಸಾಕ್ಷಿಯನ್ನು ನೀಡಿತು.
3 ಇಂದು ದೇವಜನರು ನೂರಾರು ಭಾಷೆಗಳಲ್ಲಿ ಬೈಬಲನ್ನು ಮತ್ತು ಬೈಬಲ್ ಸಾಹಿತ್ಯಗಳನ್ನು ಪ್ರಕಟಿಸಲು ಅತ್ಯಂತ ವೇಗದ ಪ್ರಿಂಟಿಂಗ್ ಪ್ರೆಸ್ಗಳು ಮತ್ತು ಕಂಪ್ಯೂಟರೀಕೃತ ಉಪಕರಣಗಳನ್ನು ಉಪಯೋಗಿಸುತ್ತಾರೆ. ಕ್ಷಿಪ್ರವಾಗಿ ಚಲಿಸುವ ಸಾರಿಗೆ ಸೌಕರ್ಯಗಳ ಮೂಲಕ ಅತಿ ದೂರದ ಸ್ಥಳಗಳಿಗೆ ಬೈಬಲ್ ಸಾಹಿತ್ಯಗಳನ್ನು ಸಾಗಿಸಲಾಗುತ್ತದೆ. ಈ ರೀತಿಯಲ್ಲಿ 235 ದೇಶ ದ್ವೀಪಗಳಲ್ಲಿರುವ ಜನರನ್ನು ತಲಪಲಾಗುತ್ತಿದೆ. ಯೆಹೋವನು ತನ್ನ ಆತ್ಮದ ಮೂಲಕ ತನ್ನ ಸೇವಕರು ಇಂಥ ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವಂತೆ ಸಹಾಯಮಾಡುತ್ತಿದ್ದಾನೆ. ಹೀಗೆ, ಇತಿಹಾಸದಲ್ಲೇ ಹಿಂದೆಂದಿಗಿಂತಲೂ ಹೆಚ್ಚು ಜನರಿಗೆ ಇಂದು ಬೈಬಲ್ ಸತ್ಯವು ಲಭ್ಯಗೊಳಿಸಲ್ಪಡುತ್ತಿದೆ.
4. ಹೆಚ್ಚು ಜನರಿಗೆ ಸುವಾರ್ತೆಯನ್ನು ಲಭ್ಯಗೊಳಿಸುವ ಸಲುವಾಗಿ ಕೆಲವರು ತಮ್ಮ ಜೀವನದಲ್ಲಿ ಯಾವ ಹೊಂದಾಣಿಕೆಗಳನ್ನು ಮಾಡಿದ್ದಾರೆ?
4 ವೈಯಕ್ತಿಕ ಹೊಂದಾಣಿಕೆಗಳು: ಹೆಚ್ಚು ಜನರಿಗೆ ಸುವಾರ್ತೆಯನ್ನು ಲಭ್ಯಗೊಳಿಸುವ ಸಲುವಾಗಿ ಸತ್ಯಾರಾಧಕರು ವೈಯಕ್ತಿಕ ಹೊಂದಾಣಿಕೆಗಳನ್ನು ಮಾಡುವಂತೆಯೂ ಪ್ರೇರೇಪಿಸಲ್ಪಟ್ಟಿದ್ದಾರೆ. ಅನೇಕರು, ಸಾರುವ ಕೆಲಸದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಶಕ್ತರಾಗುವಂತೆ ತಮ್ಮ ಜೀವನವನ್ನು ಸರಳೀಕರಿಸಿದ್ದಾರೆ. ಇನ್ನು ಕೆಲವರು ಎಲ್ಲಿ ರಾಜ್ಯ ಘೋಷಕರ ಹೆಚ್ಚಿನ ಅಗತ್ಯವಿದೆಯೊ ಅಂಥ ಸ್ಥಳಗಳಿಗೆ ಹೋಗಿ ಸೇವೆಸಲ್ಲಿಸಲು ಸಿದ್ಧರಾಗಿದ್ದಾರೆ. ಇನ್ನಿತರರು ಹೊಸ ಭಾಷೆಯನ್ನು ಕಲಿಯುವ ಮೂಲಕ ತಮ್ಮ ಶುಶ್ರೂಷೆಯನ್ನು ವಿಸ್ತರಿಸಿದ್ದಾರೆ.
5, 6. ಸ್ಥಳಿಕ ಕ್ಷೇತ್ರದಲ್ಲಿ ಸಾಧ್ಯವಿರುವಷ್ಟು ಜನರನ್ನು ತಲಪಲಿಕ್ಕಾಗಿ ಏನು ಮಾಡಸಾಧ್ಯವಿದೆ?
5 ಇದಕ್ಕೆ ಕೂಡಿಸಿ, ಜನರು ಯಾವಾಗ ಮನೆಯಲ್ಲಿರುತ್ತಾರೊ ಅಂಥ ಸಮಯದಲ್ಲಿ ಮತ್ತು ಜನರು ಎಲ್ಲಿ ಸಿಗುತ್ತಾರೊ ಅಲ್ಲಿ ಸಾರುವ ಮೂಲಕ ನಾವು ಹೆಚ್ಚಿನ ಜನರನ್ನು ತಲಪಸಾಧ್ಯವಿದೆ. ನಿಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಜನರು ಹಗಲಿನಲ್ಲಿ ಮನೆಯಲ್ಲಿರದಿರುವಲ್ಲಿ, ನೀವು ನಿಮ್ಮ ಕಾಲತಖ್ತೆಯನ್ನು ಹೊಂದಾಣಿಸಿಕೊಂಡು ಸಂಜೆಯ ಸಮಯದಲ್ಲಿ ಅವರನ್ನು ಭೇಟಿಯಾಗಸಾಧ್ಯವಿದೆಯೊ? ಸಾಕ್ಷಿನೀಡಬಹುದಾದ ಸಾರ್ವಜನಿಕ ಸ್ಥಳವಿದೆಯೊ? ನೀವು ಟೆಲಿಫೋನ್ ಸಾಕ್ಷಿಕಾರ್ಯ ಮತ್ತು ವ್ಯಾಪಾರ ಕ್ಷೇತ್ರದಲ್ಲಿನ ಸಾಕ್ಷಿಕಾರ್ಯವನ್ನು ಪ್ರಯತ್ನಿಸಿದ್ದೀರೊ? ಅನೌಪಚಾರಿಕವಾಗಿ ಸಾಕ್ಷಿನೀಡಲು ನೀವು ಸಂದರ್ಭಗಳನ್ನು ಹುಡುಕುತ್ತೀರೊ?
6 ಯೆಹೋವನ ಹೆಸರಿನ ಮತ್ತು ರಾಜ್ಯದ ಕುರಿತಾಗಿ ಮಹಾ ಸಾಕ್ಷಿಯು ನೀಡಲ್ಪಡುತ್ತಿರುವಾಗ ಅದರಲ್ಲಿ ಭಾಗಿಗಳಾಗುವ ಎಂಥ ಮಹಾ ಸುಯೋಗವು ನಮಗಿದೆ! ಸಾಧ್ಯವಿರುವಷ್ಟು ಜನರಿಗೆ ದೇವರ ವಾಕ್ಯದ ಜೀವದಾಯಕ ಸತ್ಯವನ್ನು ನಾವು ಹಂಚುತ್ತಾ ಮುಂದುವರಿಯೋಣ.—ಮತ್ತಾ. 28:19, 20.