ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ಮಹತ್ವಾಕಾಂಕ್ಷೆ ಇರುವುದು ತಪ್ಪು ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅನೇಕ ಜನರು ಏನು ನೆನಸುತ್ತಾರೋ ಅದಕ್ಕೆ ವ್ಯತಿರಿಕ್ತವಾಗಿ, ಬೈಬಲು ಮಹತ್ವಾಕಾಂಕ್ಷೆಯನ್ನು ಪ್ರೋತ್ಸಾಹಿಸುವುದಿಲ್ಲ. ಬದಲಿಗೆ ಅದು ದೀನತೆಯನ್ನು ಪ್ರೋತ್ಸಾಹಿಸುತ್ತದೆ. [ಯಾಕೋಬ 4:6ನ್ನು ಓದಿ, ತದನಂತರ ಪುಟ 16ರಲ್ಲಿರುವ ಲೇಖನಕ್ಕೆ ಸೂಚಿಸಿರಿ.] ಈ ಲೇಖನವು ಮಹತ್ವಾಕಾಂಕ್ಷೆಯ ಕುರಿತಾದ ಬೈಬಲಿನ ದೃಷ್ಟಿಕೋನವನ್ನು ಮತ್ತು ಅದನ್ನು ನಾವು ಹೇಗೆ ವೀಕ್ಷಿಸಬೇಕು ಎಂಬುದನ್ನು ಚರ್ಚಿಸುತ್ತದೆ.”
ಕಾವಲಿನಬುರುಜು ಸೆಪ್ಟೆಂ.15
“ಲೋಕದ ಸುತ್ತಲೂ ಇರುವ ಜನರು ಯೇಸು ಕ್ರಿಸ್ತನ ಬಗ್ಗೆ ಕೇಳಿಸಿಕೊಂಡಿದ್ದಾರೆ. ಅವನು ಒಬ್ಬ ಮಹಾನ್ ಪುರುಷ ಅಷ್ಟೆ ಎಂದು ಕೆಲವರು ಹೇಳುತ್ತಾರೆ. ಇತರರು ಅವನನ್ನು ಸರ್ವಶಕ್ತ ದೇವರೆಂದೇ ಆರಾಧಿಸುತ್ತಾರೆ. ಯೇಸು ಕ್ರಿಸ್ತನು ಯಾರಾಗಿದ್ದನು ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು ಅವನು ವಾಸ್ತವದಲ್ಲಿ ಯಾರಾಗಿದ್ದನು, ಎಲ್ಲಿಂದ ಬಂದನು ಮತ್ತು ಈಗ ಎಲ್ಲಿದ್ದಾನೆ ಎಂಬುದನ್ನು ವಿವರಿಸುತ್ತದೆ.” ಯೋಹಾನ 17:3ನ್ನು ಓದಿ.
ಎಚ್ಚರ! ಅಕ್ಟೋ. - ಡಿಸೆಂ.
“ಅನೇಕ ಜನರು ತಮಗೊಂದು ಸೂಕ್ತವಾದ ಮನೆಯನ್ನು ಹೊಂದಲು ಅಶಕ್ತರಾಗಿದ್ದಾರೆ. ಒಂದು ದಿನ ಎಲ್ಲರಿಗೂ ಸಾಕಾಗುವಷ್ಟು ವಸತಿಸೌಕರ್ಯವು ಇರುವುದು ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಎಚ್ಚರ! ಪತ್ರಿಕೆಯು ವಸತಿ ಬಿಕ್ಕಟ್ಟಿನ ಕುರಿತಾದ ಇತ್ತೀಚಿನ ವರದಿಯೊಂದನ್ನು ನೀಡುತ್ತದೆ. ಹಾಗೂ ದೇವರು ಈ ಸಂಬಂಧದಲ್ಲಿ ಕೊಟ್ಟಿರುವ ವಾಗ್ದಾನವು ನೆರವೇರುವುದು ಎಂಬ ವಿಷಯದಲ್ಲಿ ನಾವು ಏಕೆ ಭರವಸೆಯಿಡಬಲ್ಲೆವು ಎಂಬುದನ್ನೂ ಇದು ತೋರಿಸುತ್ತದೆ.” ಯೆಶಾಯ 65:21, 22ನ್ನು ಓದಿ.
ಕಾವಲಿನಬುರುಜು ಅಕ್ಟೋ.1
ಮುಖಪುಟದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಯನ್ನು ಓದಿ. ನಂತರ ಹೀಗೆ ಕೇಳಿ: “ಇದು ಯಾವ ಸೂಚನೆಯ ಬಗ್ಗೆ ಮಾತಾಡುತ್ತಿದೆ ಎಂದು ನಿಮಗೆ ತಿಳಿದಿದೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಮತ್ತಾಯ 24:3ನ್ನು ಓದಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ಆ ಸೂಚನೆಯ ಐದು ಮುಖ್ಯ ಅಂಶಗಳನ್ನು ಪರಿಗಣಿಸುತ್ತದೆ ಮತ್ತು ಅವನ್ನು ನಾವು ಏಕೆ ಗ್ರಹಿಸಬೇಕು ಎಂದು ವಿವರಿಸುತ್ತದೆ.” 6ನೇ ಪುಟದಲ್ಲಿರುವ ಚೌಕವನ್ನು ತೋರಿಸಿ.