ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನಗಳನ್ನು ಆರಂಭಿಸುವ ವಿಧ
ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲು ಸಾಧ್ಯವಾಗುವಲ್ಲಿ ನಮ್ಮಲ್ಲಿ ಹೆಚ್ಚಿನವರು ಆ ಅಧ್ಯಯನವನ್ನು ನಡೆಸಲು ಆನಂದಿಸುತ್ತೇವೆ. ಅದನ್ನು ಮಾಡಲು, ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಹೊಸ ಪುಸ್ತಕವು ನಮಗೆ ಸಹಾಯಮಾಡಸಾಧ್ಯವಿದೆ. ಪುಟ 3-7ರಲ್ಲಿರುವ ಮುನ್ನುಡಿಯು, ಈ ಪ್ರಕಾಶನವನ್ನು ಉಪಯೋಗಿಸಿ ಮನೆಯವರನ್ನು ಬೈಬಲ್ ಚರ್ಚೆಯಲ್ಲಿ ಒಳಗೂಡಿಸುವಂತೆ ವಿನ್ಯಾಸಿಸಲ್ಪಟ್ಟಿದೆ. ಶುಶ್ರೂಷೆಯಲ್ಲಿ ಕಡಿಮೆ ಅನುಭವವಿರುವವರು ಸಹ, ಈ ಪುಸ್ತಕವನ್ನು ಉಪಯೋಗಿಸಿ ಸುಲಭವಾಗಿಯೇ ಅಧ್ಯಯನಗಳನ್ನು ಆರಂಭಿಸಸಾಧ್ಯವಿದೆ.
◼ ಪುಟ 3ನ್ನು ಉಪಯೋಗಿಸುತ್ತಾ ನೀವು ಈ ವಿಧಾನವನ್ನು ಪ್ರಯತ್ನಿಸಬಹುದು:
ನಿಮ್ಮ ಟೆರಿಟೊರಿಯಲ್ಲಿರುವವರಿಗೆ ತಿಳಿದಿರುವಂಥ ಒಂದು ಪ್ರಚಲಿತ ವಾರ್ತಾ ವಿಚಾರದ ಅಥವಾ ಒಂದು ಸಮಸ್ಯೆಯ ಕುರಿತು ತಿಳಿಸಿದ ಅನಂತರ, ಮನೆಯವರ ಗಮನವನ್ನು 3ನೇ ಪುಟದಲ್ಲಿ ದಪ್ಪಕ್ಷರಗಳಲ್ಲಿ ಮುದ್ರಿಸಲ್ಪಟ್ಟಿರುವ ಪ್ರಶ್ನೆಗಳ ಕಡೆಗೆ ನಿರ್ದೇಶಿಸಿರಿ ಮತ್ತು ಅದರ ಕುರಿತು ತಮ್ಮ ಹೇಳಿಕೆಗಳನ್ನು ನೀಡುವಂತೆ ಆಮಂತ್ರಿಸಿರಿ. ಅನಂತರ ಪುಟ 4-5ನ್ನು ತೆರೆಯಿರಿ.
◼ ಅಥವಾ ನೀವು ಪುಟ 4-5ನ್ನು ತೋರಿಸುವ ಮೂಲಕ ಆರಂಭಿಸಲು ಬಯಸಬಹುದು:
ನೀವು ಹೀಗೆ ಹೇಳಬಹುದು, “ಈ ಚಿತ್ರಗಳಲ್ಲಿರುವಂಥ ಬದಲಾವಣೆಗಳು ನಿಜವಾಗಿಯೂ ಸಂಭವಿಸುವಲ್ಲಿ ಅದು ಉತ್ತಮವಾಗಿರುವುದಲ್ಲವೇ?” ಅಥವಾ ನೀವು ಹೀಗೆ ಕೇಳಬಹುದು, “ಈ ವಾಗ್ದಾನಗಳಲ್ಲಿ ಯಾವುದು ನೆರವೇರಿಸಲ್ಪಡುವುದನ್ನು ನೋಡಲು ನೀವು ಇಷ್ಟಪಡುತ್ತೀರಿ?” ಅವರ ಪ್ರತಿಕ್ರಿಯೆಯನ್ನು ಗಮನಕೊಟ್ಟು ಆಲಿಸಿರಿ.
ಈ ವಚನಗಳಲ್ಲಿ ಒಂದರ ಕಡೆಗೆ ಮನೆಯವರು ವಿಶೇಷ ಆಸಕ್ತಿಯನ್ನು ತೋರಿಸುವಲ್ಲಿ, ಆ ವಚನದ ಕುರಿತು ಚರ್ಚಿಸುವ ಪ್ಯಾರಗ್ರಾಫನ್ನು ಪುಸ್ತಕದಿಂದ ಪರಿಗಣಿಸುವ ಮೂಲಕ ಆ ವಿಷಯದಲ್ಲಿ ಬೈಬಲ್ ಏನನ್ನು ಬೋಧಿಸುತ್ತದೆ ಎಂಬುದನ್ನು ತೋರಿಸಿ. (ಪುರವಣಿಯ ಈ ಪುಟದಲ್ಲಿರುವ ಚೌಕವನ್ನು ನೋಡಿರಿ.) ನೀವು ಈ ವಿಷಯವನ್ನು ಬೈಬಲ್ ಅಧ್ಯಯನದಲ್ಲಿ ಪರಿಗಣಿಸುವಂತೆಯೇ ಇಲ್ಲಿಯೂ ಪರಿಗಣಿಸಿರಿ. ಇದನ್ನು ಮೊದಲ ಭೇಟಿಯಲ್ಲಿ ಬಾಗಿಲ ಬಳಿಯಲ್ಲೇ ಐದರಿಂದ ಹತ್ತು ನಿಮಿಷಗಳಲ್ಲಿ ಮಾಡಸಾಧ್ಯವಿದೆ.
◼ ಇನ್ನೊಂದು ವಿಧಾನವು, ಪುಟ 6ನ್ನು ಉಪಯೋಗಿಸಿ ವ್ಯಕ್ತಿಯು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಮಾಡುವುದು:
ಪುಟದ ಕೊನೆಯಲ್ಲಿರುವ ಪ್ರಶ್ನೆಗಳ ಕಡೆಗೆ ಮನೆಯವನ ಗಮನವನ್ನು ಸೆಳೆಯಿರಿ, ಮತ್ತು ಹೀಗೆ ಕೇಳಿ, “ಈ ಪ್ರಶ್ನೆಗಳಲ್ಲಿ ಯಾವುದಾದರೊಂದರ ಕುರಿತು ಎಂದಾದರೂ ನೀವು ಆಲೋಚಿಸಿದ್ದುಂಟೊ?” ಈ ಪ್ರಶ್ನೆಗಳಲ್ಲಿ ಒಂದರ ಕುರಿತು ಅವನು ಆಸಕ್ತಿಯನ್ನು ವ್ಯಕ್ತಪಡಿಸುವಲ್ಲಿ, ಪ್ರಶ್ನೆಗೆ ಉತ್ತರವನ್ನು ಕೊಡುವಂಥ ಪ್ಯಾರಗ್ರಾಫ್ಗಳ ಕಡೆಗೆ ಪುಸ್ತಕವನ್ನು ತಿರುಗಿಸಿರಿ. (ಪುರವಣಿಯ ಈ ಪುಟದಲ್ಲಿರುವ ಚೌಕವನ್ನು ನೋಡಿರಿ.) ನೀವು ಒಟ್ಟಾಗಿ ಮಾಹಿತಿಯನ್ನು ಪರಿಗಣಿಸುವಾಗ ವಾಸ್ತವದಲ್ಲಿ ಒಂದು ಬೈಬಲ್ ಅಧ್ಯಯವನ್ನು ಮಾಡುತ್ತಿದ್ದೀರಿ.
◼ ಪುಟ 7ರಲ್ಲಿರುವ ವಿಷಯವನ್ನು ಬೈಬಲ್ ಅಧ್ಯಯನದ ಪ್ರತ್ಯಕ್ಷಾಭಿನಯವನ್ನು ನಡೆಸಲಿಕ್ಕಾಗಿ ಉಪಯೋಗಿಸಬಹುದು:
ಈ ಪುಟದಲ್ಲಿರುವ ಮೊದಲ ಮೂರು ವಾಕ್ಯಗಳನ್ನು ಓದಿರಿ, ಅನಂತರ ಅಧ್ಯಾಯ 3ನ್ನು ತೆರೆದು ಪ್ಯಾರಗ್ರಾಫ್ 1-3ನ್ನು ಉಪಯೋಗಿಸುತ್ತಾ ಒಂದು ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಿ ತೋರಿಸಿರಿ. ಪ್ಯಾರಗ್ರಾಫ್ 3ರಲ್ಲಿರುವ ಪ್ರಶ್ನೆಗಳಿಗಾಗಿರುವ ಉತ್ತರಗಳನ್ನು ಚರ್ಚಿಸಲಿಕ್ಕಾಗಿ ಹಿಂದಿರುಗಿ ಹೋಗುವ ಏರ್ಪಾಡನ್ನು ಮಾಡಿರಿ.
◼ ಹಿಂದಿರುಗಿ ಹೋಗಲು ಏರ್ಪಾಡನ್ನು ಮಾಡುವ ವಿಧ:
ಮೊದಲ ಅಧ್ಯಯನವನ್ನು ಮುಕ್ತಾಯಗೊಳಿಸುವಾಗ, ಚರ್ಚೆಯನ್ನು ಮುಂದುವರಿಸಲು ಏರ್ಪಾಡನ್ನು ಮಾಡಿರಿ. ನೀವು ಕೇವಲ ಹೀಗೆ ಹೇಳಬಹುದು: “ಕೆಲವೇ ನಿಮಿಷಗಳಲ್ಲಿ, ಒಂದು ಪ್ರಮುಖ ವಿಷಯದ ಕುರಿತು ಬೈಬಲ್ ಏನನ್ನು ಬೋಧಿಸುತ್ತದೆ ಎಂಬುದನ್ನು ನಾವು ಕಲಿತುಕೊಂಡೆವು. ಮುಂದಿನ ಬಾರಿ, ನಾವು [ಪರಿಗಣಿಸಲ್ಪಡುವ ಪ್ರಶ್ನೆಯನ್ನು ಕೇಳಿರಿ] ಚರ್ಚಿಸೋಣ. ಮುಂದಿನ ವಾರ ನಾನು ಇದೇ ಸಮಯಕ್ಕೆ ಬರಬಹುದೇ?”
ನಾವು ಯೆಹೋವನ ನೇಮಿತ ಸಮಯಕ್ಕೆ ಹೆಚ್ಚು ಸಮೀಪವಾಗುತ್ತಿರುವಾಗ, ಮಾಡಬೇಕಾಗಿರುವ ಕೆಲಸವನ್ನು ಮಾಡಲು ಆತನು ನಮ್ಮನ್ನು ಸಿದ್ಧಪಡಿಸುವನು. (ಮತ್ತಾ. 28:19, 20; 2 ತಿಮೊ. 3:17) ಆದುದರಿಂದ, ಬೈಬಲ್ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿರುವ ಈ ಅದ್ಭುತಕರವಾದ ಹೊಸ ಸಹಾಯಕವನ್ನು ನಾವು ಸದುಪಯೋಗಿಸೋಣ.
[ಪುಟ 3ರಲ್ಲಿರುವಚೌಕ]
ಪುಟ 4-5ರಲ್ಲಿರುವ ಶಾಸ್ತ್ರವಚನಗಳ ಚರ್ಚೆ
◻ ಪ್ರಕಟನೆ 21:4 (ಪು. 27-8, ಪ್ಯಾರ. 1-3)
◻ ಯೆಶಾಯ 33:24; 35:5, 6 (ಪು. 36, ಪ್ಯಾರ. 22)
◻ ಯೋಹಾನ 5:28, 29 (ಪು. 72-3, ಪ್ಯಾರ. 17-19)
◻ ಕೀರ್ತನೆ 72:16 (ಪು. 34, ಪ್ಯಾರ. 19)
ಪುಟ 6ರಲ್ಲಿರುವ ಪ್ರಶ್ನೆಗಳಿಗೆ ಉತ್ತರಗಳು
◻ ನಾವೇಕೆ ಕಷ್ಟಸಂಕಟವನ್ನು ಅನುಭವಿಸುತ್ತೇವೆ? (ಪು. 108-9, ಪ್ಯಾರ. 6-8)
◻ ಜೀವನದ ಚಿಂತೆಗಳನ್ನು ನಾವು ಹೇಗೆ ನಿಭಾಯಿಸಬಲ್ಲೆವು? (ಪು. 184-5, ಪ್ಯಾರ. 1-3)
◻ ನಾವು ನಮ್ಮ ಕುಟುಂಬ ಜೀವನವನ್ನು ಹೇಗೆ ಹೆಚ್ಚು ಸಂತೋಷಕರವನ್ನಾಗಿ ಮಾಡಬಲ್ಲೆವು? (ಪು. 143, ಪ್ಯಾರ. 20)
◻ ನಾವು ಸತ್ತಾಗ ನಮಗೇನಾಗುತ್ತದೆ? (ಪು. 58-9, ಪ್ಯಾರ. 5-6)
◻ ಮೃತಪಟ್ಟ ನಮ್ಮ ಪ್ರಿಯರನ್ನು ನಾವೆಂದಾದರೂ ನೋಡುವೆವೊ? (ಪು. 72-3, ಪ್ಯಾರ. 17-19)
◻ ಭವಿಷ್ಯತ್ತಿಗಾಗಿ ದೇವರು ಮಾಡಿರುವ ವಾಗ್ದಾನಗಳನ್ನು ಆತನು ನೆರವೇರಿಸುವನೆಂದು ನಮಗೆ ಹೇಗೆ ಖಾತ್ರಿಯಿರಬಲ್ಲದು? (ಪು. 25, ಪ್ಯಾರ. 17)